Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡೀಲರ್ ಬಳಿ ತಲುಪಿದ 2021ರ ಸ್ಕೋಡಾ ಸೂಪರ್ಬ್ ಕಾರು
ಸ್ಕೋಡಾ ಆಟೋ ಇಂಡಿಯಾ ಕಂಪನಿಯು ತನ್ನ 2021ರ ಸೂಪರ್ಬ್ ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಸ್ಕೋಡಾ ಸೂಪರ್ಬ್ ಕಾರು ಕೆಲವು ಹೊಸ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ.

ಈ ಹೊಸ ಸ್ಕೋಡಾ ಸೂಪರ್ಬ್ ಕಾರು ಡೀಲರ್ ಬಳಿ ತಲುಪಿರುವ ಚಿತ್ರಗಳನ್ನು ಗಾಡಿವಾಡಿ ಬಹಿರಂಗಪಡಿಸಿದೆ. ಈ ಹೊಸ ಸೂಪರ್ಬ್ ಕಾರು ಡೀಲರ್ ಬಳಿ ತಲುಪಿರುವುದರಿಂದ ಶೀಘ್ರದಲ್ಲೇ ಬಿಡುಗಡೆಯಾಗಬಹುದು. ಇನ್ನು 2021ರ ಸ್ಕೋಡಾ ಸೂಪರ್ಬ್ ಸೆಡಾನ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಬಂಪರ್‌ಗಳು, ಮರುವಿನ್ಯಾಸಗೊಳಿಸಲಾದ ಗ್ರಿಲ್ ವಿಭಾಗ, ದುಬಾರಿ ಕ್ರೋಮ್ ಅಸ್ಸೆಂಟ್ ಗಳ ಮತ್ತು ಫುಲ್ ಎಲ್‌ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ.

ಇದರೊಂದಿಗೆ, ಕಾಂಟ್ರಾಸ್ಟ್ ಸ್ಪರ್ಶಗಳು, ಎಲ್ & ಕೆ ರೂಪಾಂತರದಲ್ಲಿ ವಿಶಿಷ್ಟವಾದ ಶೇಡ್ ಗಳು, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ಪಾರ್ಕ್ ಅಸಿಸ್ಟ್, ಲೆದರ್ ಸೀಟ್, ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಮತ್ತು ವರ್ಚುವಲ್ ಕಾಕ್‌ಪಿಟ್ ಅನ್ನು ಒಳಗೊಂಡಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

2021ರ ಸ್ಕೋಡಾ ಸೂಪರ್ಬ್ ಮಾದರಿಯು ದೇಶೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿರುವುದರಿಂದ ಡಿ-ಸೆಗ್ಮೆಂಟ್ ಸೆಡಾನ್ ಮತ್ತೊಂದು ನವೀಕರಣವನ್ನು ಪಡೆಯುತ್ತಿದೆ. ಹೊಸ ನವೀಕರಣಗಳ ಭಾಗವಾಗಿ, ಸ್ಪೋರ್ಟ್‌ಲೈನ್ ಮತ್ತು ಎಲ್ & ಕೆ ಎಂಬ ರೂಪಾಂತರಗಳಲ್ಲಿ ಬಿಡುಗಡೆಯಾಗಬಹುದು.

ಇದು ಸ್ಪೋರ್ಟ್‌ಲೈನ್ ಬ್ಯಾಡ್ಜಿಂಗ್‌ನೊಂದಿಗೆ ಹೊಸ ಸ್ಟೀಯರಿಂಗ್ ವ್ಹೀಲ್, ವರ್ಚುವಲ್ ಕಾಕ್‌ಪಿಟ್‌ನ ಅನ್ನು ಹೊಂದಿರುತ್ತದೆ. ಎರಡೂ ರೂಪಾಂತರಗಳಲ್ಲಿ ಲಭ್ಯವಿರುವ ಕೆಲವು ಗಮನಾರ್ಹವಾದ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಇದರಲ್ಲಿ ಯುಎಸ್‌ಬಿ-ಸಿ ಪೋರ್ಟ್ ಅಪ್ ಫ್ರಂಟ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯೊಂದಿಗೆ ನವೀಕರಿಸಿದ ಎಂಐಬಿ 3 ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರುತ್ತದೆ.

ಈ ಇನ್ಫೋಟೈನ್‌ಮೆಂಟ್ ಸಿಸ್ಟಂಗಾಗಿ ಹೊಸ ಇಂಟರ್ಫೇಸ್, ಎಸ್‌ಡಿ ಕಾರ್ಡ್ ನೊಂದಿಗೆ ನ್ಯಾವಿಗೇಷನ್ ಸಿಸ್ಟಂ, ಹ್ಯಾಂಡ್ಸ್-ಫ್ರೀ ಪಾರ್ಕ್ ಅಸಿಸ್ಟ್ ಮತ್ತು 360 ಡಿಗ್ರಿ ಕ್ಯಾಮೆರಾ ಮತ್ತು ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಫೀಚರ್ ಗಳು ಮತ್ತು ಕಾಸ್ಮೆಟಿಕ್ ನವೀಕರಣಗಳ ಸೇರ್ಪಡೆಯ ಹೊರತಾಗಿಯೂ, 2021ರ ಸ್ಕೋಡಾ ಸೂಪರ್ಬ್ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಹೊಸ ಕಾರಿನಲ್ಲಿ ಅದೇ 2.0-ಲೀಟರ್ ಟಿಎಸ್‌ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ.

ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಡ್ಯುಯಲ್-ಕ್ಲಾಚ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

2021ರ ಸ್ಕೋಡಾ ಸೂಪರ್ಬ್ ಕಾರು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಸ್ಕೋಡಾ ಕಂಪನಿಯು ತನ್ನ ಸರಣಿಯ ಎಲ್ಲಾ ಕಾರುಗಳ ಬೆಲೆ ಏರಿಕೆ ಮಾಡಿರುವುದರಿಂದ ಹೊಸ ಸೂಪರ್ಬ್ ಕಾರಿನ ಬೆಲೆಯು ತುಸು ದುಬಾರಿಯಾಗಿರುತ್ತದೆ