ಲೋನ್ ಚಿಂತೆ ಬೇಡ- ಲೀಸ್‌ಗೂ ಸಿಗಲಿದೆ ಸಿಟ್ರನ್ ಸಿ5 ಏರೋಕ್ರಾಸ್

ಫ್ರೆಂಚ್ ಜನಪ್ರಿಯ ಆಟೋ ಉತ್ಪಾದನಾ ಸಂಸ್ಥೆಯಾಗಿರುವ ಪಿಎಸ್ಎ ಗ್ರೂಪ್ ಮೊದಲ ಬಾರಿಗೆ ಭಾರತದಲ್ಲಿ ತನ್ನ ಸಿಟ್ರನ್ ಬ್ರಾಂಡ್ ಕಾರು ಮಾರಾಟವನ್ನು ಆರಂಭಿಸುತ್ತಿದ್ದು, 2020ರ ಆರಂಭದಲ್ಲಿ ರಸ್ತೆಗಿಳಿಯಲು ಸಿದ್ದವಾಗಿರುವ ಸಿ5 ಏರೋಕ್ರಾಸ್ ಕಾರು ವ್ಯಯಕ್ತಿಕ ಬಳಕೆಯ ಖರೀದಿಗೆ ಮಾತ್ರವಲ್ಲದೇ ಲೀಸ್ ಆಧಾರದ ಮೇಲೂ ಹೊಸ ಕಾರು ಪೂರೈಕೆ ಮಾಡಲು ನಿರ್ಧರಿಸಿದೆ.

ಲೋನ್ ಚಿಂತೆ ಬೇಡ- ಲೀಸ್‌ಗೂ ಸಿಗಲಿದೆ ಸಿಟ್ರನ್ ಸಿ5 ಏರೋಕ್ರಾಸ್

ಇತ್ತೀಚೆಗೆ ಹೊಸ ಕಾರುಗಳನ್ನು ಸ್ವಂತಕ್ಕೆ ಖರೀದಿಸುವ ಬದಲು ನಿಗದಿತ ಅವಧಿಗಾಗಿ ಕಾರುಗಳನ್ನು ಲೀಸ್ ಪಡೆಯುವ ಸೌಲಭ್ಯವು ಹೆಚ್ಚು ಜನಪ್ರಿಯವಾಗುತ್ತಿದ್ದು, ಪಿಎಸ್ಎ ಗ್ರೂಪ್ ಕೂಡಾ ತನ್ನ ಸಿಟ್ರನ್ ಕಾರುಗಳಲ್ಲಿ ಲೀಸ್ ಆಯ್ಕೆಯನ್ನು ತೆರೆಯಲು ಉತ್ಸುಕವಾಗಿದೆ. ಸದ್ಯ ಮಹೀಂದ್ರಾ ಮತ್ತು ಹ್ಯುಂಡೈ ಸಂಸ್ಥೆಗಳು ತಮ್ಮ ಜನಪ್ರಿಯ ಕಾರುಗಳನ್ನು ಲೀಸ್ ಆಧಾರದ ಮೇಲೆ ಗ್ರಾಹಕರಿಗೆ ಮಾಲೀಕತ್ವ ನೀಡುತ್ತಿದ್ದು, ಇದೀಗ ಬಿಡುಗಡೆಯ ಸನಿಹದಲ್ಲಿರುವ ಸಿ5 ಏರೋಕ್ರಾಸ್ ಕಾರನ್ನು ಸಹ ಲೀಸ್ ಆಧಾರದ ಮೇಲೆ ಹೊಸ ಕಾರಿನ ಮಾಲೀಕತ್ವ ಪಡೆದುಕೊಳ್ಳಬಹುದಾಗಿದೆ.

ಲೋನ್ ಚಿಂತೆ ಬೇಡ- ಲೀಸ್‌ಗೂ ಸಿಗಲಿದೆ ಸಿಟ್ರನ್ ಸಿ5 ಏರೋಕ್ರಾಸ್

ಇನ್ನು ಕಳೆದ 2 ತಿಂಗಳು ಹಿಂದಷ್ಟೇ ಭಾರತದಲ್ಲಿ ಬಿಡುಗಡೆ ಮಾಡಲಿರುವ ತನ್ನ ಮೊದಲ ಕಾರಿನ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಸಿಟ್ರನ್ ಸಂಸ್ಥೆಯು ಸದ್ಯ ಕಾರು ಉತ್ಪಾದನಾ ಘಟಕ ನಿರ್ಮಾಣ, ಸಿಬ್ಬಂದಿ ನೇಮಕ, ಮಾರುಕಟ್ಟೆ ಅಧ್ಯಯನ ಮತ್ತು ಕಾರು ಮಾರಾಟಕ್ಕೆ ಅನುಕೂಲ ಪ್ರದೇಶಗಳಲ್ಲಿ ಅಧಿಕೃತ ಮಾರಾಟ ಮಳಿಗೆಗಳನ್ನು ತೆರೆಯುತ್ತಿದೆ.

ಲೋನ್ ಚಿಂತೆ ಬೇಡ- ಲೀಸ್‌ಗೂ ಸಿಗಲಿದೆ ಸಿಟ್ರನ್ ಸಿ5 ಏರೋಕ್ರಾಸ್

ಸಿಬ್ಬಂದಿ ನೇಮಕಾತಿಯನ್ನು ಪೂರ್ಣಗೊಳಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ತರಬೇತಿ ನೀಡುವ ಸಂಬಂಧ ಭಾರೀ ಪ್ರಮಾಣ ಹೂಡಿಕೆಯೊಂದಿಗೆ ಟೆಕ್ನಿಕಲ್ ಟ್ರೈನಿಂಗ್ ಸೆಂಟರ್ ಆರಂಭಿಸಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಸುತ್ತಿನ ಮಾರುಕಟ್ಟೆ ಅಧ್ಯಯನ ನಡೆಸಿರುವ ಪಿಎಸ್ಎ ಗ್ರೂಪ್ ಸಂಸ್ಥೆಯು ಮೊದಲ ಹಂತದಲ್ಲಿ ಸಿಟ್ರನ್ ಸಿ5 ಏರೋಕ್ರಾಸ್ ಎಸ್‌ಯುವಿ ಮಾದರಿಯನ್ನು ಅನಾವರಣಗೊಳಿಸಿದೆ.

ಲೋನ್ ಚಿಂತೆ ಬೇಡ- ಲೀಸ್‌ಗೂ ಸಿಗಲಿದೆ ಸಿಟ್ರನ್ ಸಿ5 ಏರೋಕ್ರಾಸ್

ವಿನೂತನ ವಿನ್ಯಾಸ ಮತ್ತು ವಿಶೇಷ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಸಿಟ್ರನ್ ಎಸ್‌ಯುವಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುವುವ ನೀರಿಕ್ಷೆಯಲ್ಲಿದ್ದು, ಸಿ5 ಏರೋಕ್ರಾಸ್ ಬಿಡುಗಡೆ ನಂತರ ಫ್ರೆಂಚ್ ಮಾರುಕಟ್ಟೆಯಲ್ಲಿರುವ ಮತ್ತಷ್ಟು ಜನಪ್ರಿಯ ಕಾರುಗಳನ್ನು ಭಾರತದಲ್ಲೂ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಲೋನ್ ಚಿಂತೆ ಬೇಡ- ಲೀಸ್‌ಗೂ ಸಿಗಲಿದೆ ಸಿಟ್ರನ್ ಸಿ5 ಏರೋಕ್ರಾಸ್

ಇದಕ್ಕಾಗಿಯೇ ಮೊದಲ ಹಂತವಾಗಿ ಬ್ರಾಂಡ್ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಭಾರತೀಯ ಗ್ರಾಹಕರನ್ನು ಸೆಳೆಯಲು ಸಿಟ್ರನ್ ಕಾರುಗಳನ್ನು ಆಮದು ಮಾಡಿಕೊಳ್ಳುತ್ತಿರುವ ಪಿಎಸ್ಎ ಗ್ರೂಪ್ ಸಂಸ್ಥೆಯು ಜಾಹೀರಾತು ಮತ್ತು ಆಸಕ್ತ ಗ್ರಾಹಕರಿಗಾಗಿ ಟೆಸ್ಟ್ ಡ್ರೈವ್‌ಗಳನ್ನು ಕಲ್ಪಿಸಿ ಹೊಸ ಬ್ರಾಂಡ್ ಪರಿಚಯಿಸುತ್ತಿದೆ.

ಲೋನ್ ಚಿಂತೆ ಬೇಡ- ಲೀಸ್‌ಗೂ ಸಿಗಲಿದೆ ಸಿಟ್ರನ್ ಸಿ5 ಏರೋಕ್ರಾಸ್

ಮೂಲಗಳ ಪ್ರಕಾರ, ಪಿಎಸ್ಎ ಗ್ರೂಪ್‌ನ ಸಿಟ್ರನ್ ಸಿಟ್ರನ್ ಸಿ5 ಏರೋಕ್ರಾಸ್ ಮತ್ತು ಸಿ84 ಎಸ್‌ಯುವಿ ಕಾರುಗಳನ್ನು ಮೊದಲ ಹಂತದಲ್ಲಿ ಬಿಡುಗಡೆಯಾಗಲಿದ್ದು, ಮಧ್ಯಮ ಗಾತ್ರದ ಐಷಾರಾಮಿ ಮಾದರಿಗಳಾದ ಜೀಪ್ ಕಂಪಾಸ್, ಹ್ಯುಂಡೈ ಟಕ್ಸನ್ ಮತ್ತು ಸ್ಕೋಡಾ ಕರೋಕ್ ಎಸ್‌ಯುವಿಗಳಿಗೆ ಇವು ತ್ರೀವ ಪೈಪೋಟಿ ನೀಡುವ ನೀರಿಕ್ಷೆಯಲ್ಲಿವೆ.

MOST READ: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಲೋನ್ ಚಿಂತೆ ಬೇಡ- ಲೀಸ್‌ಗೂ ಸಿಗಲಿದೆ ಸಿಟ್ರನ್ ಸಿ5 ಏರೋಕ್ರಾಸ್

ಸದ್ಯ ಅನಾವರಣಗೊಳಿಸಲಾಗಿರುವ ಸಿ5 ಏರೋಕ್ರಾಸ್ ಕಾರು ಮಾದರಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಹೊಂದಿರಲಿದ್ದರೆ ಡೀಸೆಲ್ ಎಂಜಿನ್ ಮಾದರಿಯಲ್ಲಿ 1.5-ಲೀಟರ್ ಮತ್ತು ಪರ್ಫಾಮೆನ್ಸ್ ಉದ್ದೇಶಕ್ಕಾಗಿ 2.0-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿರಲಿದೆ.

MOST READ: ಟಿಂಟೆಡ್ ಗ್ಲಾಸ್ ಹೊಂದಿದ್ದ ಶಾಸಕನಿಗೂ ಬಿತ್ತು ದಂಡ..!

ಲೋನ್ ಚಿಂತೆ ಬೇಡ- ಲೀಸ್‌ಗೂ ಸಿಗಲಿದೆ ಸಿಟ್ರನ್ ಸಿ5 ಏರೋಕ್ರಾಸ್

ಜೊತೆಗೆ ಹೊಸ ಕಾರುಗಳನ್ನು ಪರಿಚಯಿಸುವುದಕ್ಕೂ ಮುನ್ನ ದೇಶದ 80 ಪ್ರಮುಖ ನಗರಗಳಲ್ಲಿ 'ಎಕ್ಸ್‌ಪಿರೆನ್ಸ್ ಸ್ಟೋರ್'ಗಳನ್ನು ತೆರೆಯಲಿದ್ದು, ಈ ಮೂಲಕ ಗ್ರಾಹಕರನ್ನು ಹೊಸ ಕಾರ್ ಬ್ರಾಂಡ್‌ನತ್ತ ಸೆಳೆಯುವ ಮಾರುಕಟ್ಟೆ ತಂತ್ರಗಳನ್ನು ಬಳಸುತ್ತಿದೆ.

MOST READ: ಕಾರಿನಲ್ಲಿರುವ ವೈಪರ್ ಅಭಿವೃದ್ಧಿ ಹಿಂದಿದೆ ಒಂದು ರೋಚಕ ಕಥೆ..!

ಲೋನ್ ಚಿಂತೆ ಬೇಡ- ಲೀಸ್‌ಗೂ ಸಿಗಲಿದೆ ಸಿಟ್ರನ್ ಸಿ5 ಏರೋಕ್ರಾಸ್

ಇದಲ್ಲದೇ ಬೆಲೆಗಳಲ್ಲಿ ತುಸು ದುಬಾರಿ ಎನ್ನಿಸಲಿರುವ ಪಿಎಸ್ಎ ಗ್ರೂಪ್ ಕಾರುಗಳ ಬೆಲೆಯನ್ನು ತಗ್ಗಿಸುವ ಉದ್ದೇಶದಿಂದ ಚೆನ್ನೈನಲ್ಲಿ ಅಸೆಂಬ್ಲಿ ಯೂನಿಟ್ ಅನ್ನು ಸಹ ತೆರೆಯಲಾಗಿದ್ದು, ಸ್ಥಳೀಯವಾಗಿ ಲಭ್ಯವಾಗುವ ಸುಮಾರು ಶೇ.90ರಷ್ಟು ತಾಂತ್ರಿಕ ಬಿಡಿಭಾಗಗಳನ್ನು ಬಳಕೆ ಮಾಡಿಕೊಂಡು ಲಾಭಾಂಶ ಮತ್ತು ಕಾರಿನ ಬೆಲೆ ಇಳಿಕೆಗೆ ಸಹಕಾರಿಯಾಗುವಂತೆ ಯೋಜನೆ ಹಮ್ಮಿಕೊಂಡಿದೆ.

ಲೋನ್ ಚಿಂತೆ ಬೇಡ- ಲೀಸ್‌ಗೂ ಸಿಗಲಿದೆ ಸಿಟ್ರನ್ ಸಿ5 ಏರೋಕ್ರಾಸ್

ಇದಲ್ಲದೇ ಭಾರತದಲ್ಲಿ ಪಿಎಸ್‌ಎ ಗ್ರೂಪ್‌ನ ಮತ್ತೊಂದು ಅಂಗಸಂಸ್ಥೆಯಾದ ಪ್ಯೂಜೊ ಕೂಡಾ ಈಗಾಗಲೇ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸಿದ್ದು, 2020ರ ಮಧ್ಯಂತರದಲ್ಲಿ ಹೊಸ ಕಾರುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ವಿವಿಧ ಹಂತದ ರೋಡ್ ಟೆಸ್ಟಿಂಗ್ ನಡೆಸುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದೆ.

Most Read Articles

Kannada
English summary
Citroen has launched car leasing services called 'Citroen Lease' in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more