ಬಿಲ್ಡಪ್ ಕೊಡಲು ಹೋಗಿ ಲಾಕಪ್ ಸೇರಿದ ನೌಕಾ ಪಡೆ ಮಾಜಿ ಅಧಿಕಾರಿ..!

ಐಷಾರಾಮಿ ಕಾರ್ ಅನ್ನು ಹೊಂದುವುದು ಹಾಗೂ ಅದನ್ನು ಚಾಲನೆ ಮಾಡಬೇಕೆನ್ನುವುದು ಅನೇಕರ ಕನಸು. ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಜ್, ಹಾಗೂ ಆಡಿಯಂತಹ ಐಷಾರಾಮಿ ಕಾರುಗಳನ್ನು ಖರೀದಿಸುವ ಅದೃಷ್ಟ ಕೆಲವರಿಗೆ ಮಾತ್ರ ಸಿಗುವುದರಿಂದ ಎಲ್ಲರ ಕನಸು ನನಸಾಗುವುದಿಲ್ಲ.

ಬಿಲ್ಡಪ್ ಕೊಡಲು ಹೋಗಿ ಲಾಕಪ್ ಸೇರಿದ ನೌಕಾ ಪಡೆ ಮಾಜಿ ಅಧಿಕಾರಿ..!

ಐಷಾರಾಮಿ ಕಾರು ಖರೀದಿಸುವ ಕನಸನ್ನುನನಸಾಗಿಸಲು ಕೆಲವರು ತಮ್ಮ ಶ್ರಮವನ್ನೆಲ್ಲಾ ಹಾಕುತ್ತಾರೆ. ಇನ್ನು ಕೆಲವರು ಭರತ್ ಸಿಂಗ್ ಅವರಂತೆ ಸ್ಕೆಚ್ ಹಾಕುತ್ತಾರೆ. ಭರತ್ ಸಿಂಗ್ ಒಬ್ಬ ಮಾಜಿ ನೌಕಾಪಡೆಯ ಸಿಬ್ಬಂದಿಯಾಗಿದ್ದು, ಐಷಾರಾಮಿ ಕಾರುಗಳ ಬಗ್ಗೆ ಒಲವು ಹೊಂದಿದ್ದರು.

ಬಿಲ್ಡಪ್ ಕೊಡಲು ಹೋಗಿ ಲಾಕಪ್ ಸೇರಿದ ನೌಕಾ ಪಡೆ ಮಾಜಿ ಅಧಿಕಾರಿ..!

ಈ ಕಾರುಗಳನ್ನು ತಮ್ಮ ಸ್ವಂತ ಊರಿನಲ್ಲಿ ಓಡಿಸಿ ಪರಿಚಿತರ ಮುಂದೆ ಬಿಲ್ಡಪ್ ಕೊಡಲು ಬಯಸಿದ್ದರು. ಅದಕ್ಕಾಗಿ ಅವರು ಬಿಎಂಡಬ್ಲ್ಯು ಎಕ್ಸ್ 5 ಕದಿಯಲು ಸ್ಕೆಚ್ ಹಾಕಿದರು. ಪೊಲೀಸರಿಗೆ ಸಿಕ್ಕಿ ಬೀಳುವವರೆಗೂ ಆ ಕಾರ್ ಅನ್ನು ಚಲಾಯಿಸುತ್ತಲೇ ಇದ್ದರು. ಭರತ್ ಸಿಂಗ್ ಸಿಕ್ಕಿ ಬಿದ್ದ ನಂತರ ತಮ್ಮ ಕೃತ್ಯವನ್ನು ವಿವರಿಸುತ್ತಿರುವುದನ್ನು ಕ್ರೈಮ್ ತಕ್ ವೀಡಿಯೊ ಬಿಡುಗಡೆಗೊಳಿಸಿದೆ.

ಬಿಲ್ಡಪ್ ಕೊಡಲು ಹೋಗಿ ಲಾಕಪ್ ಸೇರಿದ ನೌಕಾ ಪಡೆ ಮಾಜಿ ಅಧಿಕಾರಿ..!

ಭರತ್ ಸಿಂಗ್ ಅವರು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯಾಗಿದ್ದು, ಅವರು ಸೇವೆಯಲ್ಲಿದ್ದಾಗ ಸಣ್ಣ ಹುದ್ದೆಯಲ್ಲಿದ್ದರು. ಅವರು ಕದ್ದ ಬಿಎಂಡಬ್ಲ್ಯು ಎಕ್ಸ್ 5 ಎಸ್‌ಯುವಿ ದಕ್ಷಿಣ ದೆಹಲಿಯ ಮಹಿಪಾಲ್‌ಪುರದ ಉದ್ಯಮಿಯೊಬ್ಬರ ಹೆಸರಿನಲ್ಲಿದೆ.

ಬಿಲ್ಡಪ್ ಕೊಡಲು ಹೋಗಿ ಲಾಕಪ್ ಸೇರಿದ ನೌಕಾ ಪಡೆ ಮಾಜಿ ಅಧಿಕಾರಿ..!

ಭರತ್ ಸಿಂಗ್ ಅವರ ಕಳವು ವಿಧಾನದ ಬಗ್ಗೆ ಹೇಳುವುದಾದರೆ, ಅವರು ಪೊಲೀಸರಂತೆ ಪೋಸ್ ನೀಡುತ್ತಿದ್ದರು. ಕಾರುಗಳನ್ನು ಕದಿಯಲು ಖಾಕಿ ಯೂನಿಫಾರಂ ಧರಿಸುತ್ತಿದ್ದರು. ಈ ಹಿಂದೆ ಲಿಫ್ಟ್‌ಗಳನ್ನು ಕೇಳುವ ನೆಪದಲ್ಲಿ ಕಾರು ಕದಿಯಲು ಯತ್ನಿಸಿದ ಕಾರಣಕ್ಕಾಗಿ ಆತನನ್ನು ಬಂಧಿಸಲಾಗಿತ್ತು.

ಬಿಲ್ಡಪ್ ಕೊಡಲು ಹೋಗಿ ಲಾಕಪ್ ಸೇರಿದ ನೌಕಾ ಪಡೆ ಮಾಜಿ ಅಧಿಕಾರಿ..!

ಆದರೆ ಆ ಯೋಜನೆಯು ವಿಫಲವಾದಾಗ, ಪೊಲೀಸ್ ಯೂನಿಫಾರಂ ಧರಿಸಿ ಕಾರು ಕದಿಯಲು ಯೋಜಿಸಿದರು. ಪೊಲೀಸ್ ಸಮವಸ್ತ್ರ ಧರಿಸಿ ತನ್ನ ಮಾಲೀಕನನ್ನು ಏರ್‍‍ಪೋರ್ಟಿಗೆ ಡ್ರಾಪ್ ಮಾಡಲು ಬಂದಿದ್ದ ಬಿಎಂಡಬ್ಲ್ಯು ಎಕ್ಸ್ 5 ಎಸ್‌ಯುವಿಯ ಚಾಲಕನ ಬಳಿ ಲಿಫ್ಟ್ ಕೇಳಿದ್ದಾರೆ.

ಬಿಲ್ಡಪ್ ಕೊಡಲು ಹೋಗಿ ಲಾಕಪ್ ಸೇರಿದ ನೌಕಾ ಪಡೆ ಮಾಜಿ ಅಧಿಕಾರಿ..!

ಆ ಚಾಲಕನು ಭರತ್‌ರವರಿಗೆ ಲಿಫ್ಟ್ ನೀಡಲು ಒಪ್ಪಿದ್ದಾನೆ. ಆದರೆ ಕಾರು ಹತ್ತಿದ ನಂತರ ಭರತ್ ಆ ಚಾಲಕನ ಕುತ್ತಿಗೆಗೆ ಚಾಕು ಹಿಡಿದಿದ್ದಾರೆ. ಚಾಲಕನನ್ನು ಕೊಲ್ಲುವುದಾಗಿ ಬೆದರಿಸಿ, ಕಾರಿನಿಂದ ಚಾಲಕನನ್ನು ಇಳಿಸಿ ಎಸ್‍‍ಯುವಿಯೊಂದಿಗೆ ಪರಾರಿಯಾಗಿದ್ದಾರೆ.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಬಿಲ್ಡಪ್ ಕೊಡಲು ಹೋಗಿ ಲಾಕಪ್ ಸೇರಿದ ನೌಕಾ ಪಡೆ ಮಾಜಿ ಅಧಿಕಾರಿ..!

ಎಫ್‌ಐಆರ್ ದಾಖಲಿಸಿದ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಟೋಲ್ ಜಂಕ್ಷನ್ ಬಳಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಕಾರಿನಿಂದ ಹೊರಹಾಕಲ್ಪಟ್ಟಾಗ ಚಾಲಕನು ಕೀಫೊಬ್ ಅನ್ನು ತನ್ನೊಂದಿಗೆ ತೆಗೆದುಕೊಂಡಿದ್ದನು.

MOST READ: ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ಬಿಲ್ಡಪ್ ಕೊಡಲು ಹೋಗಿ ಲಾಕಪ್ ಸೇರಿದ ನೌಕಾ ಪಡೆ ಮಾಜಿ ಅಧಿಕಾರಿ..!

ಎಸ್‍‍ಯುವಿ ಇಗ್ನಿಷನ್ ಆಫ್ ಆಗಿದ್ದರಿಂದ, ಭರತ್‍‍ರವರಿಗೆ ಅದನ್ನು ಚಾಲನೆ ಮಾಡಲು ಸಾಧ್ಯವಾಗಿಲ್ಲ. ಕೀಲೆಸ್ ಇಗ್ನಿಷನ್ ಹೊಂದಿರುವ ಕಾರುಗಳಲ್ಲಿ, ಇಗ್ನಿಷನ್ ಕೇಬಲ್‌ಗಳನ್ನು ಹಾಗೂ ಅದಕ್ಕೆ ಸಂಬಂಧಪಟ್ಟ ತಾಂತ್ರಿಕ ಸಂಗತಿಗಳನ್ನು ಮ್ಯಾನುವಲ್ ಆಗಿ ಹೇಗೆ ಕನೆಕ್ಟ್ ಮಾಡಬೇಕೆಂದು ತಿಳಿಯದಿದ್ದರೆ ಕೀಫೊಬ್ ಇಲ್ಲದೆ ಕಾರನ್ನು ಸ್ಟಾರ್ಟ್ ಮಾಡಲು ಆಗುವುದಿಲ್ಲ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಭರತ್‍‍ರವರು ಆ ಎಸ್‍‍ಯುವಿಯನ್ನು ತಮ್ಮ ಹಳ್ಳಿಗೆ ತೆಗೆದುಕೊಂಡು ಹೋಗಿ ಅದನ್ನು ತಮ್ಮ ರಕ್ತಸಂಬಂಧಿಗಳ ಮುಂದೆ ಹಾಗೂ ಬೇರೆ ಜನಗಳ ಮುಂದೆ ಬಿಲ್ಡ್ ಅಪ್ ಕೊಡಬೇಕೆಂದಿದ್ದರು. ಅದಾದ ನಂತರ ಆ ಕಾರ್ ಅನ್ನು ಕೆಲವು ದಿನ ಚಲಾಯಿಸಿ, ಅದನ್ನು ಕದ್ದ ಸ್ಥಳದಲ್ಲಿಯೇ ನಿಲ್ಲಿಸುವ ಯೋಜನೆಯನ್ನು ಹೊಂದಿದ್ದರು.

ಬಿಲ್ಡಪ್ ಕೊಡಲು ಹೋಗಿ ಲಾಕಪ್ ಸೇರಿದ ನೌಕಾ ಪಡೆ ಮಾಜಿ ಅಧಿಕಾರಿ..!

ಬಿಎಂಡಬ್ಲ್ಯು ಎಕ್ಸ್ 5 ಗಮನ ಸೆಳೆಯುವ ಎಸ್‍‍ಯುವಿಯಾಗಿದ್ದು, ಬಹಳಷ್ಟು ಜನ ಅದನ್ನು ಖರೀದಿಸಲು ಹಾಗೂ ಅದನ್ನು ಚಲಾಯಿಸಲು ಬಯಸುತ್ತಾರೆ. ಅಂತಹ ವರ್ತನೆಗಳಿಗೆ ಆಸ್ಪದ ನೀಡುವುದರಿಂದ ತೊಂದರೆಗೆ ಸಿಲುಕ ಬೇಕಾಗುತ್ತದೆ. ಬಿಎಂಡಬ್ಲ್ಯು ಎಕ್ಸ್ 5 ನಂತಹ ಟಾಪ್ ಎಂಡ್ ಕಾರುಗಳಲ್ಲಿ ಥೆಪ್ಟ್ ರಿಕವರಿ ಸಿಸ್ಟಂಗಳನ್ನು ಅಳವಡಿಸಲಾಗಿರುತ್ತದೆ.

ಬಿಲ್ಡಪ್ ಕೊಡಲು ಹೋಗಿ ಲಾಕಪ್ ಸೇರಿದ ನೌಕಾ ಪಡೆ ಮಾಜಿ ಅಧಿಕಾರಿ..!

ಕೆಲವು ಕಂಪನಿಗಳು ಇವುಗಳನ್ನು ಹೆಚ್ಚುವರಿಯಾಗಿ ನೀಡುತ್ತವೆ. ಈ ಸಿಸ್ಟಂನಿಂದಾಗಿ ಕಾರಿನಲ್ಲಿರುವ ಕಂಪ್ಯೂಟರ್ ಹಾಗೂ ಜಿಪಿಎಸ್ ಸಿಸ್ಟಂ ಮೂಲಕ ಕಾರಿರುವ ಸ್ಥಳವನ್ನು ಪತ್ತೆಹಚ್ಚಬಹುದಾಗಿದೆ. ಸಾಮಾನ್ಯ ಕಾರುಗಳಲ್ಲಿಯೂ ಸಹ ಆಫ್ಟರ್ ಮಾರ್ಕೆಟ್ ಯಾಂಟಿ ಥೆಫ್ಟ್ ಸಿಸ್ಟಂಗಳನ್ನು ಅಳವಡಿಸಿಕೊಳ್ಳಬಹುದು. ಇವುಗಳು ಸಾಕಷ್ಟು ಪರಿಣಾಮಕಾರಿಯಾಗಿರುತ್ತವೆ.

Image Courtesy: Crime Tak/YouTube

Article Published On: Wednesday, October 30, 2019, 12:33 [IST]
English summary
Ex navy personnel drives off in bmw x5 dressed like a policeman - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+