ಇನ್ಮುಂದೆ ಪೆಟ್ರೋಲ್, ಡೀಸೆಲ್ ಕಾರುಗಳ ನೋಂದಣಿ ಹತ್ತು ವರ್ಷಕ್ಕೆ ಮಾತ್ರ ಸೀಮಿತವಾಗುತ್ತಾ?
ಮಾಲಿನ್ಯ ತಡೆಗಾಗಿ 2030ರ ವೇಳೆಗೆ ದೇಶದಲ್ಲಿ ಶೇ.100ರಷ್ಟು ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳನ್ನು ರಸ್ತೆಗಿಳಿಸುವ ಕೇಂದ್ರದ ಯೋಜನೆಗೆ ಪೂರಕವಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಸಿದ್ದಗೊಳಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ವಾಹನಗಳ ಆಯಸ್ಸು ಮುಂದಿನ ಹತ್ತು ವರ್ಷಕ್ಕೆ ಮಾತ್ರವೇ ಸೀಮಿತವಾಗಿರಲಿವೆ ಎನ್ನಲಾಗಿದೆ.

ಹೌದು, ಪ್ರಸ್ತುತ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಆಯಸ್ಸು ಮುಂದಿನ ಹತ್ತು ವರ್ಷಕ್ಕೆ ಕೊನೆಗೊಳ್ಳಲಿದ್ದು, ಹೊಸ ಕಾರುಗಳ ನೋಂದಣಿಯನ್ನು ಮುಂದಿನ 2030ರ ತನಕ ಮಾತ್ರವೇ ನಿಗದಿಗೊಳಿಸುವ ಸಂಬಂಧ ಚರ್ಚೆ ನಡೆಸಲಾಗುತ್ತಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪ್ರೇರಿತ ವಾಹನಗಳು ಮುಂದಿನ ಕೆಲವೇ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗುವ ಲಕ್ಷಣ ಕಂಡುಬರುತ್ತಿವೆ.

ಹೊಸ ವಾಹನ ನೋಂದಣಿಯನ್ನು ಮುಂದಿನ 10 ವರ್ಷಗಳಿಗೆ ಮಾತ್ರ ನಿಗದಿಗೊಳಿಸುವ ಬಗ್ಗೆ ಮಾತನಾಡಿರುವ ಕೇರಳ ಸಾರಿಗೆ ಇಲಾಖೆ ನಿರ್ದೇಶಕ ಕೆ.ಆರ್. ಜ್ಯೋತಿಲಾಲ್ ಅವರು, ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಮುಂದಿನ ಕೆಲವೇ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವುದಾಗಿ ಸುಳಿವು ನೀಡಿದ್ದಾರೆ.

ಕೇಂದ್ರ ಸಾರಿಗೆ ಇಲಾಖೆಯ ನಿರ್ದೇಶನದಂತೆ ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳನ್ನು ತಗ್ಗಿಸಲು ನೋಂದಣಿ ಅವಧಿಯನ್ನು 10 ವರ್ಷಗಳಿಗೆ ಮಾತ್ರ ನಿಗದಿಪಡಿಸುವ ಬಗ್ಗೆ ಚರ್ಚಿಸಲಾಗುತ್ತಿದ್ದು, ತಜ್ಞರ ಅಭಿಪ್ರಾಯದ ಆಧಾರ ಮೇಲೆ ಮುಂದಿನ ಕೆಲವೇ ದಿನಗಳಲ್ಲಿ ಹೊಸ ರೂಲ್ಸ್ ಜಾರಿಗೆ ಬರುವುದು ನಿಶ್ಚಿತ ಎಂದಿದ್ದಾರೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯ ಸಭೆಯೊಂದರಲ್ಲಿ ಮಾತನಾಡಿರುವ ಕೆ.ಆರ್. ಜ್ಯೋತಿಲಾಲ್ ಅವರು ಕಾರುಗಳ ನೋಂದಣಿ ಅವಧಿಯನ್ನು 10 ವರ್ಷಕ್ಕೆ ಸೀಮಿತಗೊಳಿಸುವುದಷ್ಟೇ ಅಲ್ಲದೇ ಸದ್ಯ ಕಾರ್ಯನಿರ್ವಹಣೆಯಲ್ಲಿರುವ ಪೆಟ್ರೋಲ್ ಬಂಕ್‌ಗಳನ್ನೇ ಚಾರ್ಜಿಂಗ್ ಸ್ಟೆಷನ್‌ಗಳನ್ನು ಮಾರ್ಪಾಡುಗೊಳಿಸಲಾಗುತ್ತಂತೆ.

ಮುಂದಿನ 5 ವರ್ಷಗಳ ಅವಧಿಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ನೀಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಅವರು ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಗ್ಗಿಸಬೇಕಿದ್ದಲ್ಲಿ ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ಕಾರುಗಳ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಾದ ಅನಿರ್ವಾಯತೆ ಇದೆ ಎಂದಿದ್ದಾರೆ.

ಇನ್ನು ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಉತ್ಪಾದನೆಗೆ ಬ್ರೇಕ್ ಹಾಕುವ ಉದ್ದೇಶದಿಂದ ಎಲ್ಲಾ ಆಟೋ ಉತ್ಪಾದಕರು ಬೃಹತ್ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಮಧ್ಯೆ ಎಲೆಕ್ಟ್ರಿಕ್ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದೆ. ಇದು ಇವಿ ವಾಹನಗಳ ಉತ್ಪಾದನೆಗೆ ಮತ್ತಷ್ಟು ಬಲ ತುಂಬಲಿದ್ದು, ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ಉತ್ತೇಜಿಸಲು ಈ ಯೋಜನೆಯು ಭಾರೀ ಪ್ರಾಮುಖ್ಯತೆ ಪಡೆಯಲಿದೆ.

ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ಹೆಚ್ಚಿಸುವ ಸಂಬಂಧ ಕೇಂದ್ರ ಸರ್ಕಾರವು ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ಸಂಸ್ಥೆಗಳಿಗೆ ಮತ್ತು ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಕೆಲವು ವಿಶೇಷ ಸೌಲಭ್ಯಗಳನ್ನು ನೀಡುವ ಬಗ್ಗೆ ಸುಳಿವು ನೀಡಿದೆ.

ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹಲವು ಅವಕಾಶಗಳಿದ್ದರೂ ಗ್ರಾಹಕರು ಮಾತ್ರ ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳ ಮೇಲೆಯೇ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಕೇಂದ್ರ ಸರ್ಕಾರವು ಚೀನಾ ಮೊರೆ ಹೋಗುತ್ತಿದೆ.
MOST READ: ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ಇದಕ್ಕೆ ಕಾರಣ, ದೇಶಾದ್ಯಂತ ಚಾರ್ಚಿಂಗ್ ಸ್ಟೇಷನ್‌ಗಳ ಕೊರತೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಂತ ದುಬಾರಿಯಾಗಿರುವ ಎಲೆಕ್ಟ್ರಿಕ್ ಕಾರುಗಳ ಬೆಲೆಯಿಂದಾಗಿ ಗ್ರಾಹಕರು ಎಲೆಕ್ಟ್ರಿಕ್ ಕಾರುಗಳತ್ತ ಮುಖಮಾಡದಿರುವುದು ಭವಿಷ್ಯದ ಯೋಜನೆಗೆ ತುಸು ಹಿನ್ನಡೆ ಉಂಟಾಗುತ್ತಿದೆ ಎನ್ನಬಹುದು.

2020ರ ವೇಳೆಗೆ ಕನಿಷ್ಠ 25ರಷ್ಟು ಆದರೂ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟವಾಗುವಂತೆ ಮಾಡಬೇಕೆಂಬ ಕೇಂದ್ರ ಸರ್ಕಾರದ ಯೋಜನೆಯು ಸದ್ಯದ ಪರಿಸ್ಥಿತಿಯು ಅಸಾಧ್ಯ ಎನ್ನುವಂತೆ ಮಾಡುತ್ತಿದ್ದು, ಒಂದು ವೇಳೆ ಚೀನಾ ಸಂಸ್ಥೆಗಳು ಭಾರತದಲ್ಲಿ ಹೊಸ ಯೋಜನೆ ರೂಪಿಸಿದ್ದಲ್ಲಿ ಇದು ಕಷ್ಟದ ಯೋಜನೆಯಲ್ಲ.
MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಪ್ರಸ್ತುತ ಭಾರತವು ಲೀಥಿಯಂ ಅಯಾನ್ ಬ್ಯಾಟರಿಗಳ ಆಮದಿಗಾಗಿ ಚೀನಾ, ಥೈವಾನ್, ಜಪಾನ್ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳನ್ನೇ ಹೆಚ್ಚು ಅವಲಂಭಿಸಿದ್ದು, 2017ರ ಅವಧಿಯಲ್ಲಿಯೇ ಬರೋಬ್ಬರಿ 150 ಮಿಲಿಯನ್ ಡಾಲರ್ ಮೊತ್ತದ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಆಮದು ಮಾಡಿಕೊಂಡಿತ್ತು.

ಇದು ಎಲೆಕ್ಟ್ರಿಕ್ ಕಾರುಗಳ ಬೆಲೆಯ ಹೆಚ್ಚಳಕ್ಕೆ ಮೂಲ ಕಾರಣವಾಗಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳಿಂತಲೂ ಹೆಚ್ಚಿನ ಬೆಲೆ ಹೊಂದಿರುವ ಹಿನ್ನೆಲೆಯಲ್ಲಿ ಇವಿ ಕಾರುಗಳ ಮಾರಾಟ ಪ್ರಕ್ರಿಯೆಯಲ್ಲಿ ಅಷ್ಟಾಗಿ ಮುನ್ನಡೆ ಕಂಡುಬರದಿರುವುದು ಇದೇ ಕಾರಣಕ್ಕೆ.

ಇದರಿಂದ ಕೇಂದ್ರ ಸರ್ಕಾರದ ಮೊರೆಹೊಗಿದ್ದ ಪ್ರಮುಖ ಆಟೋ ಉತ್ಪಾದಕ ಸಂಸ್ಥೆಗಳು ಸ್ಥಳೀಯವಾಗಿಯೇ ಲೀಥಿಯಂ ಅಯಾನ್ ಬ್ಯಾಟರಿಗಳ ಉತ್ಪಾದನೆ ಮಾಡುವತ್ತ ಗಮನಹರಿಸುವಂತೆ ಮನವಿ ಮಾಡಿದ್ದವು. ಇದರ ಫಲವಾಗಿ ದೇಶಿಯವಾಗಿಯೇ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಉತ್ಪಾದನೆ ಮಾಡುವ ಪ್ರಮುಖ ಯೋಜನೆಗೆ ಕೇಂದ್ರ ಸರ್ಕಾರವು ಚಾಲನೆ ನೀಡಿದೆ.

ಒಂದು ವೇಳೆ ಚೀನಾ ಪ್ರಮುಖ ಲೀಥಿಯಂ ಅಯಾನ್ ಉತ್ಪಾದನಾ ಸಂಸ್ಥೆಗಳು ಭಾರತದಲ್ಲಿ ಹೊಸ ಘಟಕಗಳನ್ನು ನಿರ್ಮಾಣ ಮಾಡಿದ್ದಲ್ಲಿ ಬ್ಯಾಟರಿ ಬೆಲೆಗಳು ತಗ್ಗಲಿದ್ದು, ಆಮದು ಮಾಡಿಕೊಳ್ಳುವ ಬೆಲೆಯಲ್ಲೇ ಅತ್ಯುತ್ತಮ ಮೈಲೇಜ್ ರೇಂಜ್ ಬ್ಯಾಟರಿಗಳನ್ನು ಭಾರತದಲ್ಲೇ ಉತ್ಪಾದನೆ ಮಾಡಬಹುದಾಗಿದೆ.

ಜಪಾನ್ ಆಟೋ ದಿಗ್ಗಜ ಸಂಸ್ಥೆಯಾದ ಸುಜುಕಿ ಮೋಟಾರ್ಸ್ ಈಗಾಗಲೇ ಕೇಂದ್ರದ ಆಹ್ವಾನವನ್ನು ಸ್ವಿಕರಿಸುವ ಮೂಲಕ ರೂ. 1,700 ಕೋಟಿ ಬಂಡವಾಳದೊಂದಿಗೆ ಗುಜರಾತ್‌ನಲ್ಲಿ ಮೊದಲ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡುತ್ತಿದೆ.

ಇದರೊಂದಿಗೆ ನೀತಿ ಆಯೋಗ ಶಿಫಾರಸ್ಸು ಅನ್ವಯ ಎಲೆಕ್ಟ್ರಿಕ್ ಕಾರುಗಳಿಗೆ ಗ್ರಿನ್ ನಂಬರ್ ಪ್ಲೆಟ್ ಜೊತೆಗೆ ಟೋಲ್ ಶುಲ್ಕದಲ್ಲಿ ವಿನಾಯ್ತಿ ಸೌಲಭ್ಯವನ್ನು ಒದಗಿಸುವ ಬಗ್ಗೆ ಚಿಂತನೆ ನಡೆಸಿರುವ ಕೇಂದ್ರ ಸರ್ಕಾರವು ಸದ್ಯದಲ್ಲೇ ತನ್ನ ನಿಲವು ವ್ಯಕ್ತಪಡಿಸಲಿದ್ದು, ಇದರ ಜೊತೆಗೆ ಮತ್ತಷ್ಟು ಹೊಸ ಆಫರ್‌ಗಳನ್ನು ನೀಡುವ ಬಗ್ಗೆ ಸುಳಿವು ನೀಡಿದೆ.


Click it and Unblock the Notifications