ಸೂಪರ್ಬ್ ಕಾರು ಖರೀದಿಸಲು ಈಸಿ ಬೈ ಯೋಜನೆ ಘೋಷಿಸಿದ ಸ್ಕೋಡಾ

ಸ್ಕೋಡಾ ಆಟೋ ಇಂಡಿಯಾ ಸ್ಕೋಡಾ ಸೂಪರ್ಬ್ ಕಾರು ಖರೀದಿಸಲು ಬೈ ಬ್ಯಾಕ್ ಯೋಜನೆ ಘೋಷಿಸಿದೆ. ಈ ಯೋಜನೆಯು ಸ್ಕೋಡಾ ಫೈನಾನ್ಸಿಯಲ್ ಸರ್ವಿಸಸ್ ಮೂಲಕ ದೊರೆಯಲಿದೆ. ಈಸಿಬೈ ಯೋಜನೆಯಡಿಯಲ್ಲಿ ಗ್ರಾಹಕರು ಕಡಿಮೆ ಇಎಂಐ ನಲ್ಲಿ ಸ್ಕೋಡಾ ಸೂಪರ್ಬ್ ಕಾರನ್ನು ಖರೀದಿಸಬಹುದು. ಗ್ರಾಹಕರು 100 % ಫೈನಾನ್ಸ್ ಮತ್ತು 3 ವರ್ಷಗಳ ಅವಧಿಗೆ 40 % ನಲ್ಲಿ ಲೋವರ್ ಇಕ್ವೇಟೆಡ್ ಮಂತ್ಲಿ ಇನ್ಸ್ಟಾಲ್ ಮೆಂಟ್ ಗಳನ್ನು ಪಡೆಯಬಹುದು.

ಸೂಪರ್ಬ್ ಕಾರು ಖರೀದಿಸಲು ಈಸಿ ಬೈ ಯೋಜನೆ ಘೋಷಿಸಿದ ಸ್ಕೋಡಾ

ಸ್ಕೋಡಾ ಈಸಿ ಬೈ ಬ್ಯಾಕ್ ಯೋಜನೆಯನ್ನುಮೂರು ವರ್ಷಗಳ ಅವಧಿಗೆ 57 % ವರೆಗೂ ಬೈಬ್ಯಾಕ್ ಯೋಜನೆಯ ಮೇಲೆ ಖಚಿತವಾಗಿ ನೀಡಲಾಗುವುದು. ಗ್ರಾಹಕರಿಗೆ ಆಯ್ಕೆಗಳನ್ನು ನೀಡಲಾಗಿದ್ದು ಸ್ವತಃ ಡೀಲರ್ ಗಳಿಗೆ ನೀಡುವ ಅಯ್ಕೆಯನ್ನು (ಕಾರು ಯಾವುದೇ ಹಾನಿಯನ್ನು ಮಾಡದೇ ಇರುವಂತೆ ನೋಡಿಕೊಳ್ಳುವುದು, ಇಂತಿಷ್ಟೆ ಕಿ.ಮೀ ಓಡುವಂತೆ ನೋಡಿಕೊಳ್ಳುವುದು) ಅಥವಾ ಗ್ರಾಹಕರು ತಾವೇ ಕಾರನ್ನು ಇಟ್ಟುಕೊಳ್ಳಲು ಬಯಸಿದಲ್ಲಿ ಬಾಕಿ ಇರುವ ಮೊತ್ತವನ್ನು ಪಾವತಿಸಿ ಮಾಲೀಕರಾಗ ಆಯ್ಕೆಯನ್ನು ನೀಡಲಾಗಿದೆ. ಮೂರನೇ ಆಯ್ಕೆ ಎಂದರೆ ಈಸಿ ಬೈ ನಲ್ಲಿ ಮತ್ತೆ ಕೆಲ ಒಪ್ಪಂದದ ಅವಧಿಗೆ ಪುನಃ ಫೈನಾನ್ಸ್ ಪಡೆಯಬಹುದು.

ಸೂಪರ್ಬ್ ಕಾರು ಖರೀದಿಸಲು ಈಸಿ ಬೈ ಯೋಜನೆ ಘೋಷಿಸಿದ ಸ್ಕೋಡಾ

ಸ್ಕೋಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಸೇಲ್ಸ್ ಸರ್ವಿಸ್ ಮತ್ತು ಮಾರ್ಕೆಟಿಂಗ್ ಡೈರೆಕ್ಟರ್, ಜಾಕ್ ಹೊಲಿಸ್ ರವರು ಹೇಳುವಂತೆ ಸ್ಕೋಡಾ ತನ್ನ ಪ್ರಸ್ತಾಪದಲ್ಲಿ ತನ್ನದೇ ಆದ ಬ್ರಾಂಡ್ ಹೊಂದಿದ್ದು, ತನ್ನದೇ ಮೌಲ್ಯವನ್ನು ಪ್ರತಿಪಾದಿಸುತ್ತದೆ. ಪ್ರಿಮಿಯಂ ಪ್ರಾಡಕ್ಟ್ ಗಳನ್ನು ನೀಡುವ ಜೊತೆಗೆ ಈಸಿ ಬೈ ಯೋಜನೆಯು ಗ್ರಾಹಕರ ಬಯಕೆಗಳನ್ನು ಅರ್ಥೈಸಿಕೊಂಡು ಯಾವುದೇ ತೊಂದರೆ ಇಲ್ಲದೇ ಮಾಲೀಕರಾಗಲು ಅವಕಾಶ ನೀಡುವ ಯತ್ನವಾಗಿದೆ.

ಸೂಪರ್ಬ್ ಕಾರು ಖರೀದಿಸಲು ಈಸಿ ಬೈ ಯೋಜನೆ ಘೋಷಿಸಿದ ಸ್ಕೋಡಾ

ಫೋಕ್ಸ್ ವ್ಯಾಗನ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ನ ಮ್ಯಾನೆಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆಶೀಷ್ ದೇಶಪಾಂಡೆ ರವರು ಹೇಳುವಂತೆ ಹೊಸ ರೀತಿಯಾಗಿ ಸಾಲ ಸೌಲಭ್ಯವನ್ನು ನೀಡುವ ವಿಭಿನ್ನ ಪ್ರಯತ್ನವಾದ ಈಸಿ ಬೈ ಯೋಜನೆಯಿಂದ ಒನ್ ಸ್ಟಾಪ್ ಸಲ್ಯೂಷನ್ ಕಡೆಗೆ ಮತ್ತೊಂದು ಹೆಜ್ಜೆ ಇಡುತ್ತಿದ್ದೇವೆ. ಇದರಿಂದ ಗ್ರಾಹಕರ ಹಣಕಾಸಿನ ಮತ್ತು ಮಹತ್ವಾಕಾಂಕ್ಷೆಯ ಅಗತ್ಯಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗಬಹುದೆಂದು ನಮಗೆ ವಿಶ್ವಾಸವಿದೆ ಎಂದು ತಿಳಿಸಿದರು.

MOST READ: ಏರ್‍‍ಬ್ಯಾಗ್ ಬದಲಿಸಲು ಅಕಾರ್ಡ್ ರೀ ಕಾಲ್ ಮಾಡಿದ ಹೊಂಡಾ

ಸೂಪರ್ಬ್ ಕಾರು ಖರೀದಿಸಲು ಈಸಿ ಬೈ ಯೋಜನೆ ಘೋಷಿಸಿದ ಸ್ಕೋಡಾ

ಸ್ಕೋಡಾ ಸೂಪರ್ಬ್ 7 ಮಾದರಿಗಳಲ್ಲಿ ಲಭ್ಯವಿದೆ. ಇದರಲ್ಲಿ ನಾಲ್ಕು ಮಾದರಿಗಳು ಪೆಟ್ರೋಲ್ ದಾಗಿದ್ದು, 1.8 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿವೆ. ಒಂದು ಮಾದರಿಯು ಮ್ಯಾನುವಲ್ ಟ್ರಾನ್ಸ್ ಮಿಷನ್ ನಲ್ಲಿ ದೊರೆಯಲಿದ್ದರೆ ಉಳಿದ ಮೂರು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನಲ್ಲಿ ದೊರೆಯುತ್ತವೆ.

ಸೂಪರ್ಬ್ ಕಾರು ಖರೀದಿಸಲು ಈಸಿ ಬೈ ಯೋಜನೆ ಘೋಷಿಸಿದ ಸ್ಕೋಡಾ

ಡೀಸೆಲ್ ಮಾದರಿಯ ವಾಹನಗಳು 2.0 ಲೀಟರ್ ಡೀಸೆಲ್ ಎಂಜಿನ್ ಆಗಿದ್ದು, ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿವೆ. ಸ್ಕೋಡಾ ಸೂಪರ್ಬ್ ಏಳು ವಿವಿಧ ಬಣ್ಣಗಳಲ್ಲಿ ದೊರೆಯುತ್ತದೆ. ಅವುಗಳೆಂದರೆ - ಕ್ಯಾಂಡಿ ವೈಟ್, ಮ್ಯಾಗ್ನೆಟಿಕ್ ಮೆಟಾಲಿಕ್, ಬ್ಯುಸಿನೆಸ್ ಗ್ರೇ ಮೆಟಾಲಿಕ್, ಬ್ಲಾಕ್ ಮ್ಯಾಜಿಕ್ ಪರ್ಲ್ ಎಫೆಕ್ಟ್, ವೆಲ್ವೆಟ್ ರೆಡ್ ಮೆಟಾಲಿಕ್, ಸ್ಟೀಲ್ ಗ್ರೇ ಮತ್ತು ಮೂನ್ ವೈಟ್ ಮೆಟಾಲಿಕ್. ಭಾರತದ ಎಕ್ಸ್ ಶೋ ರೂಂ ದರದಂತೆ ಬೆಲೆಗಳನ್ನು ರೂ 25.99 ಲಕ್ಷಗಳಿಂದ ರೂ 33.49 ಲಕ್ಷಗಳವರೆಗೆ ನಿಗದಿಪಡಿಸಲಾಗಿದೆ.

Most Read Articles

Kannada
English summary
Skoda India Launches EasyBuy Program For Top Model — Superb! - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X