ಪ್ರತಿ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡಲಿವೆ ಬಿವೈಡಿ ಎಲೆಕ್ಟ್ರಿಕ್ ಕಾರ್ ಮತ್ತು ವ್ಯಾನ್
ಚೀನಿ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಸಂಸ್ಥೆಯಾದ ಬಿವೈಡಿ ತನ್ನ ಜನಪ್ರಿಯ ಎಲೆಕ್ಟ್ರಿಕ್ ಕಾರು ಮತ್ತು ವ್ಯಾನ್ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಬಿಡುಗಡೆಯಾಗಲಿರುವ ಹೊಸ ಎಲೆಕ್ಟ್ರಿಕ್ ವಾಹನಗಳ ಮಾಹಿತಿ ಬಹಿರಂಗ ಪಡಿಸಿದೆ.

ಬಿವೈಡಿ ಸಂಸ್ಥೆಯು ಚೀನಿ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಬಸ್ ಮತ್ತು ವಾಣಿಜ್ಯ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಭಾರೀ ಜನಪ್ರಿಯತೆ ಸಾಧಿಸಿದ್ದು, ಇದೀಗ ಭಾರತೀಯ ಮಾರುಕಟ್ಟೆಯಲ್ಲೂ ತನ್ನ ಜನಪ್ರಿಯ ಎಲೆಕ್ಟ್ರಿಕ್ ಉತ್ಪನ್ನಗಳ ಮಾರಾಟಕ್ಕೆ ಸಿದ್ದತೆ ನಡೆಸಿದೆ. ಇದಕ್ಕಾಗಿ ಬೃಹತ್ ಬಂಡವಾಳದೊಂದಿಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕಕ್ಕೆ ಚಾಲನೆ ಕೂಡಾ ನೀಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ವಾಹನ ಮಾರಾಟಕ್ಕೆ ಚಾಲನೆ ನೀಡಲಿದೆ.

ಹೊಸ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳ ಕುರಿತಾಗಿ ಮಾತನಾಡಿರುವ ಬಿವೈಡಿ ಇಂಡಿಯಾ ವಿಭಾಗದ ಮುಖ್ಯಸ್ಥ ಲೀ ಜುಲಿಂಗ್ ಅವರು ವಾಹನ ಮಾರಾಟದಲ್ಲಿ ವಿಫುಲ ಅವಕಾಶ ಹೊಂದಿರುವ ಭಾರತೀಯ ಮಾರಾಕಟ್ಟೆಯಲ್ಲಿ ನಮ್ಮ ಹೊಸ ವಾಹನ ಉತ್ಪನ್ನಗಳು ಗ್ರಾಹಕರ ಬೇಡಿಕೆ ಪೂರೈಸುವ ವಿಶ್ವಾಸವಿರುವುದಾಗಿ ತಿಳಿಸಿದ್ದಾರೆ.

ಮಾಹಿತಿಗಳ ಪ್ರಕಾರ, ಬಿವೈಡಿ ಇಂಡಿಯಾ ಸಂಸ್ಥೆಯು ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಮತ್ತು ವ್ಯಾನ್ ಮಾದರಿಗಳನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಿದ್ದು, ತದನಂತರ ವಾಣಿಜ್ಯ ಬಳಕೆ ಎಲೆಕ್ಟ್ರಿಕ್ ಮಿನಿ ಟ್ರಕ್ ಮತ್ತು ಬಸ್‌ಗಳನ್ನು ಸಹ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಎಂಪಿವಿ ಮತ್ತು ವ್ಯಾನ್ ಮಾದರಿಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆಯಿದ್ದು, ಇವು ವ್ಯಯಕ್ತಿಕ ಬಳಕೆ ವಾಹನ ಮಾದರಿಗಳಿಂತ ವಾಣಿಜ್ಯ ಉದ್ದೇಶಕ್ಕಾಗಿ ಹೆಚ್ಚು ಬಳಕೆಯಾಗುವ ವಾಹನ ಮಾದರಿಗಳಾಗಿವೆ. ಹೀಗಾಗಿ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ವಾಣಿಜ್ಯ ಉದ್ದೇಶಿತ ಸಂಚಾರಕ್ಕಾಗಿ ಪೂರೈಕೆ ಮಾಡಲು ನಿರ್ಧರಿಸಿರುವ ಬಿವೈಡಿ ಸಂಸ್ಥೆಯು ತದನಂತರವಷ್ಟೇ ವ್ಯಯಕ್ತಿಕ ಕಾರು ಬಳಕೆದಾರರಿಗೆ ಎಂಪಿವಿ ಮತ್ತು ವ್ಯಾನ್ ಮಾದರಿಗಳನ್ನು ಮಾರಾಟ ಮಾಡಲಿದೆ.

ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಮಟ್ಟದ ಆದ್ಯತೆ ನೀಡಲಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಅಷ್ಟೇ ಅಲ್ಲದೇ ಎಲೆಕ್ಟ್ರಿಕ್ ವಾಹನ ನಿರ್ಮಾಣ ಸಂಸ್ಥೆಗಳಿಗೂ ಹೆಚ್ಚಿನ ಮಟ್ಟದ ಸಬ್ಸಡಿ ಸೇರಿದಂತೆ ಹಲವು ವಿನಾಯ್ತಿಗಳನ್ನು ನೀಡಲಾಗುತ್ತಿದೆ.

ಈ ಹಿನ್ನಲೆಯಲ್ಲಿ ಬೃಹತ್ ಬಂಡವಾಳದೊಂದಿಗೆ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲು ಭಾರತೀಯ ಮಾರುಕಟ್ಟೆ ಪ್ರವೇಶಿಸಿರುವ ಬಿವೈಡಿ ಸಂಸ್ಥೆಯು ಭಾರತೀಯ ಗ್ರಾಹಕರ ಬೇಡಿಕೆ ಅರಿಯಲು ವಿವಿಧ ಹಂತದ ಅಧ್ಯಯನಗಳನ್ನು ಕೂಡಾ ಕೈಗೊಂಡಿದೆ.
MOST READ:ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಮೊದಲು ಎಂಪಿವಿ ಮತ್ತು ವ್ಯಾನ್ ಮಾದರಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಹೊಸ ವಾಹನಗಳಿಗೆ ಟಿ3 ಎಂಪಿವಿ ಮತ್ತು ಟಿ3 ವ್ಯಾನ್ ಹೆಸರಿಸಿರುವ ಬಿವೈಡಿ ಸಂಸ್ಥೆಯು ಆಕರ್ಷಕ ಬೆಲೆ ನಿಗದಿ ಮಾಡುವ ಸುಳಿವು ನೀಡಿದೆ.
MOST READ: ಹೊಸ ಮೋಟಾರ್ ವೆಹಿಕಲ್ ಕಾಯ್ದೆ ಜಾರಿ- ಮೊದಲ ದಿನವೇ ಬೆಚ್ಚಿಬಿದ್ದ ವಾಹನ ಸವಾರರು..!

ಹೊಸ ಟಿ3 ಎಂಪಿವಿ ಮತ್ತು ಟಿ3 ಎಲೆಕ್ಟ್ರಿಕ್ ಮಾದರಿಗಳು ಪ್ರತಿ ಚಾರ್ಜ್‌ಗೆ 300ಕಿ. ಮೀ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದು, ಬ್ಯಾಟರಿ ವೈಶಿಷ್ಟ್ಯತೆಗಳು ಮತ್ತು ಹೊಸ ವಾಹನಗಳ ವಿನ್ಯಾಸಗಳ ಕುರಿತು ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತ ಮಾಹಿತಿ ಹಂಚಿಕೊಳ್ಳಲಿದೆ.
MOST READ:ಯಾವುದೇ ಎಂಜಿನ್ ರಿಪೇರಿ ಇಲ್ಲದೇ 5 ಲಕ್ಷ ಕಿ.ಮೀ ಸಂಚರಿಸಿದ ಟಾಟಾ ಇಂಡಿಕಾ..!

ಇನ್ನು ಭಾರತದಲ್ಲಿ ತನ್ನ ಹೊಸ ವಾಹನಗಳ ಮಾರಾಟಕ್ಕೆ ಚಾಲನೆ ನೀಡುವುದಕ್ಕೂ ಮುನ್ನ ಸ್ಥಳೀಯ ವಾಹನ ಉತ್ಪಾದನಾ ಸಂಸ್ಥೆಯೊಂದರ ಜೊತೆಗೆ ಜಂಟಿಯಾಗಿ ಕಾರ್ಯನಿರ್ವಹಣೆ ಮಾಡಬೇಕಾದ ನಿಯಮವಿದ್ದು, ಈ ಹಿನ್ನಲೆ ಸಹ ಸಂಸ್ಥೆಯ ಆಯ್ಕೆಯ ವಿಚಾರವಾಗಿ ಮಹತ್ವದ ಹೆಜ್ಜೆಯಿಡುತ್ತಿದೆ.

ಒಂದು ವೇಳೆ ಬೆಲೆ ವಿಚಾರವಾಗಿ ಬಿವೈಡಿ ಸಂಸ್ಥೆಯ ಎಲೆಕ್ಟ್ರಿಕ್ ವಾಹನಗಳು ಗ್ರಾಹಕರನ್ನು ಸೆಳೆದಲ್ಲಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳು ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದ್ದು, ವ್ಯಯಕ್ತಿಕ ಮತ್ತು ವಾಣಿಜ್ಯ ಬಳಕೆಯ ವಾಹನಗಳ ಮಾರಾಟದಲ್ಲೂ ಬಿವೈಡಿ ಸದ್ದು ಮಾಡುವ ನೀರಿಕ್ಷೆಯಿದೆ.


Click it and Unblock the Notifications