ವ್ಯಾಗನ್‍ಆರ್‍‍ಗಿಂತ ಕಡಿಮೆ ಬೆಲೆಯಲ್ಲಿ ಮಾರಾಟಕ್ಕಿದೆ ಸಲ್ಮಾನ್ ಖಾನ್ ಚಿತ್ರದಲ್ಲಿದ್ದ ಕಾರು..!

ಬಾಲಿವುಡ್ ತಾರೆಯರಿಗೆ ಕಾರುಗಳ ಬಗ್ಗೆ ಸಿಕ್ಕಾ ಪಟ್ಟೆ ಕ್ರೇಜ್. ಬಾಲಿವುಡ್‍‍ನ ಬಹುತೇಕ ತಾರೆಯರು ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ. ಮಾರುಕಟ್ಟೆಗೆ ಹೊಸದಾಗಿ ಬರುವ ದುಬಾರಿ ಬೆಲೆಯ ಕಾರುಗಳನ್ನು ಕೊಳ್ಳುತ್ತಲೇ ಇರುತ್ತಾರೆ.

ವ್ಯಾಗನ್‍ಆರ್‍‍ಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ ಸಲ್ಮಾನ್ ಖಾನ್ ಚಿತ್ರದಲ್ಲಿದ್ದ ಕಾರು..!

ಹೊಸ ಕಾರುಗಳನ್ನು ಖರೀದಿಸಿದಾಗ ಕೆಲವರು ತಮ್ಮಲ್ಲಿರುವ ಹಳೆಯ ಕಾರುಗಳನ್ನು ಮಾರಾಟ ಮಾಡಿದರೆ, ಇನ್ನೂ ಕೆಲವರು ಹಳೆಯ ಕಾರುಗಳನ್ನು ಹಾಗೆಯೇ ತಮ್ಮ ಗ್ಯಾರೇಜ್‍‍ನಲ್ಲಿಡುತ್ತಾರೆ. ಕೆಲವರು ತೀರಾ ಕಡಿಮೆ ಬೆಲೆಗೆ ತಮ್ಮ ಕಾರುಗಳನ್ನು ಮಾರುವುದುಂಟು.

ವ್ಯಾಗನ್‍ಆರ್‍‍ಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ ಸಲ್ಮಾನ್ ಖಾನ್ ಚಿತ್ರದಲ್ಲಿದ್ದ ಕಾರು..!

ಸಲ್ಮಾನ್ ಖಾನ್‍‍ರವರು ಬಾಲಿವುಡ್‍‍ನ ಸೂಪರ್‍‍ಸ್ಟಾರ್ ನಟರಲ್ಲಿ ಒಬ್ಬರು. ಸಲ್ಮಾನ್ ಖಾನ್‍‍ರವರು ಹಲವಾರು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇವರು ನಟಿಸಿದ್ದ ಚಿತ್ರದಲ್ಲಿದ್ದ ಡಿಸಿ ವ್ಯಾಂಪೈರ್ ಕಾರ್ ಅನ್ನು ಮಾರಾಟ ಮಾಡಲಾಗುತ್ತಿದೆ.

ವ್ಯಾಗನ್‍ಆರ್‍‍ಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ ಸಲ್ಮಾನ್ ಖಾನ್ ಚಿತ್ರದಲ್ಲಿದ್ದ ಕಾರು..!

ಅದೂ ಸಹ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿಗಿಂತ ಕಡಿಮೆ ಬೆಲೆಗೆ. ಜನಪ್ರಿಯ ಡಿಸಿ ಕಂಪನಿಯ ಈ ಕಾರ್ ಅನ್ನು ಕೈನಿಂದ ಪೇಂಟ್ ಮಾಡಲಾಗಿದೆ. ಈ ಕಂಪನಿಯು ಸಾಮಾನ್ಯ ಕಾರುಗಳನ್ನು ಆಫ್ ರೋಡ್ ಕಾರುಗಳಾಗಿ ಪರಿವರ್ತಿಸುತ್ತದೆ. ಹೀಗಾಗಿ ಈ ಕಂಪನಿಯು ಭಾರತದ ಜನಪ್ರಿಯ ಕಂಪನಿಗಳಲ್ಲಿ ಒಂದಾಗಿದೆ.

ವ್ಯಾಗನ್‍ಆರ್‍‍ಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ ಸಲ್ಮಾನ್ ಖಾನ್ ಚಿತ್ರದಲ್ಲಿದ್ದ ಕಾರು..!

ಡಿಸಿ ಕಂಪನಿಯು ಹಲವಾರು ಕಾರುಗಳನ್ನು ಸಿನಿಮಾಗಳಿಗಾಗಿ ಮಾಡಿಫೈಗೊಳಿಸಿತ್ತು. 1990ರ ದಶಕದ ಚಿತ್ರಗಳಲ್ಲಿದ್ದ ಡಿಸಿ ವ್ಯಾಂಪೈರ್‍‍ನ ಈ ಕಾರ್ ಅನ್ನು ಮಾರಾಟಕ್ಕೆ ಇಡಲಾಗಿದೆ. ಡಿಸಿ ಡಿಸೈನ್ ವ್ಯಾಂಪೈರ್ ಕರ್ನಾಟಕದ ಮೂಲದಾಗಿದ್ದು, ಈ ಕಾರ್ ಅನ್ನು ಮಾರಾಟ ಮಾಡುತ್ತಿರುವವರು ಈ ಕಾರಿಗೆ ರೂ.8 ಲಕ್ಷ ನಿಗದಿಪಡಿಸಿದ್ದಾರೆ.

ವ್ಯಾಗನ್‍ಆರ್‍‍ಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ ಸಲ್ಮಾನ್ ಖಾನ್ ಚಿತ್ರದಲ್ಲಿದ್ದ ಕಾರು..!

ಮಾರಾಟಗಾರರ ಪ್ರಕಾರ, ಈ ಕಾರು ಇದುವರೆಗೆ ಒಟ್ಟು 23,000 ಕಿ.ಮೀನಷ್ಟು ಚಲಿಸಿದೆ. ಕಾರಿನಲ್ಲಿರುವ ಓಡೋಮೀಟರ್ ಅನ್ನು ಬದಲಾಯಿಸಲಾಗಿದೆಯೇ ಎಂಬುದನ್ನು ತಿಳಿಸಿಲ್ಲ. ವಾಹನವು ಕರ್ನಾಟಕದ ರಿಜಿಸ್ಟ್ರೇಷನ್ ನಂಬರ್ ಹೊಂದಿದ್ದು, ಉತ್ತಮ ಸ್ಥಿತಿಯಲ್ಲಿದೆ ಎಂದಷ್ಟೇ ಮಾರಾಟಗಾರರು ತಿಳಿಸಿದ್ದಾರೆ.

ವ್ಯಾಗನ್‍ಆರ್‍‍ಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ ಸಲ್ಮಾನ್ ಖಾನ್ ಚಿತ್ರದಲ್ಲಿದ್ದ ಕಾರು..!

ಈ ಕಾರಿನ ಲೈಫ್ ಟೈಂ ಟ್ಯಾಕ್ಸ್ ಅನ್ನು ಕರ್ನಾಟಕದಲ್ಲಿ ಪಾವತಿಸಲಾಗಿದ್ದು, ಎಲ್ಲಾ ದಾಖಲೆಗಳು ಮಾರಾಟಗಾರರ ಹತ್ತಿರವಿದೆ. ಈ ಕಾರ್ ಅನ್ನು ಸಲ್ಮಾನ್ ಖಾನ್, ಸಂಜಯ್ ದತ್ ಹಾಗೂ ಕರಿಷ್ಮಾ ಕಪೂರ್ ನಟಿಸಿದ್ದ ಚಲ್ ಮೇರೆ ಭಾಯ್ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಆ ಚಿತ್ರದಲ್ಲಿ ಈ ಕಾರು ಹಲವು ದೃಶ್ಯಗಳಲ್ಲಿ ಕಂಡು ಬಂದಿದೆ. ಈ ಕಾರ್ ಅನ್ನು ಒ‍ಎಲ್‍ಎಕ್ಸ್ ಮೂಲಕ ಮಾರಾಟ ಮಾಡಲಾಗುತ್ತಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ವ್ಯಾಗನ್‍ಆರ್‍‍ಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ ಸಲ್ಮಾನ್ ಖಾನ್ ಚಿತ್ರದಲ್ಲಿದ್ದ ಕಾರು..!

ಈ ಡಿಸಿ ವ್ಯಾಂಪೈರ್ ಕಾರು ಸೆಡಾನ್ ಕಾರಿನಂತೆಯೇ ಕಾಣುತ್ತದೆ. ಈ ಕಾರು ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ. ಆದರೂ ಸಹ ಈ ಕಾರಿನ ಮಾಲೀಕರು ಈ ಕಾರ್ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಚಿತ್ರಗಳಲ್ಲಿ ಕಾರ್ ಅನ್ನು ಮಾಡಿಫೈಗೊಳಿಸಿರುವುದನ್ನು ಕಾಣಬಹುದು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ವ್ಯಾಗನ್‍ಆರ್‍‍ಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ ಸಲ್ಮಾನ್ ಖಾನ್ ಚಿತ್ರದಲ್ಲಿದ್ದ ಕಾರು..!

ಈ ಕಾರು ರಸ್ತೆಯಲ್ಲಿ ಸಂಚರಿಸುವಾಗ ಹಲವಾರು ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ. ವಾಹನದ ಮುಂಭಾಗವು ಪ್ಲೈಮೌತ್ ಪ್ರೋವರ್‍‍ನಿಂದ ಸ್ಫೂರ್ತಿ ಪಡೆದಂತೆ ತೋರುತ್ತದೆ, ಕಾರಿನ ಸೈಡ್‍‍ಗಳಲ್ಲಿರುವ ಸ್ಲಾಬ್‍‍ಗಳು ಈ ಕಾರ್ ಅನ್ನು ವಿಶಿಷ್ಟವಾಗಿಸಿವೆ. ಈ ಕಾರಿನ ಹಿಂಭಾಗದಲ್ಲಿರುವ ಕಾರ್ವೆಟ್ ಪ್ರೇರಿತ ಟೇಲ್ ಲ್ಯಾಂಪ್‌ಗಳು ಈ ಕಾರಿಗೆ ಇಂಟರ್‍‍ನ್ಯಾಷನಲ್ ಲುಕ್ ನೀಡುತ್ತವೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ವ್ಯಾಗನ್‍ಆರ್‍‍ಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ ಸಲ್ಮಾನ್ ಖಾನ್ ಚಿತ್ರದಲ್ಲಿದ್ದ ಕಾರು..!

ಈ ಕಾರು ಅಗಲವಾದ ಟಯರ್‌, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ ಹಾಗೂ ಎರಡು ಡೋರ್‍‍ಗಳ ವಿನ್ಯಾಸವನ್ನು ಹೊಂದಿದೆ. ಈ ಕಾರು ಸಿಯೆಲೋ ಸೆಡಾನ್‌ನಲ್ಲಿರುವ ಬಹುತೇಕ ಎಲ್ಲಾ ಫೀಚರ್‍‍ಗಳನ್ನು ಹೊಂದಿದೆ. ಈ ಕಾರಿನ ಟೆಕ್ನಿಕಲ್ ಅಂಶಗಳನ್ನು ಬಹಿರಂಗಪಡಿಸಿಲ್ಲ. ಹೊರಭಾಗದಂತೆ ಕಾರಿನ ಇಂಟಿರಿಯರ್‍‍ನಲ್ಲಿಯೂ ಸಹ ಹಲವಾರು ಬದಲಾವಣೆಗಳನ್ನು ಮಾಡಿರುವ ಸಾಧ್ಯತೆಗಳಿವೆ.

More from DriveSpark

Article Published On: Friday, October 25, 2019, 14:06 [IST]
English summary
DC Vampire used by Salman Khan is for sale - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+