ಫಾಸ್ಟ್‌ಟ್ಯಾಗ್ ಕಡ್ಡಾಯ ಜಾರಿಗೆ ಹೊಸ ಉಪಾಯ- ಟೋಲ್ ನಿಲ್ಲಿಸಲು ಸಾಧ್ಯವೇ ಇಲ್ಲವೆಂದ ಸಚಿವ ಗಡ್ಕರಿ..!
ಕಳೆದ ವರ್ಷವೇ ದೇಶಾದ್ಯಂತ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಜಾರಿಗೆ ತಂದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಸಂಗ್ರಹವನ್ನು ಸುಲಭವಾಗಿಸಿದ್ದು, ಪ್ರತಿ ವಾಹನಗಳಿಗೂ ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಹೊಂದುವಂತೆ ಹೊಸ ನಿಯಮವನ್ನು ಜಾರಿಗೆ ತಂದಿತ್ತು. ಹೊಸ ಸೌಲಭ್ಯದ ಕುರಿತಾದ ಮಾಹಿತಿ ಕೊರತೆಯಿಂದಾಗಿ ಮಹತ್ವದ ಯೋಜನೆಗೆ ಹಿನ್ನಡೆಯಾಗಿದ್ದು, ಬಹುತೇಕ ವಾಹನಗಳಲ್ಲಿ ಇದುವರೆಗೂ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಡ್ಡಾಯಕ್ಕಾಗಿ ಈ ಹಿಂದೆ ಜಾರಿ ತರಲಾಗಿದ್ದ ನಿಯಮಗಳಲ್ಲಿ ಇದೀಗ ಕೆಲವು ಬದಲಾವಣೆಗಳನ್ನು ತಂದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮತ್ತೊಮ್ಮೆ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಡ್ಡಾಯವಾಗಿ ಜಾರಿಗೆ ತರಲು ಮುಂದಾಗಿದ್ದು, ಮುಂದಿನ ನವೆಂಬರ್‌ನಲ್ಲಿ ಹೊಸ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ಪೂರಕವಾದ ಅಂಶಗಳ ಮೇಲೆ ಗಮನಹರಿಸಲು ನಿರ್ಧರಿಸಿದೆ.
ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ನಿತಿನ ಗಡ್ಕರಿಯವರು ಮುಂದಿನ ನಾಲ್ಕು ತಿಂಗಳಿನಲ್ಲಿ ಪ್ರತಿಯೊಂದು ವಾಹನದಲ್ಲೂ ಫಾಸ್ಟ್‌ಟ್ಯಾಗ್ ಸೌಲಭ್ಯ ಜಾರಿಗೆ ಬರಲಿದ್ದು, ಹೆದ್ದಾರಿಗಳಲ್ಲಿ ಟೋಲ್ ಪಾವತಿ ಸಂದರ್ಭದಲ್ಲಿ ಆಗುತ್ತಿರುವ ಸಮಯ ವ್ಯರ್ಥವನ್ನು ತಗ್ಗಿಸಲು ಇದು ನೆರವಾಗಲಿದೆ ಎಂದಿದ್ದಾರೆ.

ಜೊತೆಗೆ ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಸಂಗ್ರಹಿಸಲು ಸಾಧ್ಯವಾಗುವಂತೆ ಸದ್ಯ ಕಾರ್ಯನಿರ್ವಹಣೆಯಲ್ಲಿರುವ ಫಾಸ್ಟ್‌ಟ್ಯಾಗ್ ಟೋಲ್ ಬೂತ್‌ಗಳ ಸಂಖ್ಯೆಯನ್ನು ಶೇ.80ರಷ್ಟು ಹೆಚ್ಚಿಸಲು ಈಗಾಗಲೇ ಚಾಲನೆ ನೀಡಿರುವುದಾಗಿ ತಿಳಿಸಿರುವ ನಿತಿನ್ ಗಡ್ಕರಿಯವರು, ಶಾಲಾ ವಾಹನಗಳು ಮತ್ತು ರಾಜ್ಯ ಸಾರಿಗೆ ಬಸ್‌ಗಳ ಮೇಲಿನ ಟೋಲ್ ದರದಲ್ಲಿ ವಿನಾಯ್ತಿ ನೀಡುವ ಕುರಿತು ಚರ್ಚಿಸಿವುದಾಗಿ ಹೇಳಿದ್ದಾರೆ.

ಹಾಗೆಯೇ ಟೋಲ್ ವಸೂಲಿಗೆ ಕೊನೆ ಯಾವಾಗ? ಎನ್ನುವ ಪ್ರಶ್ನೆಗೆ ಉತ್ತರಿಸಿರುವ ನಿತಿನ್ ಗಡ್ಕರಿ ಅವರು, ಅದು ಮುಗಿದ ಅಧ್ಯಾಯ ಎಂದು ಸ್ಪಷ್ಟಪಡಿಸಿದ್ದಾರೆ. ಉತ್ತಮ ರಸ್ತೆಗಳು ಬೇಕಿದ್ದರೆ ವಾಹನ ಸವಾರರು ಟೋಲ್ ಪಾವತಿ ಮಾಡಲೇಬೇಕು ಎಂದಿರುವ ಅವರು, ಟೋಲ್ ಈಸ್ ಮೈ ಬ್ರೇನ್ ಚೈಲ್ಡ್, ಸುಂಕ ವಸೂಲಾತಿಯನ್ನು ತಡೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಇದರೊಂದಿಗೆ ಟೋಲ್ ದರಗಳಲ್ಲಿ ಇಳಿಕೆ ಮಾಡಬಹುದು ಅಥವಾ ಏರಿಕೆ ಮಾಡಬಹುದೇ ಹೊರತು ಟೋಲ್ ವ್ಯವಸ್ಥೆಯನ್ನೇ ನಿಲ್ಲಿಸಲು ಸಾಧ್ಯವಿಲ್ಲ ಎಂದಿರುವ ನಿತಿನ್ ಗಡ್ಕರಿಯವರು, ದೇಶಾದ್ಯಂತ ದಿನನಿತ್ಯ ಸಂಗ್ರಹಿಸಲಾಗುವ ಟೋಲ್ ಹಣದಿಂದಲೇ ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಬರೋಬ್ಬರಿ 40 ಸಾವಿರ ಕಿಲೋ ಮೀಟರ್ನಷ್ಟು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ನಿರ್ಮಿಸಲು ಸಾಧ್ಯವಾಗಿದೆ ಎಂದಿದ್ದಾರೆ.

ಹೀಗಾಗಿ ಟೋಲ್ ಸಂಗ್ರಹವನ್ನು ಮತ್ತಷ್ಟು ಸ್ಮಾರ್ಟ್ ಆಗಿಸುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಲಾಗುತ್ತಿದ್ದು, ಫಾಸ್ಟ್‌ಟ್ಯಾಗ್ ಸೌಲಭ್ಯವು ವಾಹನ ಸವಾರರಿಗೆ ಟೋಲ್ ಪಾವತಿಯ ಕಿರಿಕಿರಿಯನ್ನು ತಪ್ಪಿಸಲಿದೆ ಎಂದಿದ್ದಾರೆ.

ಹೆದ್ದಾರಿಗಳಲ್ಲಿ ಕ್ಯೂ ನಿಂತು ಟೋಲ್ ಕಟ್ಟುವ ತಾಪತ್ರಯವನ್ನು ತಪ್ಪಿಸುವ ಉದ್ದೇಶದಿಂದ ಕಡ್ಡಾಯವಾಗಿ ಜಾರಿಗೆ ತರಲಾಗಿರುವ ಫಾಸ್ಟ್‌ಟ್ಯಾಗ್ ಸೌಲಭ್ಯದಿಂದಾಗಿ ವಾಹನ ಸವಾರರಿಗೆ ಸಾಕಷ್ಟು ಅನುಕೂಲತೆಗಳಿದ್ದು, ಫಾಸ್ಟ್‌ಟ್ಯಾಗ್ ಖರೀದಿಸಲೂ ಗ್ರಾಹಕರಿಗೆ ಸುಲಭವಾಗುವಂತೆ ಅಮೆಜಾನ್ ಡಾಟ್ ಕಾಮ್‌ನಲ್ಲೂ ಸಹ ಇದೀಗ ಹೊಸ ಶುಲ್ಕು ಪಾವತಿ ವಿಧಾನವನ್ನು ತೆರಿದಿದೆ.

ಫಾಸ್ಟ್ ಟ್ಯಾಗ್‌ಗಳಿಗೆ ಮೊಬೈಲ್ ಮಾದರಿಯಲ್ಲೇ ಕರೆನ್ಸಿ ಹಾಕಿಸಿಕೊಳ್ಳುವ ಮೂಲಕ ಟೋಲ್ ಪಾವತಿ ಮಾಡುವ ಒಂದು ವಿಧಾನವಾಗಿದ್ದು, ಹೊಸ ವ್ಯವಸ್ಥೆಯಿಂದ ಹಲವಾರು ಲಾಭಗಳಿವೆ. ಇಂಧನ ಮತ್ತು ಸಮಯ ಉಳಿಸುವ ಉದ್ದೇಶದೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 'ಫಾಸ್ಟ್‌ಟ್ಯಾಗ್' ಎಂಬ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು 2016ರ ಎಪ್ರಿಲ್‌ನಲ್ಲಿ ಜಾರಿಗೆ ತಂದಿದೆ.

ಎಲ್ಲೆಲ್ಲಿ ಫಾಸ್ಟ್‌ಟ್ಯಾಗ್ ಖರೀದಿಗೆ ಲಭ್ಯ?
ಟೋಲ್ ಪ್ಲಾಜ್‌ಗಳಲ್ಲೇ ಫಾಸ್ಟ್ ಟ್ಯಾಗ್ ಖರೀದಿ ಮಾಡಬಹುದಾಗಿದ್ದು, ಇಲ್ಲವೇ ಫಾಸ್ಟ್ ಟ್ಯಾಗ್ ಮಾರಾಟ ಮಾಡುವ ಖಾಸಗಿ ಏಜೆನ್ಸಿಗಳಿಂದಲೂ ಖರೀದಿ ಮಾಡಬಹುದು. ಜೊತೆಗೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗಳಲ್ಲೂ ಫಾಸ್ಟ್‌ಟ್ಯಾಗ್ ವಿತರಣೆಗೆ ಅವಕಾಶ ಕಲ್ಪಿಸಲಾಗಿದ್ದು, ಇದೀಗ ಅಮೆಜಾನ್ ಡಾಟ್ ಕಾಮ್ ಮೂಲಕ ಫಾಸ್ಟ್‌ಟ್ಯಾಗ್ ಪಡೆಯಬಹುದಾಗಿದೆ.

ಫಾಸ್ಟ್ ಟ್ಯಾಗ್‌ನಿಂದ ಏನು ಪ್ರಯೋಜನ?
ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಫಾಸ್ಟ್‌ಟ್ಯಾಗ್ ಹೊಂದಿದ್ದರೆ ಹಲವು ಪ್ರಯೋಜನಗಳಿದ್ದು, ಸುಲಭವಾಗಿ ಟೋಲ್ ಶುಲ್ಕ ಪಾವತಿ ಮಾಡಬಹುದಲ್ಲದೇ ಆನ್‌ಲೈನ್ ರೀಚಾರ್ಜಿಂಗ್, ಎಸ್ಎಂಎಸ್ ಅಲರ್ಟ್ ಸೌಲಭ್ಯವಿರುತ್ತದೆ. ಇದರಿಂದ ನಿಮ್ಮ ಫಾಸ್ಟ್‌ಟ್ಯಾಗ್‌ನಲ್ಲಿರುವ ಮೊತ್ತ ಮತ್ತು ನೀವು ಹೊರಟಿರುವ ಸ್ಥಳಗಳಲ್ಲಿನ ಟೋಲ್ ಸಂಗ್ರಹ ಕೇಂದ್ರಗಳ ಮಾಹಿತಿ ಜೊತೆ ಶುಲ್ಕುಗಳ ಮಾಹಿತಿ ಸಂದೇಶಗಳನ್ನು ಪಡೆಯಬಹುದಾಗಿದ್ದು, ವಿಶೇಷ ಸಂದರ್ಭಗಳಲ್ಲಿ ನೀವು ಕ್ಯಾಶ್ ಬ್ಯಾಕ್ ಆಫರ್‌ಗಳನ್ನು ಸಹ ಪಡೆಯುವ ಅವಕಾಶವಿರುತ್ತೆ.

ಫಾಸ್ಟ್‌ಟ್ಯಾಗ್ ರೀಚಾರ್ಜ್ ಹೇಗೆ?
ಕ್ರೇಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಕಿಂಗ್ ಇಲ್ಲವೇ ಚೆಕ್ ಪಾವತಿಸಿಯೂ ರೀಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಕನಿಷ್ಠ ರೂ.100 ರಿಂದ ಗರಿಷ್ಠ 1 ಲಕ್ಷ ತನಕ ರೀಚಾರ್ಜ್ ಮಿತಿ ಹೊಂದಿರುತ್ತೆ.

ಫ್ಯಾಸ್ಟ್ ಟ್ಯಾಗ್ ಹೇಗೆ ಕಾರ್ಯನಿರ್ವಹಿಸುತ್ತೆ?
ಆರ್‌ಎಫ್ಐಡಿ ಎನ್ನುವ ತಂತ್ರಜ್ಞಾನ ಸಹಾಯದೊಂದಿಗೆ ಕಾರ್ಯನಿರ್ವಹಿಸುವ ಫಾಸ್ಟ್ ಟ್ಯಾಗ್‌ಗಳು ಕಾರಿನ ವಿಂಡ್‌ಸ್ಕೀನ್ ಬಳಿ ಅಳವಡಿಸಲಾಗಿರುತ್ತದೆ. ಇದು ಟೋಲ್ ಪ್ಲಾಜ್‌ದಲ್ಲಿರುವ ಫಾಸ್ಟ್ ಟ್ಯಾಗ್ ಲೈನ್ ಮೂಲಕ ಹಾಯ್ದುಹೋಗುವಾಗ ಆಟೋಮ್ಯಾಟಿಕ್ ಆಗಿ ನಿಮ್ಮ ಫಾಸ್ಟ್ ಟ್ಯಾಗ್ ಅಕೌಂಟ್‌ನಿಂದ ಶುಲ್ಕ ಸಂದಾಯವಾಗುತ್ತೆ. ಶುಲ್ಕ ಸಂದಾಯವಾದ ಕೆಲವೇ ಸೇಕೆಂಡುಗಳಲ್ಲಿ ಶುಲ್ಕ ಪಾವತಿಯಾದ ಸಂದೇಶವು ನಿಮ್ಮ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಬರಲಿದ್ದು, ಟ್ರೋಲ್ ಪ್ಲಾಜಾ ಮಾಹಿತಿ ಮತ್ತು ಕಡಿತವಾದ ಶುಲ್ಕದ ಮೊತ್ತ ಮತ್ತು ಉಳಿದ ಕರೆನ್ಸಿ ಮಾಹಿತಿಯು ನಿಮಗೆ ಲಭ್ಯವಾಗಲಿದೆ.

ಇದಕ್ಕಾಗಿಯೇ ಫಾಸ್ಟ್ ಟ್ಯಾಗ್ ಆಪ್ ಕೂಡಾ ಲಭ್ಯವಿದ್ದು, ಈ ಮೂಲಕವು ನೀವು ಮತ್ತಷ್ಟು ಮಾಹಿತಿ ಪಡೆಯಬಹದು. ಫಾಸ್ಟ್ ಟ್ಯಾಗ್ ನೋಂದಣಿ ಮಾಡುವಾಗ ಆ್ಯಪ್‌ಗೆ ಸಂಬಂಧಿಸಿ ನಿಮಗೆ ಕೆಲವು ಪಾಸ್‌ವರ್ಡ್ ನೀಡಲಾಗುತ್ತೆ. ಆ್ಯಪ್ ಬಳಸುವಾಗ ನೀವು ನಿಮ್ಮ ಪರ್ಸನಲ್ ಪಾಸ್‌ವರ್ಡ್ ಬಳಕೆ ಮಾಡಬೇಕಾಗುತ್ತೆ. ಯಾಕೆಂದ್ರೆ ವ್ಯಯಕ್ತಿಕ ಮಾಹಿತಿ ಇದಲ್ಲಿರುತ್ತದೆ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಒಂದು ಫಾಸ್ಟ್ ಟ್ಯಾಗ್ ಅನ್ನು ಮತ್ತೊಂದು ವಾಹನಕ್ಕೆ ಬಳಕೆ ಮಾಡಲು ಯಾವುದೇ ಅವಕಾಶವಿಲ್ಲ. ಹೀಗಾಗಿ ಫಾಸ್ಟ್ ಟ್ಯಾಗ್ ಬೇಡ ಎನ್ನಿಸಿದಲ್ಲಿ ವಾಹನ ಮಾಲೀಕರು ಕಸ್ಟಮರ್ ಕೇರ್ ಮೂಲಕ ಬ್ಲ್ಯಾಕ್ ಕೂಡಾ ಮಾಡಬಹುದು.


Click it and Unblock the Notifications