ವಾಹನ ಸವಾರರಿಗೆ ಸಿಹಿಸುದ್ದಿ- ಇನ್ಮುಂದೆ ಟೋಲ್‌ಗಳಲ್ಲಿ ಹೆಚ್ಚು ಕಾಯಬೇಕಿಲ್ಲ..!

ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿಯೂ ಸಹ ಟ್ರಾಫಿಕ್ ದಟ್ಟಣೆ ಸಮಸ್ಯೆ ಹೆಚ್ಚುತ್ತಿದೆ. ಇದರಿಂದ ಕೆಲವು ಟೋಲ್‌ಗಳಲ್ಲಿ ಶುಲ್ಕ ಪಾವತಿಸಲು ವಾಹನ ಸವಾರರು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಎದುರಾಗಿದ್ದು, ಸದ್ಯ ಕಾರ್ಯನಿರ್ವಹಣೆಯಲ್ಲಿರುವ ಫಾಸ್ಟ್‌ಟ್ಯಾಗ್ ಲೈನ್‌ಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಮಹತ್ವದ ಕಾರ್ಯಯೋಜನೆಯನ್ನು ಸಿದ್ದಪಡಿಸಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಇನ್ಮುಂದೆ ಟೋಲ್‌ಗಳಲ್ಲಿ ಹೆಚ್ಚು ಕಾಯಬೇಕಿಲ್ಲ..!

ಹೌದು, ಈ ಹಿಂದೆ ಟೋಲ್ ಪಾವತಿಗಾಗಿ ಕಾಯುವುದನ್ನು ತಪ್ಪಿಸಲು ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಪರಿಚಯಿಸಿದ್ದ ಕೇಂದ್ರ ಸರ್ಕಾರವು ಹೊಸ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಹೊಂದುವುದನ್ನ ಕಡ್ಡಾಯಗೊಳಿಸಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರವು ಫಾಸ್ಟ್‌ಟ್ಯಾಗ್ ಲೈನ್‌ಗಳನ್ನು ಬೇಡಿಕೆ ಅನುಸಾರವಾಗಿ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಯಾವುದೇ ಅಡೆತಡೆಯಿಲ್ಲದೆ ವಾಹನಗಳ ಚಾಲನೆಗೆ ಅನುವು ಮಾಡಿಕೊಡಲು ತಯಾರಿನಡೆಸಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಇನ್ಮುಂದೆ ಟೋಲ್‌ಗಳಲ್ಲಿ ಹೆಚ್ಚು ಕಾಯಬೇಕಿಲ್ಲ..!

ಸದ್ಯ ದೇಶಾದ್ಯಂತ ಹೆದ್ದಾರಿ ಬಳಕೆಗಾಗಿ ಶುಲ್ಕ ವಸೂಲಿ ಮಾಡುವ ಬಹುತೇಕ ಟೋಲ್‌ಗಳಲ್ಲಿ ಒಂದೇರಡು ಲೈನ್‌ಗಳನ್ನು ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನ ಸವಾರರಿಗಾಗಿ ಮೀಸಲು ಇರಿಸಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪ್ರತಿ ಟೋಲ್ ಕೇಂದ್ರಗಳಲ್ಲೂ ಅರ್ಧಕ್ಕೂ ಹೆಚ್ಚು ಫಾಸ್ಟ್‌ಟ್ಯಾಗ್ ಲೈನ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಇನ್ಮುಂದೆ ಟೋಲ್‌ಗಳಲ್ಲಿ ಹೆಚ್ಚು ಕಾಯಬೇಕಿಲ್ಲ..!

ಇನ್ನು ಹೆದ್ದಾರಿಗಳಲ್ಲಿ ಕ್ಯೂ ನಿಂತು ಟೋಲ್‌ ಕಟ್ಟುವ ತಾಪತ್ರಯವನ್ನು ತಪ್ಪಿಸುವ ಉದ್ದೇಶದಿಂದ ಕಡ್ಡಾಯವಾಗಿ ಜಾರಿಗೆ ತರಲಾಗಿರುವ ಫಾಸ್ಟ್‌ಟ್ಯಾಗ್ ಸೌಲಭ್ಯದಿಂದಾಗಿ ವಾಹನ ಸವಾರರಿಗೆ ಸಾಕಷ್ಟು ಅನುಕೂಲತೆಗಳಿದ್ದು, ಫಾಸ್ಟ್‌ಟ್ಯಾಗ್ ಖರೀದಿಸಲೂ ಗ್ರಾಹಕರಿಗೆ ಸುಲಭವಾಗುವಂತೆ ಅಮೆಜಾನ್‌ ಡಾಟ್‌ ಕಾಮ್‌ನಲ್ಲೂ ಸಹ ಇದೀಗ ಹೊಸ ಶುಲ್ಕು ಪಾವತಿ ವಿಧಾನವನ್ನು ತೆರಿದಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಇನ್ಮುಂದೆ ಟೋಲ್‌ಗಳಲ್ಲಿ ಹೆಚ್ಚು ಕಾಯಬೇಕಿಲ್ಲ..!

ಹೌದು, ಇಷ್ಟು ದಿನಗಳ ಕಾಲ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಪಡೆದುಕೊಳ್ಳಲು ಬಯಸುವ ವಾಹನ ಮಾಲೀಕರು ಟೋಲ್ ಬೂತ್‌ಗಳ ಬಳಿ ಇರುವ ಫಾಸ್ಟ್‌ಟ್ಯಾಗ್ ಕೇಂದ್ರಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ನೀಡಬೇಕಾಗಿತ್ತು. ಇದರಿಂದ ವಾಹನ ಮಾಲೀಕರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಇದನ್ನು ಸುಲಭವಾಗಿಸಲು ಆನ್‌ಲೈನ್ ಮೂಲಕವೇ ಫಾಸ್ಟ್‌ಟ್ಯಾಗ್ ಮಾರಾಟಕ್ಕೆ ಚಾಲನೆ ನೀಡಿದ್ದು, ಅಮೆಜಾನ್‌ನಲ್ಲಿ ಆಸಕ್ತ ವಾಹನ ಮಾಲೀಕರು ಅಗತ್ಯ ದಾಖಲೆಗಳನ್ನು ಪೂರೈಸಿ ಸುಲಭವಾಗಿ ಫಾಸ್ಟ್‌ಟ್ಯಾಗ್ ಸದಸ್ಯರಾಗಬಹುದು.

ವಾಹನ ಸವಾರರಿಗೆ ಸಿಹಿಸುದ್ದಿ- ಇನ್ಮುಂದೆ ಟೋಲ್‌ಗಳಲ್ಲಿ ಹೆಚ್ಚು ಕಾಯಬೇಕಿಲ್ಲ..!

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಫಾಸ್ಟ್ ಟ್ಯಾಗ್‌ಗಳಿಗೆ ಮೊಬೈಲ್ ಮಾದರಿಯಲ್ಲೇ ಕರೆನ್ಸಿ ಹಾಕಿಸಿಕೊಳ್ಳುವ ಮೂಲಕ ಟೋಲ್ ಪಾವತಿ ಮಾಡುವ ಒಂದು ವಿಧಾನವಾಗಿದ್ದು, ಹೊಸ ವ್ಯವಸ್ಥೆಯಿಂದ ಹಲವಾರು ಲಾಭಗಳಿವೆ. ಇಂಧನ ಮತ್ತು ಸಮಯ ಉಳಿಸುವ ಉದ್ದೇಶದೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 'ಫಾಸ್ಟ್‌ಟ್ಯಾಗ್' ಎಂಬ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, 2016ರ ಎಪ್ರಿಲ್‌ನಲ್ಲಿ ಜಾರಿಗೆ ಬಂದಿರುವ ಫಾಸ್ಟ್‌ಟ್ಯಾಗ್, ವ್ಯವಸ್ಥೆಯನ್ನು ಡಿಸೆಂಬರ್ 01ರಿಂದ ರಸ್ತೆಗಿಳಿಯುವ ಎಲ್ಲ ನೂತನ ನಾಲ್ಕು ಚಕ್ರದ ವಾಹನಗಳಲ್ಲೂ ಕಡ್ಡಾಯಗೊಳಿಸಲಾಗಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಇನ್ಮುಂದೆ ಟೋಲ್‌ಗಳಲ್ಲಿ ಹೆಚ್ಚು ಕಾಯಬೇಕಿಲ್ಲ..!

ಎಲ್ಲೆಲ್ಲಿ ಫಾಸ್ಟ್‌ಟ್ಯಾಗ್ ಖರೀದಿಗೆ ಲಭ್ಯ?

ಟೋಲ್ ಪ್ಲಾಜ್‌ಗಳಲ್ಲೇ ಫಾಸ್ಟ್ ಟ್ಯಾಗ್ ಖರೀದಿ ಮಾಡಬಹುದಾಗಿದ್ದು, ಇಲ್ಲವೇ ಫಾಸ್ಟ್ ಟ್ಯಾಗ್ ಮಾರಾಟ ಮಾಡುವ ಖಾಸಗಿ ಏಜೆನ್ಸಿಗಳಿಂದಲೂ ಖರೀದಿ ಮಾಡಬಹುದು. ಜೊತೆಗೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗಳಲ್ಲೂ ಫಾಸ್ಟ್‌ಟ್ಯಾಗ್ ವಿತರಣೆಗೆ ಅವಕಾಶ ಕಲ್ಪಿಸಲಾಗಿದ್ದು, ಇದೀಗ ಅಮೆಜಾನ್ ಡಾಟ್ ಕಾಮ್‌ ಮೂಲಕ ಫಾಸ್ಟ್‌ಟ್ಯಾಗ್ ಪಡೆಯಬಹುದಾಗಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಇನ್ಮುಂದೆ ಟೋಲ್‌ಗಳಲ್ಲಿ ಹೆಚ್ಚು ಕಾಯಬೇಕಿಲ್ಲ..!

ಫಾಸ್ಟ್ ಟ್ಯಾಗ್‌ನಿಂದ ಏನು ಪ್ರಯೋಜನ?

ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಫಾಸ್ಟ್‌ಟ್ಯಾಗ್ ಹೊಂದಿದ್ದರೆ ಹಲವು ಪ್ರಯೋಜನಗಳಿದ್ದು, ಸುಲಭವಾಗಿ ಟೋಲ್ ಶುಲ್ಕ ಪಾವತಿ ಮಾಡಬಹುದಲ್ಲದೇ ಆನ್‌ಲೈನ್ ರೀಚಾರ್ಜಿಂಗ್, ಎಸ್ಎಂಎಸ್ ಅಲರ್ಟ್ ಸೌಲಭ್ಯವಿರುತ್ತದೆ. ಇದರಿಂದ ನಿಮ್ಮ ಫಾಸ್ಟ್‌ಟ್ಯಾಗ್‌ನಲ್ಲಿರುವ ಮೊತ್ತ ಮತ್ತು ನೀವು ಹೊರಟಿರುವ ಸ್ಥಳಗಳಲ್ಲಿನ ಟೋಲ್ ಸಂಗ್ರಹ ಕೇಂದ್ರಗಳ ಮಾಹಿತಿ ಜೊತೆ ಶುಲ್ಕುಗಳ ಮಾಹಿತಿ ಸಂದೇಶಗಳನ್ನು ಪಡೆಯಬಹುದಾಗಿದ್ದು, ವಿಶೇಷ ಸಂದರ್ಭಗಳಲ್ಲಿ ನೀವು ಕ್ಯಾಶ್ ಬ್ಯಾಕ್ ಆಫರ್‌ಗಳನ್ನು ಸಹ ಪಡೆಯುವ ಅವಕಾಶವಿರುತ್ತೆ.

ವಾಹನ ಸವಾರರಿಗೆ ಸಿಹಿಸುದ್ದಿ- ಇನ್ಮುಂದೆ ಟೋಲ್‌ಗಳಲ್ಲಿ ಹೆಚ್ಚು ಕಾಯಬೇಕಿಲ್ಲ..!

ಫಾಸ್ಟ್‌ಟ್ಯಾಗ್ ರೀಚಾರ್ಜ್ ಹೇಗೆ?

ಕ್ರೇಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಕಿಂಗ್ ಇಲ್ಲವೇ ಚೆಕ್ ಪಾವತಿಸಿಯೂ ರೀಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಕನಿಷ್ಠ ರೂ.100 ರಿಂದ ಗರಿಷ್ಠ 1 ಲಕ್ಷ ತನಕ ರೀಚಾರ್ಜ್ ಮಿತಿ ಹೊಂದಿರುತ್ತೆ.

ವಾಹನ ಸವಾರರಿಗೆ ಸಿಹಿಸುದ್ದಿ- ಇನ್ಮುಂದೆ ಟೋಲ್‌ಗಳಲ್ಲಿ ಹೆಚ್ಚು ಕಾಯಬೇಕಿಲ್ಲ..!

ಫ್ಯಾಸ್ಟ್ ಟ್ಯಾಗ್ ಹೇಗೆ ಕಾರ್ಯನಿರ್ವಹಿಸುತ್ತೆ?

ಆರ್‌ಎಫ್ಐಡಿ ಎನ್ನುವ ತಂತ್ರಜ್ಞಾನ ಸಹಾಯದೊಂದಿಗೆ ಕಾರ್ಯನಿರ್ವಹಿಸುವ ಫಾಸ್ಟ್ ಟ್ಯಾಗ್‌ಗಳು ಕಾರಿನ ವಿಂಡ್‌ಸ್ಕೀನ್ ಬಳಿ ಅಳವಡಿಸಲಾಗಿರುತ್ತದೆ. ಇದು ಟೋಲ್ ಪ್ಲಾಜ್‌ದಲ್ಲಿರುವ ಫಾಸ್ಟ್ ಟ್ಯಾಗ್ ಲೈನ್ ಮೂಲಕ ಹಾಯ್ದುಹೋಗುವಾಗ ಆಟೋಮ್ಯಾಟಿಕ್ ಆಗಿ ನಿಮ್ಮ ಫಾಸ್ಟ್ ಟ್ಯಾಗ್ ಅಕೌಂಟ್‌ನಿಂದ ಶುಲ್ಕ ಸಂದಾಯವಾಗುತ್ತೆ. ಶುಲ್ಕ ಸಂದಾಯವಾದ ಕೆಲವೇ ಸೇಕೆಂಡುಗಳಲ್ಲಿ ಶುಲ್ಕ ಪಾವತಿಯಾದ ಸಂದೇಶವು ನಿಮ್ಮ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಬರಲಿದ್ದು, ಟ್ರೋಲ್ ಪ್ಲಾಜಾ ಮಾಹಿತಿ ಮತ್ತು ಕಡಿತವಾದ ಶುಲ್ಕದ ಮೊತ್ತ ಮತ್ತು ಉಳಿದ ಕರೆನ್ಸಿ ಮಾಹಿತಿಯು ನಿಮಗೆ ಲಭ್ಯವಾಗಲಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಇನ್ಮುಂದೆ ಟೋಲ್‌ಗಳಲ್ಲಿ ಹೆಚ್ಚು ಕಾಯಬೇಕಿಲ್ಲ..!

ಇದಕ್ಕಾಗಿಯೇ ಫಾಸ್ಟ್ ಟ್ಯಾಗ್ ಆಪ್ ಕೂಡಾ ಲಭ್ಯವಿದ್ದು, ಈ ಮೂಲಕವು ನೀವು ಮತ್ತಷ್ಟು ಮಾಹಿತಿ ಪಡೆಯಬಹದು. ಫಾಸ್ಟ್ ಟ್ಯಾಗ್ ನೋಂದಣಿ ಮಾಡುವಾಗ ಆ್ಯಪ್‌ಗೆ ಸಂಬಂಧಿಸಿ ನಿಮಗೆ ಕೆಲವು ಪಾಸ್‌ವರ್ಡ್ ನೀಡಲಾಗುತ್ತೆ. ಆ್ಯಪ್ ಬಳಸುವಾಗ ನೀವು ನಿಮ್ಮ ಪರ್ಸನಲ್ ಪಾಸ್‌ವರ್ಡ್ ಬಳಕೆ ಮಾಡಬೇಕಾಗುತ್ತೆ. ಯಾಕೆಂದ್ರೆ ವ್ಯಯಕ್ತಿಕ ಮಾಹಿತಿ ಇದಲ್ಲಿರುತ್ತದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಇನ್ಮುಂದೆ ಟೋಲ್‌ಗಳಲ್ಲಿ ಹೆಚ್ಚು ಕಾಯಬೇಕಿಲ್ಲ..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಒಂದು ಫಾಸ್ಟ್ ಟ್ಯಾಗ್ ಅನ್ನು ಮತ್ತೊಂದು ವಾಹನಕ್ಕೆ ಬಳಕೆ ಮಾಡಲು ಯಾವುದೇ ಅವಕಾಶವಿಲ್ಲ. ಹೀಗಾಗಿ ಫಾಸ್ಟ್ ಟ್ಯಾಗ್ ಬೇಡ ಎನ್ನಿಸಿದಲ್ಲಿ ವಾಹನ ಮಾಲೀಕರು ಕಸ್ಟಮರ್ ಕೇರ್ ಮೂಲಕ ಬ್ಲ್ಯಾಕ್ ಕೂಡಾ ಮಾಡಬಹುದು.

More from DriveSpark

Article Published On: Wednesday, July 10, 2019, 14:08 [IST]
English summary
central Government Plans To Increase Fastag Lanes At Toll Gates. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+