ಲೈಸೆನ್ಸ್ ಟೆಸ್ಟ್ ಗಾಗಿ ಹೊಸ ವಿಧಾನ ತಂದ ಮೈಕ್ರೊಸಾಫ್ಟ್

ಮೈಕ್ರೋಸಾಫ್ಟ್ ರಿಸರ್ಚ್ ಭಾರತದಲ್ಲಿ ಡ್ರೈವರ್ ಲೈಸೆನ್ಸ್ ಟೆಸ್ಟುಗಳನ್ನು ಆಟೋಮ್ಯಾಟಿಕ್‍‍ಗೊಳಿಸುವ ಹಾರ್ನೆಸಿಂಗ್ ಆಟೋಮೊಬೈಲ್ಸ್ ಫಾರ್ ಸೇಫ್ಟಿ (ಹೆಚ್‍ಎ‍ಎಂ‍‍ಎಸ್) ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿದೆ.

ಲೈಸೆನ್ಸ್ ಟೆಸ್ಟ್ ಗಾಗಿ ಹೊಸ ವಿಧಾನ ತಂದ ಮೈಕ್ರೊಸಾಫ್ಟ್

ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಿಸ್ಟಂ ಲೈಸೆನ್ಸ್ ಅನ್ನು ನೀಡುವ ಮೊದಲು ಚಾಲಕನ ಸಾಮರ್ಥ್ಯದ ಬಗ್ಗೆ ವಿಶ್ಲೇಷಣೆಯನ್ನು ಮಾಡುತ್ತದೆ. ಉತ್ತರಾಖಂಡದಲ್ಲಿರುವ ಡೆಹ್ರಾಡೂನ್ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ಸ್ಮಾರ್ಟ್‌ಫೋನ್ ಆಧಾರಿತ ಡ್ರೈವಿಂಗ್ ಟೆಸ್ಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಲೈಸೆನ್ಸ್ ಟೆಸ್ಟ್ ಗಾಗಿ ಹೊಸ ವಿಧಾನ ತಂದ ಮೈಕ್ರೊಸಾಫ್ಟ್

ಈ ಸಿಸ್ಟಂ ಅನ್ನು ದೇಶಾದ್ಯಂತ ಹಾಗೂ ಜಾಗತಿಕವಾಗಿ ಅಳವಡಿಸಿಕೊಳ್ಳ ಬಹುದೆಂದು ಕಂಪನಿ ತಿಳಿಸಿದೆ. ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ವೆಂಕಟ್ ಪದ್ಮನಾಭನ್‍‍ರವರು ಮಾತನಾಡಿ, ಸಾಂಪ್ರದಾಯಿಕ ಚಾಲಕ ಪರವಾನಗಿ ಪರೀಕ್ಷೆಯಲ್ಲಿರುವ ಮುಖ್ಯ ಸವಾಲೆಂದರೆ ಅಭ್ಯರ್ಥಿಗಳನ್ನು ಪರಿಣಾಮಕಾರಿಯಾಗಿ ಮೌಲ್ಯಮಾಪನ ಮಾಡುವುದು ಎಂದು ಹೇಳಿದರು.

ಲೈಸೆನ್ಸ್ ಟೆಸ್ಟ್ ಗಾಗಿ ಹೊಸ ವಿಧಾನ ತಂದ ಮೈಕ್ರೊಸಾಫ್ಟ್

ಅಂದ ಹಾಗೆ ಪದ್ಮನಾಭನ್‍‍ರವರು ಈ ಹೆಚ್‍ಎ‍ಎಂ‍‍ಎಸ್ ಯೋಜನೆಯನ್ನು 2016ರಲ್ಲಿ ಆರಂಭಿಸಿದರು. ಮೈಕ್ರೋಸಾಫ್ಟ್ ಹೆಚ್‍ಎ‍ಎಂ‍‍ಎಸ್ ತಂತ್ರಜ್ಞಾನವನ್ನು ಬಳಸುವ ಈ ಟೆಸ್ಟ್ ಮೌಲ್ಯಮಾಪಕರ ಮೇಲಿನ ಹೊರೆಯನ್ನು ನಿವಾರಿಸುವುದರ ಜೊತೆಗೆ, ಚಾಲಕರ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿಸುತ್ತದೆ.

ಲೈಸೆನ್ಸ್ ಟೆಸ್ಟ್ ಗಾಗಿ ಹೊಸ ವಿಧಾನ ತಂದ ಮೈಕ್ರೊಸಾಫ್ಟ್

ಹೆಚ್‍ಎ‍ಎಂ‍‍ಎಸ್ ಟೆಕ್ನಾಲಜಿಯು ಸ್ಮಾರ್ಟ್ ಫೋನಿನ ಮುಂಭಾಗ ಹಾಗೂ ಹಿಂಭಾಗದ ಕ್ಯಾಮರಾ ಹಾಗೂ ಇತರ ಸೆನ್ಸಾರ್‍‍ಗಳನ್ನು ಬಳಸಿ ಚಾಲಕನ ಚಾಲನಾ ಪ್ರತಿಕ್ರಿಯೆಯನ್ನು ಗಮನಿಸಲಿದೆ. ಅಂದರೆ ಮುಂದಿರುವ ವಾಹನವು ಎಷ್ಟು ದೂರದಲ್ಲಿದೆ ಎಂಬುದನ್ನು ಗಮನಿಸಲಿದೆ.

ಲೈಸೆನ್ಸ್ ಟೆಸ್ಟ್ ಗಾಗಿ ಹೊಸ ವಿಧಾನ ತಂದ ಮೈಕ್ರೊಸಾಫ್ಟ್

ಈ ಸಾಫ್ಟ್ ವೇರ್ ಸುಧಾರಿತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಪರಿಣಾಮಕಾರಿಯಾದ ಕಾರ್ಯಾಚರಣೆಗೆ ಬಳಸುತ್ತದೆ. ಮೈಕ್ರೋಸಾಫ್ಟ್ ನ ಹೆಚ್‍ಎ‍ಎಂ‍‍ಎಸ್ ಟೆಕ್ನಾಲಜಿಯು ಟೆಸ್ಟ್ ನಡೆಸುವ ಸಮಯದಲ್ಲಿ ವಾಹನಗಳ ಪಥವನ್ನು ಟ್ರ್ಯಾಕಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಲೈಸೆನ್ಸ್ ಟೆಸ್ಟ್ ಗಾಗಿ ಹೊಸ ವಿಧಾನ ತಂದ ಮೈಕ್ರೊಸಾಫ್ಟ್

ಟ್ರ್ಯಾಕಿಂಗ್‍‍ನಿಂದಾಗಿ ಟೆಸ್ಟ್ ಮಧ್ಯದಲ್ಲಿ ಅನುಮತಿಸಿದ್ದಕ್ಕಿಂತ ಹೆಚ್ಚಿನ ಅವಧಿಯವರೆಗೆ ಚಾಲಕನು ನಿಲ್ಲಿಸಿದ್ದನೇ ಅಥವಾ ವಾಹನವನ್ನು ಹೆಚ್ಚು ಬಾರಿ ಮುಂದಕ್ಕೆ ಹಾಗೂ ಹಿಂದಕ್ಕೆ ತಿರುಗಿಸುವ ಮೂಲಕ ಸರಿಪಡಿಸಲು ಪ್ರಯತ್ನಿಸಲಾಗಿದೆಯೆ ಎಂಬುದನ್ನು ಹೆಚ್‍ಎ‍ಎಂ‍‍ಎಸ್ ನಿರ್ಧರಿಸುತ್ತದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಲೈಸೆನ್ಸ್ ಟೆಸ್ಟ್ ಗಾಗಿ ಹೊಸ ವಿಧಾನ ತಂದ ಮೈಕ್ರೊಸಾಫ್ಟ್

ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಹಿರಿಯ ಸಂಶೋಧಕರಾದ ಅಕ್ಷಯ್ ನಂಬಿರವರು ಮಾತನಾಡಿ, ಸರಾಸರಿ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರತಿದಿನ ಡೆಹ್ರಾಡೂನ್‍‍ನಲ್ಲಿರುವ ಆರ್.ಟಿ.ಓನಲ್ಲಿ ಹೆಚ್‍ಎ‍ಎಂ‍‍ಎಸ್ ಹೊಂದಿರುವ ಆಟೋಮ್ಯಾಟೆಡ್ ಲೈಸೆನ್ಸ್ ಟೆಸ್ಟ್ ತೆಗೆದುಕೊಳ್ಳಬಹುದು.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಲೈಸೆನ್ಸ್ ಟೆಸ್ಟ್ ಗಾಗಿ ಹೊಸ ವಿಧಾನ ತಂದ ಮೈಕ್ರೊಸಾಫ್ಟ್

ಈ ಟೆಸ್ಟ್ ಕಠಿಣವಾಗಿರುವ ಕಾರಣಕ್ಕೆ ಟೆಸ್ಟ್ ತೆಗೆದುಕೊಳ್ಳುವವರಲ್ಲಿ ಕೇವಲ 50%ನಷ್ಟು ಜನರು ಮಾತ್ರ ಉತ್ತೀರ್ಣರಾಗುತ್ತಿದ್ದಾರೆ. ಈ ಮೂಲಕ ಅರ್ಹ ಚಾಲಕರಿಗೆ ಮಾತ್ರ ಚಾಲನಾ ಪರವಾನಗಿ ನೀಡಲಾಗುತ್ತದೆ ಎಂದು ಹೇಳಿದರು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಲೈಸೆನ್ಸ್ ಟೆಸ್ಟ್ ಗಾಗಿ ಹೊಸ ವಿಧಾನ ತಂದ ಮೈಕ್ರೊಸಾಫ್ಟ್

ಡ್ರೈವರ್ ಲೈಸೆನ್ಸ್ ಟೆಸ್ಟ್ ಭಾರತದಲ್ಲಿರುವ ಒಂದು ದೊಡ್ಡ ಸಮಸ್ಯೆಯಾಗಿದೆ. ಸೇವ್ ಲೈಫ್ ಫೌಂಡೇಶನ್ ಭಾರತದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ 59% ಚಾಲಕರು ಟೆಸ್ಟ್ ಎದುರಿಸದೇ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾರೆ.

ಲೈಸೆನ್ಸ್ ಟೆಸ್ಟ್ ಗಾಗಿ ಹೊಸ ವಿಧಾನ ತಂದ ಮೈಕ್ರೊಸಾಫ್ಟ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೆಚ್‍ಎ‍ಎಂ‍‍ಎಸ್ ಒಂದು ಆಸಕ್ತಿಕರ ತಂತ್ರಜ್ಞಾನವಾಗಿದೆ. ಭಾರತದಲ್ಲಿರುವ ಬಹುತೇಕ ಎಲ್ಲಾ ಆರ್‌ಟಿಒಗಳು ಭ್ರಷ್ಟಚಾರದಿಂದ ಕೂಡಿವೆ. ಆದ ಕಾರಣ ಭಾರತದಂತಹ ದೇಶಕ್ಕೆ ಹೆಚ್‍ಎ‍ಎಂ‍‍ಎಸ್‍‍ನಂತಹ ಹೆಚ್ಚಿನ ವಿಷಯಗಳು ಬೇಕಾಗುತ್ತವೆ. ಈ ತಂತ್ರಜ್ಞಾನದ ಮೂಲಕ ಟೆಸ್ಟ್ ನಡೆದ ನಂತರ ಗುಣಮಟ್ಟದ ಡ್ರೈವರ್‍‍ಗಳು ಲೈಸೆನ್ಸ್ ಪಡೆಯಲಿದ್ದಾರೆ. ಈ ತಂತ್ರಜ್ಞಾನವು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡೋಣ.

Most Read Articles

Kannada
English summary
Microsoft HAMS Tech Automates Driver License Tests In India - Read in Kannada
Story first published: Thursday, October 31, 2019, 16:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X