2020ರಲ್ಲಿ ದೇಶಿಯ ಮಾರುಕಟ್ಟೆಗೆ ಬರಲಿದೆ ಫೆರಾರಿ ಎಫ್8 ಟ್ರಿಬ್ಯುಟೊ
ಇಟಾಲಿಯನ್ ಸೂಪರ್‍ಕಾರ್ ಉತ್ಪಾದನಾ ಸಂಸ್ಥೆಯಾದ ಫೆರಾರಿ ತನ್ನ ಬಹುನಿರೀಕ್ಷಿತ ಸೂಪರ್‍ಕಾರ್ ಎಫ್8 ಟ್ರಿಬ್ಯುಟೊ ಕಾರನ್ನು ಮುಂದಿನ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಫೆರಾರಿ ಎಫ್8 ಟ್ರಿಬ್ಯುಟೊ ಕಾರನ್ನು ಮೊದಲ ಬಾರಿಗೆ 2019ರ ಜಿನೀವಾ ಮೋಟಾರ್ ಶೋದಲ್ಲಿ ಪ್ರದರ್ಶಿಸಿದ್ದರು.

ಹೊಸ ಫೆರಾರಿ ಎಫ್8 ಟ್ರಿಬ್ಯುಟೊ ಕಾರು ದೇಶಿಯ ಮಾರುಕಟ್ಟೆಯಲ್ಲಿ 2020ರ ವೇಳೆಗೆ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೊಸ ಫೆರಾರಿ ಕಾರಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.02 ಕೋಟಿ ಯಾಗಿರಲಿದೆ. ಹೊಸ ಫೆರಾರಿ ಕಾರು ಜನಪ್ರಿಯ 488 ಜಿಟಿಬಿ ಮತ್ತು ಹೊಸ ಎಫ್8 ಟ್ರಿಬ್ಯುಟ್ ಕಾರು ವಿ8 ನಾನ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ.

ಫೆರಾರಿ ಎಫ್8 ಟ್ರಿಬ್ಯುಟೊ ಕಾರು 3.9 ಟ್ವಿನ್ ಟರ್ಬೊಜಾರ್ಜ್ಡ್ ವಿ8 ಎಂಜಿನ್ ಎಂಜಿನ್, 488ಜಿಟಿಬಿ ಹೊಂದಿರಲಿದೆ. ಎಂಜಿನ್ 720 ಬಿಎಚ್‍ಪಿ ಪವರ್ ಮತ್ತು 770 ಎನ್‍ಎಂ ಟಾರ್ಕ್ ಅನ್ನು ಉತ್ಪಾಸುತ್ತದೆ. ಎಂಜಿನ್‍ನೊಂದಿಗೆ 7-ಸ್ಫೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಜೋಡಿಸಿದೆ.

ಹೊಸ ಫೆರಾರಿ ಆಕರ್ಷಕ ಲುಕ್ ಅನ್ನು ಹೊಂದಿಕೊಂಡಿದೆ. ಈ ದುಬಾರಿ ಮತ್ತು ಐಷಾರಾಮಿ ಕಾರು ಮುಂದಿನ ವರ್ಷ ದೇಶಿಯ ಮಾರುಕಟ್ಟೆಗೆ ಬರಲಿದೆ. ಐಷಾರಾಮಿ ಕಾರು ಪ್ರೇಮಿಗಳಿಗೆ ಫೆರಾರಿ ಎಫ್8 ಟ್ರಿಬ್ಯುಟೊ ಬಿಡುಗಡೆಯೊಂದಿಗೆ ತಮ್ಮ ಆಯ್ಕೆ ಹೆಚ್ಚಾಗಲಿದೆ.

ಫೆರಾರಿ ಕಾರು 2.9 ಸಕೆಂಡ್‍ಗಳಲ್ಲಿ 100 ಕಿ.ಮೀ ಮತ್ತು 7.9 ಸೆಂಕೆಡ್‍ನಲ್ಲಿ 200 ಕಿ.ಮೀ ಮುಟ್ಟುತ್ತದೆ ಎಂದು ಕಂಪನಿ ಹೇಳಿ ಕೊಂಡಿದೆ. ಪ್ರತಿ ಗಂಟೆಗೆ 340 ಕಿ.ಮೀ ಟಾಪ್ ಸ್ಪೀಡ್ ನಲ್ಲಿ ಚಲಿಸಲಿದೆ. ಇದು ಮಿಡ್ ಎಂಜಿನ್ ಫೆರಾರಿ ಸೂಪಾರ್ ಕಾರ್ ಇದಾಗಿದೆ. ಎಫ್8 ಟ್ರಿಬ್ಯುಟೊ ಸೂಪರ್ ಕಾರು ಶೇ.15 ರಷ್ಟು ಹೆಚ್ಚಿನ ಡೌನ್‍ಫೋರ್ಸ್ ಅನ್ನು ಉತ್ಪಾದಿಸುತ್ತದೆ.

ಎಫ್8 ಟ್ರಿಬ್ಯುಟೊ ಕಾರು ತನ್ನದ ಶ್ರೇಣಿಯ 488ಜಿಟಿಬಿ ವಿನ್ಯಾಸದ ಶೈಲಿಯನ್ನು ಹೊಂದಿದೆ. ಕಾರಿನ ಹಿಂಭಾಗದಲ್ಲಿ ಎಸ್-ಡೆಸ್ಕ್, ರಿಫ್ರೆಶ್ ಹೆಡ್‍ಲೈನ್ ಮತ್ತು ಟೈಲ್ ಲೈಟ್ ಕ್ಲಸ್ಟರ್ ಮತ್ತು ಎಂಜಿನ್ ಕವರ್ ಒಳಗೊಂಡಿದೆ.

ಫೆರಾರಿ ಎಫ್8 ಟ್ರಿಬ್ಯುಟೊ ಕಾರಿನ ಇಂಟಿರಿಯರ್ 488ಜಿಟಿಬಿ ಕಾರಿನಂತೆ ಹೊಂದಿದೆ. ಈ ಹೊಸ ಕಾರು ಆಕರ್ಷಕ ಕ್ಯಾಬಿನ್ ಅನ್ನು ಹೊಂದಿದೆ. ಸ್ಪೋರ್ಟ್ಸ್ ಕಾರಿನ ಶೈಲಿಯಲ್ಲಿ ಸ್ವಿಚ್‍ಗೇರ್, ಡಿಜಿಟಲ್ ಡಿಸ್‍ಪ್ಲೆಯನ್ನು ಒಳಗೊಂಡಿದೆ.

ಫೆರಾರಿ ಎಫ್8 ಟ್ರಿಬ್ಯುಟೊ ಕಾರು ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕಾರಿನಲ್ಲಿ 7.0 ಟಚ್‍ಸ್ಕ್ರೀನ್ ಡಿಸ್‍ಪ್ಲೇಯನ್ನು ಹೊಂದಿದೆ. ಆಕರ್ಷಕ ಸ್ಟೀರಿಂಗ್ ವ್ಹೀಲ್, ಸಣ್ಣ ಪ್ರಮಾಣದ ಡೈಮೀಟರ್, ಹಿಂಭಾಗದಲ್ಲಿ ಲಾರ್ಚ್ ಪೆಡ್ಲ್ ಶ್ವಿಫ್ಟ್ ಅನ್ನು ಹೊಂದಿಕೊಂಡಿದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಫೆರಾರಿ ಎಫ್ 8 ಟ್ರಿಬ್ಯುಟೊ ಪ್ರಸ್ತುತ ಇಟಾಲಿಯನ್ ಬ್ರ್ಯಾಂಡ್‌ನಲ್ಲಿ ಅತಿ ಫಾಸ್ಟ್ ಟೆಸ್ಟ್ ಮಿಡ್-ಎಂಜಿನ್ ಸರಣಿ-ಉತ್ಪಾದನಾ ಸೂಪರ್ ಕಾರ್ ಆಗಿದೆ. ಬ್ರ್ಯಾಂಡ್‍ನಿಂದ ಹೈಬ್ರಿಡ್ ಅಲ್ಲದೆ ವಿ8-ಚಾಲಿತ ಸೂಪಾರ್‍ಕಾರುಗಳಲ್ಲಿ ಇದು ಕೊನೆಯದು ಎಂದು ಹೇಳಲಾಗುತ್ತದೆ. ಫೆರಾರಿ ಎಫ್ 8 ಟ್ರಿಬ್ಯುಟೊ 2020 ರ ಫೆಬ್ರವರಿಯಲ್ಲಿ ದೇಶಿಯ ಮಾರುಕಟ್ಟೆಗೆ ಪ್ರವೇಶಿಸಲಿದೆ.


Click it and Unblock the Notifications








