ಹೊಸ ಟೈರ್ ಉತ್ಪಾದನಾ ಘಟಕಕ್ಕಾಗಿ ಬ್ರಿಡ್ಜ್‌ಸ್ಟೋನ್‌ನಿಂದ ರೂ.350 ಕೋಟಿ ಹೂಡಿಕೆ

ಪ್ರಯಾಣಿಕರ ವಾಹನಗಳು ಮತ್ತು ವಾಣಿಜ್ಯ ವಾಹನಗಳ ಟೈರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಜಪಾನ್ ಬ್ರಾಂಡ್ ಬ್ರಿಡ್ಜ್‌ಸ್ಟೋನ್ ಸಂಸ್ಥೆಯು ಭಾರತದಲ್ಲಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಮುಂದಿನ 5 ವರ್ಷಗಳಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ಹೊಸ ಟೈರ್ ಉತ್ಪಾದನಾ ಘಟಕಗಳ ನಿರ್ಮಾಣ ಕೂಡಾ ಸೇರಿದ್ದು, ಹೊಸ ಘಟಕ ನಿರ್ಮಾಣಕ್ಕಾಗಿ ರೂ.350 ಕೋಟಿ ಹೂಡಿಕೆ ಮಾಡುತ್ತಿದೆ.

ಹೊಸ ಟೈರ್ ಉತ್ಪಾದನಾ ಘಟಕಕ್ಕಾಗಿ ಬ್ರಿಡ್ಜ್‌ಸ್ಟೋನ್‌ನಿಂದ ರೂ.350 ಕೋಟಿ ಹೂಡಿಕೆ

ಭಾರತದಲ್ಲಿ ಈಗಾಗಲೇ ಹಲವಾರು ಜನಪ್ರಿಯ ಟೈರ್ ಉತ್ಪಾದಕರಿದ್ದು, ಈ ನಡುವೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಬ್ರಿಡ್ಜ್ ಸ್ಟೋನ್ ಭಾರತದಲ್ಲೂ ಪೂರ್ಣ ಪ್ರಮಾಣದ ಕಾರ್ಯಚರಣೆ ಆರಂಭಿಸುತ್ತಿದೆ. ಇಷ್ಟು ದಿನಗಳ ಕಾಲ ಆಮದು ಮೂಲಕ ಮಾತ್ರ ವಹಿವಾಟ ನಡೆಸುತ್ತಿದ್ದ ಬ್ರಿಡ್ಜ್ ಸ್ಟೋನ್ ಇನ್ಮುಂದೆ ದೇಶಿಯವಾಗಿ ಉತ್ಪಾದನೆ ಕೈಗೊಳ್ಳಲಿದ್ದು, ಮಧ್ಯಪ್ರದೇಶದ ಇಂಧೋರ್ ಬಳಿ ಏಷ್ಯಾದ ಅತಿ ದೊಡ್ಡ ಟೈರ್ ಉತ್ಪಾದನಾ ಘಟಕಗಳನ್ನು ನಿರ್ಮಾಣ ಮಾಡುತ್ತಿದೆ.

ಹೊಸ ಟೈರ್ ಉತ್ಪಾದನಾ ಘಟಕಕ್ಕಾಗಿ ಬ್ರಿಡ್ಜ್‌ಸ್ಟೋನ್‌ನಿಂದ ರೂ.350 ಕೋಟಿ ಹೂಡಿಕೆ

ಇದಕ್ಕೂ ಮುನ್ನ ಪುಣೆಯಲ್ಲಿ ಈಗಾಗಲೇ ಮತ್ತೊಂದು ಟೈರ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿರುವ ಬ್ರಿಡ್ಜ್‌ಸ್ಟೋನ್ ಸಂಸ್ಥೆಯು, ಮೊದಲ ಹಂತವಾಗಿ ಮಾರುಕಟ್ಟೆ ವಿಸ್ತರಣೆ ಮತ್ತು ಮಾರಾಟ ಮಳಿಗೆಗಳನ್ನು ತೆರೆಯುವ ಸಂಬಂಧ ರೂ. 2 ಸಾವಿರ ಕೋಟಿ ಹೂಡಿಕೆ ಮಾಡಿತ್ತು.

ಹೊಸ ಟೈರ್ ಉತ್ಪಾದನಾ ಘಟಕಕ್ಕಾಗಿ ಬ್ರಿಡ್ಜ್‌ಸ್ಟೋನ್‌ನಿಂದ ರೂ.350 ಕೋಟಿ ಹೂಡಿಕೆ

ಇದೀಗ ಮಾರುಕಟ್ಟೆಯಲ್ಲಿ ಎಂಆರ್‌ಎಫ್ ಮತ್ತು ಅಪೊಲೋ ಟೈರ್ ನಂತರ ಬ್ರಿಡ್ಜ್‌ಸ್ಟೋನ್ ಪ್ರೀಮಿಯಂ ಟೈರ್‌ ಮಾದರಿಗಳಿಗೆ ಭಾರೀ ಬೇಡಿಕೆ ಬರುತ್ತಿದ್ದು, ಮತ್ತೆ ರೂ. 350 ಕೋಟಿ ಹೆಚ್ಚುವರಿ ಬಂಡವಾಳದೊಂದಿಗೆ ಮಧ್ಯಪ್ರದೇಶದ ಇಂಧೋರ್ ಬಳಿ ಮತ್ತೊಂದು ಟೈರ್ ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ಸಿದ್ದವಾಗಿದೆ.

ಹೊಸ ಟೈರ್ ಉತ್ಪಾದನಾ ಘಟಕಕ್ಕಾಗಿ ಬ್ರಿಡ್ಜ್‌ಸ್ಟೋನ್‌ನಿಂದ ರೂ.350 ಕೋಟಿ ಹೂಡಿಕೆ

ಪುಣೆ ಮತ್ತು ಇಂಧೋರ್ ಬಳಿಯ ಘಟಕದಿಂದ ಪ್ರತಿದಿನ 20 ಸಾವಿರ ಟೈರ್ ಉತ್ಪಾದನಾ ಗುರಿಹೊಂದಿರುವ ಬ್ರಿಡ್ಜ್‌ಸ್ಟೋನ್ ಸಂಸ್ಥೆಯು ಕೈಗೆಟುವಕುವ ಬೆಲೆಗಳಲ್ಲಿ ಉತ್ತಮ ಮಾದರಿಯ ಟೈರ್ ಮಾದರಿಗಳನ್ನು ಬಿಡುಗಡೆಗೊಳಿಸುತ್ತಿದೆ. ಹೀಗಾಗಿ ದೇಶಿಯ ಮಾರುಕಟ್ಟೆಯಲ್ಲಿ ಎಂಆರ್‌ಎಫ್ ಮತ್ತು ಅಪೊಲೋ ಟೈರ್ ಮಾರಾಟಕ್ಕೆ ತೀವ್ರ ಪೈಪೋಟಿ ನೀಡುತ್ತಿರುವ ಬ್ರಿಡ್ಡ್‌ಸ್ಟೋನ್ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ 3 ಸಾವಿರ ಅಧಿಕೃತ ಮಾರಾಟ ಮಳಿಗೆಗಳನ್ನು ಹೊಂದಲಿದೆ.

ಹೊಸ ಟೈರ್ ಉತ್ಪಾದನಾ ಘಟಕಕ್ಕಾಗಿ ಬ್ರಿಡ್ಜ್‌ಸ್ಟೋನ್‌ನಿಂದ ರೂ.350 ಕೋಟಿ ಹೂಡಿಕೆ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಜೊತೆಗೆ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಯೋಜನೆ ಅಡಿ ಹೊಸ ಟೈರ್ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿರುವ ಬ್ರಿಡ್ಜ್‌ಸ್ಟೋನ್ ಸಂಸ್ಥೆಯು ಕೈಗೆಟುವ ಬೆಲೆಗಳಿಂದ ಹಿಡಿದು ದುಬಾರಿ ಬೆಲೆಯ ಪರ್ಫಾಮೆನ್ಸ್ ಟೈರ್ ಮಾದರಿಗಳನ್ನು ಸಹ ಅಭಿವೃದ್ಧಿಪಡಿಸುತ್ತಿದೆ.

ಹೊಸ ಟೈರ್ ಉತ್ಪಾದನಾ ಘಟಕಕ್ಕಾಗಿ ಬ್ರಿಡ್ಜ್‌ಸ್ಟೋನ್‌ನಿಂದ ರೂ.350 ಕೋಟಿ ಹೂಡಿಕೆ

ಈ ಬಗ್ಗೆ ಮಾತನಾಡಿರುವ ಬ್ರಿಡ್ಜ್‌ಸ್ಟೋನ್ ಇಂಡಿಯಾ ಎಂಡಿ ಕಜುತೋಷಿ ಒಯೊಮಾ, "ಬ್ರಿಡ್ಜ್‌‌ಸ್ಟೋನ್‌ಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಭವಿಷ್ಯವಿದ್ದು, ಈ ನಿಟ್ಟಿನಲ್ಲಿ ಮಹತ್ವದ ಯೋಜನೆಗಳೊಂದಿಗೆ ಮುಂದಿನ 2020ರ ವೇಳೆಗೆ ಪ್ರತಿದಿನ 20 ಸಾವಿರ ಟೈರ್ ಉತ್ಪಾದನಾ ಗುರಿ ಸಾಧಿಸಲಿದ್ದೇವೆ ಎಂದಿದ್ದಾರೆ.

ಹೊಸ ಟೈರ್ ಉತ್ಪಾದನಾ ಘಟಕಕ್ಕಾಗಿ ಬ್ರಿಡ್ಜ್‌ಸ್ಟೋನ್‌ನಿಂದ ರೂ.350 ಕೋಟಿ ಹೂಡಿಕೆ

ಇದಲ್ಲದೇ ಸ್ಥಳೀಯರಿಗೆ ಹೊಸ ಉತ್ಪಾದನಾ ಘಟಕದಲ್ಲಿನ ಉದ್ಯೋಗ ಅವಕಾಶಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿ ಭರವಸೆ ನೀಡಿರುವ ಬ್ರಿಡ್ಜ್ ಸ್ಟೋನ್ ಸಂಸ್ಥೆಯು ನುರಿತ 450 ಕಾರ್ಮಿಕರನ್ನು ನೇಮಕ ಕೂಡಾ ಮಾಡಿಕೊಳ್ಳಲಿದ್ದು, ಭಾರತದಿಂದಲೇ ಏಷ್ಯಾ ಪ್ರಮುಖ ರಾಷ್ಟ್ರಗಳಿಗೆ ರಫ್ತು ಕೈಗೊಳ್ಳುವ ಯೋಜನೆಯಲ್ಲಿದೆ.

Article Published On: Wednesday, July 10, 2019, 18:21 [IST]
English summary
Bridgestone To Invest Over Rs 350 Crore To Produce Upto 20,000 Tyres Per Day. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+