2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಸೆಡಾನ್ ಕಾರುಗಳ ವಿಭಾಗದಲ್ಲಿ ಹೋಂಡಾ ನಿರ್ಮಾಣದ ಸಿವಿಕ್ ಜನಪ್ರಿಯತೆ ಇಂದು ನಿನ್ನೆಯದಲ್ಲ. 1972ರಿಂದಲೂ ಹತ್ತು ಹಲವು ಬದಲಾವಣೆಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವ ಸಿವಿಕ್ ಕಾರು ಸದ್ಯ 10ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗಾಗಿ ಸಜ್ಜುಗೊಂಡಿದ್ದು, ಮಧ್ಯಮ ಗಾತ್ರದ ಐಷಾರಾಮಿ ಸೆಡಾನ್ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಜಾಗತಿಕವಾಗಿ 1972ರಲ್ಲೇ ಬಿಡುಗಡೆಯಾಗಿರುವ ಸಿವಿಕ್ ಕಾರು ತದನಂತರದ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಕಾಲಕಾಲಕ್ಕೆ ಬದಲಾಗುತ್ತಾ ಸದ್ಯಕ್ಕೆ 10ನೇ ತಲೆಮಾರಿಗೆ ಬಂದು ನಿಂತಿದೆ. ವಿಶ್ವಾದ್ಯಂತ ಜನಪ್ರಿಯತೆ ಗಳಿಸಿರುವ ಸಿವಿಕ್ ಕಾರು 2006ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ 8ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಿದ್ದಲ್ಲದೇ 2013ರಲ್ಲಿ ಕಾರಣಾಂತರಗಳಿಂದ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಆದ್ರೆ ಬದಲಾದ ಮಾರುಕಟ್ಟೆಯ ಸನ್ನಿವೇಶಗಳಿಂದಾಗಿ ಮಹತ್ವದ ನಿರ್ಧಾರ ಕೈಗೊಂಡಿರುವ ಹೋಂಡಾ ಸಂಸ್ಥೆಯು ಹೊಸ ಸಿವಿಕ್ ಕಾರನ್ನು ಹಲವು ಹೊಸ ಬದಲಾವಣೆಗಳೊಂದಿಗೆ ಮರುಬಿಡುಗಡೆಯಾಗಿ ಸಿದ್ದಗೊಳಿಸಿದೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಹೋಂಡಾ ಸಂಸ್ಥೆಯು ಮುಂದಿನ ತಿಂಗಳು ಮಾರ್ಚ್ 7ರಂದು ಹೊಸ ಸಿವಿಕ್ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿವಿಕ್ ಕಾರುಗಳ ಮೊದಲ ಚಾಲನಾ ವಿಮರ್ಶೆಗಾಗಿ ಡ್ರೈವ್‌ಸ್ಪಾರ್ಕ್ ತಂಡವನ್ನು ಆಹ್ವಾನ ಮಾಡಿದ್ದಲ್ಲದೇ ಜನಪ್ರಿಯ ಪ್ರವಾಸಿ ತಾಣವಾದ ನಂದಿ ಬೆಟ್ಟದಲ್ಲಿ ಸ್ಪೆಷಲ್ ಡ್ರೈವ್ ಕಲ್ಪಿಸಿಕೊಟ್ಟಿತ್ತು.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಮಧ್ಯಮ ಗಾತ್ರದ ಐಷಾರಾಮಿ ಸೆಡಾನ್ ವಿಭಾಗದಲ್ಲಿ ಈ ಬಾರಿ ಗುರುತರ ಹೆಜ್ಜೆಯಿರಿಸಲು ಪ್ರಯತ್ನಿಸಿರುವ ಹೋಂಡಾ ಸಂಸ್ಥೆಯು ಟೊಯೊಟಾ ಕರೊಲ್ಲಾ, ಸ್ಕೋಡಾ ಒಕ್ಟಿವಿಯಾ ಮತ್ತು ಹ್ಯುಂಡೈ ಎಲಾಂಟ್ರಾ ಕಾರುಗಳೊಂದಿಗೆ ತೀವ್ರ ಪೈಪೋಟಿ ನಡೆಸುವ ನೀರಿಕ್ಷೆಯಲ್ಲಿದೆ. ಹಾಗಾದ್ರೆ ಈ ಹಿಂದಿನ ತಲೆಮಾರಿನ ಸಿವಿಕ್ ಕಾರಿಗೂ ಮತ್ತು ಹೊಸ ತಲೆಮಾರಿನ ಸಿವಿಕ್ ಕಾರಿಗೂ ಯಾವೆಲ್ಲಾ ಬದಲಾವಣೆಗಳಿವೆ ಮತ್ತು ಪ್ರತಿಸ್ಪರ್ಧಿಗಳಿಗೆ ಹೇಳಿ ಪೈಪೋಟಿ ನೀಡಬಲ್ಲದು ಎನ್ನುವುದನ್ನು ನಾವಿಲ್ಲಿ ಸಂಪೂರ್ಣ ಚರ್ಚಿಸಿದ್ದೇವೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಕಾರಿನ ಡಿಸೈನ್

2018ರ ಫೆಬ್ರುವರಿಯಲ್ಲಿ ನಡೆದಿದ್ದ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಸೆಡಾನ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದ ಹೊಸ ತಲೆಮಾರಿನ ಸಿವಿಕ್ ಕಾರುಗಳು ಮಧ್ಯಮ ಗಾತ್ರದ ಐಷಾರಾಮಿ ಸೆಡಾನ್ ಕಾರುಗಳಲ್ಲೇ ಬೆಸ್ಟ್ ಫೀಚರ್ಸ್ ಹೊತ್ತುಬರುವ ಸುಳಿವು ನೀಡಿತ್ತು.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಇದೀಗ ಅಂತಿಮವಾಗಿ ಗ್ರಾಹಕರ ಕೈ ಸೇರಲು ಸಿದ್ದವಾಗಿರುವ ಹೊಸ ಸಿವಿಕ್ ಕಾರು ಹಳೆಯ ತಲೆಮಾರಿನ ಕಾರಿಗಿಂತಲೂ ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ವಿಸ್ತರಿಸಲಾದ ಕ್ರೋಮ್ ಗ್ರಿಲ್, ಕಣ್ಣಗಳ ಮಾದರಿಗಳಲ್ಲಿ ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್ ಜೊತೆ ಡೇ ಟೈಮ್ ರನ್ನಿಂಗ್ ಲೈಟ್ಸ್, ಮರುವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್ ಮತ್ತು ಎಲ್ಇಡಿ ಫಾಗ್ ಲ್ಯಾಂಪ್ ಇದರಲ್ಲಿವೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಹೀಗಾಗಿ ಸಿವಿಕ್ ಕಾರು ಸೆಡಾನ್ ಸ್ಪೋರ್ಟಿ ಲುಕ್‌‌ನಲ್ಲಿ ಮಿಂಚಲಿದ್ದು, ಕಾರಿನ ಬ್ಯಾನೆಟ್‌ನಿಂದ ಸಿ ಪಿಲ್ಲರ್ ವರೆಗೆ ನೀಡಲಾಗಿರುವ ಸ್ಪೋರ್ಟಿ ಲೈನ್ ಸೆಡಾನ್ ಪ್ರಿಯರ ಮೊದಲ ಆಕರ್ಷಣೆಯಾಗಿರುತ್ತದೆ. ಜೊತೆಗೆ ಕಾರಿನ ಹಿಂಭಾಗದ ಡಿಸೈನ್ ಕೂಡಾ ಆಕರ್ಷಕವಾಗಿರುವುದಲ್ಲದೇ ಫುಲ್ ಎಲ್ಇಡಿ ಯುನಿಟ್ ಹೊಂದಿರುವ ಟೈಲ್ ಲೈಟ್, ಬೂಟ್ ಲಿಪ್ ಸ್ಪಾಯ್ಲರ್‌ಗೆ ಹೊಂದಿಕೊಂಡಂತಿರುವ ಹೋಂಡಾ ಬ್ಯಾಡ್ಜ್ ಕೂಡಾ ಗಮನಸೆಳೆಯುತ್ತೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಕಾರಿನ ಒಳವಿನ್ಯಾಸ

ಹೊಸ ಸಿವಿಕ್ ಕಾರಿನಲ್ಲಿ ಈ ಬಾರಿ ಹಲವು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದ್ದು, ಲೆದರ್ ಹೊದಿಕೆಯುಳ್ಳ ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್ಹ್ ನೀಡಲಾಗಿದೆ. ಇದರಲ್ಲಿ ಎಡಭಾಗದ ಸ್ಪೋಕ್ ವಿಭಾಗದಲ್ಲಿ ಇನ್ಪೋಟೈನ್‌ಮೆಂಟ್, ಕರೆ ಸ್ವಿಕಾರದ ಬಟನ್‌ಗಳನ್ನು ನೀಡಲಾಗಿದ್ದು, ಬಲಭಾಗದ ಸ್ಪೋಕ್‌ನಲ್ಲಿ ಕ್ರೂಸ್ ಕಂಟ್ರೋಲ್ ಇರಿಸಲಾಗಿದೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಹಾಗೆಯೇ ಸ್ಟೀರಿಂಗ್ ಕೆಳಭಾಗದಲ್ಲಿರು ಡಿಜಿಟಲ್ ಡಿಸ್‌ಪ್ಲೇನಲ್ಲಿ ಕಾರಿನ ವೇಗ, ಫ್ಯೂಲ್ ಟ್ಯಾಂಕ್ ಮಾಹಿತಿ, ಫೋನ್ ನಂಬರ್ ಸೇರಿದಂತೆ ವಿವಿಧ ಮಾಹಿತಿಗಳನ್ನು ಒಂದೇ ಸೂರಿನಡಿ ಪಡೆಯಬಹುದಾಗಿದ್ದು, 7-ಇಂಚಿನ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೇ ಜೊತೆಗೆ ಸ್ಮಾರ್ಟ್ ಫೋನ್ ಮೂಲಕವೇ ಕಾರಿನಲ್ಲಿರುವ ಬಹುತೇಕ ಕಂಟ್ರೋಲ್ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಇದರೊಂದಿಗೆ ಕಾರು ಚಾಲನೆಯಲ್ಲಿ ಮನರಂಜನೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 160-ವ್ಯಾಟ್ ಆಡಿಯೋ ಸೌಲಭ್ಯದೊಂದಿಗೆ 6.7-ಇಂಚಿನ ಫುಲ್ ರೇಂಜ್ ಸ್ಪಿಕರ್ಸ್ ಬಳಸಲಾಗಿದ್ದು, ಎ ಪಿಲ್ಲರ್ ಮತ್ತು ರಿಯರ್ ಡೆಕ್‌ನಲ್ಲಿ ಒಟ್ಟು 8 ಸ್ಪಿಕರ್ಸ್ ಸೆಟಪ್ ಜೋಡಿಸಲಾಗಿದೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಆಸನ ಸೌಲಭ್ಯ

ಪ್ರೀಮಿಯಂ ಪ್ರೇರಿತ ಸಿವಿಕ್ ಕಾರಿನಲ್ಲಿ ಪ್ರಯಾಣಿಕರಿಗೆ ಉತ್ತಮ ಆಸನ ಸೌಲಭ್ಯಗಳನ್ನು ನೀಡಲಾಗಿದ್ದು, 5 ಸೀಟರ್ ಮಾದರಿಯ ಅತ್ಯುತ್ತಮ ಸೆಡಾನ್ ಮಾದರಿ ಇದಾಗಿದೆ. ಹಿಂಬದಿಯಲ್ಲಿ ಮೂರು ಜನ ಕೂರಬಹುದಾಗಿದ್ದು, ದೂರದ ಪ್ರಮಾಣದ ವೇಳೆ ಇಬ್ಬರಿಗೆ ಮಾತ್ರ ಸೂಕ್ತ ಎನ್ನಬಹುದು. ಯಾಕೆಂದ್ರೆ ಹಿಂಬದಿಯ ಸೀಟುಗಳ ಮಧ್ಯದಲ್ಲಿರುವ ಆರ್ಮ್ ರೆಸ್ಟ್ ಸೌಲಭ್ಯವು ದೂರದ ಪ್ರಯಾಣಕ್ಕೆ ಉತ್ತಮವಾಗಿದ್ದು, ಕ್ಲಾಸ್ ಲಿಡಿಂಗ್ ಲೆಗ್ ರೂಮ್ ಇದರಲ್ಲಿದೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಇದಲ್ಲದೇ ಎಲೆಕ್ಟ್ರಿಕ್ ಅಡ್ಜೆಸ್ಟ್ ಸೀಟುಗಳು ಇದಾಗಿದ್ದು, ಬಟನ್‌ಗಳ ಮೂಲಕ ನಿಯಂತ್ರಿಸಬಹುದಾದ ಸನ್‌ರೂಫ್, ಸೆಡಾನ್ ಕಾರುಗಳಲ್ಲೇ ಉತ್ತಮ ಎನ್ನಿವಷ್ಟು 430-ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್, ಬೂಟ್ ,ಸ್ಪೇಸ್ ತಳಭಾಗದಲ್ಲೇ ಸ್ಪೆರ್ ವೀಲ್ಹ್ ಇರಿಸಲಾಗಿದೆ. ಆದ್ರೆ ಸಿವಿಕ್ ಕಾರುಗಳಲ್ಲಿ ಹಿಂಭಾಗದ ಸೀಟುಗಳನ್ನು ಅವಶ್ಯಕತೆಯಿದ್ದಾಗ ಮಡಚಬಹುದಾದ ಸೌಲಭ್ಯ ಇಲ್ಲದಿರುವುದು ಕೆಲವು ಗ್ರಾಹಕರಿಗೆ ಇಷ್ಟವಾಗದಿರಬಹುದು.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಹೋಂಡಾ ಸಿವಿಕ್ ಕಾರುಗಳಲ್ಲಿ ಇದೇ ಮೊದಲ ಬಾರಿಗೆ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಪೆಟ್ರೋಲ್‌ನಲ್ಲಿ ಅಷ್ಟೇ ಅಲ್ಲದೇ ಡೀಸೆಲ್ ಮಾದರಿಯಲ್ಲೂ ಎರಡು ಮಾದರಿಯ ಗೇರ್‌ಬಾಕ್ಸ್ ಆಯ್ಕೆಯ ಅವಕಾಶವನ್ನು ನೀಡಲಾಗಿದೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಇದರಲ್ಲಿ 1.8-ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಮಾದರಿಯು ಬಿಎಸ್-6 ವೈಶಿಷ್ಟ್ಯತೆಗಳೊಂದಿಗೆ ಪರ್ಫಾಮೆನ್ಸ್‌ನಲ್ಲಿ ಗಮನಸೆಳೆಯಲಿದ್ದು, 7-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ 138-ಬಿಎಚ್‌ಪಿ ಮತ್ತು 174-ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠವಾಗಿ 16.5 ಕಿ.ಮಿ ಮೈಲೇಜ್ ನೀಡುತ್ತವೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಡೀಸೆಲ್ ಮಾದರಿಯಲ್ಲಿ 1.6-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ ಹೊಂದಿರುವ ಸಿವಿಕ್ ಕಾರು ಆಟೋಮ್ಯಾಟಿಕ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ 118-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ ಪ್ರತಿ ಡೀಸೆಲ್‌ಗೆ ಗರಿಷ್ಠ 26.8 ಕಿ.ಮಿ ಮೈಲೇಜ್ ನೀಡಬಲ್ಲವು.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಇದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುತ್ತಿರುವ ಹಳೆಯ ತಲೆಮಾರಿನ ಸಿವಿಕ್ ಕಾರುಗಳಿಂತಲೂ ಭಾರತೀಯ ಮಾರುಕಟ್ಟೆಯಲ್ಲಿನ ಹೊಸ ಸಿವಿಕ್ ಕಾರು ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, 17-ಇಂಚಿನ ಸ್ಪೋರ್ಟಿ ಟೈರ್ ಹೊಂದಿರುವ ಹೊಸ ಕಾರು ಹಳೆಯ ಕಾರಿಗಿಂತ 20ಎಂಎಂ ನಷ್ಟು ಎತ್ತರಿಸಲಾಗಿದೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಸುರಕ್ಷಾ ಸೌಲಭ್ಯಗಳು

ಹೊಸ ಸಿವಿಕ್ ಕಾರಿನಲ್ಲಿ ಎಬಿಎಸ್, ಇಬಿಡಿ, 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಬ್ರೇಕ್ ಅಸಿಸ್ಟ್, ಆಟೋಮ್ಯಾಟಿಕ್ ಬ್ರೇಕ್ ಹೋಲ್ಡ್, ISOFIX ಮೌಂಟ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಸೌಲಭ್ಯ ನೀಡಲಾಗಿದ್ದು, ಪಾರ್ಕಿಂಗ್ ಸೌಲಭ್ಯಕ್ಕಾಗಿ ರಿಯರ್ ವ್ಯೂ ಕ್ಯಾಮೆರಾ ಜೋಡಣೆ ಮಾಡಲಾಗಿದೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಹಾಗೆಯೇ ಹೊಸ ಕಾರು 4,656-ಎಂಎಂ ಉದ್ದ, 1,799-ಎಂಎಂ ಅಗಲ, 1,433-ಎಂಎಂ ಎತ್ತರ, 2,700-ಎಂಎಂ ವೀಲ್ಹ್ ಬೆಸ್ ಮತ್ತು 170-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ಲ್ಯಾಟಿನಂ ವೈಟ್ ಪರ್ಲ್, ರೆಡಿಯೆಂಟ್ ರೆಡ್, ಮಾರ್ಡನ್ ಸ್ಟೀಲ್, ಲೌನರ್ ಸಿಲ್ವರ್ ಮತ್ತು ಗೋಲ್ಡನ್ ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಹೀಗಾಗಿ ಹೊಸ ಕಾರಿನ ಬೆಲೆಯು ದೆಹೆಲಿ ಎಕ್ಸ್ ಶೋರಂ ಪ್ರಕಾರ ರೂ. 20 ಲಕ್ಷದಿಂದ ರೂ. 24 ಲಕ್ಷ ತನಕ ಇರಬಹುದೆಂದು ಅಂದಾಜಿಸಲಾಗಿದ್ದು, ಮಾರ್ಚ್ 7ರಂದು ಬಿಡುಗಡೆಯಾಗಲಿರುವ ಹೊಸ ಕಾರಿನಲ್ಲಿ ಇನ್ನು ಏನೆಲ್ಲಾ ಹೊಸ ಫೀಚರ್ಸ್‌ಗಳಿವೆ ಎನ್ನುವ ಮಾಹಿತಿ ಲಭ್ಯವಾಗಲಿದೆ.

2019ರ ಸಿವಿಕ್ ವಿಮರ್ಶೆ: ಸೆಡಾನ್ ವಿಭಾಗದಲ್ಲಿ ಮತ್ತೆ ಮ್ಯಾಜಿಕ್ ಮಾಡುತ್ತಾ ಹೋಂಡಾ?

ಹೊಸ ಸಿವಿಕ್ ಕುರಿತು ಡ್ರೈವ್‌ಸ್ಪಾಕ್ ಅಭಿಪ್ರಾಯ

ಸುಮಾರು 6 ವರ್ಷಗಳ ನಂತರ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಹೋಂಡಾ ಸಂಸ್ಥೆಯು ಈ ಬಾರಿ ಸೆಡಾನ್ ಪ್ರಿಯರ ಬೇಡಿಕೆಯ ಆಧಾರದ ಹೊಸ ಸಿವಿಕ್ ಕಾರನ್ನು ಸಿದ್ದಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಟೊಯೊಟಾ ಕರೊಲ್ಲಾ, ಸ್ಕೋಡಾ ಒಕ್ಟಿವಿಯಾ ಮತ್ತು ಹ್ಯುಂಡೈ ಎಲಾಂಟ್ರಾ ಕಾರುಗಳೊಂದಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

Most Read Articles

Kannada
English summary
2019 Honda Civic Review — Has The Magic Returned? Read in Kannada.
Story first published: Tuesday, February 19, 2019, 19:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X