ಜೂನ್ 27ರಂದು ಅನಾವರಣಗೊಳ್ಳಲಿದೆ ಆಡಿ ಇ-ಟ್ರಾನ್
2018ರ ಸೆಪ್ಟೆಂಬರ್‌ನಲ್ಲಿ ಆಡಿ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಎಸ್‍ಯುವಿ, ಆಡಿ ಇ-ಟ್ರಾನ್ ಅನ್ನು ಅನಾವರಣಗೊಳಿಸಿತ್ತು. 10 ತಿಂಗಳ ನಂತರ, ಈ ಕಾರು ಭಾರತಕ್ಕೆ ಲಗ್ಗೆಯಿಡುತ್ತಿದೆ. ಆಡಿ ಇ-ಟ್ರಾನ್ ಜೂನ್ 27 ರಂದು ಅನಾವರಣಗೊಳ್ಳಲಿದ್ದು, ಈ ವರ್ಷದ ಕೊನೆಗೆ ಬಿಡುಗಡೆಯಾಗಲಿದೆ.

ಎನ್‌ಡಿಟಿವಿಆಟೋ ವರದಿಗಳ ಪ್ರಕಾರ, ಭಾರತದಲ್ಲಿ ಆಡಿ ಇ-ಟಾರ್ನ್ ಕಾರಿನ ಮೂಲ ಮಾದರಿ ಬಿಡುಗಡೆಯಾಗಲಿದೆ. ಇ-ಟ್ರಾನ್ ದೇಶೀಯ ಮಾರುಕಟ್ಟೆಗಳಲ್ಲಿ ಪ್ರವೇಶಿಸಿದ ಆಡಿಯ ಮೊದಲ ಎಲೆಕ್ಟ್ರಿಕ್ ಐಷಾರಾಮಿ ಕಾರ್ ಆಗಿದೆ. ಆಡಿ ಇ-ಟ್ರಾನ್ ಕಾರು, ಶಾರ್ಪ್ ಹಾಗೂ ಎಡ್ಜಿ ಸ್ಟೈಲಿಂಗ್ ಹೊಂದಿದೆ. ಕಂಪನಿಯು ಈ ಎಲೆಕ್ಟ್ರಿಕ್ ಕಾರಿಗೆ, ಸಾಮಾನ್ಯ ಕಾನ್ಸೆಪ್ಟ್ ಕಾರಿನ ಲುಕ್‍ಗಿಂತ ಹೆಚ್ಚಾಗಿ ಸಾಂಪ್ರದಾಯಿಕ ಲುಕ್ ನೀಡಿದೆ.

ಈ ಕಾರಿನ ಮುಂಭಾಗದಲ್ಲಿ ಆಕ್ಟಿವ್ ಫ್ಲಾಪ್ಗಳೊಂದಿಗೆ ಆಕ್ಟಾಗನಲ್ ಗ್ರಿಲ್ ಅಳವಡಿಸಲಾಗಿದೆ. ಈ ಗ್ರಿಲ್‍ನಿಂದಾಗಿ ಮುಂಭಾಗದಲ್ಲಿರುವ ಆಕ್ಸೆಲ್ ಮೋಟಾರ್ ಅನ್ನು ಕೂಲಾಗಿರಸಲು, ಗಾಳಿಯು ಚಲಿಸಲು ಅನುಕೂಲವಾಗಲಿದೆ. ಆಡಿ ಇ-ಟ್ರಾನ್ ಎಸ್‌ಯುವಿಯು ಕ್ರಾಸ್‌ಒವರ್ ಸಿಲೂಯೆಟ್ ಅನ್ನು ಹೊಂದಿದೆ.

ಈ ಕಾರು, ಆಡಿ ಕ್ಯೂ5 ಹಾಗೂ ಆಡಿ ಕ್ಯೂ7 ಕಾರುಗಳ ನಡುವೆ ನಿಲ್ಲಿಸುವಷ್ಟು ಗಾತ್ರವನ್ನು ಹೊಂದಿದೆ. ಈ ಎಸ್‍ಯುವಿಯ ಹಿಂಭಾಗದಲ್ಲಿ ಇಳಿಜಾರಿನಂತಹ ರೂಫ್ ಲೈನ್ ಹಾಗೂ ಎಲ್‍ಇಡಿ ಟೇಲ್‍ಲೈಟ್‍ಗಳಿದ್ದು, ಬೂಟ್‌ನವರೆಗೆ ವಿಸ್ತರಿಸಬಹುದು. ಒಟ್ಟಾರೆ ವಿನ್ಯಾಸವು ಆಡಿ ಮಾರಾಟ ಮಾಡುವ ಕ್ಯೂ ಸರಣಿಯ ಎಸ್‍ಯುವಿಗಳನ್ನು ಹೋಲುವಂತಿದೆ.

ಆದರೆ ಇ-ಟ್ರಾನ್ ತನ್ನದೇ ಆದ ಸ್ಟೈಲ್‍ನಿಂದಾಗಿ ಬೇರೆ ಮಾದರಿಯ ಕಾರುಗಳಿಗಿಂತ ವಿಭಿನ್ನವಾಗಿದೆ. ಆಡಿ ಇ-ಟ್ರಾನ್ ಎಸ್‌ಯುವಿ, ಪ್ರತಿ ಆಕ್ಸಲ್‌ಗೆ ಒಂದರಂತೆ ಎರಡು ಎಲೆಕ್ಟ್ರಿಕ್ ಮೋಟರ್‌ಗಳನ್ನು ಹೊಂದಿದೆ. ಮುಂಭಾಗದಲ್ಲಿರುವ ಮೋಟಾರ್ 125 ಕಿ.ವ್ಯಾ ಉತ್ಪಾದಿಸಿದರೆ, ಹಿಂಭಾಗದ ಮೋಟಾರು 14 ಕಿ.ವ್ಯಾ ಉತ್ಪಾದಿಸುತ್ತದೆ. ಒಟ್ಟಾರೆಯಾಗಿ 265 ಕಿ.ವ್ಯಾ ಅಂದರೆ ಸುಮಾರು 355 ಬಿಹೆಚ್‌ಪಿಯಷ್ಟು ಪವರ್ ಹಾಗೂ 561ಎನ್‍ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತವೆ.

ಈ ಕಾರಿನಲ್ಲಿ ಅಳವಡಿಸಲಾಗಿರುವ ಬೂಸ್ಟ್ ಮೋಡ್‍ನಿಂದಾಗಿ 300 ಕಿ.ವ್ಯಾ ಅಂದರೆ ಸುಮಾರು 408 ಬಿಹೆಚ್‌ಪಿಯ ಪವರ್ ಉತ್ಪಾದಿಸುತ್ತದೆ. ಇ-ಟ್ರಾನ್ ಎಸ್‌ಯುವಿ ಡಬ್ಲ್ಯುಎಲ್‌ಟಿಪಿ ಸೈಕಲ್ ಪ್ರಕಾರ ಒಂದು ಬಾರಿಯ ಚಾರ್ಜ್‌ನಿಂದ 400 ಕಿ.ಮೀ ದೂರದವರೆಗೂ ಚಲಿಸುತ್ತದೆ.

ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 200 ಕಿ.ಮೀ. ಆಗಿರಲಿದೆ. ಸಾಮಾನ್ಯ ಮೋಡ್‌ನಲ್ಲಿ 0-100 ಕಿಲೋಮೀಟರ್ ವೇಗವನ್ನು 6.6 ಸೆಕೆಂಡುಗಳಲ್ಲಿ ಕ್ರಮಿಸಿದರೆ, ಬೂಸ್ಟ್ ಮೋಡ್‌ನಲ್ಲಿ 5.7 ಸೆಕೆಂಡುಗಳಲ್ಲಿ ಚಲಿಸುತ್ತದೆ. ಈ ಎಸ್‌ಯುವಿಯಲ್ಲಿ 36 ಮಾಡ್ಯೂಲ್‌ಗಳ 432 ಸೆಲ್‍ಗಳನ್ನು ಅಳವಡಿಸಲಾಗಿದೆ.
MOST READ: ಮೇ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಇವುಗಳನ್ನು ಸೇರಿಸಿದಾಗ ವಾಹನದ ತೂಕವು 699 ಕೆ.ಜಿ ಆಗಿರಲಿದೆ. 95 ಕಿ.ವ್ಯಾ. ಪವರ್ ಉತ್ಪಾದಿಸಲಿದೆ. ಆಡಿ ಕಂಪನಿಯು ಇ-ಟ್ರಾನ್ ಕಾರಿನ ಇಂಟಿರಿಯರ್‍ನಲ್ಲಿ ತನ್ನ ಸರಣಿಯ ಕಾರುಗಳಲ್ಲಿರುವ ವಿನ್ಯಾಸದ ಅಂಶಗಳನ್ನು ಅಳವಡಿಸಿದೆ. ಈ ಕಾರಿನ ಕ್ಯಾಬಿನ್‌ನಲ್ಲಿ ಯಾವುದೇ ಬಟನ್‍ಗಳನ್ನು ನೀಡಲಾಗಿಲ್ಲ.

ಎಲ್ಲಾ ಕಾರ್ಯಗಳನ್ನು ಡ್ಯಾಶ್‌ಬೋರ್ಡ್‌ನಲ್ಲಿರುವ ಮೂರು ಡಿಸ್‍ಪ್ಲೇ ಪ್ಯಾನೆಲ್‍ಗಳು ನಿಯಂತ್ರಿಸುತ್ತವೆ. ಇಂಟಿರಿಯರ್‍ನಲ್ಲಿರುವ ಮುಖ್ಯವಾದ ಆಕರ್ಷಣೆಯೆಂದರೆ, ವರ್ಚುವಲ್ ಕ್ಯಾಮೆರಾ ರೇರ್ ವೀವ್ ಮಿರರ್‍ಗಳು. ಈ ಕಾರಿನಲ್ಲಿರುವ ವಿಂಗ್ ಮಿರರ್‍ಗಳು ಮೂಲತಃ ಹೈ ಡೆಫಿನಿಷನ್ ಕ್ಯಾಮೆರಾಗಳಾಗಿದ್ದು, ಮುಂಭಾಗದ ಡೋರುಗಳಲ್ಲಿ ಅಳವಡಿಸಲಾದ ಎರಡು ಡಿಸ್‍ಪ್ಲೇ ಸ್ಕ್ರೀನ್‍ಗಳಲ್ಲಿ ಹಿಂದೆ ಕಾಣುವ ಚಿತ್ರಗಳನ್ನು ತೋರಿಸುತ್ತವೆ.
MOST READ: ಹೆಚ್ಚು ಮಾರಾಟವಾಗುವ ಸ್ಕೂಟರ್‍ಗಳಲ್ಲಿ ಹೋಂಡಾ ಆಕ್ಟಿವಾ ಈಗಲೂ ನಂ.1

ಡಿಸ್‍ಪ್ಲೇ ಸ್ಕ್ರೀನ್‍ಗಳನ್ನು ಟಚ್ ಮಾಡುವ ಮೂಲಕವೂ ನಿಯಂತ್ರಿಸಬಹುದು. ಆಡಿ ಇ-ಟ್ರಾನ್, ವರ್ಚುವಲ್ ರೇರ್ ವೀವ್ ಮಿರರ್‍ಗಳನ್ನು ಹೊಂದಿರುವ ವಿಶ್ವದ ಮೊದಲ ಉತ್ಪಾದನಾ ಕಾರ್ ಆಗಿದೆ. ಆಡಿ ಇ-ಟ್ರಾನ್ ಎಸ್‌ಯುವಿಯಲ್ಲಿ ಐದು ಸೀಟುಗಳಿದ್ದು, 660-ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಬಾನೆಟ್‍ನ ಕೆಳಗಿರುವ ಹೆಚ್ಚುವರಿ 60 ಲೀಟರ್ ಸ್ಥಳದಲ್ಲಿ ಟೂಲ್‍ಗಳನ್ನು ಹಾಗೂ ಚಾರ್ಜಿಂಗ್ ವೈರ್‍ಗಳನ್ನಿಡಬಹುದಾಗಿದೆ.

ಬೆಲೆ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದಿದ್ದರೂ, ಆಡಿ ಇ-ಟ್ರಾನ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ಸುಮಾರು ರೂ.1.5 ಕೋಟಿಗಳಾಗಲಿದೆ. ಅನಾವರಣದ ಬಳಿಕ ಈ ಕಾರಿನ ನಿಖರವಾದ ಬೆಲೆಯ ಬಗ್ಗೆ ತಿಳಿಯಲಿದೆ.
MOST READ: ವಾಹನ ಮಾಲೀಕರಿಂದ ಪ್ರತಿಭಟನೆ- ಮಕ್ಕಳನ್ನು ಶಾಲೆಗಳಿಗೆ ತಲುಪಿಸಿದ ಪೊಲೀಸರು

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಆಲ್-ಎಲೆಕ್ಟ್ರಿಕ್ ಇ-ಟ್ರಾನ್ ಎಸ್‍ಯುವಿ, ಆಡಿ ಸರಣಿಯಲ್ಲಿ ಬಂದಿರುವ ಉಳಿದ ಕ್ಯೂ ಸರಣಿಯ ಕಾರುಗಳಂತೆ ಕಾಣುತ್ತದೆ. ವಾಹನವು ಹೇಗೆ ಕಾಣುತ್ತದೆ ಎಂಬುದಕ್ಕಿಂತ ಹೆಚ್ಚಾಗಿ ಕಾರು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ತಿಳಿಯಲು ಕಾತುರರಾಗಿದ್ದೇವೆ.


Click it and Unblock the Notifications