ಇದೇ ತಿಂಗಳು ಬಿಡುಗಡೆಯಾಗಲಿರುವ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಟೊಯೊಟಾ ಫಾರ್ಚೂನರ್ ಹಿಂದಿಕ್ಕುವ ಏಕೈಕ ಕಾರು ಮಾದರಿ ಅಂದ್ರೆ ಅದು ಫೋರ್ಡ್ ಎಂಡೀವರ್ ಮಾತ್ರ. ಯಾಕೆಂದ್ರೆ ಫಾರ್ಚೂನರ್ ಮಾದರಿಯಲ್ಲೇ ಎಲ್ಲಾ ಹಂತದಲ್ಲೂ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಫೇಸ್‌ಲಿಫ್ಟ್ ಸೌಲಭ್ಯದೊಂದಿಗೆ ಮತ್ತಷ್ಟು ಜನಪ್ರಿಯತೆ ಸಾಧಿಸುವ ತವಕದಲ್ಲಿದೆ.

ಇದೇ ತಿಂಗಳು ಬಿಡುಗಡೆಯಾಗಲಿರುವ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಹೌದು, ಆಟೋ ಕಾರ್ ಇಂಡಿಯಾ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಫೇಸ್‌ಲಿಫ್ಟ್ ಎಂಡೀವರ್ ಬಿಡುಗಡೆ ಮಾಡುವ ಫೋರ್ಡ್ ಸಂಸ್ಥೆಯು ಈ ಬಾರಿ ಫಾರ್ಚೂನರ್ ಮಾರಾಟಕ್ಕೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸ ವ್ಯಕ್ತಪಡಿಸಿಯೆಂತೆ. ಹೀಗಾಗಿ ಫೇಸ್‌ಲಿಫ್ಟ್ ಎಂಡೀವರ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿರುವ ಕಾರು ಆವೃತ್ತಿಗಿಂತ ಹೆಚ್ಚಿನ ಗುಣಮಟ್ಟದ ಎಂಜಿನ್ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಹೊತ್ತುಬರುವುದು ಖಚಿತವಾಗಿದೆ.

ಇದೇ ತಿಂಗಳು ಬಿಡುಗಡೆಯಾಗಲಿರುವ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಇದಕ್ಕಾಗಿಯೇ ಹೊಸ ಫೇಸ್‌ಲಿಫ್ಟ್ ಎಂಡೀವರ್ ಆವೃತ್ತಿಯನ್ನು ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ಎವರೆಸ್ಟ್ ಹೆಸರಿನಲ್ಲಿ ಬಿಡುಗಡೆ ಮಾಡಿರುವ ಫೋರ್ಡ್ ಸಂಸ್ಥೆಯು ಅಂತರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಭಾರತೀಯ ಆವೃತ್ತಿಯಲ್ಲೂ ಒದಗಿಸುವ ಭರವಸೆ ವ್ಯಕ್ತಪಡಿಸಿದೆ.

ಇದೇ ತಿಂಗಳು ಬಿಡುಗಡೆಯಾಗಲಿರುವ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಫೇಸ್‌ಲಿಫ್ಟ್ ಎಂಡೀವರ್ ಹೊಸ ಕಾರಿನಲ್ಲಿ ಸುಧಾರಿತ ಗ್ರಿಲ್, ಫಾಗ್ ಲ್ಯಾಂಪ್, ಫ್ರಂಟ್ ಬಂಪರ್, ಚಕ್ರಗಳು ಮತ್ತು ಕಾರಿನ ಇಂಟಿರಿಯರ್ ವಿಭಾಗದಲ್ಲಿ ಗುರುತರ ಬದಲಾವಣೆ ತರುತ್ತಿರುವ ಫೋರ್ಡ್ ಸಂಸ್ಥೆಯು ಫಾರ್ಚೂನರ್ ಮತ್ತು ಮಹೀಂದ್ರಾ ಅಲ್ಟಾರಾಸ್ ಜಿ4 ಕಾರಿಗೆ ಪ್ರಬಲ ಪೈಪೋಟಿ ನೀಡಲಿದೆ.

ಇದೇ ತಿಂಗಳು ಬಿಡುಗಡೆಯಾಗಲಿರುವ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಜೊತೆಗೆ 7-ಸೀಟರ್ ವೈಶಿಷ್ಟ್ಯತೆಗಳನ್ನು ಮತ್ತಷ್ಟು ಆರಾಮದಾಯಕಗೊಳಿಸಲಿದ್ದು, ಕೀ ಲೆಸ್ ಎಂಟ್ರಿ, ಸ್ಟಾರ್ಟ್/ಸ್ಟಾಪ್ ಪುಶ್ ಬಟನ್, ಸಿಕ್ಸ್ ಸ್ಪೋರ್ಕ್ 20-ಇಂಚಿನ ಅಲಾಯ್ ವೀಲ್ಹ್ ಸೇರಿದಂತೆ ಕಾರಿನ ಹೊರ ಭಾಗದ ವಿನ್ಯಾಸದಲ್ಲೂ ಕೆಲವು ಬದಲಾವಣೆ ಮಾಡಲಾಗುತ್ತಿದೆ.

ಇದೇ ತಿಂಗಳು ಬಿಡುಗಡೆಯಾಗಲಿರುವ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಎಂಜಿನ್ ಸಾಮರ್ಥ್ಯ

ವಿದೇಶಿ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿರುವ ಫೇಸ್‌ಲಿಫ್ಟ್ ಎಂಡೀವರ್(ಎವೆರೆಸ್ಟ್) ಕಾರುಗಳು 2.0-ಲೀಟರ್ ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‌ಬಾಕ್ಸ್‌ನೊಂದಿಗೆ ಸಿಂಗಲ್ ಟರ್ಬೋ ವರ್ಷನ್ ಮತ್ತು ಟ್ವಿನ್ ಟರ್ಬೋ ವರ್ಷನ್ ಎಂಬ ಎರಡು ಎಂಜಿನ್ ಆಯ್ಕೆ ಹೊಂದಿವೆ.

ಇದೇ ತಿಂಗಳು ಬಿಡುಗಡೆಯಾಗಲಿರುವ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಈ ಮೂಲಕ ಸಿಂಗಲ್ ಟರ್ಬೋ ವರ್ಷನ್ ಕಾರುಗಳು 180ಬಿಎಚ್‌ಪಿ, 420ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ ಟ್ವಿನ್ ಟರ್ಬೋ ವರ್ಷನ್ ಕಾರುಗಳು 213ಬಿಎಚ್‌ಪಿ, 500 ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿವೆ.

ಇದೇ ತಿಂಗಳು ಬಿಡುಗಡೆಯಾಗಲಿರುವ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಆದ್ರೆ, ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ಎಂಡೀವರ್ ಕಾರುಗಳು 2.2-ಲೀಟರ್ ಫೋರ್ ಸಿಲಿಂಡರ್ ಡಿಸೇಲ್ ಎಂಜಿನ್ ಮತ್ತು 3.2-ಲೀಟರ್ ಫೈವ್ ಸಿಲಿಂಡರ್ ಡಿಸೇಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, ಫೇಸ್‌ಲಿಫ್ಟ್ ಎಂಡೀವರ್‌ನಲ್ಲೂ ಹಳೆಯ ಕಾರಿನ ಮಾದರಿಯಲ್ಲೇ ಎಂಜಿನ್ ಆಯ್ಕೆ ಮುಂದುವರಿಸುವ ಸಾಧ್ಯತೆಗಳಿವೆ.

ಇದೇ ತಿಂಗಳು ಬಿಡುಗಡೆಯಾಗಲಿರುವ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಹೀಗಾಗಿ 2.2-ಲೀಟರ್ ಡಿಸೇಲ್ ಎಂಜಿನ್ ಮಾದರಿಯು 158ಬಿಎಚ್‌ಪಿ, 385ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ, 3.2-ಲೀಟರ್ ಡಿಸೇಲ್ ಎಂಜಿನ್ ಮಾದರಿಯು 197ಬಿಎಚ್‌ಪಿ, 470ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಎರಡು ಮಾದರಿಯಲ್ಲೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹಾಗೂ ಆಲ್ ವೀಲ್ಹ್ ಡ್ರೈವ್ ಸೌಲಭ್ಯ ಜೋಡಿಸಲಾಗಿದೆ.

MOST READ: ಫಾರ್ಚೂನರ್ ಕಾರಿಗಿಂತ ದುಬಾರಿಯೆಂತೆ ಈ ಪೋರ್ಷೆ ಕಾರಿನ ನಂಬರ್ ಪ್ಲೇಟ್..!

ಇದೇ ತಿಂಗಳು ಬಿಡುಗಡೆಯಾಗಲಿರುವ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಎಂಡೀವರ್ ಫೇಸ್‌ಲಿಫ್ಟ್ ಬಿಡುಗಡೆಯ ದಿನಾಂಕ

ಬಿಡುಗಡೆಯಾಗಲಿರುವ ಹೊಸ ಫೇಸ್‌ಲಿಫ್ಟ್ ಎಂಡೀವರ್ ಮಾದರಿಗಳನ್ನು ಫೋರ್ಡ್ ಸಂಸ್ಥೆಯು ಮುಂದಿನ ವಾರ ಅನಾವರಣಗೊಳಿಸಿದ್ದು, ಇದೇ ತಿಂಗಳು 22ರಂದು ಹೊಸ ಕಾರಿನ ಬೆಲೆಗಳನ್ನು ಬಹಿರಂಗ ಪಡಿಸಿಲಿದೆ ಎನ್ನಲಾಗಿದೆ.

ಇದೇ ತಿಂಗಳು ಬಿಡುಗಡೆಯಾಗಲಿರುವ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ವಿಶೇಷತೆ ಏನು?

ಒಟ್ಟಿನಲ್ಲಿ 7-ಸೀಟರ್ ಫುಲ್ ಎಸ್‌ಯುವಿಗಳಲ್ಲೇ ಉತ್ತಮ ಕಾರು ಮಾದರಿಯಾಗಿರುವ ಫೋರ್ಡ್ ಎಂಡೀವರ್ ಇದೀಗ ಫೇಸ್‌ಲಿಫ್ಟ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಜನಪ್ರಿಯ ಫಾರ್ಚೂನರ್, ಮಹೀಂದ್ರಾ ಅಲ್ಟಾರಾಸ್ ಜಿ4, ಇಸುಝು ಎಂಯುಎಕ್ಸ್ ಫೇಸ್‌ಲಿಫ್ಟ್ ಕಾರು ಮಾರಾಟಕ್ಕೆ ತೀವ್ರ ಪೈಪೋಟಿ ನೀಡುವತ್ತ ಗಮನಹರಿಸಲಾಗಿದೆ.

Source: ACI

Most Read Articles

Kannada
Read more on ಫೋರ್ಡ್ ford
English summary
Updated Ford Endeavour to launch this month. Read in Kannada.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more