Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಏರ್‍ಬ್ಯಾಗ್ ಬದಲಿಸಲು ಅಕಾರ್ಡ್ ರೀ ಕಾಲ್ ಮಾಡಿದ ಹೊಂಡಾ
ಹೊಂಡಾ ಕಾರು ಕಂಪನಿಯು ಭಾರತದಲ್ಲಿರುವ ತನ್ನ ಅಕಾರ್ಡ್ ಸೆಡಾನ್ ಕಾರುಗಳನ್ನು ರೀ ಕಾಲ್ ಮಾಡಿದೆ. ದೇಶಿಯ ಮಾರುಕಟ್ಟೆಯಲ್ಲಿರುವ ಕಾರುಗಳಲ್ಲಿನ ದೋಷಯುಕ್ತ ಟಕಾಟಾ ಏರ್‍ಬ್ಯಾಗ್ ಸಮಸ್ಯೆ ಕಂಡು ಬಂದಿದ್ದು, ಜಾಗತಿಕ ಮುನ್ನೆಚ್ಚರಿಕೆ ಕ್ರಮವಾಗಿ ಜಪಾನ್ ಮೂಲದ ಕಾರು ತಯಾರಕ ಕಂಪನಿಯು ಈ ರೀ ಕಾಲ್ ಮಾಡಿದೆ.

ರೀ ಕಾಲ್ ನ ಭಾಗವಾಗಿ ಹೊಂಡಾ ಸುಮಾರು 3,699 ಕ್ಕೂ ಹೆಚ್ಚು ಅಕಾರ್ಡ್ ಕಾರುಗಳನ್ನು ರೀ ಕಾಲ್ ಮಾಡಲಾಗಿದೆ. 2003 ರಿಂದ 2006ರ ಮಧ್ಯೆ ತಯಾರಾದ ಬಹುತೇಕ ಹೊಂಡಾ ಅಕಾರ್ಡ್ ಕಾರುಗಳು ತೊಂದರೆಗೊಳಗಾಗಿವೆ. ಈ ಯೋಜನೆಯು 18ನೇ ಏಪ್ರಿಲ್ 2019ರಿಂದ ಶುರುವಾಗಲಿದ್ದು, ದೇಶದಲ್ಲಿರುವ ಎಲ್ಲಾ ಹೊಂಡಾ ಡೀಲರ್ ಗಳ ಬಳಿ ದೋಷಪೂರಿತ ಏರ್‍ಬ್ಯಾಗ್‍ಗಳನ್ನು ಬದಲಿಸಿಕೊಳ್ಳಬಹುದು. ಈ ಬದಲಾವಣೆಗಾಗಿ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕ ನೀಡುವಂತಿಲ್ಲ.

ಹೊಂಡಾ ಕಂಪನಿಯು 2003 ರಿಂದ 2006ರ ಮಧ್ಯೆ ತಯಾರಾದ ಅಕಾರ್ಡ್ ಸೆಡಾನ್ ಹೊಂದಿರುವ ಗ್ರಾಹಕರೊಂದಿಗೆ ಖುದ್ದಾಗಿ ವ್ಯವಹರಿಸಲಿದೆ. ಗ್ರಾಹಕರು ತಮ್ಮ 17 ಅಂಕಿಗಳ ಆಲ್ಫಾ ನ್ಯೂಮೆರಿಕ್ ವಿಐಎನ್ (ವೆಹಿಕಲ್ ಐಡೆಂಟಿಫಿಕೇಷನ್ ನಂಬರ್) ಸಂಖ್ಯೆಗಳನ್ನು ಕಂಪನಿಯ ಮೈಕ್ರೋ ಸೈಟ್ ನಲ್ಲಿ ನಮೂದಿಸಿ ಪರೀಕ್ಷಿಸಿಕೊಳ್ಳಬಹುದು.

ಗ್ರಾಹಕರು ಖುದ್ದಾಗಿ ಡೀಲರ್‍ಗಳನ್ನು ಭೇಟಿಯಾಗಿ ತಮ್ಮ ವಾಹನಕ್ಕೆ ತೊಂದರೆಯಾಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಬಹುದು.ಇದು ಟಕಾಟಾ ಏರ್‍ಬ್ಯಾಗ್‍ಗಳ ಬಗ್ಗೆ ಹೊಂಡಾ ಕಂಪನಿ ಮಾಡುತ್ತಿರುವ ಎರಡನೇ ರೀ ಕಾಲ್ ಆಗಿದೆ.

ಮೊದಲನೇ ರೀ ಕಾಲ್ ಅನ್ನು 2013ರಲ್ಲಿ ತಯಾರಾಗಿ ತೊಂದರೆಗೊಳಗಾಗಿದ್ದ ಸುಮಾರು 22,834 ಕ್ಕೂ ಹೆಚ್ಚು ಅಕಾರ್ಡ್, ಸಿಟಿ ಮತ್ತು ಜಾಝ್ ಮಾಡೆಲ್ ಕಾರುಗಳಿಗಾಗಿ ಜನವರಿ 2018 ರಲ್ಲಿ ರೀ ಕಾಲ್ ಮಾಡಲಾಗಿತ್ತು. ಗ್ಲೋಬಲ್ ಮಾರುಕಟ್ಟೆಯಲ್ಲಿ ಹೊಂಡಾ ಮಾತ್ರವೇ ಕಾರುಗಳನ್ನು ರೀ ಕಾಲ್ ಮಾಡಿಲ್ಲ. ಮೂಲಗಳ ಪ್ರಕಾರ ಬಿಎಂಡಬ್ಲ್ಯೂ, ಮರ್ಸಿಡಿಸ್ ಬೆಂಜ್, ವೊಲ್ಕ್ಸ್ ವ್ಯಾಗನ್, ಸುಬಾರು, ಫೆರಾರಿ ಮತ್ತು ಟೆಸ್ಲಾ ಮುಂತಾದ ಕಾರು ತಯಾರಕ ಕಂಪನಿಗಳೂ ಸಹ ಇದೇ ಕಾರಣಕ್ಕಾಗಿಯೇ ರೀ ಕಾಲ್ ಮಾಡಿದ್ದವು. ವಿವಿಧ ಮೂಲಗಳ ಪ್ರಕಾರ ಅಮೇರಿಕಾದಲ್ಲಿಯೇ 1.7 ಮಿಲಿಯನ್ ಗೂ ಹೆಚ್ಚು ವೆಹಿಕಲ್ ಗಳನ್ನು ಟಕಾಟಾ ಏರ್‍ಬ್ಯಾಗ್ ತೊಂದರೆಗಾಗಿ ರೀ ಕಾಲ್ ಮಾಡಲಾಗಿತ್ತು.
MOST READ: 2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಹೊಂಡಾ ಸದ್ಯಕ್ಕೆ 9 ನೇ ತಲೆಮಾರಿನ ಹೊಂಡಾ ಅಕಾರ್ಡ್ ಹೈಬ್ರಿಡ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಹೊಂಡಾ ಅಕಾರ್ಡ್ ನ ಮಾರುಕಟ್ಟೆಯ ಬೆಲೆಯನ್ನು ದೆಹಲಿಯ ಎಕ್ಸ್ ಶೋ ರೂಂ ದರದಂತೆ ರೂ 43.21 ಲಕ್ಷ ಎಂದು ನಿಗದಿಪಡಿಸಲಾಗಿದೆ. ಅತೀ ಶೀಘ್ರದಲ್ಲೆ ಹೊಂಡಾ ಕಂಪನಿಯು ತನ್ನ 10 ನೆ ತಲೆಮಾರಿನ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. 10 ನೇ ತಲೆಮಾರಿನ ಹೊಂಡಾ ಅಕಾರ್ಡ್ ಕಾರು ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ದೇಶಿಯ ಮಾರುಕಟ್ಟೆಗೂ ಲಗ್ಗೆ ಇಡುವ ಸಾಧ್ಯತೆಗಳಿವೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಹೊಂಡಾ ರೀಕಾಲ್ ಹಿಂದಿನ ತಲೆಮಾರಿನ ಕಾರುಗಳಿಗೆ ಆದ ತೊಂದರೆಯನ್ನು ಸರಿಪಡಿಸುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ರೀಕಾಲ್ ಯೋಜನೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಟಕಾಟಾ ಏರ್‍ಬ್ಯಾಗ್ ಗಳಿಗೆ ಆದ ತೊಂದರೆಯನ್ನು ಸರಿಪಡಿಸಲು ಮಾಡಲಾಗುತ್ತಿರುವ ಯೋಜನೆಯ ಭಾಗವಾಗಿದೆ. ಹತ್ತಿರದಲ್ಲಿರುವ ಹೊಂಡಾ ಡೀಲರ್ ಶಿಪ್ ಗೆ ಭೇಟಿ ನೀಡಿ ನಿಮ್ಮ ವಾಹನಕ್ಕೂ ತೊಂದರೆಯಾಗಿದ್ದರೆ ಪರೀಕ್ಷಿಸಿ ಕೊಳ್ಳಿರಿ.