ಭಾರತದಲ್ಲಿ ಹೊಸ ಯೋಜನೆಗಳಿಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಫೋರ್ಡ್..!

ಫೋರ್ಡ್ ಇಂಡಿಯಾ ಸಂಸ್ಥೆಯು ಭಾರತದಲ್ಲಿ ತನ್ನ ಕಾರು ಉತ್ಪನ್ನಗಳ ಮಾರಾಟದಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆಗಾಗಿ ಯೋಜನೆ ರೂಪಿಸುತ್ತಿದೆ. ಹೀಗಾಗಿ ಮುಂದಿನ ಐದು ವರ್ಷಗಳ ಅವಧಿಗೆ ಯೋಜಿಸಲಾಗಿರುವ ಹೊಸ ಯೋಜನೆಗಳಿಗಾಗಿ ಬರೋಬ್ಬರಿ 1 ಬಿಲಿಯನ್ ಯುಎಸ್‌ಡಿ ಡಾಲರ್(7 ಸಾವಿರ ಕೋಟಿ) ಹೂಡಿಕೆ ಮಾಡಲು ಮುಂದಾಗಿದೆ.

ಭಾರತದಲ್ಲಿ ಹೊಸ ಯೋಜನೆಗಳಿಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಫೋರ್ಡ್..!

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರುಗಳ ಅಭಿವೃದ್ಧಿ, ಸಂಶೋಧನೆ ಮತ್ತು ಮಾರುಕಟ್ಟೆ ವಿಸ್ತರಣೆಗಾಗಿ ಎದುರು ನೋಡುತ್ತಿರುವ ಫೋರ್ಡ್ ಸಂಸ್ಥೆಯು ಸದ್ಯ ಮಹೀಂದ್ರಾ ಜೊತೆಗೆ ಸಹಭಾಗಿತ್ವದ ಆಧಾರದ ಮೇಲೆ ಕಾರುಗಳ ಉತ್ಪಾದನೆಗೆ ಹೊಸ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ 3 ವಿವಿಧ ಮಾದರಿಯ ಹೊಸ ಕಾರುಗಳನ್ನು ಬಿಡುಗಡೆಗಾಗಿ ಮಾರುಕಟ್ಟೆ ಅಧ್ಯಯನ ನಡೆಸಿವೆ.

ಭಾರತದಲ್ಲಿ ಹೊಸ ಯೋಜನೆಗಳಿಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಫೋರ್ಡ್..!

ಇನ್ನು ಸದ್ಯದ ಮಾರುಕಟ್ಟೆಯ ಸನ್ನಿವೇಶದಲ್ಲಿ ಫೋರ್ಡ್ ಸಂಸ್ಥೆಯು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಬೃಹತ್ ಬಂಡವಾಳ, ಆಕರ್ಷಕ ಉತ್ಪನ್ನಗಳು ಮತ್ತು ಸ್ವಂತ ಕಾರು ಉತ್ಪಾದನಾ ಘಟಕಗಳಿದ್ದರೂ ನಷ್ಟ ಅನುಭವಿಸುತ್ತಿದೆ.

ಭಾರತದಲ್ಲಿ ಹೊಸ ಯೋಜನೆಗಳಿಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಫೋರ್ಡ್..!

ಹೀಗಾಗಿ ಮಹೀಂದ್ರಾ ಜೊತೆಗಿನ ಸಹಭಾಗಿತ್ವದಲ್ಲಿನ ಕಾರು ಉತ್ಪಾದನೆ ಮತ್ತು ಮಾರಾಟ ಯೋಜನೆಯು ಒಂದು ರೀತಿಯಲ್ಲಿ ಲಾಭದಾಯಕ ಮಾರ್ಗವಾಗಲಿದ್ದು, ಮಹೀಂದ್ರಾ ಸಂಸ್ಥೆಗೂ ಇದರಿಂದ ಸಾಕಷ್ಟು ಅನುಕೂಲಕತೆಗಳಿವೆ.

ಭಾರತದಲ್ಲಿ ಹೊಸ ಯೋಜನೆಗಳಿಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಫೋರ್ಡ್..!

ಸದ್ಯ ನಿರ್ದಿಷ್ಟ ಮಟ್ಟದ ಕಾರು ಉತ್ಪಾದನೆಯಿಲ್ಲದೇ ಆರ್ಥಿಕ ಹೊರೆ ಅನುಭವಿಸುತ್ತಿರುವ ಫೋರ್ಡ್ ಮಾಲೀಕ್ವದ ಗುಜರಾತ್ ಸನಂದಾ ಮತ್ತು ಚೆನ್ನೈನ ಕಾರು ಉತ್ಪಾದನಾ ಘಟಕಗಳನ್ನು ಸದ್ಭಳಕೆ ಮಾಡಿಕೊಳ್ಳಲು ಮಹೀಂದ್ರಾ ಸಂಸ್ಥೆಗೆ ಸಾಕಷ್ಟು ಅನುಕೂಲಕವಾಗಲಿದೆ.

ಭಾರತದಲ್ಲಿ ಹೊಸ ಯೋಜನೆಗಳಿಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಫೋರ್ಡ್..!

ಜೊತೆಗೆ ಉತ್ತರ ಭಾರತದ ರಾಜ್ಯಗಳಲ್ಲಿನ ಬೇಡಿಕೆ ಪೂರೈಸಲು ಮಹೀಂದ್ರಾ ಸಂಸ್ಥೆಗೂ ಈ ಹೊಸ ಯೋಜನೆ ಸಹಕಾರಿಯಾಗಲಿದ್ದು, ಈ ಮೂಲಕ ಗ್ರಾಹಕರ ಬೇಡಿಕೆ ಕಳೆದುಕೊಳ್ಳುತ್ತಿರುವ ಫೋರ್ಡ್ ಕಾರುಗಳಿಗೆ ಮಹೀಂದ್ರಾದಿಂದಲೂ ಮತ್ತಷ್ಟು ಉತ್ತೇಜನ ಸಿಗಲಿದೆ.

ಭಾರತದಲ್ಲಿ ಹೊಸ ಯೋಜನೆಗಳಿಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಫೋರ್ಡ್..!

ಯಾಕೆಂದ್ರೆ ಮೆಟ್ರೋ ನಗರಗಳಲ್ಲಿ ಅಷ್ಟೇ ಅಲ್ಲದೇ 2ನೇ ದರ್ಜೆಯ ಮತ್ತು 3ನೇ ದರ್ಜೆಯ ಮಹಾನಗರಗಳಲ್ಲೂ ವ್ಯಾಪಕವಾದ ಮಾರಾಟ ಮಳಿಗೆಗಳನ್ನು ಹೊಂದಿರುವ ಮಹೀಂದ್ರಾ ಸಂಸ್ಥೆಯು ಫೋರ್ಡ್ ಕಾರುಗಳ ಮಾರಾಟಕ್ಕೆ ಸಾಥ್ ನೀಡಲಿದ್ದು, ಅದೇ ರೀತಿಯಾಗಿ ಫೋರ್ಡ್ ಮಾರಾಟ ಮಳಿಗೆಗಳಲ್ಲಿ ಮಹೀಂದ್ರಾ ಕಾರುಗಳ ಮಾರಾಟಕ್ಕೂ ಅವಕಾಶ ದೊರೆಯಲಿದೆ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಭಾರತದಲ್ಲಿ ಹೊಸ ಯೋಜನೆಗಳಿಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಫೋರ್ಡ್..!

ಹೀಗಾಗಿ ಸಹಭಾಗಿತ್ವದಲ್ಲಿ ಕಾರು ನಿರ್ಮಾಣ, ಎಂಜಿನ್ ಅಭಿವೃದ್ಧಿ, ಸಂಶೋಧನೆ ಮತ್ತು ಮಾರಾಟಕ್ಕೆ ಪರಸ್ಪರ ಸಹಕರಿಸುವ ಹೊಸ ಯೋಜನೆಯು ಭಾರತದಲ್ಲಿ ಯಶಸ್ವಿಯಾಗುವ ಸಾಧ್ಯತೆಗಳಿದ್ದು, ಹೊಸ ಒಪ್ಪಂದದ ಅಡಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಹೊಸ ಕಾರುಗಳು ಮಾರುತಿ ಸುಜುಕಿ ಮತ್ತು ಹ್ಯುಂಡೈ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿವೆ.

ಭಾರತದಲ್ಲಿ ಹೊಸ ಯೋಜನೆಗಳಿಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಫೋರ್ಡ್..!

ಪ್ರಸ್ತುತ ಮಾರುಕಟ್ಟೆಯಲ್ಲಿ ರೂ.15 ಲಕ್ಷ ರೂ.19 ಲಕ್ಷ ಬೆಲೆ ಅಂತರದಲ್ಲಿ ಬಲಿಷ್ಠವಾದ ಸಿ-ಸೆಗ್ಮೆಂಟ್ ಎಸ್‌ಯುವಿ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಫೋರ್ಡ್ ಕೂಡಾ ತನ್ನ ಹೊಸ ಎಸ್‌ಯುವಿ ಆವೃತ್ತಿಯನ್ನು ಪರಿಚಯಿಸುವ ಯೋಜನೆ ರೂಪಿಸಿದೆ.

MOST READ: ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಭಾರತದಲ್ಲಿ ಹೊಸ ಯೋಜನೆಗಳಿಗಾಗಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಫೋರ್ಡ್..!

ಸುದ್ದಿ ಮೂಲಗಳ ಪ್ರಕಾರ, ಫೋರ್ಡ್ ಹೊಸ ಎಸ್‌ಯುವಿ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 5 ಸೀಟರ್ ಮತ್ತು 7 ಸೀಟರ್ ಮಾದರಿಯಲ್ಲಿ ಅಭಿವೃದ್ದಿಗೊಳ್ಳಲಿದ್ದು, ಬಿಎಸ್-6 ಪ್ರೇರಣೆಯ 2.0-ಲೀಟರ್ ಟರ್ಬೋಚಾಜ್ಡ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

Article Published On: Tuesday, May 14, 2019, 12:59 [IST]
English summary
Ford Launching Three New SUV’s In India — Investing USD 1 Billion In The Country.
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+