2018ರ ಫೋರ್ಡ್ ಎಂಡೀವರ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಇದೇ ತಿಂಗಳು 22ರಂದು ಫೋರ್ಡ್ ಸಂಸ್ಥೆಯು ತನ್ನ ಜನಪ್ರಿಯ ಕಾರು ಮಾದರಿಯಾದ ಎಂಡೀವರ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ 2018ರ ಹಳೆಯ ಆವೃತ್ತಿಗಳ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ.

2018ರ ಫೋರ್ಡ ಎಂಡೀವರ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಎಂಡೀವರ್ ಫೇಸ್‌ಲಿಫ್ಟ್ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಳೆಯ ಆವೃತ್ತಿಗಳ ಬೇಡಿಕೆಯು ತಗ್ಗಿದ್ದು, ಹೀಗಾಗಿ ಫೋರ್ಡ್ ಸಂಸ್ಥೆಯು ಹಳೆಯ ಆವೃತ್ತಿಯ ಎಂಡೀವರ್ ಸ್ಟಾಕ್ ಪೂರ್ಣಗೊಳಿಸುವ ಸಂಬಂಧ ಖರೀದಿ ಮೇಲೆ ಬರೋಬ್ಬರಿ ರೂ.1 ಲಕ್ಷ ಡಿಸ್ಕೌಂಟ್ ಜೊತೆಗೆ ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ಆಫರ್‌ ಮಾಡಲಾಗುತ್ತಿದೆ.

2018ರ ಫೋರ್ಡ ಎಂಡೀವರ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಇದೇ ತಿಂಗಳು 22ರಂದು ಫೇಸ್‌ಲಿಫ್ಟ್ ಎಂಡೀವರ್ ಬಿಡುಗಡೆಗೊಳಿಸಲಿರುವ ಫೋರ್ಡ್ ಸಂಸ್ಥೆಯು ಈ ಬಾರಿ ಫಾರ್ಚೂನರ್ ಮಾರಾಟಕ್ಕೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದು, ಹೀಗಾಗಿ ಫೇಸ್‌ಲಿಫ್ಟ್ ಎಂಡೀವರ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿರುವ ಕಾರು ಆವೃತ್ತಿಗಿಂತ ಹೆಚ್ಚಿನ ಗುಣಮಟ್ಟದ ಎಂಜಿನ್ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಹೊತ್ತುಬರುವುದು ಖಚಿತವಾಗಿದೆ.

2018ರ ಫೋರ್ಡ ಎಂಡೀವರ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಸ್ಪಾಟ್ ಟೆಸ್ಟಿಂಗ್ ವೇಳೆ ಕಾರಿನಲ್ಲಿರುವ ತಾಂತ್ರಿಕ ಅಂಶಗಳ ಕುರಿತಾದ ಕೆಲವು ಮಾಹಿತಿಗಳು ಲಭ್ಯವಾಗಿದ್ದು, ಸುಧಾರಿತ ಮಾದರಿಯ ಗ್ರಿಲ್, ಫಾಗ್ ಲ್ಯಾಂಪ್, ಫ್ರಂಟ್ ಬಂಪರ್, ಚಕ್ರಗಳು ಮತ್ತು ಕಾರಿನ ಇಂಟಿರಿಯರ್ ವಿಭಾಗದಲ್ಲಿ ಗುರುತರ ಬದಲಾವಣೆ ತರುತ್ತಿರುವ ಫೋರ್ಡ್ ಸಂಸ್ಥೆಯು ಫಾರ್ಚೂನರ್ ಮತ್ತು ಮಹೀಂದ್ರಾ ಅಲ್ಟಾರಾಸ್ ಜಿ4 ಕಾರಿಗೆ ಪ್ರಬಲ ಪೈಪೋಟಿ ನೀಡಲಿದೆ.

2018ರ ಫೋರ್ಡ ಎಂಡೀವರ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಜೊತೆಗೆ 7-ಸೀಟರ್ ವೈಶಿಷ್ಟ್ಯತೆಗಳನ್ನು ಮತ್ತಷ್ಟು ಆರಾಮದಾಯಕಗೊಳಿಸಲಿದ್ದು, ಕೀ ಲೆಸ್ ಎಂಟ್ರಿ, ಸ್ಟಾರ್ಟ್/ಸ್ಟಾಪ್ ಪುಶ್ ಬಟನ್, ಸಿಕ್ಸ್ ಸ್ಪೋರ್ಕ್ 20-ಇಂಚಿನ ಟ್ವಿನ್ ಸ್ಪೋಕ್ ಅಲಾಯ್ ವೀಲ್ಹ್ ಸೇರಿದಂತೆ ಕಾರಿನ ಹೊರ ಭಾಗದ ವಿನ್ಯಾಸದಲ್ಲೂ ಕೆಲವು ಬದಲಾವಣೆ ಮಾಡಲಾಗುತ್ತಿದೆ.

2018ರ ಫೋರ್ಡ ಎಂಡೀವರ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಎಂಜಿನ್ ಸಾಮರ್ಥ್ಯ

ವಿದೇಶಿ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿರುವ ಫೇಸ್‌ಲಿಫ್ಟ್ ಎಂಡೀವರ್(ಎವೆರೆಸ್ಟ್) ಕಾರುಗಳು 2.0-ಲೀಟರ್ ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‌ಬಾಕ್ಸ್‌ನೊಂದಿಗೆ ಸಿಂಗಲ್ ಟರ್ಬೋ ವರ್ಷನ್ ಮತ್ತು ಟ್ವಿನ್ ಟರ್ಬೋ ವರ್ಷನ್ ಎಂಬ ಎರಡು ಎಂಜಿನ್ ಆಯ್ಕೆ ಹೊಂದಿವೆ.

2018ರ ಫೋರ್ಡ ಎಂಡೀವರ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಈ ಮೂಲಕ ಸಿಂಗಲ್ ಟರ್ಬೋ ವರ್ಷನ್ ಕಾರುಗಳು 180ಬಿಎಚ್‌ಪಿ, 420ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ ಟ್ವಿನ್ ಟರ್ಬೋ ವರ್ಷನ್ ಕಾರುಗಳು 213ಬಿಎಚ್‌ಪಿ, 500 ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿವೆ.

2018ರ ಫೋರ್ಡ ಎಂಡೀವರ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಆದ್ರೆ, ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ಎಂಡೀವರ್ ಕಾರುಗಳು 2.2-ಲೀಟರ್ ಫೋರ್ ಸಿಲಿಂಡರ್ ಡಿಸೇಲ್ ಎಂಜಿನ್ ಮತ್ತು 3.2-ಲೀಟರ್ ಫೈವ್ ಸಿಲಿಂಡರ್ ಡಿಸೇಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, ಫೇಸ್‌ಲಿಫ್ಟ್ ಎಂಡೀವರ್‌ನಲ್ಲೂ ಹಳೆಯ ಕಾರಿನ ಮಾದರಿಯಲ್ಲೇ ಎಂಜಿನ್ ಆಯ್ಕೆ ಮುಂದುವರಿಸುವ ಸಾಧ್ಯತೆಗಳಿವೆ.

2018ರ ಫೋರ್ಡ ಎಂಡೀವರ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಇನ್ನು 2.2-ಲೀಟರ್ ಡಿಸೇಲ್ ಎಂಜಿನ್ ಮಾದರಿಯು 158ಬಿಎಚ್‌ಪಿ, 385ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ, 3.2-ಲೀಟರ್ ಡಿಸೇಲ್ ಎಂಜಿನ್ ಮಾದರಿಯು 197ಬಿಎಚ್‌ಪಿ, 470ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಎರಡು ಮಾದರಿಯಲ್ಲೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹಾಗೂ ಆಲ್ ವೀಲ್ಹ್ ಡ್ರೈವ್ ಸೌಲಭ್ಯ ಜೋಡಿಸಲಾಗಿದೆ.

MOST READ: 140 ಕಿ.ಮಿ ವೇಗದಲ್ಲಿದ್ದ ಶಾಸಕ ಸಿಟಿ ರವಿ ಫಾರ್ಚೂನರ್ ಕಾರಿಗೆ ಇಬ್ಬರು ಯುವಕರು ಬಲಿ

2018ರ ಫೋರ್ಡ ಎಂಡೀವರ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಒಟ್ಟಿನಲ್ಲಿ 7-ಸೀಟರ್ ಫುಲ್ ಎಸ್‌ಯುವಿಗಳಲ್ಲೇ ಉತ್ತಮ ಕಾರು ಮಾದರಿಯಾಗಿರುವ ಫೋರ್ಡ್ ಎಂಡೀವರ್ ಇದೀಗ ಫೇಸ್‌ಲಿಫ್ಟ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಜನಪ್ರಿಯ ಫಾರ್ಚೂನರ್, ಮಹೀಂದ್ರಾ ಅಲ್ಟಾರಾಸ್ ಜಿ4, ಇಸುಝು ಎಂಯುಎಕ್ಸ್ ಫೇಸ್‌ಲಿಫ್ಟ್ ಕಾರು ಮಾರಾಟಕ್ಕೆ ತೀವ್ರ ಪೈಪೋಟಿ ನೀಡುವತ್ತ ಗಮನಹರಿಸಲಾಗಿದೆ.

Most Read Articles

Kannada
Read more on ಫೋರ್ಡ್ ford
English summary
Ford Endeavour Pre-Facelift Model Gets Discount Offers Up To Rs 1 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X