ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆಯ ವಿಚಾರದ ಬಗ್ಗೆ ಗೊಂದಲದಲ್ಲಿರುವ ಸಾರಿಗೆ ಇಲಾಖೆ..!
ದೇಶದೆಲ್ಲೆಡೆ ಕಳೆದು ಹೋದ ವಾಹನಗಳನ್ನು ಪತ್ತೆ ಹಚ್ಚಲು ಪೊಲೀಸರು ಕೆಲವು ಬಾರಿ ವಿಫಲರಾಗುತ್ತಿದ್ದು, ಇನ್ಮುಂದೆ ಕದ್ದ ವಾಹನಗಳನ್ನು ಸುಲಭವಾಗಿ ಪತ್ತೆಹಚ್ಚಲು ಕೆಂದ್ರ ಸರ್ಕಾರವು ಒಂದು ಮಹತ್ವದ ಯೋಜನೆಯೊಂದನು ಜಾರಿಗೆ ತರುತ್ತಿದೆ.

ಎಪ್ರಿಲ್ 2019ರಿಂದ ಎಲ್ಲಾ ಹೊಸ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‍ಗಳನ್ನು ಪಡೆದುಕೊಂಡಿರಲಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದರಿಗಳ ಸಚಿವಾಲಯ 'ಎಲ್ಲಾ ಹೊಸ ವಾಹನಗನ್ನು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‍ಗಳೊಂದಿಗೆ ಪೂರ್ವಸಿದ್ಧಗೊಳಿಸಲಾಗುವುದು. ಎಂದು ಇದೇ ಗುರುವಾರ ಹೇಳಿಕೆಯನ್ನು ನೀಡಿದೆ.

ಆದರೆ ಸಾರಿಗೆ ಇಲಾಖೆಯು ರಾಜ್ಯದಲ್ಲಿ ಈಗಾಗಲೆ ಹಲವಾರು ವಾಹನಗಳು ಸಂಚರಿಸುತ್ತಿದ್ದು, ಈ ನಿಟ್ಟಿನಲ್ಲಿ ಹಿ ಸೆಕ್ಯುರಿಟಿ ನಂಬರ್ ಪ್ಲೇಟ್‍ಗಳನ್ನು ಹೇಗೆ ಅಳವಡಿಸಬೇಕು ಎಂಬ ಗೊಂದಲದಲ್ಲಿದೆ. ರಾಜ್ಯ ಸಾರಿಗೆ ಇಲಾಖೆಯು ಕೇಂದ್ರ ಸರ್ಕಾರ ನೀಡಿರುವ ಗಡುವಿನೊಳಗೆ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಒದಗಿಸುವುದೇ ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿದೆ.

ನಾಮಗೆ ಈಗಾಗಲೆ ಕೇಂದ್ರ ಸರ್ಕಾರದಿಂದ ನೀಡಿರುವ ಆದೇಶದ ಅನುಸಾರ ನಾವು ಏಪ್ರಿಲ್ 1, 2019ರ ಒಳಗೆ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಒದಗಿಸಬೇಕಾಗಿದೆ. ಆದರೆ ಇದನ್ನು ಹೇಗೆ ಪ್ರಾರಂಭಿಸಬೇಕು ಎಂಬ ಗೊಂದಲದಲ್ಲಿದ್ದು, ಕೇಂದ್ರ ಸರ್ಕಾರಕ್ಕೆ ಗಡುವನ್ನು ಮುಂದೂಡಲು ಬೇಡಿಕೆಯನ್ನು ಇಡಬೇಕ ಎಂದು ಕೂಡಾ ನಮಗೆ ತಿಳಿಯುತ್ತಿಲ್ಲ.

ಅಲ್ಲದೇ ಮೊದಲಿಗೆ ನಾವು ಈ ಪದ್ಧತಿಯನ್ನು ಹೊಸ ವಾಹನಗಳಿಗೆ ನೀಡತ್ತೇವೆ ಮತ್ತು ನಂತರ ಹಳೆಯ ವಾಹನಗಳಿಗೆ ನೀಡಲು ಮುಂದಾಗುತ್ತೇವೆ. ಏಕೆಂದರೆ ಹೊಸ ವಾಹನಗಳಿಗೆ ಈ ಪದ್ಧತಿಯನ್ನು ಅಳವಡಿಸುವುದು ಸುಲಭವಾಗಿದ್ದು, ಲಕ್ಷದ ಸಂಖ್ಯೆಯಲ್ಲಿರುವ ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‍ಗಳನ್ನು ಅಳಾವಡಿಸುವುದು ಸಾಮಾನ್ಯ ಕೆಲಸವೇನಲ್ಲ. ಆದುದರಿಂದ ನಾವು ಗೊಂದಲಕ್ಕೆ ಒಳಗಾಗಿದ್ದೇವೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.

ಸಚಿವಾಲಯ ಈ ಪರಿಣಾಮಕ್ಕೆ 1989 ರ ಸೆಂಟ್ರಲ್ ಮೋಟಾರ್ ವಾಹನ ನಿಯಮಗಳಿಗೆ ತಿದ್ದುಪಡಿಗಳನ್ನು ಸೂಚಿಸಿದ್ದು, ಮೂರನೇ ನೋಂದಾವಣೆ ಗುರುತು ಸೇರಿದಂತೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‍ಗಳಾನ್ನು ವಾಹನ ತಯಾರಕರು ಏಪ್ರಿಲ್ 1, 2019 ರಿಂದ ಅಥವಾ ನಂತರ ತಯಾರಿಸಲಾದ ವಾಹನಗಳ ಮೂಲಕ ತಮ್ಮ ವಿತರಕರು ಮತ್ತು ಮಾರಾಟಗಾರರು ಅಂತಹ ನೋಂದಣಿಗೆ ಗುರುತು ಹಾಕಬೇಕು ಎಂದು ಸೂಚಿಸುತ್ತದೆ. ಹೆಚ್ಎಸ್ಆರ್‍ಪಿ ಪ್ಲೇಟ್ಗಳು ಒದಗಿಸಲು ವಿಫಲವಾದಲ್ಲಿ ಅದು ವಾಹನದ ಮೇಲೆ ಪರಿಣಾಮ ಬೀರುತ್ತವೆ "ಎಂದು ಉಲ್ಲೇಖಿಸಲಾಗಿದೆ.

ಇದಲ್ಲದೇ ವಾಹನ ವಿತರಕರು ಹಳೆಯ ವಾಹನಗಳಿಗೆ ಹೆಚ್ಚಿನ ಭದ್ರತಾ ನೋಂದಣಿ ಫಲಕಗಳನ್ನು ಸಹ ಒದಗಿಸಬಹುದಾಗಿದ್ದು, ಮತ್ತು ವಾಹನ ತಯಾರಕರು ಅದರ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳುವಾಗ ಈ ಹೆಜ್ಜೆ ವಾಹನಗಳಲ್ಲಿ ಹೆಚ್ಎಸ್ಆರ್‍ಪಿ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್) ವ್ಯಾಪ್ತಿಯನ್ನು ಸುಧಾರಿಸಲು ಸಾಧ್ಯವಿದೆ ಎನ್ನಲಾಗಿದೆ.

ಹೆಚ್ಚಿನ ಸುರಕ್ಷತಾ ನೋಂದಣಿ ಫಲಕವು ವಾಹನವನ್ನು ಕಾಪಾಡುವುದರಲ್ಲಿ ಸಹಾಯ ಮಾಡುತ್ತದೆ ಮತ್ತು ಕಳೆದುಹೋದ ಅಥವಾ ಕಳುವಾದ ವಾಹನವನ್ನು ಪತ್ತೆಹಚ್ಚಲು ಸುಲಭವಾಗುತ್ತದೆ.

ಈ ನಿಟ್ಟಿನಲ್ಲಿ ಕೇಂದ್ರ ಮೋಟಾರ್ ವಾಹನ ನಿಯಮಗಳನ್ನು 1989ರ ತಿದ್ದುಪಡಿ ಮಾಡುವ ಅಧಿಸೂಚನೆಯನ್ನು ಸಾರ್ವಜನಿಕರಿಂದ ಪಡೆದ ಆಕ್ಷೇಪಣೆಗಳು ಮತ್ತು ಸಲಹೆಗಳ ಕಾರಣದಿಂದ ನೀಡಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹೇಳಿಕೊಂಡಿದೆ.
MOST READ: ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಹೊಸ ನೋಂದಣಿ ಪ್ಲೇಟ್‍ಗಳು 15 ವರ್ಷ ಗ್ಯಾರಂಟಿಗಳೊಂದಿಗೆ ಬರುಲಿದ್ದು, ಒಮ್ಮೆ ಎಚ್ಎಸ್ಆರ್‍ಪಿ ಮುರಿದರೆ, ಕಳೆದುಹೋಗಿದ್ದಲ್ಲಿ ಅಥವಾ ಆ ಸಮಯದಲ್ಲಿ ಯಾವುದೇ ನೈಸರ್ಗಿಕ ಹಾನಿಯನ್ನು ಅನುಭವಿಸಿದರೆ ಮೊದಲಿಗೆ ಅಳವಡಿಸಿದ ಡೀಲರ್ನಿಂದ ಅದನ್ನು ಬದಲಿಸಬೇಕಾಗುತ್ತದೆ.

ಈ ಹೈ ಸೆಕ್ಯುರಿಟಿ ರಿಜಿಸ್ಟ್ರೆಷನ್ ಪ್ಲೇಟ್ ಅನ್ನು ನಕಲು ಮಾಡಲಾಗದೆ, ನಂಬರ್ ಪ್ಲೆಟ್‍ನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಕ್ರೋಮಿಯಂ ಹಾಲೊಗ್ರಾಂ ಅನ್ನು ಮತ್ತು ಪ್ಲೇಟ್‍ನ ಮೇಲ್ಭಾಗದಲ್ಲಿ ಹಾಗು ಎಡ ಭಾಗದಲ್ಲಿ ಹಾಟ್-ಸ್ಟ್ಯಾಂಪ್ ಮಾಡಲಾಗಿರುತ್ತದೆ.

ನಂಬರ್ ಪ್ಲೇಟ್‍ಗಳಲ್ಲಿ ನೀಡಲಾದ ಸ್ಟ್ಯಾಂಪ್ ನೀಲಿ ಬಣ್ಣದಲ್ಲಿ ಅಶೋಕ ಚಕ್ರವನ್ನು ಹೊಂದಿರುತ್ತದೆ. 10-ಅಂಕಿ ಶಾಶ್ವತ ಗುರುತಿನ ಸಂಖ್ಯೆ (ಪಿನ್) ಲೇಸರ್-ಬ್ರಾಂಡ್ ಅನ್ನು ಹೆಚ್‍ಎಸ್ಆರ್‍ಪಿಗಳ ಕೆಳ-ಎಡ ಮೂಲೆಯಲ್ಲಿರುತ್ತದೆ ಮತ್ತು ನೋಂದಣಿ ಸಂಖ್ಯೆಯ ಅಕ್ಷರಗಳು ಮತ್ತು ಅಂಕಿಗಳ ಮೇಲೆ ಅನ್ವಯವಾಗುವ ಬಿಸಿ-ಸ್ಟಾಂಪಿಂಗ್‍ನ ಮೇಲೆ 'IND' ಗುರುತನ್ನು ನೀಡಲಾಗಿರುತ್ತದೆ.

ಇನ್ನೊಂದು ಪ್ರಮಖ ವಿಚಾರ ಅಂದ್ರೆ, ವಾಹನ ಉತ್ಪಾದಕರೇ ಪೂರೈಸುವ ನಂಬರ್ ಪ್ಲೇಟ್‌ಗಳು ಹೊಸ ಸುರಕ್ಷಾ ನೀತಿ ಅಡಿಯಲ್ಲೇ ಅಭಿವೃದ್ಧಿಪಡಿಸಿದ ಉತ್ಪನ್ನವಾಗಿದ್ದು, ಇದು ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯಿಂದ ಪ್ರಮಾಣಿಕೃತಗೊಂಡಿರುತ್ತದೆ.

ಜೊತೆಗೆ ವಾಹನಗಳ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿಗೆ ಬ್ರೇಕ್ ಬೀಳಲಿದ್ದು, ಪೂರ್ಣ ಪ್ರಮಾಣದ ಸುರಕ್ಷೆ ಸಿಗಲಿದೆ ಎನ್ನುವುದು ಕೇಂದ್ರ ಸಾರಿಗೆ ಇಲಾಖೆಯ ಅಭಿಪ್ರಾಯವಾಗಿದೆ. ಜೊತೆಗೆ ಹೊಸ ವಾಹನಗಳಿಗಾಗಿ ನಂಬರ್ ಪ್ಲೇಟ್‌ಗಳನ್ನು ಖರೀದಿಸಲು ಹೆಚ್ಚುವರಿ ಬೆಲೆ ತೆರಬೇಕಾಗಿದ್ದ ವಾಹನ ಮಾಲೀಕರಿಗೂ ಇದರಿಂದ ಕೊಂಚ ರಿಲೀಫ್ ಸಿಗಲಿದೆ.

ಇನ್ನು ವಾಹನದ ಮೂಲ ಬೆಲೆಯಲ್ಲೇ ನಂಬರ್ ಪ್ಲೇಟ್ ಬೆಲೆಯು ಒಳಗೊಂಡಿರುತ್ತವೆ. ಹೀಗಾಗಿ ಹೊಸ ವಾಹನ ಖರೀದಿಸುವ ಗ್ರಾಹಕರು ನಂಬರ್ ಪ್ಲೇಟ್‌ಗಾಗಿ ಹೆಚ್ಚುವರಿ ಹಣ ತೆರಬೇಕಾದ ಅವಶ್ಯಕತೆ ಇಲ್ಲಾ ಎನ್ನಬುಹುದು.
MOST READ: ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಸದ್ಯ ಮಾರುಕಟ್ಟೆಯಲ್ಲಿ ನಂಬರ್ ಪ್ಲೇಟ್ ಒಂದಕ್ಕೆ ರೂ.900ರಿಂದ ರೂ.40 ಸಾವಿರ ತನಕ ಬೆಲೆಯಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ವಾಹನ ಮಾಲೀಕರನ್ನು ಸುಲಿಗೆ ಮಾಡುತ್ತಿರುವ ಏಜೆನ್ಸಿಗಳಿಗೂ ಇದರಿಂದ ಹೊಡೆತ ಬೀಳಲಿದೆ ಎನ್ನಬಹುದು.
Source: ET Auto


Click it and Unblock the Notifications








