55 ವರ್ಷವಾದ್ರು ಸ್ಪೋರ್ಟ್ ಕಾರುಗಳಲ್ಲಿ ಫೋರ್ಡ್ ಮಸ್ಟಾಂಗ್ ನಂ 1

17 ನೇ ಏಪ್ರಿಲ್ 2019ರನ್ನು ಫೋರ್ಡ್ ಸಂಸ್ಥೆಯು ರಾಷ್ಟ್ರೀಯ ಮಸ್ಟಾಂಗ್ ದಿನವನ್ನಾಗಿ ಆಚರಿಸಿತು. ಈ ದಿನವನ್ನು ಜನಪ್ರಿಯ ಮಸ್ಟಾಂಗ್ ಕಾರಿನ 55 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಆಚರಿಸಲಾಯಿತು. ಮಸ್ಟಾಂಗ್ ಕಾರಿನ ಅಭಿಮಾನಿಗಳಿಗೆ ಮತ್ತೊಂದು ಸಂತಸದ ವಿಷಯವೆನೇಂದರೆ ಮಸ್ಟಾಂಗ್ ಸತತ ನಾಲ್ಕನೇ ವರ್ಷದಲ್ಲೂ ಅತಿ ಹೆಚ್ಚು ಮಾರಾಟವಾಗುವ ಸ್ಪೋರ್ಟ್ಸ್ ಕೂಪೆ ಕಾರು ಎಂಬ ಖ್ಯಾತಿಯನ್ನು ಉಳಿಸಿಕೊಂಡಿದೆ.

55 ವರ್ಷವಾದ್ರು ಸ್ಪೋರ್ಟ್ ಕಾರುಗಳಲ್ಲಿ ಫೋರ್ಡ್ ಮಸ್ಟಾಂಗ್ ನಂ 1

ಮಸ್ಟಾಂಗ್ ಕಾರು ಸದ್ಯಕ್ಕೆ ಜಾಗತಿಕ ಸ್ಪೋರ್ಟ್ಸ್ ಕಾರು ಮಾರುಕಟ್ಟೆಯನ್ನು ಆಳುತ್ತಿದ್ದು, 2018ರಲ್ಲಿ ಹೆಚ್ಚು ಮಾರಾಟವಾದ ಸ್ಪೋರ್ಟ್ಸ್ ಕೂಪೆ ಆಗಿದೆ. ಸಂಶೋಧನಾ ದೈತ್ಯ ಐಹೆಚ್ಎಸ್ ಪ್ರಕಾರ 2018ರಲ್ಲಿ 1,13,066 ಕಾರುಗಳನ್ನು ಮಾರಾಟ ಮಾಡಲಾಗಿದೆ. ಅಂಕಿ ಅಂಶಗಳನ್ನು ಐಹೆಚ್ಎಸ್ 2018ರಲ್ಲಿ ಮಾರಾಟ ಮಾಡಲಾದ ಎಲ್ಲಾ ಹೊಸ ಸ್ಪೋರ್ಟ್ಸ್ ಕಾರುಗಳ ರಿಜಿಸ್ಟ್ರೇಷನ್ ಆಧಾರದ ಮೇಲೆ ನೀಡಿದೆ. 2018 ರಲ್ಲೂ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಮೂಲಕ ಮಸ್ಟಾಂಗ್ ಕಾರು ಪ್ರಪಂಚದ ಸ್ಪೋರ್ಟ್ಸ್ ಕೂಪೆ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿದೆ.

55 ವರ್ಷವಾದ್ರು ಸ್ಪೋರ್ಟ್ ಕಾರುಗಳಲ್ಲಿ ಫೋರ್ಡ್ ಮಸ್ಟಾಂಗ್ ನಂ 1

ಅಮೇರಿಕಾದಲ್ಲೂ ಅತಿ ಹೆಚ್ಚು ಸ್ಪೋರ್ಟ್ಸ್ ಕಾರುಗಳನ್ನು ಮಾರಾಟ ಮಾಡಲಾಗಿದ್ದು, 72,842 ಮಸ್ಟಾಂಗ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಫೋರ್ಡ್ ಗ್ಲೋಬಲ್ ಮಾರುಕಟ್ಟೆಯ ಅಧ್ಯಕ್ಶರಾದ ಜಿಮ್ ಫರ್ಲೆ ರವರು ಹೇಳಿದಂತೆ 55 ವರ್ಷಗಳ ಹಿಂದೆ ಮಸ್ಟಾಂಗ್ ಬಿಡುಗಡೆ ಮಾಡಿ ನಾವು ಹೊಸ ಇತಿಹಾಸವನ್ನು ನಿರ್ಮಿಸಿದ್ದೇವು ಎಂದಿದ್ದಾರೆ.

55 ವರ್ಷವಾದ್ರು ಸ್ಪೋರ್ಟ್ ಕಾರುಗಳಲ್ಲಿ ಫೋರ್ಡ್ ಮಸ್ಟಾಂಗ್ ನಂ 1

ಹಾಗೆಯೇ ಮಸ್ಟಾಂಗ್ ಅನ್ನು ಡ್ರೈವ್ ಮಾಡುವಾಗ ಸಿಗುವ ಸ್ವಾತಂತ್ರ್ಯ, ಅನುಭವ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ಅದರ ವಿ8 ಮಾಡುವ ಶಬ್ದಕ್ಕಿಂತ ಹೆಚ್ಚು ಇರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಈ ಕಾರು ಅತಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

55 ವರ್ಷವಾದ್ರು ಸ್ಪೋರ್ಟ್ ಕಾರುಗಳಲ್ಲಿ ಫೋರ್ಡ್ ಮಸ್ಟಾಂಗ್ ನಂ 1

ಫೋರ್ಡ್ ನ ಮಾರಾಟದ ಅಂಕಿ ಅಂಶಗಳ ಪ್ರಕಾರ ಮಸ್ಟಾಂಗ್ ಅನ್ನು 2018 ರಿಂದ 146 ಮಾರುಕಟ್ಟೆಗಳಲ್ಲಿ ಖರೀದಿಸಬಹುದಾಗಿದೆ. ಪ್ರಪಂಚದ 193 ದೇಶಗಳ 75.64% ಮಾರುಕಟ್ಟೆಯನ್ನು ವ್ಯಾಪಿಸಿದೆ. ಸುಮಾರು 5,00,000 ಕ್ಕೂ ಅಧಿಕ 6ನೇ ತಲೆಮಾರಿನ ಮಸ್ಟಾಂಗ್‍ಗಳನ್ನು 2015 ರಿಂದ ಈಚೆಗೆ ಪ್ರಪಂಚದದ್ಯಾಂತ ಮಾರಾಟ ಮಾಡಲಾಗಿದೆ. ಈ ಕಾರು ತನ್ನ ಗ್ಲೋಬಲ್ ಮಾರುಕಟ್ಟೆಯನ್ನು ಅಧಿಕಗೊಳಿಸಿಕೊಂಡಿದ್ದು ಸ್ಪೋರ್ಟ್ಸ್ ಕೂಪ್ ಸೆಗ್‍ಮೆಂಟಿನಲ್ಲಿ 15.4 % ಮಾರುಕಟ್ಟೆಯನ್ನು ಆಕ್ರಮಿಸಿದೆ. ಹೊಸ ಮಸ್ಟಾಂಗ್ ಬಿಲ್ಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ ನಂತರ ಗ್ಲೋಬಲ್ ಮಾರುಕಟ್ಟೆಯಲ್ಲಿನ ಮಾರಾಟವು 25% ಗಿಂತ ಹೆಚ್ಚಾಗಿದೆ.

MOST READ: ಸೂಪರ್ಬ್ ಕಾರು ಖರೀದಿಸಲು ಈಸಿ ಬೈ ಯೋಜನೆ ಘೋಷಿಸಿದ ಸ್ಕೋಡಾ

55 ವರ್ಷವಾದ್ರು ಸ್ಪೋರ್ಟ್ ಕಾರುಗಳಲ್ಲಿ ಫೋರ್ಡ್ ಮಸ್ಟಾಂಗ್ ನಂ 1

ಫೋರ್ಡ್ ಸದ್ಯಕ್ಕೆ ಭಾರತದಲ್ಲಿ ಮಸ್ಟಾಂಗ್ ನ ಒಂದು ಮಾದರಿಯನ್ನು ಮಸ್ಟಾಂಗ್ ಜಿಟಿ ಫಾಸ್ಟ್ ಬ್ಯಾಕ್ 5.0 ಎಲ್ ವಿ8 ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಈ ಕೂಪೆ ದೊಡ್ಡ ಪೆಟ್ರೋಲ್ ಎಂಜಿನ್ ಹೊಂದಿದ್ದು 396 ಬಿಹೆಚ್‍ಪಿ ಪವರನ್ನು 6,500 ಆರ್‍‍ಪಿಎಂ ನಲ್ಲಿ ಉತ್ಪಾದಿಸಿದರೆ, 515 ಎನ್ಎಂ ಟಾರ್ಕ್ ಅನ್ನು4,250 ಆರ್‍‍ಪಿಎಂ ನಲ್ಲಿ ಉತ್ಪಾದಿಸುತ್ತದೆ.

55 ವರ್ಷವಾದ್ರು ಸ್ಪೋರ್ಟ್ ಕಾರುಗಳಲ್ಲಿ ಫೋರ್ಡ್ ಮಸ್ಟಾಂಗ್ ನಂ 1

ಈ ಎಂಜಿನ್ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಫೋರ್ಡ್ ಮಸ್ಟಾಂಗ್ ಜಿಟಿ ಫಾಸ್ಟ್ ಬ್ಯಾಕ್ ನಲ್ಲಿ ರೇರ್ ಪಾರ್ಕಿಂಗ್ ಸೆನ್ಸರ್ ಗಳು, ಸೆಲೆಕ್ಟಬಲ್ ಡ್ರೈವಿಂಗ್ ಮೋಡ್ ಗಳು, ಡ್ಯುಯಲ್ ಝೋನ್ ಟೆಂಪರೇಚರ್ ಕಂಟ್ರೋಲ್, ರೇರ್ ವಿಂಡೋ ಡಿಫ್ರೊಸ್ಟರ್, ಲ್ಯಾಪ್ ಟೈಮರ್ ಇರುವ ಟ್ರ್ಯಾಕ್ ಅಪ್ಲಿಕೇಷನ್ ಗಳಿವೆ. ಮಸ್ಟಾಂಗ್ ಅಬ್ಸಲ್ಯೂಟ್ ಬ್ಲಾಕ್, ಮ್ಯಾಗ್ನೆಟೀಕ್, ಇನ್ ಗಾಟ್ ಸಿಲ್ವರ್, ಆಕ್ಸ್ ಫರ್ಡ್ ವೈಟ್, ರೇಸ್ ರೆಡ್ ಮತ್ತು ಟ್ರಿಪಲ್ ಯೆಲ್ಲೋ ಟ್ರೈಕೋಟ್ ನಂತಹ 6 ಬಣ್ಣಗಳಲ್ಲಿ ಲಭ್ಯವಿದೆ.

More from DriveSpark

Article Published On: Saturday, April 20, 2019, 15:08 [IST]
English summary
Ford Mustang Retains Best-Selling Sports Coupe Crown — Still On The Iron Throne - Read in Kannada
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+