ಬೆಲೆ ಕಡಿತಕ್ಕಾಗಿ ಇಕೋಸ್ಪೋರ್ಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಕೈಬಿಟ್ಟ ಫೋರ್ಡ್..!

ಸದ್ಯ ಮಾರುಕಟ್ಟೆಯಲ್ಲಿ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ವಿಶೇಷ ಬೇಡಿಕೆ ಹರಿದುಬರುತ್ತಿದ್ದು, ವಾಹನ ಉತ್ಪಾದನಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯಲು ಅಗ್ಗದ ಬೆಲೆಗಳಲ್ಲಿ ಗರಿಷ್ಠ ಫೀಚರ್ಸ್ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಹೀಗಾಗಿ ಪ್ರತಿಸ್ಪರ್ಧಿ ಕಾರುಗಳಿಗೆ ಪೈಪೋಟಿಯಾಗಿ ಫೋರ್ಡ್ ಸಹ ತನ್ನ ಜನಪ್ರಿಯ ಇಕೋಸ್ಪೋರ್ಟ್ ಕಾರಿನ ಬೆಲೆ ಕಡಿತ ಮಾಡಿ ಗ್ರಾಹಕರನ್ನು ಸೆಳೆಯುತ್ತಿದ್ದು, ಈ ಹಿನ್ನಲೆ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಕೈಬಿಟ್ಟಿದೆ.

ಬೆಲೆ ಕಡಿತಕ್ಕಾಗಿ ಇಕೋಸ್ಪೋರ್ಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಕೈಬಿಟ್ಟ ಫೋರ್ಡ್..!

ಫೋರ್ಡ್ ಇಕೋಸ್ಪೋರ್ಟ್ ಕಾರಿಗೆ ಸದ್ಯ ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಟಾಟಾ ನೆಕ್ಸಾನ್ ಕಾರುಗಳು ತೀವ್ರ ಪೈಪೋಟಿ ನೀಡುತ್ತಿದ್ದು, ಕಳೆದ ತಿಂಗಳು ಬಿಡುಗಡೆಯಾದ ಹ್ಯುಂಡೈ ವೆನ್ಯೂ ಅಂತೂ ಇಕೋಸ್ಪೋರ್ಟ್ ಮಾರಾಟ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ. ಹೀಗಾಗಿ ನಿಗದಿತ ಮಟ್ಟದ ಗ್ರಾಹಕರನ್ನು ಸೆಳೆಯಲು ಹರಸಾಹಸಪಡುತ್ತಿರುವ ಫೋರ್ಡ್ ಸಂಸ್ಥೆಯು ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಅಗತ್ಯವಿರುವ ಫೀಚರ್ಸ್‌ಗಳನ್ನು ಮಾತ್ರ ಒದಗಿಸಲು ಮುಂದಾಗಿರುವ ಫೋರ್ಡ್ ಕೆಲವು ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕಡಿತ ಮಾಡಿ ಬೆಲೆ ಇಳಿಕೆ ಮಾಡುತ್ತಿದೆ.

ಬೆಲೆ ಕಡಿತಕ್ಕಾಗಿ ಇಕೋಸ್ಪೋರ್ಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಕೈಬಿಟ್ಟ ಫೋರ್ಡ್..!

ಮಾಹಿತಿಗಳ ಪ್ರಕಾರ, ಫೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ ಪ್ಲಸ್ ಆಟೋಮ್ಯಾಟಿಕ್ ವೆರಿಯೆಂಟ್‌ನಲ್ಲಿ SYnc3 ಇನ್ಪೋಟೈನ್‌ಮೆಂಟ್ ಸಿಸ್ಟಂ ಮತ್ತು ವಾಯ್ಸ್ ಕಮಾಂಡ್ ಸೌಲಭ್ಯಗಳನ್ನು ತೆಗೆದುಹಾಕಲಾಗಿದ್ದು, ಸಾಮಾನ್ಯ ಮಾದರಿಯ 9.0-ಇಂಚಿನ ಫ್ಲೈ ಆಡಿಯೋ ಇನ್ಪೋಟೈನ್‌ಮೆಂಟ್ ಯುನಿಟ್ ಜೋಡಿಸಲಾಗಿದೆಯೆಂತೆ.

ಬೆಲೆ ಕಡಿತಕ್ಕಾಗಿ ಇಕೋಸ್ಪೋರ್ಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಕೈಬಿಟ್ಟ ಫೋರ್ಡ್..!

ಅದಲ್ಲದೇ ಆಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಸೌಲಭ್ಯಗಳನ್ನು ಸಹ ಕೈಬಿಡಲಾಗಿದ್ದು, SYnc3 ಇನ್ಪೋಟೈನ್‌ಮೆಂಟ್ ಸಿಸ್ಟಂ ಮತ್ತು ವಾಯ್ಸ್ ಕಮಾಂಡ್ ಸೌಲಭ್ಯಗಳನ್ನು ಕೇವಲ ಹೈ ವೆರಿಯೆಂಟ್ ಮಾತ್ರ ನೀಡಲಾಗಿದೆ. ಹೀಗಾಗಿ ಇಕೋಸ್ಪೋರ್ಟ್ ಆರಂಭಿಕ ಆವೃತ್ತಿಗಳನ್ನು ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕಳೆದುಕೊಳ್ಳಲಿದೆ.

ಬೆಲೆ ಕಡಿತಕ್ಕಾಗಿ ಇಕೋಸ್ಪೋರ್ಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಕೈಬಿಟ್ಟ ಫೋರ್ಡ್..!

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹಿನ್ನೆಡೆ ಅನುಭವಿಸುತ್ತಿರುವ ಇಕೋಸ್ಪೋರ್ಟ್ ಮಾರಾಟದಲ್ಲಿ ಹೊಸ ಹುರುಪು ತುಂಬಲು ಮುಂದಾಗಿರುವ ಫೋರ್ಡ್ ಸಂಸ್ಥೆಯು ಬೆಲೆ ಇಳಿಕೆಯ ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಯನ್ನು ನಿಗಿಸಲು ಬೆಲೆ ಇಳಿಕೆಯೊಂದಿಗೆ ಇಕೋಸ್ಪೋರ್ಟ್ ಥಂಡರ್‌ ಎನ್ನುವ ಸ್ಪೆಷಲ್ ಎಡಿಷನ್ ಮಾದರಿಯನ್ನು ಪರಿಚಯಿಸಿದೆ.

ಬೆಲೆ ಕಡಿತಕ್ಕಾಗಿ ಇಕೋಸ್ಪೋರ್ಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಕೈಬಿಟ್ಟ ಫೋರ್ಡ್..!

ಇಕೋಸ್ಪೋರ್ಟ್ ಥಂಡರ್ ಎಡಿಷನ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಮಾದರಿಯು ರೂ.10.18 ಲಕ್ಷಕ್ಕೆ ಮತ್ತು ಡಿಸೇಲ್ ಮಾದರಿಯು ರೂ.10.68 ಲಕ್ಷ ಬೆಲೆ ಹೊಂದಿದ್ದು, ಕಳೆದ ತಿಂಗಳ ಹಿಂದಷ್ಟೇ ಮಾರಾಟದಿಂದ ಸ್ಥಗಿತಗೊಳಿಸಲಾಗಿರುವ ಸಿಗ್ನೆಚೆರ್ ವೆರಿಯೆಂಟ್ ಸ್ಥಾನವನ್ನು ಥಂಡರ್‌ ಎಡಿಷನ್ ತುಂಬಲಿದೆ.

ಬೆಲೆ ಕಡಿತಕ್ಕಾಗಿ ಇಕೋಸ್ಪೋರ್ಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಕೈಬಿಟ್ಟ ಫೋರ್ಡ್..!

ಇನ್ನು ಇಕೋಸ್ಪೋರ್ಟ್ ಥಂಡರ್‌ಬರ್ಡ್ ಜೊತೆಗೆ ಇತರೆ ವೆರಿಯೆಂಟ್‌ಗಳ ಬೆಲೆಯಲ್ಲೂ ಬದಲಾಣೆಗೊಳಿಸಿರುವ ಫೋರ್ಡ್ ಸಂಸ್ಥೆಯು ಆರಂಭಿಕವಾಗಿ ರೂ.8 ಸಾವಿರದಿಂದ ಟಾಪ್ ಎಂಡ್ ಮಾದರಿಯ ಮೇಲೆ ರೂ. 57 ಸಾವಿರ ಬೆಲೆ ಕಡಿತ ಮಾಡಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿ ಇಕೋಸ್ಪೋರ್ಟ್ ಮಾದರಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.7.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಬೆಲೆಯು ರೂ. 11.90 ಲಕ್ಷಕ್ಕೆ ಖರೀದಿ ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇಕೋಸ್ಪೋರ್ಟ್ ಕಾರುಗಳು 13 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿವೆ.

ಬೆಲೆ ಕಡಿತಕ್ಕಾಗಿ ಇಕೋಸ್ಪೋರ್ಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಕೈಬಿಟ್ಟ ಫೋರ್ಡ್..!

ಇದರಲ್ಲಿ 6 ವೆರಿಯೆಂಟ್‌ಗಳು ಪೆಟ್ರೋಲ್ ಮಾದರಿಯಲ್ಲಿ ಮತ್ತು 7 ಮಾದರಿಗಳು ಡೀಸೆಲ್ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಥಂಡರ್‌ಬರ್ಡ್ ವೆರಿಯೆಂಟ್ ಕೂಡಾ ಎರಡು ಆವೃತ್ತಿಯಲ್ಲೂ ಖರೀದಿಸಬಹುದಾಗಿದೆ. ಹೊಸ ಆವೃತ್ತಿಯ ಥಂಡರ್ ಎಡಿಷನ್ ಕಾರು ಈಗಿರುವ ಟೈಟಾನಿಯಂ ಮಾದರಿಗಿಂತ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯ ಹೊಂದಿದ್ದು, 1.5 ಲೀಟರ್ ಟಿ‍‍ಡಿ‍‍ಸಿ‍ಐ 4 ಸಿಲಿಂಡರ್ ಇನ್‍‍ಲೈನ್ ಡಿ‍ಒ‍‍ಹೆಚ್‍‍ಸಿ ಡೀಸೆಲ್ ಎಂಜಿನ್ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಬೆಲೆ ಕಡಿತಕ್ಕಾಗಿ ಇಕೋಸ್ಪೋರ್ಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಕೈಬಿಟ್ಟ ಫೋರ್ಡ್..!

ಬಿಡುಗಡೆಯಾದ ಇಕೋಸ್ಪೋರ್ಟ್ ಥಂಡರ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಣೆ ಮಾಡಲಾಗಿದ್ದು, ಹೆಡ್‌ಲ್ಯಾಂಪ್ ಕ್ಲಸ್ಟರ್, ಬ್ಲ್ಯಾಕ್ಡ್ ಔಟ್ ಫಾಗ್ ಲ್ಯಾಂಪ್ ಬಿಜೆಲ್ಸ್, ವಿಂಗ್ ಮಿರರ್, 17-ಇಂಚಿನ ಅಲಾಯ್ ವೀಲ್ಹ್, ಡ್ಯುಯಲ್ ಟೋನ್ ಬ್ಯಾನೆಟ್ ಸೌಲಭ್ಯ ಹೊಂದಿದೆ.

MOST READ: ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಬೆಲೆ ಕಡಿತಕ್ಕಾಗಿ ಇಕೋಸ್ಪೋರ್ಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಕೈಬಿಟ್ಟ ಫೋರ್ಡ್..!

ಒಟ್ಟಿನಲ್ಲಿ ವೆನ್ಯೂ ಮೂಲಕ ಕಾರು ಮಾರಾಟದಲ್ಲಿ ಹೊಸ ಅಲೆ ಸೃಷ್ಠಿಸಿರುವ ಹ್ಯುಂಡೈಗೆ ಪೈಪೋಟಿ ನೀಡುವ ಉದ್ದೇಶದಿಂದ ಬೆಲೆ ಕಡಿತದ ಜೊತೆಗೆ ಸ್ಪೆಷಲ್ ಎಡಿಷನ್ ಅಸ್ತ್ರ ಉಪಯೋಗಿಸಿರುವ ಫೋರ್ಡ್ ಸಂಸ್ಥೆಯು ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Most Read Articles

Kannada
Read more on ಫೋರ್ಡ್ ford
English summary
Ford EcoSport Titanium+ AT Loses The Sync3 Infotainment System With Voice Command.
Story first published: Friday, June 28, 2019, 12:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X