ಯಾವುದೇ ಎಂಜಿನ್ ರಿಪೇರಿ ಇಲ್ಲದೇ 5 ಲಕ್ಷ ಕಿ.ಮೀ ಸಂಚರಿಸಿದ ಟಾಟಾ ಇಂಡಿಕಾ..!

ಟಾಟಾ ಇಂಡಿಕಾ, ಭಾರತದ ಮೊದಲ ಡೀಸೆಲ್ ಎಂಜಿನ್ ಹೊಂದಿದ್ದ ಪ್ರಯಾಣಿಕ ಕಾರು. ಈ ಕಾರು ಭಾರತದ ಆಟೋಮೊಬೈಲ್ ಇತಿಹಾಸದಲ್ಲಿ ತನ್ನದೇ ಆದ ಅಧ್ಯಾಯವನ್ನು ಹೊಂದಿದೆ. ಇಂಡಿಕಾ ಬಿಡುಗಡೆಯಾದಾಗ ತನ್ನ ಹೆಚ್ಚಿನ ಕ್ಯಾಬಿನ್‍ನಿಂದಾಗಿ ಹಾಗೂ ಡೀಸೆಲ್ ಎಂಜಿನ್‍‍ನಿಂದಾಗಿ ಹೆಚ್ಚು ಜನಪ್ರಿಯವಾಯಿತು.

ಯಾವುದೇ ಎಂಜಿನ್ ರಿಪೇರಿ ಇಲ್ಲದೇ 5 ಲಕ್ಷ ಕಿ.ಮೀ ಸಂಚರಿಸಿದ ಟಾಟಾ ಇಂಡಿಕಾ..!

ಈ ಎಂಜಿನ್, ಇಂಧನ ಸಾಮರ್ಥ್ಯವನ್ನು ಯಶಸ್ವಿಯಾಗಿ ನಿಭಾಯಿಸುತ್ತದೆ. ಕೇರಳದಲ್ಲಿ 10 ವರ್ಷದ ಅವಧಿಯಲ್ಲಿ ಟಾಟಾ ಇಂಡಿಕಾ ಕಾರೊಂದು 5.85 ಲಕ್ಷ ಕಿ.ಮೀ ಸಂಚರಿಸಿದೆ. ಈ ಅಪರೂಪದ ಸಾಧನೆ ಮಾಡಿದ ಈ ಗ್ರಾಹಕನಿಗೆ ಕೇರಳದ ಹೈಸನ್ ಚಲಕ್ಕುಡಿ ಟಾಟಾ ಸನ್ಮಾನ ಮಾಡಿ ಗೌರವಿಸಿದೆ. ಈ ಟಾಟಾ ಇಂಡಿಕಾ ಡಿಎಲ್‌ಎಸ್ ಕಾರ್ ಅನ್ನು 2009ರ ಆಗಸ್ಟ್ 14ರಂದು ಖರೀದಿಸಲಾಗಿದೆ. ಪ್ರತಿವರ್ಷ ಸರಾಸರಿ 60,000 ಕಿ.ಮೀ.ಗಳಷ್ಟು ಸಂಚರಿಸಿದೆ. ಅಂದ ಹಾಗೆ ಈ ಕಾರಿನ ಮಾಲೀಕರ ಹೆಸರು ವರಧರಾಜನ್.

ಯಾವುದೇ ಎಂಜಿನ್ ರಿಪೇರಿ ಇಲ್ಲದೇ 5 ಲಕ್ಷ ಕಿ.ಮೀ ಸಂಚರಿಸಿದ ಟಾಟಾ ಇಂಡಿಕಾ..!

ಈ ವಾಹನವು ಈಗಲೂ ಸಹ ಹೊಸದರಂತೆ ಕಾಣುತ್ತದೆ. ಇದರಿಂದ ಈ ಕಾರಿನ ಮಾಲೀಕರು ತಮ್ಮ ಕಾರ್ ಅನ್ನು ಹೇಗೆ ನಿರ್ವಹಿಸಿದ್ದಾರೆ ಎಂಬುದನ್ನು ತಿಳಿಯಬಹುದು. ವಂದಿಬ್ರಂತನ್ಮಾರ್ ಗ್ರೂಪಿನ ಅಬ್ದುಲ್ ಬಸಿತ್ ಬರೆದ ಪೋಸ್ಟ್ ನಲ್ಲಿರುವಂತೆ, ಕಳೆದ 10 ವರ್ಷಗಳಿಂದ ಈ ಕಾರಿನಲ್ಲಿರುವ ಎಂಜಿನ್ ಅನ್ನು ರಿಪೇರಿ ಮಾಡಲಾಗಿಲ್ಲ.

ಯಾವುದೇ ಎಂಜಿನ್ ರಿಪೇರಿ ಇಲ್ಲದೇ 5 ಲಕ್ಷ ಕಿ.ಮೀ ಸಂಚರಿಸಿದ ಟಾಟಾ ಇಂಡಿಕಾ..!

ಅಂದರೆ ಈ ಎಂಜಿನ್ ಅನ್ನು ಇದುವರೆಗೂ ಒವರ್ ಹಾಲ್ ಹಾಗೂ ರಿಬೋರ್ ಮಾಡಲಾಗಿಲ್ಲ. ಇದು ಈ ಹ್ಯಾಚ್‌ಬ್ಯಾಕ್‌ ಕಾರಿನ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಈ ಪೋಸ್ಟ್ ನಲ್ಲಿ ಕಾರಿನ ಕ್ಲಚ್ ಅಸೆಂಬ್ಲಿ ಮಾಡಲಾಗಿದೆಯೇ ಎಂಬುದನ್ನು ತಿಳಿಸಿಲ್ಲ.

ಯಾವುದೇ ಎಂಜಿನ್ ರಿಪೇರಿ ಇಲ್ಲದೇ 5 ಲಕ್ಷ ಕಿ.ಮೀ ಸಂಚರಿಸಿದ ಟಾಟಾ ಇಂಡಿಕಾ..!

ಡೀಸೆಲ್ ಎಂಜಿನ್‍‍ಗಳು ಪೆಟ್ರೋಲ್ ಎಂಜಿನ್‍ಗಳಿಗಿಂತ ಹೆಚ್ಚು ಜೀವಿತಾವಧಿಯನ್ನು ಹೊಂದಿರುತ್ತವೆ. ಅವುಗಳನ್ನು ಸರಿಯಾಗಿ ಮೆಂಟೆನ್ ಮಾಡಿದರೆ ಜೀವಿತಾವಧಿಯವರೆಗೆ ಚಲಿಸಬಹುದು. ಈ ಕಾರು, ಈ ಸಾಧನೆ ಮಾಡಿದ ಮೊದಲ ಡೀಸೆಲ್ ಕಾರು ಅಲ್ಲ.

ಯಾವುದೇ ಎಂಜಿನ್ ರಿಪೇರಿ ಇಲ್ಲದೇ 5 ಲಕ್ಷ ಕಿ.ಮೀ ಸಂಚರಿಸಿದ ಟಾಟಾ ಇಂಡಿಕಾ..!

ಈ ಹಿಂದೆ, ಸ್ಕಾರ್ಪಿಯೋನಂತಹ ಅನೇಕ ಡೀಸೆಲ್ ವಾಹನಗಳು 5 ಲಕ್ಷ ಕಿ.ಮೀ ದೂರವನ್ನು ಕ್ರಮಿಸಿದ್ದವು. ಈ ಕಾರ್ ಅನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಈ ಕಾರು ಪ್ರತಿ ತಿಂಗಳು ಸಾಕಷ್ಟು ದೂರವನ್ನು ಕ್ರಮಿಸುತ್ತಿರುವುದರಿಂದ, ಈ ಕಾರ್ ಅನ್ನು ಟ್ರಾವೆಲ್ಸ್ ಗಳಿಗಾಗಿ ಬಳಸಿರುವ ಸಾಧ್ಯತೆಗಳಿವೆ.

ಯಾವುದೇ ಎಂಜಿನ್ ರಿಪೇರಿ ಇಲ್ಲದೇ 5 ಲಕ್ಷ ಕಿ.ಮೀ ಸಂಚರಿಸಿದ ಟಾಟಾ ಇಂಡಿಕಾ..!

ಕಾರುಗಳನ್ನು ಸರಿಯಾದ ಕಾಳಜಿಯಿಂದ ನೋಡಿಕೊಂಡರೆ ಯಾವುದೇ ಡೀಸೆಲ್ ವಾಹನಗಳು ಈ ಸಾಧನೆಯನ್ನು ಮಾ‍ಡಬಹುದಾಗಿದೆ. ಈ ಹಿಂದೆ ಅನೇಕ ಡೀಸೆಲ್ ವಾಹನಗಳು 10 ಲಕ್ಷ ಕಿ.ಮೀ ಸಂಚರಿಸಿದ್ದ ಸಾಧನೆಯನ್ನು ಮಾಡಿದ್ದವು. ನೀವೂ ಸಹ ಕೆಲ ಸರಳ ವಿಧಾನಗಳನ್ನು ಅನುಸರಿಸಿದರೆ ನಿಮ್ಮ ಕಾರಿನಲ್ಲಿಯೂ ಸಹ ಈ ರೀತಿಯ ಸಾಧನೆ ಮಾಡಬಹುದು.

MOST READ: ಕಾರ್ ಕದ್ದಿದ್ದು ಆಯ್ತು, ಈಗ ಖದೀಮರ ಕಣ್ಣು ಲೊಗೊ ಮೇಲೆ..!

ಯಾವುದೇ ಎಂಜಿನ್ ರಿಪೇರಿ ಇಲ್ಲದೇ 5 ಲಕ್ಷ ಕಿ.ಮೀ ಸಂಚರಿಸಿದ ಟಾಟಾ ಇಂಡಿಕಾ..!

ಇದರಿಂದಾಗಿ ನಿಮ್ಮ ಕಾರುಗಳೂ ಸಹ ಲಕ್ಷಾಂತರ ಕಿಲೋಮೀಟರ್‌ ಕ್ರಮಿಸಿದರೂ ಸುಸ್ಥಿತಿಯಲ್ಲಿರುತ್ತವೆ. ನಿಮ್ಮ ಕಾರನ್ನು ಯಾವಾಗಲೂ ಬೆಚ್ಚಗಿನ ವಾತಾವರಣದಲ್ಲಿಡಿ. ನಿಮ್ಮ ವಾಹನವನ್ನು ಶುರು ಮಾಡುವ ಮೊದಲು ಎಂಜಿನ್‌ನಲ್ಲಿರುವ ಕಾಂಪೊನೆಂಟ್‍‍ಗಳ ಬಗ್ಗೆ ಗಮನ ಹರಿಸಿ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಯಾವುದೇ ಎಂಜಿನ್ ರಿಪೇರಿ ಇಲ್ಲದೇ 5 ಲಕ್ಷ ಕಿ.ಮೀ ಸಂಚರಿಸಿದ ಟಾಟಾ ಇಂಡಿಕಾ..!

ಕಾರ್ ಅನ್ನು ಸ್ಟಾರ್ಟ್ ಮಾಡಿದ ನಂತರ ಒಂದು ನಿಮಿಷದ ಕಾಲ ಕಾರ್ ಅನ್ನು ಐಡ್ಲಿಂಗ್‍‍ನಲ್ಲಿಡಿ. ಇದರಿಂದಾಗಿ ಎಂಜಿನ್ ಆಯಿಲ್, ಕಾರಿನ ಎಲ್ಲಾ ಭಾಗಗಳನ್ನು ತಲುಪುತ್ತದೆ. ಎಲ್ಲಾ ಭಾಗಗಳನ್ನು ಲ್ಯೂಬ್ರಿಕೇಟ್ ಆಗಿಡುತ್ತದೆ. ಕಾರ್ ಅನ್ನು ನಿಯಮಿತವಾಗಿ ಸರ್ವಿಸ್ ಮಾಡುವುದನ್ನು ಎಂದಿಗೂ ಮರೆಯಬೇಡಿ. ನಿರಂತರ ಸರ್ವಿಸ್ ಕಾರ್ ಅನ್ನು ಅತ್ಯುತ್ತಮ ಸ್ಥಿತಿಯಲ್ಲಿಡುತ್ತದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಯಾವುದೇ ಎಂಜಿನ್ ರಿಪೇರಿ ಇಲ್ಲದೇ 5 ಲಕ್ಷ ಕಿ.ಮೀ ಸಂಚರಿಸಿದ ಟಾಟಾ ಇಂಡಿಕಾ..!

ಕಾರ್ ಅನ್ನು ನಿಧಾನವಾಗಿ ಚಾಲನೆ ಮಾಡಿ. ಇದರಿಂದಾಗಿ ಎಂಜಿನ್‌ನ ಮೇಲೆ ಹೆಚ್ಚಿನ ಪ್ರಮಾಣದ ಒತ್ತಡ ಬೀಳುವುದಿಲ್ಲ. ಚಾಲನೆ ಮಾಡುವ ರಸ್ತೆಗಳಿಗೆ ಅನುಗುಣವಾಗಿ ಪ್ರತಿ ಕೆಲವು ಸಾವಿರ ಕಿಲೋಮೀಟರ್‌ಗಳಿಗೆ ಒಮ್ಮೆ ಸರಿಯಾದ ಅಲೈನ್‍‍ಮೆಂಟ್ ಹಾಗೂ ಬ್ಯಾಲೆನ್ಸಿಂಗ್ ಮಾಡಿಸಿ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಯಾವುದೇ ಎಂಜಿನ್ ರಿಪೇರಿ ಇಲ್ಲದೇ 5 ಲಕ್ಷ ಕಿ.ಮೀ ಸಂಚರಿಸಿದ ಟಾಟಾ ಇಂಡಿಕಾ..!

ಒಂದು ಕಿ.ಮೀ ಅಥವಾ ಎರಡು ಕಡಿಮೆ ಪ್ರಯಾಣಕ್ಕಾಗಿ ಕಾರ್ ಅನ್ನು ಎಂದಿಗೂ ಬಳಸದಿರಿ. ಕಡಿಮೆ ದೂರದ ಪ್ರಯಾಣದಲ್ಲಿ ಎಂಜಿನ್ ಗರಿಷ್ಠ ತಾಪಮಾನವನ್ನು ತಲುಪುವುದಿಲ್ಲ. ಇದರಿಂದ ಹೆಚ್ಚಿನ ಸಮಯದವರೆಗೆ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ.

Image Courtesy: Abdul Basith/Facebook

Most Read Articles

Kannada
English summary
Tata Indica car covered 5.85 lakh kms without engine work - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X