ಮತ್ತೆ ಮೊದಲ ಸ್ಥಾನಕ್ಕೇರಿದ ವಿಟಾರಾ ಬ್ರಿಝಾ
ಸೆಪ್ಟೆಂಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಎಸ್‍ಯುವಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರಿಝಾ ಮತ್ತೆ ಮೊದಲ ಸ್ಥಾನಕ್ಕೇರಿದೆ.

ಮಾರುತಿ ಸುಜುಕಿ ವಿಟಾರಾ ಬ್ರಿಝಾ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಹೊಸದಾಗಿ ಬಿಡುಗಡೆಯಾಗಿದ್ದ ಹ್ಯುಂಡೈ ಕಂಪನಿಯ ವೆನ್ಯೂ ವಿಟಾರಾ ಬ್ರಿಝಾ ಎಸ್‍ಯುವಿಯನ್ನು ಪ್ರತಿ ತಿಂಗಳ ಮಾರಾಟದಲ್ಲಿ ಹಿಂದಿಕ್ಕಿ ಮೊದಲ ಸ್ಥಾನದಲ್ಲಿತ್ತು.

ಮಾರುತಿ ಸುಜುಕಿ ಕಂಪನಿಯ ಈ ಕಾಂಪ್ಯಾಕ್ಟ್ ಎಸ್‍ಯುವಿಯು ಸೆಪ್ಟೆಂಬರ್ ತಿಂಗಳಿನಲ್ಲಿ 10,362 ಯುನಿಟ್‍ಗಳ ಮಾರಾಟದೊಂದಿಗೆ ಮತ್ತೆ ಮೊದಲ ಸ್ಥಾನಕ್ಕೇರಿದೆ. ಆಗಸ್ಟ್ ತಿಂಗಳಿನಲ್ಲಿ ಮೊದಲ ಸ್ಥಾನದಲ್ಲಿದ್ದ ಹ್ಯುಂಡೈ ಕಂಪನಿಯ ವೆನ್ಯೂ ಎರಡನೇ ಸ್ಥಾನಕ್ಕೆ ಕುಸಿದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ವೆನ್ಯೂ ಕಾಂಪ್ಯಾಕ್ಟ್ ಎಸ್‍ಯುವಿಯ 7,942 ಯುನಿಟ್‍ಗಳು ಮಾರಾಟವಾಗಿವೆ. ಆಗಸ್ಟ್ ತಿಂಗಳಿಗಿಂತ ಹೆಚ್ಚಿನ ಪ್ರಮಾಣದ ಯುನಿಟ್‍ಗಳು ಮಾರಾಟವಾಗಿದ್ದರೂ, ಮಾರುತಿ ವಿಟಾರಾ ಬ್ರಿಝಾ ಎಸ್‍ಯುವಿಗಿಂತ ಕಡಿಮೆ ಪ್ರಮಾಣದ ಯುನಿಟ್‍ಗಳು ಮಾರಾಟವಾಗಿರುವ ಕಾರಣ ಎರಡನೇ ಸ್ಥಾನದಲ್ಲಿದೆ.

ಕಿಯಾ ಸೆಲ್ಟೋಸ್ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ. ಮಧ್ಯಮ ಗಾತ್ರದ ಈ ಎಸ್‍ಯುವಿಯ 7,754 ಯುನಿಟ್‍ಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಮಾರಾಟವಾಗಿವೆ. ಈ ಮೂಲಕ ಮಧ್ಯಮ ಗಾತ್ರದ ಸೆಗ್‍ಮೆಂಟಿನಲ್ಲಿ ಹೆಚ್ಚು ಮಾರಾಟವಾದ ಎಸ್‍ಯುವಿಯಾಗಿದೆ.

ಈ ಎಸ್‍ಯುವಿ ಹ್ಯುಂಡೈ ವೆನ್ಯೂವಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಕಿಯಾ ಸೆಲ್ಟೋಸ್‍ಗಿಂತ ವೆನ್ಯೂವಿನ 200 ಯುನಿಟ್‍ಗಳು ಹೆಚ್ಚಿಗೆ ಮಾರಾಟವಾಗಿವೆ. ಹ್ಯುಂಡೈ ಕ್ರೆಟಾ ಹಾಗೂ ಮಹೀಂದ್ರಾದ ಸ್ಕಾರ್ಪಿಯೊ ಎಸ್‍ಯುವಿಗಳು ನಂತರ ಸ್ಥಾನದಲ್ಲಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕ್ರೆಟಾ ಎಸ್‍ಯುವಿಯ 6,641 ಯುನಿಟ್‍ಗಳು ಮಾರಾಟವಾಗಿವೆ. ಈ ಮಾರಾಟವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗಿಂತ 40% ಕಡಿಮೆಯಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 11,000 ಯುನಿಟ್‍ಗಳನ್ನು ಮಾರಾಟ ಮಾಡಲಾಗಿತ್ತು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸೆಪ್ಟೆಂಬರ್ ತಿಂಗಳಿನಲ್ಲಿ ಮಹೀಂದ್ರಾ ಸ್ಕಾರ್ಪಿಯೊದ 3,600 ಯುನಿಟ್‍ಗಳು ಮಾರಾಟವಾಗಿವೆ. 2018ರ ಸೆಪ್ಟೆಂಬರ್‍ನಲ್ಲಿ 3,941 ಯುನಿಟ್‍ಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 9%ನಷ್ಟು ಕಡಿಮೆ ಮಾರಾಟವಾಗಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!
| ಸ್ಥಾನ | ಮಾದರಿಗಳು | ಸೆಪ್ಟೆಂಬರ್ 2019 | ಸೆಪ್ಟೆಂಬರ್ 2018 | ವ್ಯತ್ಯಾಸ (%) |
| 1 | ಮಾರುತಿ ಸುಜುಕಿ ವಿಟಾರಾ ಬ್ರಿಝಾ | 10,362 | 14,425 | -28 |
| 2 | ಹ್ಯುಂಡೈ ವೆನ್ಯೂ | 7,942 | 0 | - |
| 3 | ಕಿಯಾ ಸೆಲ್ಟೋಸ್ | 7,754 | 0 | - |
| 4 | ಹ್ಯುಂಡೈ ಕ್ರೆಟಾ | 6,641 | 11,000 | -40 |
| 5 | ಮಹೀಂದ್ರಾ ಸ್ಕಾರ್ಪಿಯೊ | 3,600 | 3,941 | -9 |
| 6 | ಫೋರ್ಡ್ ಇಕೊಸ್ಪೋರ್ಟ್ | 3,139 | 3,789 | -17 |
| 7 | ಟಾಟಾ ನೆಕ್ಸಾನ್ | 2,842 | 4,297 | -34 |
| 8 | ಎಂಜಿ ಹೆಕ್ಟರ್ | 2,608 | 0 | - |
| 9 | ಮಹೀಂದ್ರಾ ಎಕ್ಸ್ ಯುವಿ300 | 2,492 | - | - |
| 10 | ಹೋಂಡಾ ಡಬ್ಲ್ಯು - ಆರ್‍ವಿ | 1,341 | 2,421 | -45 |

ಫೋರ್ಡ್ ಕಂಪನಿಯ ಇಕೊ ಸ್ಪೋರ್ಟ್ 3,139 ಯುನಿಟ್‍ಗಳ ಮಾರಾಟದೊಂದಿಗೆ ಆರನೇ ಸ್ಥಾನದಲ್ಲಿದೆ. ಟಾಟಾ ನೆಕ್ಸಾನ್, ಎಂಜಿ ಹೆಕ್ಟರ್, ಮಹೀಂದ್ರಾ ಎಕ್ಸ್ ಯುವಿ300 ಹಾಗೂ ಹೋಂಡಾ ಡಬ್ಲ್ಯುಆರ್-ವಿ ಎಸ್‍ಯುವಿಗಳು ನಂತರದ ಸ್ಥಾನಗಳಲ್ಲಿವೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸೆಪ್ಟೆಂಬರ್ ತಿಂಗಳಿನಲ್ಲಿ ಟಾಟಾ ನೆಕ್ಸಾನ್‍ನ 2,842 ಯುನಿಟ್‍ಗಳು ಮಾರಾಟವಾಗಿದ್ದರೆ, ಎಂಜಿ ಹೆಕ್ಟರ್‍ನ 2,608 ಯುನಿಟ್‍ಗಳು ಮಾರಾಟವಾಗಿವೆ. ಮಹೀಂದ್ರಾ ಎಕ್ಸ್ ಯುವಿ300ನ 2,492 ಯುನಿಟ್ ಹಾಗೂ ಹೋಂಡಾ ಡಬ್ಲ್ಯುಆರ್-ವಿಯ 1,341 ಯುನಿಟ್‍ಗಳು ಮಾರಾಟವಾಗಿವೆ.

ಮಹೀಂದ್ರಾ ಎಕ್ಸ್ ಯುವಿ500ನ 1,120 ಯುನಿಟ್‍ಗಳು ಮಾರಾಟವಾಗಿ ಹನ್ನೊಂದನೇ ಸ್ಥಾನದಲ್ಲಿದೆ. ಈ ಎಸ್‍ಯುವಿಯ ಮಾರಾಟವು ಟಾಟಾ ಹ್ಯಾರಿಯರ್ ಹಾಗೂ ರೆನಾಲ್ಟ್ ಡಸ್ಟರ್ ಎಸ್‍ಯುವಿಗಳ ಮಾರಾಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಟಾಟಾ ಹ್ಯಾರಿಯರ್ ಬಿಡುಗಡೆಯಾದಾಗ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದರೂ ನಂತರ ಕುಸಿತ ಕಂಡಿತು.

ಸೆಪ್ಟೆಂಬರ್ ತಿಂಗಳಿನಲ್ಲಿ ಟಾಟಾ ಹ್ಯಾರಿಯರ್‍ನ 941 ಯುನಿಟ್‍ಗಳು ಮಾರಾಟವಾಗಿವೆ. ಎಲ್ಲಾ ಎಸ್‍ಯುವಿಗಳ ಪೈಕಿ ಕಡಿಮೆ ಮಾರಾಟವಾಗಿರುವ ರೆನಾಲ್ಟ್ ಡಸ್ಟರ್‍ನ ಕೇವಲ 544 ಯುನಿಟ್‍ಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಮಾರಾಟವಾಗಿವೆ. ಹೆಚ್ಚು ಬೆಲೆಯನ್ನು ಹೊಂದಿರುವ ಜೀಪ್ ಕಂಪಾಸ್ 603 ಯುನಿಟ್‍ಗಳ ಮಾರಾಟದೊಂದಿಗೆ ರೆನಾಲ್ಟ್ ಡಸ್ಟರ್ ಅನ್ನು ಹಿಂದಿಕ್ಕಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಸೆಪ್ಟೆಂಬರ್‍ನಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‍ಯುವಿಗಳ ಪಟ್ಟಿಯಲ್ಲಿ ಮಾರುತಿ ಸುಜುಕಿಯ ವಿಟಾರಾ ಬ್ರಿಝಾ ಮತ್ತೆ ಮೊದಲ ಸ್ಥಾನಕ್ಕೇರಿದೆ. ಆಗಸ್ಟ್ ತಿಂಗಳಿಗೆ ಹೋಲಿಸಿದರೆ ವಿಟಾರಾ ಬ್ರಿಝಾದ ಮಾರಾಟವು ಹೆಚ್ಚಾಗಿದೆ. ಉಳಿದ ಕಾರು ತಯಾರಕ ಕಂಪನಿಗಳೂ ಸಹ ಮುಂದಿನ ದಿನಗಳಲ್ಲಿ ತಮ್ಮ ವಾಹನಗಳ ಮಾರಾಟವು ಹೆಚ್ಚಾಗಬಹುದೆಂಬ ನಿರೀಕ್ಷೆಯಲ್ಲಿವೆ.


Click it and Unblock the Notifications