ಇಕೋಸ್ಪೋರ್ಟ್ ಸ್ಪೆಷಲ್ ಎಡಿಷನ್ ಬಿಡುಗಡೆಯ ಜೊತೆಗೆ ಬೆಲೆ ಇಳಿಕೆ ಮಾಡಿದ ಫೋರ್ಡ್
ಫೋಡ್ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಇಕೋಸ್ಪೋರ್ಟ್ ಕಾರಿನ ಕಾರಿನ ಬೆಲೆಯಲ್ಲಿ ಭರ್ಜರಿಯಾಗಿ ಇಳಿಕೆ ಮಾಡಿದ್ದು, ಕಾರು ಮಾರಾಟದಲ್ಲಿ ಹೊಸ ಅಲೆ ಎಬ್ಬಿಸಿರುವ ಹ್ಯುಂಡೈ ವೆನ್ಯೂ ಕಾರಿಗೆ ಪ್ರತಿಸ್ಪರ್ಧೆ ನೀಡುವ ಉದ್ದೇಶದಿಂದ ಇಕೋಸ್ಪೋರ್ಟ್ ಥಂಡರ್ ಎನ್ನುವ ಸ್ಪೆಷಲ್ ಎಡಿಷನ್ ಬಿಡುಗಡೆಗೊಳಿಸಿದೆ.

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹಿನ್ನೆಡೆ ಅನುಭವಿಸುತ್ತಿರುವ ಇಕೋಸ್ಪೋರ್ಟ್ ಮಾರಾಟದಲ್ಲಿ ಹೊಸ ಹುರುಪು ತುಂಬಲು ಮುಂದಾಗಿರುವ ಫೋರ್ಡ್ ಸಂಸ್ಥೆಯು ಬೆಲೆ ಇಳಿಕೆಯ ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯನ್ನು ನಿಗಿಸಲು ಇಕೋಸ್ಪೋರ್ಟ್ ಥಂಡರ್ ಎನ್ನುವ ಸ್ಪೆಷಲ್ ಎಡಿಷನ್ ಪರಿಚಯಿಸಿದೆ.

ಇಕೋಸ್ಪೋರ್ಟ್ ಥಂಡರ್ ಎಡಿಷನ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಮಾದರಿಯು ರೂ.10.18 ಲಕ್ಷಕ್ಕೆ ಮತ್ತು ಡಿಸೇಲ್ ಮಾದರಿಯು ರೂ.10.68 ಲಕ್ಷ ಬೆಲೆ ಹೊಂದಿದ್ದು, ಕಳೆದ ತಿಂಗಳ ಹಿಂದಷ್ಟೇ ಮಾರಾಟದಿಂದ ಸ್ಥಗಿತಗೊಳಿಸಲಾಗಿರುವ ಸಿಗ್ನೆಚೆರ್ ವೆರಿಯೆಂಟ್ ಸ್ಥಾನವನ್ನು ಥಂಡರ್ ಎಡಿಷನ್ ತುಂಬಲಿದೆ.

ಇನ್ನು ಇಕೋಸ್ಪೋರ್ಟ್ ಥಂಡರ್‌ಬರ್ಡ್ ಜೊತೆಗೆ ಇತರೆ ವೆರಿಯೆಂಟ್‌ಗಳ ಬೆಲೆಯಲ್ಲೂ ಬದಲಾಣೆಗೊಳಿಸಿರುವ ಫೋರ್ಡ್ ಸಂಸ್ಥೆಯು ಆರಂಭಿಕವಾಗಿ ರೂ.8 ಸಾವಿರದಿಂದ ಟಾಪ್ ಎಂಡ್ ಮಾದರಿಯ ಮೇಲೆ ರೂ. 57 ಸಾವಿರ ಬೆಲೆ ಕಡಿತ ಮಾಡಿದೆ.

ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿ ಇಕೋಸ್ಪೋರ್ಟ್ ಮಾದರಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.7.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಬೆಲೆಯು ರೂ. 11.90 ಲಕ್ಷಕ್ಕೆ ಖರೀದಿ ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇಕೋಸ್ಪೋರ್ಟ್ ಕಾರುಗಳು 13 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿವೆ.

ಇದರಲ್ಲಿ 6 ವೆರಿಯೆಂಟ್‌ಗಳು ಪೆಟ್ರೋಲ್ ಮಾದರಿಯಲ್ಲಿ ಮತ್ತು 7 ಮಾದರಿಗಳು ಡೀಸೆಲ್ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಥಂಡರ್‌ಬರ್ಡ್ ವೆರಿಯೆಂಟ್ ಕೂಡಾ ಎರಡು ಆವೃತ್ತಿಯಲ್ಲೂ ಖರೀದಿಸಬಹುದಾಗಿದೆ.

ಹೊಸ ಆವೃತ್ತಿಯ ಥಂಡರ್ ಎಡಿಷನ್ ಕಾರು ಈಗಿರುವ ಟೈಟಾನಿಯಂ ಮಾದರಿಗಿಂತ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯ ಹೊಂದಿದ್ದು, 1.5 ಲೀಟರ್ ಟಿಡಿಸಿಐ 4 ಸಿಲಿಂಡರ್ ಇನ್‍ಲೈನ್ ಡಿಒಹೆಚ್‍ಸಿ ಡೀಸೆಲ್ ಎಂಜಿನ್ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಬಿಡುಗಡೆಯಾದ ಇಕೋಸ್ಪೋರ್ಟ್ ಥಂಡರ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಣೆ ಮಾಡಲಾಗಿದ್ದು, ಹೆಡ್‌ಲ್ಯಾಂಪ್ ಕ್ಲಸ್ಟರ್, ಬ್ಲ್ಯಾಕ್ಡ್ ಔಟ್ ಫಾಗ್ ಲ್ಯಾಂಪ್ ಬಿಜೆಲ್ಸ್, ವಿಂಗ್ ಮಿರರ್, 17-ಇಂಚಿನ ಅಲಾಯ್ ವೀಲ್ಹ್, ಡ್ಯುಯಲ್ ಟೋನ್ ಬ್ಯಾನೆಟ್ ಸೌಲಭ್ಯ ಹೊಂದಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಒಟ್ಟಿನಲ್ಲಿ ವೆನ್ಯೂ ಮೂಲಕ ಕಾರು ಮಾರಾಟದಲ್ಲಿ ಹೊಸ ಅಲೆ ಸೃಷ್ಠಿಸಿರುವ ಹ್ಯುಂಡೈಗೆ ಪೈಪೋಟಿ ನೀಡುವ ಉದ್ದೇಶದಿಂದ ಬೆಲೆ ಕಡಿತದ ಜೊತೆಗೆ ಸ್ಪೆಷಲ್ ಎಡಿಷನ್ ಅಸ್ತ್ರ ಉಪಯೋಗಿಸಿರುವ ಫೋರ್ಡ್ ಸಂಸ್ಥೆಯು ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.


Click it and Unblock the Notifications