ಹಬ್ಬದ ಹಿನ್ನೆಲೆಯಲ್ಲಿ ಏರಿಕೆ ಕಂಡ ಕಾರು ಮಾರಾಟ

ಈ ವರ್ಷದ ದಸರಾ ಹಾಗೂ ದೀಪಾವಳಿ ಹಬ್ಬಗಳು ವಾಹನ ತಯಾರಕರಿಗೆ ಸಿಹಿ ಸುದ್ದಿಯನ್ನು ನೀಡಿವೆ. ಈ ವರ್ಷದ ದಸರಾ ಮತ್ತು ಧಂತೇರಸ್ ಹಬ್ಬಗಳ ವೇಳೆಯಲ್ಲಿ ಕಾರು ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5 ರಿಂದ ಶೇ.7ರಷ್ಟು ಏರಿಕೆಯಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ಏರಿಕೆ ಕಂಡ ಕಾರು ಮಾರಾಟ

ಎಕನಾಮಿಕ್ ಟೈಮ್ಸ್ ಆಟೋ ಪ್ರಕಾರ ಏಪ್ರಿಲ್‍‍ನಿಂದ ಸೆಪ್ಟೆಂಬರ್ ಮಧ್ಯದಲ್ಲಿ ವಾಹನಗಳ ಮಾರಾಟವು ನಿರಂತರವಾಗಿ ಕುಸಿತ ಕಂಡಿತ್ತು. ನಂತರದ ದಿನಗಳಲ್ಲಿ ಮಾರಾಟದಲ್ಲಿ ಹೆಚ್ಚಳವಾಗಿದೆ. ಆದರೆ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆಯಾಗಿಲ್ಲ, ಆದರೆ ಹಿಂದಿನ ತಿಂಗಳುಗಳಿಗಿಂತ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ.

ಹಬ್ಬದ ಹಿನ್ನೆಲೆಯಲ್ಲಿ ಏರಿಕೆ ಕಂಡ ಕಾರು ಮಾರಾಟ

ದಸರಾ ಮತ್ತು ದೀಪಾವಳಿ ಅವಧಿಯಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಮತ್ತು ಹ್ಯುಂಡೈ ಇಂಡಿಯಾ ಕಂಪನಿಗಳು ಕ್ರಮವಾಗಿ ಶೇ.7 ಮತ್ತು ಶೇ.10 ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ. ಈ ವರ್ಷದ ಧಂತೇರಸ್‍‍ನಲ್ಲಿ ವಿತರಿಸಿದ ಕಾರುಗಳ ಪ್ರಮಾಣವು ಕಳೆದ ವರ್ಷಕ್ಕಿಂತ ಅಧಿಕವಾಗಿದೆ. ಧಂತೇರಸ್‍‍ನಲ್ಲಿ ಮಹೀಂದ್ರಾ ಕಂಪನಿಯ ಯು‍ಟಿ‍ಲಿಟಿ ವಾಹನಗಳ ಮಾರಾಟದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಶೇ.100ರಷ್ಟು ಹೆಚ್ಚಳವಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ಏರಿಕೆ ಕಂಡ ಕಾರು ಮಾರಾಟ

ದಸರಾ ಹಬ್ಬದ 10 ದಿನಗಳ ಅವಧಿಯಲ್ಲಿ ಮಾರುತಿ ಸುಜುಕಿ 60,000 ಕಾರುಗಳನ್ನು ವಿತರಿಸಿದ್ದರೆ, ಹ್ಯುಂಡೈ ಮೋಟಾರ್ 25 ಸಾವಿರಕ್ಕೂ ಹೆಚ್ಚು ಕಾರುಗಳನ್ನು ವಿತರಿಸಿದೆ. ಇನ್ನೂ ಧಂತೇರಸ್‍ ಸಂದರ್ಭದಲ್ಲಿ ಈ ಕಂಪನಿಗಳು ಕ್ರಮವಾಗಿ 45,000 ಕಾರುಗಳನ್ನು ಮತ್ತು 14,000 ಕಾರುಗಳನ್ನು ವಿತರಿಸಿವೆ.

ಹಬ್ಬದ ಹಿನ್ನೆಲೆಯಲ್ಲಿ ಏರಿಕೆ ಕಂಡ ಕಾರು ಮಾರಾಟ

ಮಾರುತಿ ಸುಜುಕಿಯ ಸೇಲ್ಸ್ ಅಂಡ್ ಎಕ್ಸಿಕ್ಯೂಟಿವ್ ಡೈರೆಕ್ಟರ್‍‍‍ರಾದ ಶಶಾಂಕ್ ಶ್ರೀವಾಸ್ತವರವರು ಮಾತನಾಡಿ, ದಸರಾ ಸಂದರ್ಭದಲ್ಲಿ ನಡೆದ ಕಾರು ಮಾರಾಟವು ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ. ಧಂತೇರಸ್‍‍‍ನಲ್ಲಿ ಕಾರು ಮಾರಾಟವು ಮತ್ತಷ್ಟು ಉತ್ತಮವಾಗಿ ಮುಂದುವರೆದಿದೆ. ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಆದರೆ ಮುಂದಿನ ತಿಂಗಳುಗಳಲ್ಲಿ ಮಾರಾಟವನ್ನು ನೋಡಿದ ನಂತರವೇ ಮಾರುಕಟ್ಟೆಯಲ್ಲಿನ ಚೇತರಿಕೆಯ ಬಗ್ಗೆ ಹೇಳಬಹುದು ಎಂದು ಹೇಳಿದರು.

ಹಬ್ಬದ ಹಿನ್ನೆಲೆಯಲ್ಲಿ ಏರಿಕೆ ಕಂಡ ಕಾರು ಮಾರಾಟ

ನವರಾತ್ರಿಯಿಂದ ದೀಪಾವಳಿವರೆಗಿನ ಹಬ್ಬದ ವೇಳೆಯಲ್ಲಿ ದ್ವಿಚಕ್ರ ಮತ್ತು ಕಾರುಗಳ ಮಾರಾಟದಲ್ಲಿ ಮಾಸಿಕ ಸರಾಸರಿಯ ಎರಡು ಪಟ್ಟು ಹೆಚ್ಚಳವಾಗಿದೆ. ಹುಂಡೈ ಮೋಟಾರ್ ಇಂಡಿಯಾ‍ದ ರಾಷ್ಟ್ರೀಯ ಮಾರಾಟ ವಿಭಾಗದ ಮುಖ್ಯಸ್ಥರಾದ ವಿಕಾಸ್ ಜೈನ್, ಕಳದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮಾರಾಟದಲ್ಲಿ ಧಂತೇರಸ್‍‍ನಲ್ಲಿ ಸುಮಾರು ಶೇ.30ರಷ್ಟು ಹೆಚ್ಚಾಗಿದೆ. ಈ ಬಾರಿ ನಗರ ಮತ್ತು ಗ್ರಾಮಿಣ ಮಾರುಕಟ್ಟೆಯಲ್ಲಿಯು ಉತ್ತಮವಾಗಿ ಮಾರಾಟವಾಗಿದೆ ಎಂದು ಹೇಳಿದರು.

ಹಬ್ಬದ ಹಿನ್ನೆಲೆಯಲ್ಲಿ ಏರಿಕೆ ಕಂಡ ಕಾರು ಮಾರಾಟ

ಐಷಾರಾಮಿ ವಿಭಾಗದಲ್ಲಿಯೂ ಬೇಡಿಕೆ ಹೆಚ್ಚಾಗಿದೆ. ಹಬ್ಬದ ವೇಳೆಯಲ್ಲಿ ಮರ್ಸಿಡಿಸ್ ಬೆಂಝ್ 200 ಕಾರುಗಳನ್ನು ವಿತರಿಸಿದೆ ಮತ್ತು ಹೆಚ್ಚುವರಿ 600 ಯು‍ನಿ‍‍‍ಟ್‍ಗಳನ್ನು ಧಂತೇರಸ್‍‍ನಲ್ಲಿ ಮಾರಾಟ ಮಾಡಿದೆ. ಕಂಪನಿಯು ತನ್ನ ಜಿಎಲ್ಇ ಎಸ್‍ಯು‍ವಿ ಮುಂದಿನ ಮೂರು ತಿಂಗಳವರೆಗೆ ಮಾರಾಟವಾಗಿದೆ ಎಂದು ಹೇಳಿದೆ. ಬಿಎಂಡಬ್ಲ್ಯು ಇಂಡಿಯಾ, ತನ್ನ ಎಕ್ಸ್7 ಎಸ್‍‍ಯು‍ವಿಯು ಮಾರಾಟವಾಗಿದೆ ಎಂದು ಹೇಳಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹಬ್ಬದ ಹಿನ್ನೆಲೆಯಲ್ಲಿ ಏರಿಕೆ ಕಂಡ ಕಾರು ಮಾರಾಟ

ಧಂತೇರಸ್‍‍ನಲ್ಲಿ ಎಂಜಿ ಮೋಟಾರ್ ಸುಮಾರು 3,000 ವಾಹನಗಳನ್ನು ವಿತರಿಸಿದೆ. ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಹೀರೋ ಮೋಟೊಕಾರ್ಪ್ ಮತ್ತು ಬಜಾಜ್ ಆಟೋ ಕಂಪನಿಗಳು ಕಳೆದ ತಿಂಗಳಿನಿಂದ ಮಾರಾಟದಲ್ಲಿ ಕುಸಿತ ಕಂಡುಬಂದಿದೆ ಎಂದು ಹೇಳಿ ಕೊಂಡಿವೆ. ಹೀರೋ ಮೊಟೊಕಾರ್ಪ್ ಹಬ್ಬದ ವೇಳೆಯಲ್ಲಿ ಬೆರಳೆಣಿಕೆಯಷ್ಟು ಬೆಳವಣಿಗೆಯನ್ನು ಮಾತ್ರ ಕಂಡಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹಬ್ಬದ ಹಿನ್ನೆಲೆಯಲ್ಲಿ ಏರಿಕೆ ಕಂಡ ಕಾರು ಮಾರಾಟ

ಆಟೋಮೊಬೈಲ್ ಕ್ಷೇತ್ರಕ್ಕೆ ಇದು ಉತ್ತಮ ಸುದ್ದಿ. ಹಬ್ಬದ ವೇಳೆಯಲ್ಲಿ ಮಾರಾಟವು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹಬ್ಬಗಳು ಕಳೆದ ನಂತರವು ಮಾರಾಟವು ಇದೇ ರೀತಿಯಲ್ಲಿ ಮುಂದುವರೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕು.

Article Published On: Tuesday, October 29, 2019, 18:26 [IST]
English summary
Car Sales Pick Up During Festive Season: Deliveries At Peak During Dhanteras - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+