ಸೆಪ್ಟೆಂಬರ್‍‍ನಲ್ಲೂ ಕುಸಿತಗೊಂಡ ಕಾರು ಮಾರಾಟ

2019ರ ಸೆಪ್ಟೆಂಬರ್ ತಿಂಗಳ ಕಾರು ಮಾರಾಟ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ವಿವಿಧ ಕಾರು ತಯಾರಕ ಕಂಪನಿಗಳು ಬಿಡುಗಡೆಗೊಳಿಸಿರುವ ಈ ಪಟ್ಟಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿರುವ ಬಹುತೇಕ ಕಂಪನಿಗಳ ಮಾರಾಟ ಕುಸಿತವು ಮುಂದುವರೆದಿದೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಮಾರುತಿ ಸುಜುಕಿ ಕಂಪನಿಯು ಸೇರಿದಂತೆ ಹಲವು ಕಂಪನಿಗಳ ಮಾರಾಟ ಪ್ರಮಾಣವು ಗಣನೀಯವಾಗಿ ಕುಸಿದಿದೆ. ಯಾವ ಯಾವ ಕಂಪನಿಗಳ ಮಾರಾಟವು ಯಾವ ಪ್ರಮಾಣದಲ್ಲಿ ಕುಸಿದಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿದ್ದು, 2019ರ ಆರಂಭದಿಂದ ಮಾರಾಟದಲ್ಲಿ ಅತಿ ದೊಡ್ಡ ಕುಸಿತವನ್ನು ಕಾಣುತ್ತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿಯೂ ಸಹ ಈ ಕಂಪನಿಯ ಮಾರಾಟವು ಚೇತರಿಕೆಯನ್ನು ಕಂಡಿಲ್ಲ. ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು 24%ನಷ್ಟು ಕುಸಿತವನ್ನು ಕಂಡಿದೆ. ಆಗಸ್ಟ್ ತಿಂಗಳಿನಲ್ಲಿ 34%ನಷ್ಟು ಕುಸಿತ ಕಂಡಿತ್ತು.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

2018ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯ 1,65,290 ಯುನಿಟ್‍‍ಗಳು ಮಾರಾಟವಾಗಿದ್ದವು. ಕಳೆದ ತಿಂಗಳು 1,22,640 ಯುನಿಟ್‍‍ಗಳ ಮಾರಾಟವಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ 24.8%ನಷ್ಟು ಕುಸಿತ ಉಂಟಾಗಿದೆ. ಈ ಮಾರಾಟದಲ್ಲಿ ಸ್ಥಳೀಯ ಹಾಗೂ ರಫ್ತುಗಳೆರಡೂ ಸೇರಿವೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ತ್ರೈಮಾಸಿಕ ಮಾರಾಟಕ್ಕೆ ಹೋಲಿಸಿದರೆ ಏಪ್ರಿಲ್ - ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 26.5%ನಷ್ಟು ಕುಸಿತ ಅನುಭವಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 9,19,240ಯುನಿಟಗಳು ಮಾರಾಟವಾಗಿದ್ದರೆ, ಈ ವರ್ಷ 6,75,423 ಯುನಿಟ್‍‍ಗಳ ಮಾರಾಟವಾಗಿದೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಹ್ಯುಂಡೈ

ಹ್ಯುಂಡೈ ಮೋಟಾರ್ಸ್ ಸಹ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಕಳೆದ ವರ್ಷದ ಸೆಪ್ಟೆಂಬರ್‍‍ನಲ್ಲಿ 47,781 ಯುನಿಟ್‍‍ಗಳ ಮಾರಾಟವಾಗಿದ್ದರೆ, ಈ ವರ್ಷದ ಸೆಪ್ಟೆಂಬರ್‍‍ನಲ್ಲಿ 40,705 ಯುನಿಟ್‍‍ಗಳ ಮಾರಾಟವಾಗಿ, 14.8%ನಷ್ಟು ಕುಸಿತ ಉಂಟಾಗಿದೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಪ್ರತಿ ತಿಂಗಳ ಮಾರಾಟ ಪ್ರಮಾಣಕ್ಕೆ ಹೋಲಿಸಿದರೆ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯ ಮಾರಾಟದಲ್ಲಿ ಏರಿಕೆಯುಂಟಾಗಿದೆ. 2019ರ ಆಗಸ್ಟ್ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು 16.58%ನಷ್ಟು ಕುಸಿತ ಅನುಭವಿಸಿತ್ತು. ಹೊಸದಾಗಿ ಬಿಡುಗಡೆಯಾದ ವೆನ್ಯೂ ಕಾಂಪ್ಯಾಕ್ಟ್ ಎಸ್‍‍ಯುವಿ ಹಾಗೂ ಗ್ರಾಂಡ್ ಐ10 ನಿಯೊಸ್‍‍ಗಳ ಮಾರಾಟದಿಂದಾಗಿ ಹ್ಯುಂಡೈ ಕಂಪನಿಯ ಮಾರಾಟ ಪ್ರಮಾಣವು ಹೆಚ್ಚಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಟಾಟಾ ಮೋಟಾರ್ಸ್

ಬೇರೆ ಕಂಪನಿಗಳಿಗೆ ಹೋಲಿಸಿದರೆ ಟಾಟಾ ಮೋಟಾರ್ಸ್ ಹೆಚ್ಚಿನ ಪ್ರಮಾಣದ ಕುಸಿತವನ್ನು ಅನುಭವಿಸಿದೆ. ಭಾರತೀಯ ಮೂಲದ ಕಾರು ತಯಾರಕ ಕಂಪನಿಯು ಸೆಪ್ಟೆಂಬರ್ ತಿಂಗಳಿನಲ್ಲಿ 56%ನಷ್ಟು ಕುಸಿತವನ್ನು ಅನುಭವಿಸಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

2018ರ ಸೆಪ್ಟೆಂಬರ್ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯ 69,991 ಯುನಿಟ್‍‍ಗಳು ಮಾರಾಟವಾಗಿದ್ದರೆ, ಈ ವರ್ಷದ ಸೆಪ್ಟೆಂಬರ್‍‍ನಲ್ಲಿ 36,376 ಯುನಿಟ್‍‍ಗಳು ಮಾರಾಟವಾಗಿವೆ. ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಬಿಸಿನೆಸ್ ಯುನಿಟ್ ಅಧ್ಯಕ್ಷರಾದ ಮಾಯಾಂಕ್ ಪಾರೀಖ್‍‍ರವರು ಮಾತನಾಡಿ, ತಿಂಗಳ ಕೊನೆಗೆ ನಮ್ಮ ಮಾರಾಟದಲ್ಲಿ ಏರಿಕೆಯಾಗಿದೆ.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ನಾವು ಹಬ್ಬಕ್ಕಾಗಿ ಘೋಷಿಸಿದ ಕೊಡುಗೆಗಳಿಗೆ ಗ್ರಾಹಕರು ಒಳ್ಳೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್ ತಿಂಗಳಿನಲ್ಲಿ 11%ನಷ್ಟು ಹೆಚ್ಚು ಮಾರಾಟವಾಗಿದೆ. ಆದರೂ ಸಹ ಆಟೋಮೊಬೈಲ್ ಉದ್ಯಮವು ಸೆಪ್ಟೆಂಬರ್‍‍ನಲ್ಲಿಯೂ ಕುಸಿತ ಕಂಡಿದೆ ಎಂದು ಹೇಳಿದರು.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಮಹೀಂದ್ರಾ

ಮತ್ತೊಂದು ದೇಶಿಯ ಕಂಪನಿಯಾದ ಮಹೀಂದ್ರಾ ಸಹ ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಕಂಪನಿಯು ಸೆಪ್ಟೆಂಬರ್ ತಿಂಗಳಿನಲ್ಲಿ 21%ನಷ್ಟು ಕುಸಿತವನ್ನು ಕಂಡಿರುವುದಾಗಿ ತಿಳಿಸಿದೆ. 2018ರ ಸೆಪ್ಟೆಂಬರ್‍‍ನಲ್ಲಿ 55,022 ಯುನಿಟ್‍‍ಗಳ ಮಾರಾಟವಾಗಿದ್ದರೆ, ಈ ವರ್ಷದ ಸೆಪ್ಟೆಂಬರ್‍‍ನಲ್ಲಿ 43,343 ಯುನಿ‍‍ಟ್‍‍ಗಳು ಮಾರಾಟವಾಗಿವೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯು 40,692 ಯುನಿಟ್‍‍ಗಳ ಮಾರಾಟದೊಂದಿಗೆ 21%ನಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 51,268 ಯುನಿಟ್‍‍ಗಳು ಮಾರಾಟವಾಗಿದ್ದವು. ರಫ್ತು ಮಾರಾಟದಲ್ಲಿ ಕಂಪನಿಯು ಕಳೆದ ತಿಂಗಳು 29%ನಷ್ಟು ಏರಿಕೆ ಕಂಡಿದೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಆಟೋಮೋಟಿವ್ ಡಿವಿಷನ್‍‍ನ ಸೇಲ್ಸ್ ಹಾಗೂ ಮಾರ್ಕೆಟಿಂಗ್ ಮುಖ್ಯಸ್ಥರಾದ ವಿಜಯ್ ರಾಮ್ ನಕ್ರಾರವರು ಮಾತನಾಡಿ, ನವರಾತ್ರಿಯ ಪ್ರಾರಂಭದೊಂದಿಗೆ ಈ ಹಬ್ಬದ ಸಂದರ್ಭದಲ್ಲಿ ನಮಗೂ ಹಾಗೂ ಆಟೋಮೊಬೈಲ್ ಉದ್ಯಮಕ್ಕೂ ಒಳ್ಳೆಯದಾಗುವ ನಂಬಿಕೆಯಿದೆ. ಸರ್ಕಾರವು ಇತ್ತೀಚೆಗೆ ಘೋಷಿಸಿದ ಕ್ರಮಗಳು ಆಟೋಮೊಬೈಲ್ ಉದ್ಯಮವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಲಿವೆ ಎಂದು ಹೇಳಿದರು.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಹೋಂಡಾ ಕಾರ್ಸ್ ಇಂಡಿಯಾ

ಪ್ರತಿ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಹೋಂಡಾ ಕಾರ್ಸ್ ಇಂಡಿಯಾ ಮಾರಾಟವು ಸುಧಾರಿಸಿದೆ. ಆಗಸ್ಟ್ ತಿಂಗಳಿನಲ್ಲಿ 50%ರಷ್ಟು ಕುಸಿತವನ್ನು ಕಂಡಿದ್ದ ಕಂಪನಿಯ ಮಾರಾಟವು ಸೆಪ್ಟೆಂಬರ್‌ನಲ್ಲಿ ಚೇತರಿಸಿಕೊಂಡಿದೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಆದರೆ, ಒಟ್ಟಾರೆ ಮಾರಾಟವು 2018ರ ಸೆಪ್ಟೆಂಬರ್‌ ತಿಂಗಳಿಗೆ ಹೋಲಿಸಿದರೆ, 37%ನಷ್ಟು ಕಡಿಮೆಯಾಗಿದೆ. ಕಳೆದ ತಿಂಗಳು ಹೋಂಡಾ ಕಂಪನಿಯ 10,247 ಯುನಿಟ್‍‍ಗಳು ಮಾರಾಟವಾಗಿದ್ದರೆ, ಕಳೆದ ವರ್ಷದ ಇದೇ ತಿಂಗಳಲ್ಲಿ 14,820 ಯುನಿಟ್‌ಗಳು ಮಾರಾಟವಾಗಿದ್ದವು.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಹಾಗೂ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕರಾದ ರಾಜೇಶ್ ಗೋಯೆಲ್‍‍ರವರು ಮಾತನಾಡಿ, ಸೆಪ್ಟೆಂಬರ್‌ನಲ್ಲಿ ಮಾರುಕಟ್ಟೆ ಕಠಿಣವಾಗಿದ್ದರೂ, ಆಟೋ ಮಾರಾಟವು ಈ ಆಗಸ್ಟ್ 19 ರಿಂದ ಏರಿಕೆಯಾಗಿದೆ, ಇದು ಒಳ್ಳೆಯ ಬೆಳವಣಿಗೆಯಾಗಿದೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಗ್ರಾಹಕರ ಭಾವನೆಯು ಹಬ್ಬದ ಸಂದರ್ಭದಲ್ಲಿ ಮತ್ತಷ್ಟು ಸುಧಾರಿಸುತ್ತದೆ ಹಾಗೂ ಮಾರಾಟವು ಸಹ ಹೆಚ್ಚುತ್ತದೆ. ಮಾರುಕಟ್ಟೆಯಲ್ಲಿ ಆಕರ್ಷಕ ಕೊಡುಗೆಗಳು ಲಭ್ಯವಿದ್ದು, ಇದರಿಂದಾಗಿ ಗ್ರಾಹಕರು ಹೊಸ ಕಾರುಗಳನ್ನು ಖರೀದಿಸ ಬಹುದಾಗಿದೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಟೊಯೊಟಾ ಮೋಟಾರ್ಸ್ ಇಂಡಿಯಾ

ಟೊಯೊಟಾ ಮೋಟಾರ್ಸ್ ಸಹ ದೇಶಿಯ ಮಾರುಕಟ್ಟೆಯಲ್ಲಿನ ತನ್ನ ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಜಪಾನ್ ಮೂಲದ ಕಾರು ತಯಾರಕ ಕಂಪನಿಯು 2019ರ ಸೆಪ್ಟೆಂಬರ್ ತಿಂಗಳಲ್ಲಿ 17% ನಷ್ಟು ಕುಸಿತವನ್ನು ದಾಖಲಿಸಿದ್ದು, 10,911 ಯುನಿಟ್‍‍ಗಳು ಮಾರಾಟವಾಗಿವೆ.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಇದರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾದ 10,203 ಯುನಿಟ್ ಹಾಗೂ ರಫ್ತು ಮಾಡಲಾದ 708 ಯುನಿಟ್‍‍ಗಳು ಸೇರಿವೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‍‍ನ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಎನ್. ರಾಜಾರವರು ಮಾತನಾಡಿ, ಗ್ರಾಹಕರ ಮನಸ್ಥಿತಿಯು ಸೆಪ್ಟೆಂಬರ್‍‍ನಲ್ಲಿ ಕಡಿಮೆಯಾಯಿತು.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಇದರಿಂದ ಉದ್ಯಮದಲ್ಲಿನ ಮಾರಾಟವು ನಿಧಾನವಾಯಿತು. ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಸಮಯದಲ್ಲಿ ಗ್ರಾಹಕರ ಬೇಡಿಕೆ ಹೆಚ್ಚಾಗಲಿದ್ದು, ಮಾರಾಟವು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.

ಸೆಪ್ಟೆಂಬರ್‍‍ನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

2019ರ ಸೆಪ್ಟೆಂಬರ್ ತಿಂಗಳ ಮಾರಾಟ ವರದಿಯು ದೇಶಿಯ ಮಾರುಕಟ್ಟೆಯಲ್ಲಿನ ನಿಧಾನಗತಿಯ ಪ್ರಗತಿಯನ್ನು ತೋರಿಸುತ್ತದೆ. ಎಲ್ಲಾ ಕಾರು ತಯಾರಕ ಕಂಪನಿಗಳು ಸತತ ಹತ್ತನೇ ತಿಂಗಳೂ ಸಹ ಮಾರಾಟದಲ್ಲಿ ಕುಸಿತವನ್ನು ಕಂಡಿವೆ. ಹಬ್ಬದ ಸಮಯದಲ್ಲಿ ಕಾರುಗಳ ಮಾರಾಟವು ಮತ್ತೊಮ್ಮೆ ಏರಿಕೆಯಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Car Sales Report September 2019: All Major Car Brands Continue Downward Sales Trend - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X