ಮಾರುಕಟ್ಟೆಗೆ ಲಗ್ಗೆಯಿಟ್ಟ ಐಷಾರಾಮಿ ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್

ಆಡಿ ಇಂಡಿಯಾ ಕ್ಯೂ7 ಬ್ಲ್ಯಾಕ್ ಎಡಿಷನ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬ್ಲ್ಯಾಕ್ ಎಡಿಷನ್ ಆಡಿ ಕ್ಯೂ ಕಾರಿಗೆ ಭಾರತೀಯ ಎಕ್ಸ್ ಶೋ ರೂಂ ಪ್ರಕಾರ ರೂ. 82.15 ಲಕ್ಷ ದರ ಹೊಂದಿದೆ. ಹೊಸ ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್ ಅನ್ನು ತನ್ನ ಗ್ರಾಹಕರಿಗಾಗಿ ಎಕ್ಸ್‌ಕ್ಲೂಸಿವ್ ಆಗಿ ದೇಶಿಯ ಮಾರುಕಟ್ಟೆಗೆ ಲಿಮಿಟೆಡ್ ಎಡಿಷನ್ ಆಗಿ 100 ಯುನಿಟ್‍‍ಗಳನ್ನು ಬಿಡುಗಡೆಗೊಳಿಸಿದ್ದಾರೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಐಷಾರಾಮಿ ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್

ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್ ದೇಶದ ಎಲ್ಲಾ ಡೀಲರ್‍‍ಗಳ ಬಳಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೊಸ ಆಡಿ ಕ್ಯೂ7 ಲಿಮಿ‍ಟೆಡ್ ಎಡಿಷನ್ ಬ್ಲಾಕ್ಡ್ ಔಟ್ ಬಣ್ಣದ ಅಂಶಗಳೊಂದಿಗೆ ಕೂಡಿದ್ದು, ಕಾರಿನ ಹೊಸ ವೈಶಿಷ್ಟ್ಯತೆಗಳನ್ನು ಅಳವಡಿಸಿದ್ದಾರೆ. ಫ್ಲಾಗ್‍‍ಶಿಪ್ ಎಸ್‍‍ಯುವಿ ವಿಭಾಗದ ಈ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಐಷಾರಾಮಿ ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್

ಕಾಸ್ಮೆಟಿಕ್ ಅಪ್‍‍ಡೇಟ್ ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಆಡಿ ಕ್ಯೂ7 ಬ್ಲ್ಯಾಕ್ ಸ್ಟೈಲಿಂಗ್ ಪ್ಯಾಕೆಜ್ ಅನ್ನು ಹೊಂದಿದೆ. ಕಾರಿನ ಸುತ್ತಲೂ ಇರುವ ಕೆಲವು ಬಿಡಿಭಾಗಗಳು ಬ್ಲಾಕ್ ಬಣ್ಣದ ಅಂಶಗಳಿಂದ ಕೂಡಿದೆ. ಇದರಲ್ಲಿ ರೇಡಿಯೇಟರ್ ಗ್ರಿಲ್ ಫ್ರೆಮ್‍‍ನಲ್ಲಿ ಬ್ಲ್ಯಾಕ್ ಗ್ಲಾಸ್ ಫಿನಿಶಿಂಗ್, ಲ್ಯಾಟರಲ್ ಏರ್ ಇಂಟೆಕ್ ಸ್ಟ್ರಟ್‍ಗಳನ್ನು ಇದು ಒಳಗೊಂಡಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಐಷಾರಾಮಿ ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್

ಕ್ಯೂ7 ಎಸ್‍‍ಯುವಿ ಟೈಟಾನ್ ಬ್ಲ್ಯಾಕ್ ಗ್ಲಾಸ್‍‍ನಲ್ಲಿ ಫಿನಿಶ್ ಡೋರ್ ಟ್ರಿಮ್ ಸ್ಟ್ರಿಪ್‍‍ಗಳನ್ನು ಹೊಂದಿದ್ದು, ಹೈ-ಗ್ಲಾಸ್ ಬ್ಲ್ಯಾಕ್ ಫ್ರೇಮ್ ಮೌಲ್ಡಿಂಗ್ ಸೈಡ್ ವಿಂಡು ಮತ್ತು ರೂಫ್‍‍ಲೈನ್ ಹೈ-ಗ್ಲೋಸ್ ಬ್ಲ್ಯಾಕ್ ಫ್ರೇಮ್ ಹೊಂದಿದೆ. ರೇರ್ ಡಿಫ್ಯೂಸರ್ ಮ್ಯಾಟ್ ಟೈಟಾನಿಯಂ ಬ್ಲ್ಯಾಕ್‍ ಫಿನಿಶಿಂಗ್. ಬ್ಲ್ಯಾಕ್ಡ್ ಔಟ್ ಅಫ್ ರೂಫ್ ರೈಲ್ಸ್ ಮತ್ತು ಅಲಾಯ್ ವ್ಹೀಲ್ ಹೊಂದಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಐಷಾರಾಮಿ ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್

ಕಾಸ್ಮೆಟಿಕ್ ಬದಲಾವಣೆಗಳ ಹೊರತಾಗಿ ಇನ್ನೂ ಹೊಸ ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್‍‍ನಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿಲ್ಲ. ಸ್ಟ್ಯಾಂಡರ್ಡ್ ಎಸ್‍ಯುವಿಯಂತೆ ಅದೇ ಮೆಕ್ಯಾನಿಕಲ್ ಮತ್ತು ಎಂಜಿನ್ ಆಯ್ಕೆಗಳನ್ನು ಇದು ಒಳಗೊಂಡಿದೆ. ಆಡಿ ಕ್ಯೂ 7ನಲ್ಲಿ 3.0 ಲೀಟರ್ ವಿ 6 ಟಿಡಐ ಡೀಸೆಲ್ ಎಂಜಿನ್ ಅಥವಾ 2.0 ಲೀಟರ್ ನಾಲ್ಕು ಸಿಲಿಂಡರ್ ಟಿಎಫ್‍ಎಸ್‍ಐ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಐಷಾರಾಮಿ ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್

ಆಡಿ ಪೆಟ್ರೋಲ್ ಎಂಜಿನ್ 248 ಬಿಎಚ್‍‍ಪಿ ಪವರ್ ಮತ್ತು 370ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದೆ. 3.0 ಲೀಟರ್ ಟಿಡಿಐ ಡೀಸೆಲ್ ಎಂಜಿನ್ 275 ಬಿಎಚ್‍ಪಿ ಪವರ್ ಮತ್ತು 600 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣ ಹೊಂದಿದೆ. ಎರಡು ಎಂಜಿನ್‍‍ಗಳಿಗೆ 8-ಸ್ಪೀಡ್ ಟಿಪ್ಟ್ರೋನಿಕ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ. ಆಡಿಯ ಕ್ವಾಟ್ರೋ ಸಿಸ್ಟಮ್ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಒದಗಿಸುತ್ತದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಐಷಾರಾಮಿ ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್

ಆಡಿ ಇಂಡಿಯಾ ಮುಖ್ಯಸ್ಥ, ಬಲ್ಬೀರ್ ಸಿಂಗ್ ಧಿಲ್ಲಾನ್ ಮಾತನಾಡಿ, ಆಡಿ ಐಷಾರಾಮಿ ಎಸ್‍‍ಯುವಿ ವಿಭಾಗದಲ್ಲಿ ಒಳ್ಳೆಯ ಪೈಪೋಟಿಯನ್ನು ನೀಡುತ್ತಿದೆ. ನಮ್ಮ ಗ್ರಾಹಕರು ಐಷಾರಾಮಿ ವಿಭಾಗದಲ್ಲಿ ಇತರ ಕಾರಿಗಿಂತ ಭಿನ್ನವಾದ ಲುಕ್ ಮತ್ತು ವೈಶಿಷ್ಟೈಗಳ ಬಯಸುತ್ತಾರೆ. ಅದರಂತೆ ನಾವು ಹೊಸ ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್ ಅಲ್ಲಿ ಹೊಸ ವೈಶಿಷ್ಟ್ಯಗಳನ್ನು ನೀಡಿದ್ದೇವೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಮಾರುಕಟ್ಟೆಗೆ ಲಗ್ಗೆಯಿಟ್ಟ ಐಷಾರಾಮಿ ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್

ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್ 100 ಯುನಿಟ್‍‍ಗಳು ಮಾತ್ರ ನಾವು ಬಿಡುಗಡೆ ಮಾಡಿದ್ದೇವೆ. ಆಡಿ ಗ್ರಾಹಕರು ಮತ್ತು ಐಷಾರಾಮಿ ಕಾರು ಅಭಿಮಾನಿಗಳು ಈ ಆಕರ್ಷಕ ಕಾರನ್ನು ತಮ್ಮದಾಗಿಸುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಈ ಹಬ್ಬದ ಸಮಯದಲ್ಲಿ ಹೆಚ್ಚಿನ ಗ್ರಾಹಕರ ಖರೀದಿಸಬಹುದು ಎಂಬ ವಿಶ್ವಾಸವಿದೆ ಎಂದರು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಮಾರುಕಟ್ಟೆಗೆ ಲಗ್ಗೆಯಿಟ್ಟ ಐಷಾರಾಮಿ ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್

ಆಡಿ ಕ್ಯೂ7 ಬ್ಲ್ಯಾಕ್ ಎಡಿಷನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಫ್ಲಾಗ್‍‍ಶಿಪ್ ಎಸ್‍‍ಯು‍ವಿ ಯಾಗಿ ಹಲವಾರು ಕಾಸ್ಮೆಟಿಕ್ ಅಪ್‍‍ಡೇಟ್ ಅನ್ನು ಮಾಡಿ ಬಿಡುಗಡೆಗೊಳಿಸಿದ್ದಾರೆ. ಆಡಿ ಕ್ಯೂ7 ಕೇವಲ 100 ಯುನಿಟ್‍‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿರುದರಿಂದ ಬ್ರ್ಯಾಂಡ್‍ನಿಂದ ವಿಶೇಷ ರಿಯಾಯಿತಿ ದೊರಕಬಹುದು. ದೇಶಿಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್ 7 ಮತ್ತು ಮರ್ಸಿಡಿಸ್ ಬೆಂಜ್ ಜಿಎಲ್‍ಎಸ್‍ ಕಾರಿಗೆ ಪೈಪೋಟಿ ನೀಡಲಿದೆ.

Article Published On: Wednesday, September 11, 2019, 19:08 [IST]
English summary
Audi Q7 Black Edition Launched In India: Priced At Rs 82.15 Lakh - Read in Kannada
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+