ಫೋರ್ಡ್ ಕಾರುಗಳ ಖರೀದಿ ಮೇಲೆ ವರ್ಷದ ಅತಿ ದೊಡ್ಡ ಆಫರ್ ಘೋಷಣೆ

2019ರ ಆರಂಭದಿಂದಲೇ ಹೊಸ ವಾಹನಗಳ ಖರೀದಿ ಪ್ರಕ್ರಿಯೆಯೂ ಮಂದಗತಿಯಲ್ಲಿ ಸಾಗುತ್ತಿದ್ದು, ಅದರಲ್ಲೂ ಮೇ ಅವಧಿಯಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಭಾರೀ ನಷ್ಟ ಅನುಭವಿಸಿವೆ. ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಹೊರೆಯಾಗಿರುವ ಸ್ಟಾಕ್ ಪ್ರಮಾಣವನ್ನು ತಗ್ಗಿಸಲು ಭರ್ಜರಿ ಆಫರ್‌ಗಳನ್ನು ಘೋಷಿಸುತ್ತಿದ್ದು, ಫೋರ್ಡ್ ಕೂಡಾ ಗರಿಷ್ಠ ಮಟ್ಟದ ಆಫರ್‌ಗಳನ್ನು ನೀಡುತ್ತಿದೆ.

ಫೋರ್ಡ್ ಕಾರುಗಳ ಖರೀದಿ ಮೇಲೆ ವರ್ಷದ ಅತಿ ದೊಡ್ಡ ಆಫರ್ ಘೋಷಣೆ

ಹೌದು, ಕಳೆದ ಕೆಲ ತಿಂಗಳಿನಿಂದ ನಿಗದಿತ ಮಟ್ಟದಲ್ಲಿ ಹೊಸ ವಾಹನಗಳ ಮಾರಾಟ ಪ್ರಮಾಣವು ಹಿನ್ನಡೆ ಅನುಭವಿಸುತ್ತಿದ್ದು, ಮಾರಾಟವಾಗದೆ ಉಳಿದಿರುವ ಸ್ಟಾಕ್ ಪ್ರಮಾಣವು ಇದೀಗ ಮತ್ತಷ್ಟ ಹೊರೆಯಾಗಿ ಪರಿಣಮಿಸುತ್ತಿದೆ. ಇದಕ್ಕಾಗಿಯೇ ಗ್ರಾಹಕರನ್ನು ಸೆಳೆಯಲು ಕಾರುಗಳ ಮಾರಾಟ ಮೇಲೆ ಗರಿಷ್ಠ ಮಟ್ಟದ ಆಫರ್‌ಗಳನ್ನು ನೀಡಲಾಗುತ್ತಿದ್ದು, ಫೋರ್ಡ್ ಸಂಸ್ಥೆಯು ಸಹ ತನ್ನ ಜನಪ್ರಿಯ ಮಾದರಿಗಳಾದ ಆಸ್ಪೈರ್, ಫ್ರೀಸ್ಟೈಲ್ ಮತ್ತು ಇಕೋಸ್ಪೋರ್ಟ್ ಕಾರುಗಳ ಮೇಲೆ ರೂ.1.25 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದೆ.

ಫೋರ್ಡ್ ಕಾರುಗಳ ಖರೀದಿ ಮೇಲೆ ವರ್ಷದ ಅತಿ ದೊಡ್ಡ ಆಫರ್ ಘೋಷಣೆ

ಕಾರುಗಳ ವೆರಿಯೆಂಟ್, ಎಂಜಿನ್ ಸಾಮಾರ್ಥ್ಯ ಮತ್ತು ತಾಂತ್ರಿಕ ಸೌಲಭ್ಯಗಳ ಆಧಾರದ ಮೇಲೆ ಡಿಸ್ಕೌಂಟ್ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಇದರಲ್ಲಿ ಫ್ರೀಸ್ಟೈಲ್ ಕ್ರಾಸ್‌ಒವರ್ ಹ್ಯಾಚ್‌ಬ್ಯಾಕ್ ಖರೀದಿ ಮೇಲೆ ಗರಿಷ್ಠ ಆಫರ್ ನೀಡಲಾಗುತ್ತಿದೆ.

ಫೋರ್ಡ್ ಕಾರುಗಳ ಖರೀದಿ ಮೇಲೆ ವರ್ಷದ ಅತಿ ದೊಡ್ಡ ಆಫರ್ ಘೋಷಣೆ

ಮಾಹಿತಿಗಳ ಪ್ರಕಾರ, ಫೋರ್ಡ್ ಸಂಸ್ಥೆಯು 2018ರಲ್ಲಿ ಉತ್ಪಾದನೆಯಾದ ಮಾದರಿಗಳ ಮೇಲೆ ಈ ಡಿಸ್ಕೌಂಟ್ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಮುಂದಿನ ಕೆಲವು ದಿನಗಳ ಅವಧಿಗೆ ಮಾತ್ರ ಈ ಆಫರ್ ಲಭ್ಯವಿರಲಿವೆ.

ಫೋರ್ಡ್ ಕಾರುಗಳ ಖರೀದಿ ಮೇಲೆ ವರ್ಷದ ಅತಿ ದೊಡ್ಡ ಆಫರ್ ಘೋಷಣೆ

ಆರಂಭಿಕ ಆವೃತ್ತಿಗಳಿಂತ ಟಾಪ್ ಎಂಡ್ ಆವೃತ್ತಿಗಳ ಮೇಲೆ ಹೆಚ್ಚಿನ ಮಟ್ಟದ ಡಿಸ್ಕೌಂಟ್ ಜೊತೆಗೆ ಡೀಲರ್ಸ್ ಮಟ್ಟದಲ್ಲೂ ಕೆಲವು ಹೆಚ್ಚುವರಿ ಸರ್ವಿಸ್ ಸೌಲಭ್ಯಗಳ ಜೊತೆಗೆ ಇನ್ಸುರೆನ್ಸ್‌ನಲ್ಲೂ ವಿನಾಯ್ತಿ ನೀಡಲಾಗುತ್ತಿದೆ. ಇದರಿಂದ ಹೊಸ ಕಾರು ಖರೀದಿ ಯೋಜನೆಯಲ್ಲಿ ಗ್ರಾಹಕರಿಗೆ ಇದೊಂದು ಸುವರ್ಣಾವಕಾಶ ಎಂದು ಹೇಳಬಹುದಾಗಿದ್ದು, ಆಫರ್‌ಗಳ ಮೂಲಕ ಬಹುತೇಕ ಆಟೋ ಸಂಸ್ಥೆಗಳು ಭರ್ಜರಿ ಪ್ರಮಾಣದಲ್ಲಿ ಹೊಸ ಕಾರುಗಳನ್ನು ಮಾರಾಟ ಮಾಡುವ ತವಕದಲ್ಲಿವೆ.

ಫೋರ್ಡ್ ಕಾರುಗಳ ಖರೀದಿ ಮೇಲೆ ವರ್ಷದ ಅತಿ ದೊಡ್ಡ ಆಫರ್ ಘೋಷಣೆ

ಇನ್ನು ಫೋರ್ಡ್ ಇಂಡಿಯಾ ಸಂಸ್ಥೆಯು ಭಾರತದಲ್ಲಿ ತನ್ನ ಹೊಸ ಕಾರು ಉತ್ಪನ್ನಗಳ ಮಾರಾಟದಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆಗಾಗಿ ಯೋಜನೆ ರೂಪಿಸುತ್ತಿದೆ. ಹೀಗಾಗಿ ಮುಂದಿನ ಐದು ವರ್ಷಗಳ ಅವಧಿಗೆ ಯೋಜಿಸಲಾಗಿರುವ ಹೊಸ ಯೋಜನೆಗಳಿಗಾಗಿ ಬರೋಬ್ಬರಿ 1 ಬಿಲಿಯನ್ ಯುಎಸ್‌ಡಿ ಡಾಲರ್(7 ಸಾವಿರ ಕೋಟಿ) ಹೂಡಿಕೆ ಮಾಡಲು ಮುಂದಾಗಿದೆ.

ಫೋರ್ಡ್ ಕಾರುಗಳ ಖರೀದಿ ಮೇಲೆ ವರ್ಷದ ಅತಿ ದೊಡ್ಡ ಆಫರ್ ಘೋಷಣೆ

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರುಗಳ ಅಭಿವೃದ್ಧಿ, ಸಂಶೋಧನೆ ಮತ್ತು ಮಾರುಕಟ್ಟೆ ವಿಸ್ತರಣೆಗಾಗಿ ಎದುರು ನೋಡುತ್ತಿರುವ ಫೋರ್ಡ್ ಸಂಸ್ಥೆಯು ಸದ್ಯ ಮಹೀಂದ್ರಾ ಜೊತೆಗೆ ಸಹಭಾಗಿತ್ವದ ಆಧಾರದ ಮೇಲೆ ಕಾರುಗಳ ಉತ್ಪಾದನೆಗೆ ಹೊಸ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ 3 ವಿವಿಧ ಮಾದರಿಯ ಹೊಸ ಕಾರುಗಳನ್ನು ಬಿಡುಗಡೆಗಾಗಿ ಮಾರುಕಟ್ಟೆ ಅಧ್ಯಯನ ನಡೆಸಿವೆ.

ಫೋರ್ಡ್ ಕಾರುಗಳ ಖರೀದಿ ಮೇಲೆ ವರ್ಷದ ಅತಿ ದೊಡ್ಡ ಆಫರ್ ಘೋಷಣೆ

ಸದ್ಯದ ಮಾರುಕಟ್ಟೆ ಸನ್ನಿವೇಶದಲ್ಲಿ ಫೋರ್ಡ್ ಸಂಸ್ಥೆಯು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಬೃಹತ್ ಬಂಡವಾಳ, ಆಕರ್ಷಕ ಉತ್ಪನ್ನಗಳು ಮತ್ತು ಸ್ವಂತ ಕಾರು ಉತ್ಪಾದನಾ ಘಟಕಗಳಿದ್ದರೂ ನಷ್ಟ ಅನುಭವಿಸುತ್ತಿದೆ.

MOST READ: ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಫೋರ್ಡ್ ಕಾರುಗಳ ಖರೀದಿ ಮೇಲೆ ವರ್ಷದ ಅತಿ ದೊಡ್ಡ ಆಫರ್ ಘೋಷಣೆ

ಹೀಗಾಗಿ ಮಹೀಂದ್ರಾ ಜೊತೆಗಿನ ಸಹಭಾಗಿತ್ವದಲ್ಲಿನ ಕಾರು ಉತ್ಪಾದನೆ ಮತ್ತು ಮಾರಾಟ ಯೋಜನೆಯು ಒಂದು ರೀತಿಯಲ್ಲಿ ಲಾಭದಾಯಕ ಮಾರ್ಗವಾಗಲಿದ್ದು, ಮಹೀಂದ್ರಾ ಸಂಸ್ಥೆಗೂ ಇದರಿಂದ ಸಾಕಷ್ಟು ಅನುಕೂಲಕತೆಗಳಿವೆ.

ಫೋರ್ಡ್ ಕಾರುಗಳ ಖರೀದಿ ಮೇಲೆ ವರ್ಷದ ಅತಿ ದೊಡ್ಡ ಆಫರ್ ಘೋಷಣೆ

ಸದ್ಯ ನಿರ್ದಿಷ್ಟ ಮಟ್ಟದ ಕಾರು ಉತ್ಪಾದನೆಯಿಲ್ಲದೇ ಆರ್ಥಿಕ ಹೊರೆ ಅನುಭವಿಸುತ್ತಿರುವ ಫೋರ್ಡ್ ಮಾಲೀಕ್ವದ ಗುಜರಾತ್ ಸನಂದಾ ಮತ್ತು ಚೆನ್ನೈನ ಕಾರು ಉತ್ಪಾದನಾ ಘಟಕಗಳನ್ನು ಸದ್ಭಳಕೆ ಮಾಡಿಕೊಳ್ಳಲು ಮಹೀಂದ್ರಾ ಸಂಸ್ಥೆಗೆ ಸಾಕಷ್ಟು ಅನುಕೂಲಕವಾಗಲಿದೆ.

MOST READ: ರೂ. 56 ಟೋಲ್ ಸುಂಕ ಕಟ್ಟದೆ ಸಿಬ್ಬಂದಿ ಮೇಲೆ ದರ್ಪ ತೋರಿದ ಸಚಿವರ ಪತ್ನಿ..!

ಫೋರ್ಡ್ ಕಾರುಗಳ ಖರೀದಿ ಮೇಲೆ ವರ್ಷದ ಅತಿ ದೊಡ್ಡ ಆಫರ್ ಘೋಷಣೆ

ಜೊತೆಗೆ ಉತ್ತರ ಭಾರತದ ರಾಜ್ಯಗಳಲ್ಲಿನ ಬೇಡಿಕೆ ಪೂರೈಸಲು ಮಹೀಂದ್ರಾ ಸಂಸ್ಥೆಗೂ ಈ ಹೊಸ ಯೋಜನೆ ಸಹಕಾರಿಯಾಗಲಿದ್ದು, ಈ ಮೂಲಕ ಗ್ರಾಹಕರ ಬೇಡಿಕೆ ಕಳೆದುಕೊಳ್ಳುತ್ತಿರುವ ಫೋರ್ಡ್ ಕಾರುಗಳಿಗೆ ಮಹೀಂದ್ರಾದಿಂದಲೂ ಮತ್ತಷ್ಟು ಉತ್ತೇಜನ ಸಿಗಲಿದೆ.

Article Published On: Tuesday, June 18, 2019, 16:46 [IST]
English summary
Ford India dealers are offering attractive discounts of up to Rs 1.25 lakh. Read in Kannada.
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+