ಹಾರ್ನ್ ಕಿರಿಕಿರಿ ತಪ್ಪಿಸಲು ಬಾಲಕಿಯಿಂದ ಸೂಪರ್ ಐಡಿಯಾ

ವಾಹನಗಳ ಸಂಖ್ಯೆ ಹೆಚ್ಚಿದಂತೆ ಟ್ರಾಫಿಕ್ ದಟ್ಟಣೆ ಕೂಡಾ ದೇಶದ ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಅದರಲ್ಲೂ ಟ್ರಾಫಿಕ್ ಸಂದರ್ಭದಲ್ಲಿ ಹಾರ್ನ್ ಕಿರಿಕಿರಿ ಶಬ್ದಮಾಲಿನ್ಯ ಕಾರಣವಾಗುತ್ತಿದ್ದು, ಈ ಹಿನ್ನೆಲೆ ಇದಕ್ಕೆ ಪರಿಹಾರ ಹುಡುಕುವಂತೆ ಆಟೋ ಉತ್ಪಾದನಾ ದಿಗ್ಗಜರಾದ ಆನಂದ್ ಮಹೀಂದ್ರಾ ಅವರ ಬಳಿ ಬಾಲಕಿಯೊಬ್ಬಳು ಮನವಿ ಮಾಡಿರುವುದಲ್ಲದೇ ಅದಕ್ಕೆ ಕೆಲವು ಸಲಹೆ ನೀಡಿದ್ದಾಳೆ.

ಹಾರ್ನ್ ಕಿರಿಕಿರಿ ತಪ್ಪಿಸಲು ಬಾಲಕಿಯಿಂದ ಸೂಪರ್ ಐಡಿಯಾ

ಸಾಮಾನ್ಯವಾಗಿ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡಾಗ ಅತೀ ಹೆಚ್ಚು ಕಿರಿಕಿರಿಯಾಗುವುದೇ ತಹರೇವಾರಿ ಹಾರ್ನ್‌ಗಳ ಸದ್ದಿನಿಂದ. ಈ ಸಮಸ್ಯೆಗೆ ಪರಿಹಾರಕ್ಕಾಗಿ ಈಗಾಗಲೇ ಹಲವಾರು ಆಟೋ ಉತ್ಪಾದನಾ ಸಂಸ್ಥೆಗಳು ಪರಿಹಾರ ಹುಡುಕುತ್ತಿದ್ದು, 11 ವರ್ಷದ ಬಾಲಕಿಯೊಬ್ಬಳು ಇದಕ್ಕೆ ಪರಿಹಾರ ಸೂಚಿಸಿ ಆನಂದ್ ಮಹೀಂದ್ರಾ ಅವರಿಗೆ ಪತ್ರ ಬರೆದಿದ್ದಾಳೆ.

ಹಾರ್ನ್ ಕಿರಿಕಿರಿ ತಪ್ಪಿಸಲು ಬಾಲಕಿಯಿಂದ ಸೂಪರ್ ಐಡಿಯಾ

ಮುಂಬೈ ಮೂಲದ ಮಾಹಿಕಾ ಎನ್ನುವ ಹುಡುಗಿಯೊಬ್ಬಳು ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಗೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಹಾರ್ನ್ ಸಮಸ್ಯೆಯಿಂದ ಆಗುವ ಕಿರಿಕಿರಿ, ಶಬ್ದಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಅದಕ್ಕೆ ಪರಿಹಾರವನ್ನೂ ಸೂಚಿಸಿದ್ದಾಳೆ.

ಹಾರ್ನ್ ಕಿರಿಕಿರಿ ತಪ್ಪಿಸಲು ಬಾಲಕಿಯಿಂದ ಸೂಪರ್ ಐಡಿಯಾ

ಬಾಲಕಿಯ ಕಳಕಳಿ ಮತ್ತು ಬುದ್ಧಿವಂತಿಕೆಯನ್ನು ಕಂಡು ಸ್ವತಃ ಆನಂದ್ ಮಹೀಂದ್ರಾ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಕೆ ಬರೆದ ಪತ್ರದ ಪ್ರತಿಯನ್ನೂ ಟ್ವೀಟ್ಟರ್ ನಲ್ಲಿ ಲಗತ್ತಿಸಿ ಹಾರ್ನ್ ಕಿರಿಕಿರಿ ತಪ್ಪಿಸಲು ಆಕೆ ನೀಡಿದ ಐಡಿಯಾವನ್ನು ಬೇಷ್ ಎಂದಿದ್ದಾರೆ.

ಹಾರ್ನ್ ಕಿರಿಕಿರಿ ತಪ್ಪಿಸಲು ಬಾಲಕಿಯಿಂದ ಸೂಪರ್ ಐಡಿಯಾ

ಹಾಗೆಯೇ ಆನಂದ್ ಮಹೀಂದ್ರಾ ಅವರ ಟ್ವಿಟ್‌ ಅನ್ನು ಹಲವರು ಮೆಚ್ಚಿಕೊಂಡಿದ್ದಲ್ಲದೇ ಕೆಲವು ಸಲಹೆಗಳನ್ನು ನೀಡಿದ್ದು, ಟ್ರಾಫಿಕ್ ದಟ್ಟಣೆ ವೇಳೆ ಹಾರ್ನ್ ಕಿರಿಕಿರಿ ತರುತ್ತಿರುವ ಸಮಸ್ಯೆಗಳಿಗೆ ಶೀಘ್ರದಲ್ಲೇ ಆಟೋ ಉತ್ಪಾದನಾ ಸಂಸ್ಥೆಗಳು ಪರಿಹಾರ ಹುಡುಕಿ ಎಂಬ ಬೇಡಿಕೆಯಿಟ್ಟಿದ್ದಾರೆ.

ಬಾಲಕಿಯ ಸಲಹೆ ಏನು?

ಅನಗತ್ಯ ಹಾರ್ನ್ ಕಿರಿಕಿರಿ ಬಗ್ಗೆ ಕಳವಳ ವ್ಯಕ್ತ ಪಡಿಸಿರುವ ಮಾಹಿಕಾ, ಬಹುಕೇತ ವಾಹನ ಚಾಲಕರು ಟ್ರಾಫಿಕ್ ಗಳಲ್ಲೇ ಕಿರಿಕಿರಿಯಾಗುವಷ್ಟು ಹಾರ್ನ್ ಮಾಡುತ್ತಾರೆ. ಅವರು ಹಾರ್ನ್ ಮಾಡಿದ ತಕ್ಷಣಕ್ಕೆ ಮುಂದಿರುವ ವಾಹನಗಳು ಬಹುಬೇಗ ಚಲಿಸುವುದಕ್ಕೆ ಆಗುವುದಿಲ್ಲ, ಹೀಗಿರುವಾಗ ಪದೇ ಪದೇ ಹಾರ್ನ್ ಯಾಕೆ ಬಳಕೆ ಮಾಡುತ್ತಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾಳೆ.

MOST READ: ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಹಾರ್ನ್ ಕಿರಿಕಿರಿ ತಪ್ಪಿಸಲು ಬಾಲಕಿಯಿಂದ ಸೂಪರ್ ಐಡಿಯಾ

ಹೀಗಾಗಿ ನೀವು ತಯಾರಿಸುವ ವಾಹನಗಳಲ್ಲಿ ಹಾರ್ನ್ ಗಳು ಪ್ರತಿ ಹತ್ತು ನಿಮಿಷಕ್ಕೆ ಕೇವಲ ಐದು ಬಾರಿ ಮಾತ್ರವೇ ಸದ್ದು ಮಾಡುವಂತೆ ವಿನ್ಯಾಸಗೊಳಿಸಿ. ಮತ್ತು ಪ್ರತಿ ಸಾರಿ ಸದ್ದು ಮಾಡಿದಾಗಲೂ ಆ ಸದ್ದು, ಕೇವಲ ಮೂರು ಸೆಕೆಂಡ್ ಮಾತ್ರವೇ ಇರಬೇಕು" ಎಂದು ಆ ಬಾಲಕಿ ಪರಿಹಾರ ಸೂಚಿಸಿ ಆನಂದ್ ಮಹೀಂದ್ರಾ ಅವರ ಮೆಚ್ಚುಗೆಗೆ ಪಾತ್ರವಾಳಿದ್ದಾಳೆ.

ಹಾರ್ನ್ ಕಿರಿಕಿರಿ ತಪ್ಪಿಸಲು ಬಾಲಕಿಯಿಂದ ಸೂಪರ್ ಐಡಿಯಾ

ಈ ಕುರಿತು ಪ್ರತಿಕ್ರಿಯೆ ನೀಡಿದ ಆನಂದ್ ಮಹೀಂದ್ರಾ ಅವರು, "ಕೆಲಸದ ಒತ್ತಡದ ಮಧ್ಯೆ ಇಂಥದೊಂದು ಮೇಲ್ ನೋಡಿದರೆ ನನಗೆ ನೆಮ್ಮದಿ ಎನ್ನಿಸುತ್ತದೆ, ಮತ್ತೆ ಉತ್ಸಾಹ ಬರುತ್ತದೆ. ನಾನು ಇಂಥ ಜನರಿಗಾಗಿಯೇ ಕೆಲಸ ಮಾಡುತ್ತಿದ್ದೇನೆ. ಈ ಜಗತ್ತು ಉತ್ತಮ ಮತ್ತು ಶಾಂತಿಯುತವಾಗಿರಬೇಕು ಎಂದು ಬಯಸುವವರಿಗಾಗಿ" ಎಂದು ಟ್ವೀಟ್ ಮಾಡಿ, ಮಾಹಿಕಾ ಅವರ ಸಲಹೆ ಸೂಚನೆಗೆ ಹ್ಯಾಟ್ಅಫ್ ಹೇಳಿದ್ದಾರೆ.

MOST READ: ವಾಹನಗಳ ಕಳ್ಳತನಕ್ಕೆ ಬ್ರೇಕ್ ಹಾಕಲು ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ..!

ಹಾರ್ನ್ ಕಿರಿಕಿರಿ ತಪ್ಪಿಸಲು ಬಾಲಕಿಯಿಂದ ಸೂಪರ್ ಐಡಿಯಾ

ಇನ್ನು ಭಾರತದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ವಾಯು ಮಾಲಿನ್ಯ ಮಾತ್ರವಲ್ಲದೇ ಶಬ್ದಮಾಲಿನ್ಯ ಕೂಡಾ ಹೆಚ್ಚುತ್ತಿದ್ದು, ಶಾಲಾ, ಕಾಲೇಜು ಆವರಣ, ಆಸ್ಪತ್ರೆ ಮತ್ತು ಕೋರ್ಟ್ ಮುಂಭಾಗದಲ್ಲಿ ನೋ ಹಾರ್ನ್ ಎಂಬ ನಾಮಫಲಕಗಳಿದ್ದರೂ ಕೂಡಾ ವಾಹನ ಸವಾರರು ಮಾತ್ರ ಅನಗತ್ಯವಾಗಿ ಹಾರ್ನ್ ಬಳಕೆ ಮಾಡುತ್ತಿರುವುದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

Most Read Articles

Kannada
English summary
Anand Mahindra Is Impressed By 11-Year-Old Girl’s Solution To The Honking Menace In India.
Story first published: Friday, April 5, 2019, 20:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X