ಬಿಎಸ್6 ಟ್ರಕ್ ಹಾಗೂ ಬಸ್ಸುಗಳನ್ನು ಪ್ರದರ್ಶಿಸಿದ ಡೈಮ್ಲರ್
ಡೈಮ್ಲರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್ಸ್ ಇಂದು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಬಿಎಸ್ 6 ಎಂಜಿನ್ ಹೊಂದಿರುವ ವಾಹನಗಳನ್ನು ಪ್ರದರ್ಶಿಸಿದೆ. ಕಂಪನಿಯು ತನ್ನ ಮೊದಲ ಬಿಎಸ್ 6 ಟ್ರಕ್ ಆದ, ಭಾರತ್‌ಬೆಂಝ್ 1217 ಟಿಪ್ಪರ್ ಟ್ರಕ್ ಹಾಗೂ ಅತ್ಯಂತ ಜನಪ್ರಿಯ ಗ್ಲೈಡರ್ 12 ಮೀಟರ್ ಕೋಚ್ ಅನ್ನು ಪ್ರದರ್ಶಿಸಿದೆ.

ಡೈಮ್ಲರ್ ಇಂಡಿಯಾ, ಭಾರತದಲ್ಲಿ ಭಾರೀ ಗಾತ್ರದ ವಾಹನಗಳಿಗೆ ಬಿಎಸ್6 ಪ್ರಮಾಣ ಪಡೆದ ಮೊದಲ ಕಂಪನಿಯಾಗಿದೆ. ಯುರೋ 6 ಎಮಿಷನ್ ತಂತ್ರಜ್ಞಾನದೊಂದಿಗೆ ಜಾಗತಿಕವಾಗಿ ಈಗಾಗಲೇ 1.4 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿಲಾಗಿದೆ ಎಂದು ಕಂಪನಿ ತಿಳಿಸಿದೆ. ಯುರೋ6 ನಿಯಮಗಳು ಬಿಎಸ್ 6 ನಿಯಮಗಳಿಗೆ ಸಮನಾಗಿವೆ.

ಕಂಪನಿಯ ಬಿಎಸ್6 ಮಾದರಿಗಳ ಪ್ರದರ್ಶನದ ವೇಳೆ ಮಾತನಾಡಿದ ಡೈಮ್ಲರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್ಸ್ (ಡಿಐಸಿವಿ) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸತ್ಯಕಾಮ್ ಆರ್ಯರವರು, ಡೈಮ್ಲರ್ ಈಗಾಗಲೇ 1.4 ಮಿಲಿಯನ್ ಯುರೋ 6 ಟ್ರಕ್ ಹಾಗೂ ಬಸ್ಸುಗಳನ್ನು ಬಿಡುಗಡೆಗೊಳಿಸಿರುವ ಅನುಭವವನ್ನು ಹೊಂದಿದೆ.

ಇದರಿಂದಾಗಿ ಮಾಲಿನ್ಯ ನಿಯಮಗಳನ್ನು ಅಳವಡಿಸಿಕೊಳ್ಳಬೇಕಿರುವ ಗಡುವಿನೊಳಗೆ ಬಿಎಸ್4 ನಿಂದ ಬಿಎಸ್6 ನಿಯಮಗಳಿಗೆ ನಮ್ಮ ವಾಹನಗಳನ್ನು ಬದಲಿಸಲಿದ್ದೇವೆ. ಇದರೊಂದಿಗೆ 2021-2022ರ ವೇಳೆಗೆ ಭಾರತದಲ್ಲಿ ತಯಾರಾಗುವ ಟ್ರಕ್‌ಗಳನ್ನು ರಫ್ತು ಮಾಡಲಿದ್ದೇವೆ ಎಂದು ಹೇಳಿದರು.

ಎಂಜಿನ್‌ಗಳ ತಾಂತ್ರಿಕ ವಿಶೇಷತೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲವಾದರೂ, ಬಿಎಸ್ 4 ಎಂಜಿನ್‍ಗಳಿಗೆ ಹೋಲಿಸಿದರೆ, ಈ ಹೊಸ ಬಿಎಸ್ 6 ಎಂಜಿನ್ ಹೊಂದಿರುವ ವಾಹನಗಳು ಆಫ್ಟರ್ ಟ್ರೀಟ್‍ಮೆಂಟ್ ಸಿಸ್ಟಂ (ಎಟಿಎಸ್) ಹೊಂದಿವೆ.

ಈ ಸಿಸ್ಟಂ, ಎಂಜಿನ್‍ಗಳು ಬಿಡುಗಡೆಗೊಳಿಸುವ ಡೀಸೆಲ್ ಅನ್ನು ಎಕ್ಸಾಸ್ಟ್ ಟೈಲ್‌ಪೈಪ್ ಮೂಲಕ ಹೊರಗಿನ ಗಾಳಿಗೆ ಬಿಡುಗಡೆ ಮಾಡುವ ಮೊದಲು ಸ್ವಚ್ಛಗೊಳಿಸಲಿದೆ. ಇದರಿಂದ ಪರಿಸರಕ್ಕೆ ಹಾನಿಯಾಗುವ ಹೊಗೆಯನ್ನು ಕಡಿಮೆಗೊಳಿಸಲಿದೆ.

ಡೈಮ್ಲರ್ ಕಂಪನಿಯ ಪ್ರಕಾರ, ಹೊಸ ಬಿಎಸ್ 6 ಎಂಜಿನ್ ಈಗ 92%ನಷ್ಟು ಕಡಿಮೆ ಪ್ರಮಾಣದ ನೈಟ್ರಿಕ್ ಆಕ್ಸೈಡ್ (ಎನ್ಒಎಕ್ಸ್) ಮತ್ತು 90%ನಷ್ಟು ಕಡಿಮೆ ಪ್ರಮಾಣದಲ್ಲಿ ಪರ್ಟಿಕ್ಯುಲೇಟ್ ಮ್ಯಾಟರ್‍ಗಳನ್ನು (ಪಿಎಂ) ಬಿಡುಗಡೆಗೊಳಿಸಲಿದೆ. ಯುರೋ 6 ತಂತ್ರಜ್ಞಾನವನ್ನು ಸ್ಥಳೀಕರಿಸಿ ತನ್ನ ವಾಹನಗಳಲ್ಲಿ ಬಿಎಸ್6 ಎಂಜಿನ್ ಅಭಿವೃದ್ಧಿಪಡಿಸಲು, ಡೈಮ್ಲರ್ ಒಟ್ಟು ರೂ.500 ಕೋಟಿ ಬಂಡವಾಳ ಹೂಡಿಕೆ ಮಾಡಿದೆ.
MOST READ: ಪೆಟ್ರೋಲ್, ಡೀಸೆಲ್ ಮಾರಾಟಕ್ಕೂ ಹೊಡೆತ ಕೊಟ್ಟ ಹೊಸ ಟ್ರಾಫಿಕ್ ರೂಲ್ಸ್

ಡೈಮ್ಲರ್ ಕಂಪನಿಯು ವಾಹನಗಳನ್ನು ಸುಮಾರು 20 ಲಕ್ಷ ಕಿಲೋಮೀಟರ್‍ಗಳಷ್ಟು ಪರೀಕ್ಷಿಸಿದೆ, ಹೊಸ ಘಟಕಗಳನ್ನು ಅಭಿವೃದ್ಧಿಪಡಿಸಿದೆ. ಈ ಬದಲಾವಣೆಗಾಗಿ 1000 ಹೊಸ ಬಿಡಿಭಾಗಗಳನ್ನು ಸೇರಿಸಿದೆ. ಡೈಮ್ಲರ್ ಇಂಡಿಯಾ ತನ್ನ ಬಿಎಸ್ 6 ಎಂಜಿನ್‍ಗಳನ್ನು 80%ಕ್ಕಿಂತ ಹೆಚ್ಚು ಸ್ಥಳಿಯವಾಗಿ ನಿರ್ಮಿಸಿದೆ. ಮುಂಬರುವ ದಿನಗಳಲ್ಲಿ ಇದನ್ನು 90%ನಷ್ಟು ಸ್ಥಳಿಯವಾಗಿ ನಿರ್ಮಿಸುವ ಗುರಿಯನ್ನಿಟ್ಟುಕೊಂಡಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ರಫ್ತಿನ ಬಗ್ಗೆ ಮಾತನಾಡಿದ ಆರ್ಯರವರು ಬಿಎಸ್6 ಎಂಜಿನ್ ಹೊಂದಿರುವ ವಾಹನಗಳನ್ನು ಮೆಕ್ಸಿಕೊ, ಚಿಲಿ ಹಾಗೂ ಬ್ರೆಜಿಲ್‍ನಂತಹ ದೇಶಗಳಿಗೆ ರಫ್ತು ಮಾಡಲಾಗುವುದು. ಶೀಘ್ರದಲ್ಲೇ ಈ ದೇಶಗಳೂ ಸಹ ಇದೇ ರೀತಿಯ ಮಾಲಿನ್ಯ ನಿಯಮಗಳನ್ನು ಹೊಂದಲಿವೆ. ಇದರಿಂದ ಭಾರತವು ಡೈಮ್ಲರ್ ಟ್ರಕ್ ಹಾಗೂ ಬಸ್‌ಗಳನ್ನು ಜಾಗತಿಕವಾಗಿ ನಿರ್ಮಿಸಬಹುದಾಗಿದೆ ಎಂದು ಹೇಳಿದರು. ಡೈಮ್ಲರ್ ಕಂಪನಿಯು ತನ್ನ ಒಎಂ926 ಎಂಜಿನ್ ಸರಣಿಯ ವಾಹನಗಳನ್ನು 2021-22 ರ ವೇಳೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ರಫ್ತು ಮಾಡಲಿದೆ.
MOST READ: ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

2020ರ ಮೊದಲ ತ್ರೈಮಾಸಿಕದ ವೇಳೆಗೆ ಡೈಮ್ಲರ್ ಇಂಡಿಯಾ ತನ್ನ ಬಿಎಸ್ 6 ವಾಹನಗಳನ್ನು ಬಿಡುಗಡೆಗೊಳಿಸುವ ಗುರಿ ಹೊಂದಿದೆ. ಈ ವಾಹನಗಳ ಬಿಡುಗಡೆಯು ಭಾರತದಲ್ಲಿ ಲಭ್ಯವಾಗುವ ಬಿಎಸ್6 ಇಂಧನಗಳ ಮೇಲೆ ಅವಲಂಬಿತವಾಗಿದೆ ಎಂದು ಕಂಪನಿ ಹೇಳಿದೆ. ಸದ್ಯಕ್ಕೆ ಬಿಎಸ್ 6 ಇಂಧನವು ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಮಾತ್ರ ಮಾರಾಟವಾಗುತ್ತಿದೆ. 2020ರ ಏಪ್ರಿಲ್ 1ರ ವೇಳೆಗೆ ದೇಶಾದ್ಯಂತ ಮಾರಾಟವಾಗುವ ಸಾಧ್ಯತೆಗಳಿವೆ.


Click it and Unblock the Notifications