ತನ್ನ ಗ್ರಾಹಕರಿಗಾಗಿ ಹೊಸ ಅಭಿಯಾನ ಶುರು ಮಾಡಿದ ಆಡಿ

ಆಡಿ ಇಂಡಿಯಾ, ಇತ್ತೀಚೆಗೆ ಡಿಫೈ ರೇನ್, ಎಫರ್ಟ್‍‍ಲೆಸ್ಲಿ ಅಂದರೆ ಮಳೆಯನ್ನು ಯಾವುದೇ ಶ್ರಮವಿಲ್ಲದೇ ಎದುರಿಸಿ ಎಂಬ ಸೇವಾ ಅಭಿಯಾನವನ್ನು ಪ್ರಾರಂಭಿಸಿದೆ. ಇದು ಆಡಿ ಗ್ರಾಹಕರಿಗೆ ಮಳೆಗಾಲದಲ್ಲಿ ತಮ್ಮ ಕಾರುಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ತನ್ನ ಗ್ರಾಹಕರಿಗಾಗಿ ವಿಶೇಷ ಅಭಿಯಾನ ಶುರು ಮಾಡಿದ ಆಡಿ

ಆಡಿ ಕಾರುಗಳನ್ನು ಹೊಂದಿರುವವರು, ಆಗಸ್ಟ್ 12ರಿಂದ 24ರವರೆಗೆ, ಯಾವುದೇ ಡೀಲರ್‍‍ಶಿಪ್‍‍ಗೆ ಭೇಟಿ ನೀಡಿ ಈ ಕೊಡುಗೆಯನ್ನು ಪಡೆಯಬಹುದು. ಸದ್ಯದ ಭಾರತೀಯ ಮಾನ್ಸೂನ್ ಸನ್ನಿವೇಶದಲ್ಲಿ ತನ್ನ ಕಾರುಗಳ ನಿರ್ವಹಣೆಯ ವಿಷಯದಲ್ಲಿ ಈ ಅಭಿಯಾನವು ಸಾಕಷ್ಟು ಕೊಡುಗೆಗಳನ್ನು ನೀಡುತ್ತಿದೆ.

ತನ್ನ ಗ್ರಾಹಕರಿಗಾಗಿ ವಿಶೇಷ ಅಭಿಯಾನ ಶುರು ಮಾಡಿದ ಆಡಿ

ಈ ಅಭಿಯಾನದ ಬಗ್ಗೇ ಹೇಳುವುದಾದರೆ, ಈ ಅಭಿಯಾನದಲ್ಲಿ ಕಾರಿನ ಇಂಟರ್ನಲ್ ಹಾಗೂ ಎಕ್ಸ್ ಟರ್ನಲ್ ಅಂಶಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು 50 ಪಾಯಿಂಟ್‍‍ಗಳ ಚೆಕ್‍‍ಲಿಸ್ಟ್ ನೀಡಲಾಗುತ್ತದೆ.

ತನ್ನ ಗ್ರಾಹಕರಿಗಾಗಿ ವಿಶೇಷ ಅಭಿಯಾನ ಶುರು ಮಾಡಿದ ಆಡಿ

ಇದು ಸಾಮಾನ್ಯ-ಟೆಕ್ನಿಕಲ್, ಎಕ್ಸ್ ಟಿರಿಯರ್-ಇಂಟಿರಿಯರ್, ಏರ್‍ ಕಂಡಿಷನಿಂಗ್, ಬ್ರೇಕ್ ಹಾಗೂ ಟಯರ್‌ಗಳ ಚೆಕ್ ಪಾಯಿಂಟ್‍‍ಗಳನ್ನು ಒಳಗೊಂಡಿದೆ. ಆಡಿ ಕಂಪನಿಯು, ಜಿನಿಯನ್ ಆಕ್ಸೆಸರೀಸ್ ಹಾಗೂ ಕನ್ಸೂಮೇಬಲ್ಸ್ ಮೇಲೆ ವಿವಿಧ ರೀತಿಯ ರಿಯಾಯಿತಿಗಳನ್ನು ನೀಡುತ್ತದೆ.

ತನ್ನ ಗ್ರಾಹಕರಿಗಾಗಿ ವಿಶೇಷ ಅಭಿಯಾನ ಶುರು ಮಾಡಿದ ಆಡಿ

ಎಕ್ಸ್ ಟೆಂಡೆಡ್ ವಾರಂಟಿಯ ಮೇಲೆ 15% ಹಾಗೂ ರೋಡ್ ಸೈಡ್ ಅಸಿಸ್ಟೆನ್ಸ್ ಮೇಲೆ 20% ಗಳವರೆಗೆ ನೆರವು ನೀಡಲಿದೆ. ಮಾನ್ಸೂನ್ ಪ್ರಯಾಣಕ್ಕೆ ಸಹಾಯ ಮಾಡಲು ಆಡಿ ಕಂಪನಿಯು ಪಿರೆಲ್ಲಿ ಟಯರ್‌ಗಳ ಮೇಲೆ 10% ರಿಯಾಯಿತಿ ನೀಡುತ್ತದೆ.

ತನ್ನ ಗ್ರಾಹಕರಿಗಾಗಿ ವಿಶೇಷ ಅಭಿಯಾನ ಶುರು ಮಾಡಿದ ಆಡಿ

ನವೀಕರಣ ಬಯಸುವವರಿಗೆ ಅಭಿಯಾನದಲ್ಲಿ ಆನ್ ಸ್ಪಾಟ್ ವಾಹನ ಮೌಲ್ಯಮಾಪನ ಹಾಗೂ ಆಕರ್ಷಕ ಟ್ರೇಡ್ ಇನ್ ಕೊಡುಗೆಗಳನ್ನು ನೀಡಲಾಗುವುದು. ಆಡಿ ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಇ-ಟ್ರಾನ್ ಎಲೆಕ್ಟ್ರಿಕ್ ವಾಹನವನ್ನು ಪ್ರದರ್ಶಿಸಿದೆ.

MOST READ: ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ

ತನ್ನ ಗ್ರಾಹಕರಿಗಾಗಿ ವಿಶೇಷ ಅಭಿಯಾನ ಶುರು ಮಾಡಿದ ಆಡಿ

ಇ-ಟ್ರಾನ್ ಅನ್ನು ಗುರುಗ್ರಾಮದಲ್ಲಿರುವ ವಿಶ್ವ ದರ್ಜೆಯ ಆಡಿ ಶೋರೂಂನಲ್ಲಿ ಪ್ರದರ್ಶಿಸಲಾಯಿತು. 10,500 ಚದರ ಅಡಿಗೂ ಹೆಚ್ಚಿನ ಜಾಗ ಹೊಂದಿರುವ ಈ ಶೋರೂಂನಲ್ಲಿ 21 ಕಾರುಗಳನ್ನು ಪ್ರದರ್ಶಿಸಬಹುದಾಗಿದೆ.

MOST READ: ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ತನ್ನ ಗ್ರಾಹಕರಿಗಾಗಿ ವಿಶೇಷ ಅಭಿಯಾನ ಶುರು ಮಾಡಿದ ಆಡಿ

ಎಲೆಕ್ಟ್ರಿಕ್ ಆಡಿ ಇ-ಟ್ರಾನ್ ಮುಂಭಾಗದಲ್ಲಿ 125 ಕಿ.ವ್ಯಾಟ್ ಮೋಟಾರ್ ಹಾಗೂ ಹಿಂಭಾಗದಲ್ಲಿ 140 ಕಿ.ವ್ಯಾಟ್ ಮೋಟರ್‌ಗಳನ್ನು ಹೊಂದಿದೆ. ಈ ಮೋಟಾರ್‍‍ಗಳು ಎಲ್ಲಾ ವ್ಹೀಲ್‍‍ಗಳಿಗೆ ಪವರ್ ಕಳುಹಿಸುತ್ತವೆ. ಈ ಮೋಟಾರ್‍‍ಗಳು 408 ಬಿ‍‍ಹೆಚ್‍‍ಪಿ ಪವರ್ ಹಾಗೂ 664 ಎನ್‍ಎಂ ಟಾರ್ಕ್ ಉತ್ಪಾದಿಸುತ್ತವೆ.

MOST READ: ಮೋಟಾರ್‍‍ಸ್ಪೋರ್ಟ್ಸ್ ಪ್ರಶಸ್ತಿ ಗೆದ್ದ ಬೆಂಗಳೂರು ಹುಡುಗಿ

ತನ್ನ ಗ್ರಾಹಕರಿಗಾಗಿ ವಿಶೇಷ ಅಭಿಯಾನ ಶುರು ಮಾಡಿದ ಆಡಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಳೆಗಾಲದಲ್ಲಿ ಕಾರುಗಳ ಬಗ್ಗೆ ಗಮನ ನೀಡುವುದು ಅವಶ್ಯಕ. ಆಡಿ ತನ್ನ ಗ್ರಾಹಕರಿಗೆ ಮಳೆಗಾಲದಲ್ಲಿ ವಿಶೇಷವಾದ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದಿಂದಾಗಿ ಆಡಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ದೊರೆಯಲಿದೆ.

Article Published On: Wednesday, August 14, 2019, 16:18 [IST]
English summary
Audi Owners To Get Premium Support This Monsoon Through “Defy the rains. Effortlessly” - Read in kannada
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+