ಒಂದೇ ದಿನದಲ್ಲಿ ಸಿಸಿಟಿವಿ ಕಣ್ಣಿಗೆ ಬಿದ್ದ 90,000 ಟ್ರಾಫಿಕ್ ಅಪರಾಧಿಗಳು

ನಗರದಲ್ಲಿ ಟ್ರಾಫಿಕ್ ನಿಯಮಗಳು ಹೆಚ್ಚುತ್ತಿರುವ ಕಾರಣ ಚೆನ್ನೈ ನಗರದಲ್ಲಿನ ಪೊಲೀಸರು ಒಂದೇ ಏರಿಯಾದಲ್ಲಿ ಹಲವಾರು ಸಿಸಿಟಿವಿಗಳನ್ನು ಇನ್ಸ್ಟಾಲ್ ಮಾಡಲಾಗಿದ್ದು, ಇನ್ಸ್ಟಾಲ್ ಮಾಡಿದ ಒಂದೇ ದಿನದಲ್ಲಿ ಅಚ್ಚರಿ ಮೂಡಿಸುವ ಸಂಖ್ಯೆಯಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರು ಸಿಕ್ಕಿ ಬಿದ್ದಿದ್ದಾರೆ. ಈ ಲೇಖನದಲ್ಲಿ ಈ ಕುರಿತಾದ ಮಾಹಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ.

ಒಂದೇ ದಿನದಲ್ಲಿ ಸಿಸಿಟಿವಿ ಕಣ್ಣಿಗೆ ಬಿದ್ದ 90,000 ಟ್ರಾಫಿಕ್ ಅಪರಾಧಿಗಳು

ಚೆನ್ನೈನಲ್ಲಿ ಅಧಿಕವಗುತ್ತಿರುವ ಅಪಘಾತಗಳು ಮತ್ತು ಅವುಗಳು ಸಂಭವಿಸುತ್ತಿರುವುದು ಕೇವಲ ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡದಿರುವುರಿಂಡಲೇ ಎಂದು ತಿಳಿದ ಅಲ್ಲಿನ ಪೊಲೀಸರು ಹೊಸ ಯೋಜನೆಯನ್ನು ಮಾಡಲಾಯಿತು. ಅದೇನೆಂದರೆ ಚೆನ್ನೈನಲ್ಲಿನ ಆಣ್ಣಾ ನಗರ್ ಏರಿಯಾದಲ್ಲಿರುವ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಟ್ರಾಫಿಕ್ ನಿಯಮಗಳನ್ನು ಪಾಲಿಸದವರನ್ನು ಹಿಡಿಯಲು ಈ ಕಾರ್ಯವನ್ನು ಮಾಡಲಾಯಿತು.

ಒಂದೇ ದಿನದಲ್ಲಿ ಸಿಸಿಟಿವಿ ಕಣ್ಣಿಗೆ ಬಿದ್ದ 90,000 ಟ್ರಾಫಿಕ್ ಅಪರಾಧಿಗಳು

ಸಂಚಾರಿ ಅಪರಾಧಿಗಳ ಜಾಗರೂಕತೆಯು ಪೊಲೀಸರಿಗೆ ಸುಲಭವಾಗಿದ್ದು, ಸಿಸಿಟಿವಿ ಸಹಾಯದಿಂದ ಟ್ರಾಫಿಕ್ ಉಲ್ಲಂಘಕರನ್ನು ಸ್ಥಳದಲ್ಲಿ ಭೌತಿಕವಾಗಿ ಇರದಿದ್ದರೂ ಸಹ ಇವುಗಳಿಂದಾಗಿ ಗುರುತಿಸಬಹುದಾಗಿದೆ.

ಒಂದೇ ದಿನದಲ್ಲಿ ಸಿಸಿಟಿವಿ ಕಣ್ಣಿಗೆ ಬಿದ್ದ 90,000 ಟ್ರಾಫಿಕ್ ಅಪರಾಧಿಗಳು

ಒಂದೇ ಏರಿಯಾದಲ್ಲಿ ಅಳವಡಿಸಲಾದ 64 ಸಿಸಿಟಿವಿ ಕ್ಯಾಮೆರಾಗಳನ್ನು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‍ನ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಆರ್ಮ್ ಎಂಬ ಯೋಜನೆಯ ಅಡಿಯಲ್ಲಿ ಇವುಗಳನ್ನು ಸುಮರು 3.5 ಕೋಟಿ ವೆಚ್ಚದಲಿ ಇನ್ಸ್ಟಾಲ್ ಮಾಡಲಾಗಿತ್ತು. ಈ ಸಿಸಿಟಿವಿಯಲ್ಲಿ ವಿಶೇಷತೆ ಏನಪ್ಪಾ ಅಂದ್ರೆ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಒಳಗಾದ ವಾಹನದ ರಿಜಿಸ್ಟ್ರೇಷನ್ ನಂಬರ್ ತಾನಾಗಿಯೇ ಗುರುತಿಸುತ್ತದೆ.

ಒಂದೇ ದಿನದಲ್ಲಿ ಸಿಸಿಟಿವಿ ಕಣ್ಣಿಗೆ ಬಿದ್ದ 90,000 ಟ್ರಾಫಿಕ್ ಅಪರಾಧಿಗಳು

ಚೆನ್ನೈನಲ್ಲಿನ ಅಣ್ಣ ನಗರ್‍‍ನಲ್ಲಿ ಇನ್ಸ್ಟಾಲ್ ಮಾಡಲಾದ 64 ಸಿಸಿಟಿವಿಯಲ್ಲಿ ಅದುವೂ ಒಂದೇ ದಿನದಲ್ಲಿ ಸುಮಾರು 90000 ಉಲ್ಲಂಘನಾಕಾರರನ್ನು ಪತ್ತೆಹಚ್ಚಲಾಯಿತು. ಇದನ್ನು ಅಣ್ಣಾ ನಗರ್ ರೌಂಡ್ ಟೌನ್ ಬಳಿ ಇರುವ ನಿಯಂತ್ರಣಾ ಕೊಠಡಿಯಿಂದ ಇದು ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ಒಂದೇ ದಿನದಲ್ಲಿ ಸಿಸಿಟಿವಿ ಕಣ್ಣಿಗೆ ಬಿದ್ದ 90,000 ಟ್ರಾಫಿಕ್ ಅಪರಾಧಿಗಳು

ಉಲ್ಲಂಘನಾಕಾರರಲ್ಲಿ ಹೆಲ್ಮೆಟ್ ರಹಿತ ವಾಹನ ಚಾಲನೆ, ಓವರ್ ಸ್ಪೀಡಿಂಗ್, ಸಿಗ್ನಲ್ ಜಂಪಿಂಗ್, ವ್ರಾಂಗ್ ಸೈಡ್ ಡ್ರೈವಿಂಗ್, ಲೇನ್ ಜಂಪಿಂಗ್, ವಾಹನ ಚಾಲನೆ ವೇಳೆ ಫೋನ್ ಬಳಕೆ, ಸೀಟ್ ಬೆಲ್ಟ್ ರಹಿತ ವಾಹನ ಚಾಲನೆ ಮತ್ತು ದೋಷಪೂರಿತ ನಂಬರ್ ಪ್ಲೇಟ್ ಒಳಗೊಂಡಂತೆ ಇನ್ನು ಹಲವಾರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಲಾದ ಕಾರಣ ಅವರಿಗೆ ಶಿಕ್ಷೆಯನ್ನು ನೀಡಲಾಗುತ್ತಿದೆ.

ಒಂದೇ ದಿನದಲ್ಲಿ ಸಿಸಿಟಿವಿ ಕಣ್ಣಿಗೆ ಬಿದ್ದ 90,000 ಟ್ರಾಫಿಕ್ ಅಪರಾಧಿಗಳು

ಈ ವ್ಯವಸ್ಥೆಯನ್ನು ರಾಷ್ಟ್ರೀಯ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಸಾಫ್ಟ್ ವೇರ್‍‍ಗೆ ಲಿಂಕ್ ಮಾಡಲಾಗಿದ್ದು, ಚಲನ್‍ಗಳನ್ನು ಅಪರಾಧಿಗಳ ಮನೆಗಳಿಗೆ ಕಳುಹಿಸಲಾಗುತ್ತದೆ. ಇ-ಚಲನ್ ಕಳುಹಿಸಲಾದ ಆ ಅಪರಾಧಿಗಳು 24 ಗಂಟೆಗಳೊಳಗೆ ಈ ದಂಡವನ್ನು ಪಾವತಿಸಬೇಕು ಎಂದು ಕಡ್ಡಾಯವಾಗಿ ಹೇಳಲಾಗಿದೆ. ಇವುಗಳಿಗಿಂತಲೂ ಗಂಭೀರವಾದ ಅಪರಾಧಗಳಿಗೆ, ಅಪರಾಧಿಗಳು ನ್ಯಾಯಾಲಯಕ್ಕೆ ಹೋಗಬೇಕು ಮತ್ತು ಅವರ ವಾಹನಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.

MOST READ: ತನ್ನ ಸ್ವಂತ ಐಷಾರಾಮಿ ಕಾರನ್ನು ಕದ್ದು ಇದೀಗ ಪೊಲೀಸರ ಅತಿಥಿಯಾದ ವ್ಯಾಪಾರಿ..

ಒಂದೇ ದಿನದಲ್ಲಿ ಸಿಸಿಟಿವಿ ಕಣ್ಣಿಗೆ ಬಿದ್ದ 90,000 ಟ್ರಾಫಿಕ್ ಅಪರಾಧಿಗಳು

ಅಪರಾಧಿಗಳನ್ನು ಪತ್ತೆಹಚ್ಚುವ ಈ ವ್ಯವಸ್ಥೆಯನ್ನು ಆ ನಗರದಲ್ಲಿರುವ ಇನ್ನಿತರೆ ಪ್ರದೇಶಗಳಿಗೂ ವಿಸ್ತರಿಸಬೇಕಂಬ ಆಲೋಚನೆಯಲ್ಲಿದ್ದಾರೆ. ಟ್ರಾಫಿಕ್ ರೂಲ್ಸ್ ಅನ್ನು ಬ್ರೇಕ್ ಮಾಡುವ ಅಪರಾಧಿಗಳ ಮೇಲೆ ಕಣ್ಣಿಡಲು ಈ ವಿಧಾನವು ಒಂದೇ ಪ್ರದೇಶದಲ್ಲಿ ಯಶಸ್ಸನ್ನು ಸಾಧಿಸಿರುವುದರಿಂದ, ಅದೇ ವ್ಯವಸ್ಥೆಯನ್ನು ಚೆನ್ನೈನಲ್ಲಿ ಮಾತ್ರವಲ್ಲ, ದೇಶಾದ್ಯಂತವೂ ಅನುಸರಿಸಬೇಕು ಎಂದು ಸೂಚಿಸಲಾಗುತ್ತದೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಒಂದೇ ದಿನದಲ್ಲಿ ಸಿಸಿಟಿವಿ ಕಣ್ಣಿಗೆ ಬಿದ್ದ 90,000 ಟ್ರಾಫಿಕ್ ಅಪರಾಧಿಗಳು

ಸಿಸಿಟಿವಿ ಕ್ಯಾಮರಾಗಳನ್ನು ಸ್ಥಾಪಿಸುವ ಈ ಕಾರ್ಯವನ್ನು ಇತರ ಸಂಸ್ಥೆಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಳ ಭಾಗವಾಗಿ ತೆಗೆದುಕೊಳ್ಳಬಹುದು. ಇದು ನಮ್ಮ ದೇಶದಲ್ಲಿ ನಮ್ಮ ಬಾಗಿದ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಶಿಸ್ತುಗಳನ್ನು ತರುವಲ್ಲಿ ಬಹಳ ದೂರ ಹೋಗಬಹುದು. ಇದು ರಸ್ತೆಯ ಬಳಕೆದಾರರಲ್ಲಿ ಶಿಸ್ತಿನ ಅರ್ಥವನ್ನು ಹುಟ್ಟುಹಾಕುವುದಿಲ್ಲ ಆದರೆ ಅಪಘಾತಗಳ ಸಂಖ್ಯೆಯನ್ನು ಕಡಿಮೆಯಂತು ಮಾಡಬಲ್ಲವು.

MOST READ: ಆರ್ಥಿಕವಾಗಿ ಹೊರೆಯಾದ ಸ್ಟಾಕ್- ಖರೀದಿಯಾಗದೇ ಉಳಿದ ರೂ.35 ಸಾವಿರ ಕೋಟಿ ಮೌಲ್ಯದ ಕಾರುಗಳು..!

ಒಂದೇ ದಿನದಲ್ಲಿ ಸಿಸಿಟಿವಿ ಕಣ್ಣಿಗೆ ಬಿದ್ದ 90,000 ಟ್ರಾಫಿಕ್ ಅಪರಾಧಿಗಳು

ತಮಿಳುನಾಡಿನ ಹೈಕೋರ್ಟ್ ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡುವ ರೈಡರ್‍‍ಗಳ ಮೇಲೆ ಕಠಿಣವಾದ ನಿಯಮವನ್ನು ತೆಗೆದುಕೊಳ್ಳಲು ನ್ಯಾಯಾಲಯದ ಬೆಂಚ್ ಈಗಾಗಲೇ ಆದೇಶವನ್ನು ಹೊರ ಹಾಕಿದ್ದು, ಅವಶ್ಯಕತೆ ಇದ್ದಲ್ಲಿ ಇಂತಹ ಚಾಲಕರ ವಾಹನಗಳನ್ನು ಕೂಡಾ ಸೀಜ್ ಮಾಡಲು ಕೂಡಾ ಆದೇಶ ನೀಡಲಾಗಿದೆ.

ಒಂದೇ ದಿನದಲ್ಲಿ ಸಿಸಿಟಿವಿ ಕಣ್ಣಿಗೆ ಬಿದ್ದ 90,000 ಟ್ರಾಫಿಕ್ ಅಪರಾಧಿಗಳು

ಹೀಗಿರುವಾಗ ಚೆನ್ನೈನಲ್ಲಿ ಒಂದು ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ತಮಿಳುನಾಡಿನಲ್ಲಿ ನೀವು ಯಾವುದೇ ಹೊಸ ದ್ವಿಚಕ್ರ ವಾಹನವನು ಖರೀದಿ ಮಾಡಿದ್ದಲ್ಲಿ ಆ ಡೀಲರ್‍‍‍ಗಳು ರೈಡರ್‍‍ಗೆ ಮತ್ತು ಪಿಲಿಯಾನ್ ರೈಡರ್‍‍ಗೆ ವಾಹನದ ಜೊತೆಗೆ ಹೆಲ್ಮೆಟ್ ಅನ್ನು ನೀಡಬೇಕಾಗಿ ಆದೇಶ ನೀಡಲಾಗಿದೆ.

Source: Rushlane

More from DriveSpark

Article Published On: Thursday, June 13, 2019, 16:57 [IST]
English summary
Chennai Police Booked 90000 Traffic Offenders In 1 Day. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+