ಹ್ಯುಂಡೈ ವೆನ್ಯೂ‌ಗೆ ಟಕ್ಕರ್- ಇಕೋಸ್ಪೋರ್ಟ್ ಬೆಲೆ ಇಳಿಕೆಗೆ ಮುಂದಾದ ಫೋರ್ಡ್

ಫೋಡ್ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಇಕೋಸ್ಪೋರ್ಟ್ ಕಾರಿನ ಕಾರಿನ ಬೆಲೆಯಲ್ಲಿ ಇಳಿಕೆ ಮಾಡುತ್ತಿದ್ದು, ಕಾರು ಮಾರಾಟದಲ್ಲಿ ಹೊಸ ಅಲೆ ಎಬ್ಬಿಸಿರುವ ಹ್ಯುಂಡೈ ವೆನ್ಯೂ ಕಾರಿನ ಪ್ರಭಾವದಿಂದಲೇ ಫೋರ್ಡ್ ಸಂಸ್ಥೆಯು ಇಕೋಸ್ಪೋರ್ಟ್ ಬೆಲೆಯಲ್ಲಿ ಭಾರೀ ಇಳಿಕೆಗೆ ಮುಂದಾಗಿದೆ.

ಹ್ಯುಂಡೈ ವೆನ್ಯೂ‌ಗೆ ಟಕ್ಕರ್- ಇಕೋಸ್ಪೋರ್ಟ್ ಬೆಲೆ ಇಳಿಕೆಗೆ ಮುಂದಾದ ಫೋರ್ಡ್

ಹೌದು, ಕಳೆದ ವಾರವಷ್ಟೇ ಹ್ಯುಂಡೈ ಸಂಸ್ಥೆಯು ತನ್ನ ಬಹುನೀರಿಕ್ಷಿತ ವೆನ್ಯೂ ಬಿಡುಗಡೆ ಮಾಡುವ ಮೂಲಕ ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 300, ಟಾಟಾ ನೆಕ್ಸಾನ್ ಮತ್ತು ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಬಿಡುಗಡೆ ಕೇವಲ 10 ದಿನಗಳಲ್ಲಿ ಬರೋಬ್ಬರಿ 35 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ವೆನ್ಯೂ ಕಾರಿಗೆ ಪೈಪೋಟಿಯಾಗಿ ಫೋರ್ಡ್ ಸಂಸ್ಥೆಯು ಇಕೋಸ್ಪೋರ್ಟ್ ಬೆಲೆ ಇಳಿಕೆ ಮಾಡುತ್ತಿದೆ.

ಹ್ಯುಂಡೈ ವೆನ್ಯೂ‌ಗೆ ಟಕ್ಕರ್- ಇಕೋಸ್ಪೋರ್ಟ್ ಬೆಲೆ ಇಳಿಕೆಗೆ ಮುಂದಾದ ಫೋರ್ಡ್

ಮಾಹಿತಿಗಳ ಪ್ರಕಾರ, ಫೋರ್ಡ್ ಸಂಸ್ಥೆಯು ಇಕೋಸ್ಪೋರ್ಟ್ ಟೈಟಾನಿಯಂ ಆವೃತ್ತಿಯ ಮೇಲೆ ರೂ.45 ಸಾವಿರದಿಂದ ರೂ.50 ಸಾವಿರ ತನಕ ರಿಯಾಯ್ತಿ ಘೋಷಣೆ ಮಾಡಲು ಮುಂದಾಗಿದ್ದು, ಇದರ ಜೊತೆಗೆ ಇನ್ನು ಕೆಲವು ಆಫರ್‌ಗಳ ಅವಧಿಯನ್ನು ಕೂಡಾ ವಿಸ್ತರಣೆ ಮಾಡಲಿದೆ.

ಹ್ಯುಂಡೈ ವೆನ್ಯೂ‌ಗೆ ಟಕ್ಕರ್- ಇಕೋಸ್ಪೋರ್ಟ್ ಬೆಲೆ ಇಳಿಕೆಗೆ ಮುಂದಾದ ಫೋರ್ಡ್

ಈ ಮೂಲಕ ವೆನ್ಯೂ ಖರೀದಿ ಮುಂದಾಗುವ ಗ್ರಾಹಕರನ್ನು ತನ್ನತ್ತ ಸೆಳೆಯಲು ನಿರ್ಧರಿಸಿರುವ ಫೋರ್ಡ್ ಸಂಸ್ಥೆಯು ದೀರ್ಘಾವಧಿಗೆ ಡಿಸ್ಕೌಂಟ್ ಆಫರ್ ವಿಸ್ತರಣೆ ಮಾಡುತ್ತಿದ್ದು, ಇಕೋಸ್ಪೋರ್ಟ್ ಖರೀದಿಸಲು ಇಚ್ಚಿಸುವ ಗ್ರಾಹಕರಿಗೆ ಇದೊಂದು ಸುವರ್ಣ ಅವಕಾಶ ಎನ್ನಬಹುದು.

ಹ್ಯುಂಡೈ ವೆನ್ಯೂ‌ಗೆ ಟಕ್ಕರ್- ಇಕೋಸ್ಪೋರ್ಟ್ ಬೆಲೆ ಇಳಿಕೆಗೆ ಮುಂದಾದ ಫೋರ್ಡ್

ಇನ್ನು ಫೋರ್ಡ್ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇಕೋಸ್ಪೋರ್ಟ್‌ನಲ್ಲಿ ಥಂಡರ್‌ಬರ್ಡ್ ಎನ್ನುವ ಸ್ಪೆಷಲ್ ಆವೃತ್ತಿಯೊಂದನ್ನು ಪರಿಚಯಿಸುವ ಯೋಜನೆಯಲ್ಲಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಕಾರು ಅತಿ ಕಡಿಮೆ ಬೆಲೆಗಳೊಂದಿಗೆ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುವ ತವಕದಲ್ಲಿದೆ.

ಹ್ಯುಂಡೈ ವೆನ್ಯೂ‌ಗೆ ಟಕ್ಕರ್- ಇಕೋಸ್ಪೋರ್ಟ್ ಬೆಲೆ ಇಳಿಕೆಗೆ ಮುಂದಾದ ಫೋರ್ಡ್

ಥಂಡರ್‌ಬರ್ಡ್ ಸ್ಪೆಷಲ್ ಎಡಿಷನ್ ಮಾದರಿಯು ಈಗಾಗಲೇ ಬಿಡುಗಡೆಯ ಉದ್ದೇಶದಿಂದ ಡೀಲರ್ಸ್ ಯಾರ್ಡ್ ತಲುಪಿದ್ದು, ಈ ಹಿಂದಿನ ಮಾದರಿಗಳಂತೆಯೇ ತಾಂತ್ರಿಕ ಸೌಲಭ್ಯ ಹೊಂದಿದ್ದರೂ ಸಹ ಕೆಲವು ಹೊಸ ಬದಲಾವಣೆಗಳು ಗ್ರಾಹಕರನ್ನು ಆಕರ್ಷಿಸಲಿವೆ.

ಹ್ಯುಂಡೈ ವೆನ್ಯೂ‌ಗೆ ಟಕ್ಕರ್- ಇಕೋಸ್ಪೋರ್ಟ್ ಬೆಲೆ ಇಳಿಕೆಗೆ ಮುಂದಾದ ಫೋರ್ಡ್

ಹೊಸ ಆವೃತ್ತಿಯ ಥಂಡರ್ ಎಡಿಷನ್ ಕಾರು ಈಗಿರುವ ಟೈಟಾನಿಯಂ ಮಾದರಿಯನ್ನೇ ಹೋಲುವಂತಿದ್ದು, ಅದರಲ್ಲಿರುವ 1.5 ಲೀಟರ್ ಟಿ‍‍ಡಿ‍‍ಸಿ‍ಐ 4 ಸಿಲಿಂಡರ್ ಇನ್‍‍ಲೈನ್ ಡಿ‍ಒ‍‍ಹೆಚ್‍‍ಸಿ ಡೀಸೆಲ್ ಎಂಜಿನ್ ಹೊಂದಿರಲಿದೆ.

ಹ್ಯುಂಡೈ ವೆನ್ಯೂ‌ಗೆ ಟಕ್ಕರ್- ಇಕೋಸ್ಪೋರ್ಟ್ ಬೆಲೆ ಇಳಿಕೆಗೆ ಮುಂದಾದ ಫೋರ್ಡ್

ಈ ಎಂಜಿನ್ 99 ಬಿ‍‍ಹೆಚ್‍‍ಪಿ ಪವರ್ ಅನ್ನು 3,750 ಆರ್‍‍ಪಿ‍ಎಂ ನಲ್ಲಿ ಮತ್ತು 205 ಎನ್‍ಎಂ ಟಾರ್ಕ್ ಅನ್ನು 1,750 ಆರ್‍‍ಪಿ‍ಎಂ ನಲ್ಲಿ ಬಿಡುಗಡೆಯ ಶಕ್ತಿ ಹೊಂದಿದ್ದು, ಇದರಲ್ಲಿ 5 ಸ್ಪೀಡಿನ ಮ್ಯಾನುಯಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದ್ದು, ಪ್ರತಿ ಲೀಟರಿಗೆ 23 ಕಿ.ಮೀ ಮೈಲೇಜ್ ನೀಡಲಿದೆ.

ಹ್ಯುಂಡೈ ವೆನ್ಯೂ‌ಗೆ ಟಕ್ಕರ್- ಇಕೋಸ್ಪೋರ್ಟ್ ಬೆಲೆ ಇಳಿಕೆಗೆ ಮುಂದಾದ ಫೋರ್ಡ್

ಹೊಸ ಫೋರ್ಡ್ ಇಕೋ ಸ್ಪೋರ್ಟ್ ಥಂಡರ್ ಎಡಿಷನ್ ಬೆಲೆಯು ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ.11.05 ಲಕ್ಷಗಳಾಗಿರಲಿದ್ದು, ಬೆಲೆಯು ಈಗಿರುವ ಟೈಟಾನಿಯಂ ಮಾದರಿಗಿಂತಲೂ ತುಸು ಹೆಚ್ಚಿರಲಿದೆ ಎನ್ನಲಾಗಿದೆ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಹ್ಯುಂಡೈ ವೆನ್ಯೂ‌ಗೆ ಟಕ್ಕರ್- ಇಕೋಸ್ಪೋರ್ಟ್ ಬೆಲೆ ಇಳಿಕೆಗೆ ಮುಂದಾದ ಫೋರ್ಡ್

ಒಟ್ಟಿನಲ್ಲಿ ವೆನ್ಯೂ ಮೂಲಕ ಕಾರು ಮಾರಾಟದಲ್ಲಿ ಹೊಸ ಅಲೆ ಸೃಷ್ಠಿಸಿರುವ ಹ್ಯುಂಡೈಗೆ ಪೈಪೋಟಿ ನೀಡುವ ಉದ್ದೇಶದಿಂದ ಬೆಲೆ ಕಡಿತದ ಜೊತೆ ಸ್ಪೆಷಲ್ ಎಡಿಷನ್ ಅಸ್ತ್ರ ಉಪಯೋಗಿಸುತ್ತಿರುವ ಫೋರ್ಡ್ ಸಂಸ್ಥೆಯು ವೆನ್ಯೂ ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Article Published On: Saturday, June 1, 2019, 18:26 [IST]
English summary
Ford Updates EcoSport Line-up, Chances to Get Price Reduction. Read in Kannada.
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+