ಸಾಧಾರಣ ರೈತನ ಹೊಸ ಆವಿಷ್ಕಾರವನ್ನು ಪ್ರಶಂಸಿದ ಆನಂದ್ ಮಹೀಂದ್ರಾ

ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಗಾದೆಯನ್ನು ನಮ್ಮಲ್ಲಿ ಹಲವರು ನಂಬಿದರೆ, ಇನ್ನು ಕೆಲವರು ಅಗತ್ಯವಿದ್ದಲ್ಲಿ ಹೊಸ ಆಲೋಚನೆಗಳನ್ನು ಮಾಡಿ ಆಗಬೇಕಾದ ಕಾರ್ಯವನ್ನು ಮುಗಿಸಲು ಮುಂದಾಗುತ್ತಾರೆ. ಇಲ್ಲಿ ನಡೆದಿದ್ದು ಕೂಡಾ ಅದೆನೇ. ಈ ರೈತ ಮಾಡಿದ ಒಂದು ಹೊಸ ಆವಿಷ್ಕಾರಕ್ಕೆ ಆಟೋ ದಿಗ್ಗಜ ಆನಂದ್ ಮಹೀಂದ್ರಾ‍ರವರಿಂದ ಪ್ರಶಂಸೆಯನ್ನು ಪಡೆದಿದ್ದಾನೆ.

ಸಾಧಾರಣ ರೈತನ ಆವಿಷ್ಕಾರವನ್ನು ಪ್ರಶಂಸಿದ ಆನಂದ್ ಮಹೀಂದ್ರಾ

ಮಹೀಂದ್ರಾ ಸಂಸ್ಥೆಯು ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿದ್ದು, ಕೇವಲ ಕಾರುಗಳನ್ನು ಮಾತ್ರವಲ್ಲದೆ ದ್ವಿಚಕ್ರ ವಾಹನ ಹಾಗು ಟ್ರ್ಯಾಕ್ಟರ್ ಮತ್ತು ಇನ್ನಿತರೆ ವಾಣಿಜ್ಯ ವಾಹನಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟದೊಂದಿಗೆ ಶ್ರೇಷ್ಠ ಆಟೋ ಉತ್ಪಾದನಾ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದೆಲ್ಲದರ ಹಿಂದೆ ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರ ಹೊಸ ಹೊಸ ಆಲೋಚನಾ ಶ್ರಮವಿದೆ ಎಂದರೆ ತಪ್ಪಾಗಲಾರದು.

ಸಾಧಾರಣ ರೈತನ ಆವಿಷ್ಕಾರವನ್ನು ಪ್ರಶಂಸಿದ ಆನಂದ್ ಮಹೀಂದ್ರಾ

ಯಾಕೆಂದರೇ ಆನಂದ್ ಮಹೀಂದ್ರಾರವರ ಜೀವನವನ್ನು ಹಲವರು ಆದರ್ಶವಾಗಿಟ್ಟುಕೊಂಡು ಅವರಂತೆಯೇ ಹೆಸರುವಾಸಿಯಾಗಬೇಕು ಎಂಬ ಕನಸನ್ನಿಟ್ಟುಕೊಂಡಿದ್ದಾರೆ. ಆನಂದ್ ಮಹೀಂದ್ರಾರವರು ಕೇವಲ ಆಟೋಮೊಬೈಲ್ ಉದ್ಯಮದಲ್ಲಿ ಮಾತ್ರವಲ್ಲದೆಯೆ ಸಾಮಾಜಿಕ ಜಾಲತಾಣಗಳಲ್ಲಿಯೂ ಫೇಮಸ್.

ಸಾಧಾರಣ ರೈತನ ಆವಿಷ್ಕಾರವನ್ನು ಪ್ರಶಂಸಿದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾರವರು ಸಾಮಾಜಿಕ ಜಾಲತಾಣವದ ಟ್ವಿಟರ್‍‍ನಲ್ಲಿ ಸಮಾಜದಲ್ಲಾಗುವ ಕೆಲಸಗಳಿಗೆ ಪ್ರತಿಕ್ರಿಯಿಸುತ್ತಾ, ಅವರಿವರ ಕಾಲೆಳೆದು ಹಾಸ್ಯ ಚಟಾಕಿಯನ್ನು ಸಿಡಿಸುತ್ತಾ, ಹಾಗೆಯೇ ಭಾರತೀಯರ ಆವಿಷ್ಕಾರಗಳ ಬಗ್ಗೆ ಪೋಸ್ಟ್ ಮಾಡುತ್ತಾ ಅವರನ್ನು ಪ್ರಶಂಶಿಸುವ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಹೀಗೆಯೇ ಆನಂದ್ ಮಹೀಂದ್ರಾರವರು ಮಾಡಿದ ಹೊಸ ಟ್ವೀಟ್ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತಾದ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ..

ಸಾಧಾರಣ ರೈತನ ಆವಿಷ್ಕಾರವನ್ನು ಪ್ರಶಂಸಿದ ಆನಂದ್ ಮಹೀಂದ್ರಾ

ಇರುವ ಉಪಕರಣಗಳಲ್ಲೇ ವ್ಯವಸಾಯ ಮಾಡುತ್ತಾ ಜೀವನ ಸಾಗಿಸುತ್ತಿರುವ ನಮ್ಮ ರೈತರು ಅವಶ್ಯಕತೆ ಇದ್ದಾಗ ಮತ್ತು ಆ ಅವಶ್ಯಕತೆಯನ್ನು ಪೂರೈಸಲು ಸಾಧ್ಯವಿರದಾಗ ಹೊಸ ಆವಿಷ್ಕಾರಗಳನ್ನು ಮಾಡಿ ಕಾರ್ಯವನ್ನು ಸಂಪೂರ್ಣಗೊಳಿಸುತ್ತಾರೆ. ಈತ ಮಾಡಿದ್ದು ಕೂಡಾ ಅದೆ, ಟ್ಯಾಕ್ಟರ್ ಮುಂಭಾಗದಲ್ಲಿ ಮಂಚವನ್ನು ಸಿಗಿಸಿಕೊಂಡು ವ್ಯವಸಾಯಕ್ಕೆ ಸಹಾಯಕವಾಗುವ ಹಾಗೆ ಮಾರ್ಪಾಡು ಮಾಡಿದ್ದಾನೆ.

ಈ ರೈತನ ಆವಿಷ್ಕಾರವನ್ನು ಮೆಚ್ಚಿದ ಆನಂದ್ ಮಹೀಂದ್ರಾರವರು, ತಮ್ಮ ಟ್ವಿಟರ್ ಖಾತೆಯಲ್ಲಿ ನಮ್ಮ ರೈತರು ಮನಸು ಮಾಡಿದರೆ ಏನನ್ನಾದರು ಮಾಡಬಲ್ಲರು ಎಂಬುದಕ್ಕೆ ಇದೊಂದು ಸಾಕ್ಷಿ ಎಂದು ಪೋಸ್ಟ್ ಮಾಡಿದ್ದಾರೆ.

ಸಾಧಾರಣ ರೈತನ ಆವಿಷ್ಕಾರವನ್ನು ಪ್ರಶಂಸಿದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ ಮಾಡಿರುವ ಟ್ವೀಟ್‍ನಲ್ಲಿ 'ಅವಶ್ಯಕತೆಯೇ ಆವಿಷ್ಕಾರದ ತಾಯಿ' ಎಂಬ ಸಾಲುಗಳು ನಮ್ಮ ಭಾರತೀಯರೇ ಕಂಡುಹಿಡಿದಿರಬೇಕು! ಇಲ್ಲಿ ನೋಡಿ ವ್ಯವಸಾಯಕ್ಕೆ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಬಳಸಬಹುದಾದ ಹಾಗೆ ಒಂದು ಹೊಸ ಉತ್ಪನ್ನವನ್ನು ಈ ರೈತ ತಯಾರು ಮಾಡಿದ್ದಾನೆ ಎಂದು ಹೇಳಿದ್ದಾರೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಸಾಧಾರಣ ರೈತನ ಆವಿಷ್ಕಾರವನ್ನು ಪ್ರಶಂಸಿದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾರವರು ಮಾಡಲಾದ ಟ್ವೀಟ್‍ಗೆ 466ಕ್ಕು ಹೆಚ್ಚಿನ ಕಮೆಂಟ್ಸ್, 3.1 ಸಾವಿರಕ್ಕು ಹೆಚ್ಚಿನ ರೀಟ್ವೀಟ್‍ಗಳು ಮತ್ತು 17ಸಾವಿರಕ್ಕು ಹೆಚ್ಚಿನ ಮಂದಿ ಲೈಕ್ ಮಾಡಿದ್ದಾರೆ. ನಿಜಕ್ಕೂ ಈ ವಿಡಿಯೋ ಸಧ್ಯಕ್ಕೆ ವೈರಲ್ ಆಗಿದ್ದು, ಈ ವಿಡಿಯೋ ಎಲಿನದ್ದು ಮತ್ತು ಇದನ್ನು ಮೊದಲಿಗೆ ಯಾರು ಪೋಸ್ಟ್ ಮಾಡಿದ್ದಾರೆ ಎಂಬುದು ಇನ್ನು ತಿಳಿದುಬಂದಿಲ್ಲ.

More from DriveSpark

Article Published On: Wednesday, May 22, 2019, 17:48 [IST]
English summary
Anand Mahindra Tweets Indian Farmers Jugaad. Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+