ರೇಸ್‍ಗಾಗಿಯೇ ವಿಶೇಷ ಕಾರು ಬಿಡುಗಡೆಗೊಳಿಸಿದ ಫೋರ್ಡ್

ಫೋರ್ಡ್ ಕಂಪನಿಯು ರೇಸ್ ಟ್ರಾಕ್‍‍ಗಳಿಗಾಗಿಯೇ ಸೀಮಿತ ಆವೃತ್ತಿಯ ಅಲ್ಟ್ರಾ ಹೈ ಪರ್ಫಾಮೆನ್ಸ್ ಸೂಪರ್ ಕಾರ್ ಅನ್ನು ಗುಡ್‍‍ವುಡ್ ಫೆಸ್ಟಿವಲ್ ಆಫ್ ಸ್ಪೀಡ್‍‍ನಲ್ಲಿ ಅನಾವರಣಗೊಳಿಸಿದೆ. ಕಂಪನಿಯು ಈ ಕಾರಿಗೆ ಜಿಟಿ ಎಂಕೆ2 ಎಂದು ಹೆಸರಿಟ್ಟಿದೆ. ಫೋರ್ಡ್ ಜಿಟಿ ಎಂ‍‍ಕೆ2 ರಸ್ತೆ ಆಧಾರಿತ ಕಾರ್ ಅಲ್ಲ. ಈ ಕಾರ್ ಅನ್ನು ರೇಸಿಂಗ್‍‍ಗಳಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಈ ಕಾರು ರೇಸ್ ಟ್ರಾಕ್‍‍ಗಳಲ್ಲಿ ಮಾತ್ರ ಚಾಲನೆಯಾಗಲಿದೆ.

ರೇಸ್‍ಗಾಗಿಯೇ ವಿಶೇಷ ಕಾರು ಬಿಡುಗಡೆಗೊಳಿಸಿದ ಫೋರ್ಡ್

ಕೆಲವು ಕಾರುಗಳನ್ನು ವೇಗವಾಗಿ ಚಲಿಸುವ ಏಕಮಾತ್ರ ಉದ್ದೇಶಕ್ಕಾಗಿಯೇ ತಯಾರಿಸಲಾಗುವುದು. ಅದೇ ರೀತಿಯಲ್ಲಿ ಈ ಕಾರ್ ಅನ್ನು ಸಹ ನಿರ್ಮಿಸಲಾಗಿದೆ. ರಸ್ತೆ ಆಧಾರಿತ ಹಾಗೂ ಕ್ರೀಡಾ ಆಧಾರಿತ ಕಾರುಗಳನ್ನು ಹೊರತುಪಡಿಸಿ ಬೇರೆ ಕಾರುಗಳನ್ನು ಸಹ ವಿನ್ಯಾಸಗೊಳಿಸಬಹುದು ಎಂಬುದಕ್ಕೆ ಈ ಸೂಪರ್ ಕಾರು ಒಂದು ಸ್ಪಷ್ಟ ನಿದರ್ಶನ. ಈ ಕಾರಿನ ವಿನ್ಯಾಸಕರು ಎಂಜಿನ್ ಹಾಗೂ ಏರೋಡೈನಾಮಿಕ್ಸ್ ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡಿದ್ದಾರೆ.

ಜಿಟಿ ಎಂಕೆ2 ಸೂಪರ್ ಕಾರಿನಲ್ಲಿ 3.5-ಲೀಟರ್‍‍ನ ಟ್ವಿನ್ ಟರ್ಬೊ ಇಕೋಬೂಸ್ಟ್ ವಿ6 ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 700 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಚಾಲ್ತಿಯಲ್ಲಿರುವ ಜಿಟಿ ರಸ್ತೆ ಆಧಾರಿತ ಕಾರಿಗಿಂತ 50 ಬಿ‍‍ಹೆಚ್‍‍ಪಿ ಹೆಚ್ಚು ಉತ್ಪಾದಿಸುತ್ತದೆ. ರೆಗ್ಯುಲೇಷನ್ ರೆಸ್ಟ್ರಿಕ್ಟೆಡ್ ಕಾರಿಗಿಂತ ಹಾಗೂ ಲೇಮನ್ಸ್ ಫೋರ್ಡ್ ಜಿಟಿ ಕಾರಿಗಿಂತ ಸುಮಾರು 200 ಬಿಹೆಚ್‌ಪಿ ಹೆಚ್ಚು ಉತ್ಪಾದಿಸುತ್ತದೆ. ಇದು ಇದುವರೆಗಿನ ಅತ್ಯಂತ ಶಕ್ತಿಶಾಲಿ ಫೋರ್ಡ್ ಜಿಟಿಯಾಗಿದೆ.

ರೇಸ್‍ಗಾಗಿಯೇ ವಿಶೇಷ ಕಾರು ಬಿಡುಗಡೆಗೊಳಿಸಿದ ಫೋರ್ಡ್

ಸೂಪರ್ ಕಾರ್‌ನಲ್ಲಿ ರೂಫ್ ಮೌಂಟೆಡ್ ಏರ್ ಇನ್‍‍ಟೆಕ್ ಸ್ಕೂಪ್‍‍ನ ಜೊತೆಗೆ ಚಾರ್ಜ್ಡ್ ಏರ್ ಕೂಲರ್ ಅನ್ನು ತಂಪಾಗಿಸಲು ವಾಟರ್ ಸ್ಪ್ರೇಯರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಏರೋಡೈನಾಮಿಕ್ಸ್ ಬಗ್ಗೆ ಎಂಜಿನಿಯರ್‌ಗಳು ಹೆಚ್ಚಿನ ಗಮನ ಹರಿಸಿದ್ದು, ರಸ್ತೆ ಆಧಾರಿತ ಕಾರುಗಳಿಗೆ ಹೋಲಿಸಿದರೆ ಡೌನ್ ಫೋರ್ಸ್‌ನಲ್ಲಿ 400%ನಷ್ಟು ಹೆಚ್ಚಳವಾಗಿದೆ ಎಂದು ಫೋರ್ಡ್ ಹೇಳಿದೆ. ಕಂಪನಿಯ ಪ್ರಕಾರ, ಜಿಟಿ ಎಂಕೆ2 ಕಾರು, 2ಜಿ ಲ್ಯಾಟರಲ್ ಹಿಡಿತವನ್ನು ಸಾಧಿಸಲಿದೆ.

ರೇಸ್‍ಗಾಗಿಯೇ ವಿಶೇಷ ಕಾರು ಬಿಡುಗಡೆಗೊಳಿಸಿದ ಫೋರ್ಡ್

ಇದರಲ್ಲಿರುವ ದೊಡ್ಡ ಗಾತ್ರದ ಡ್ಯುಯಲ್ ಎಲಿಮೆಂಟ್ ವಿಂಗ್, ಹೊಸ ಸ್ಪ್ಲಿಟರ್, ಡಿಫ್ಯೂಸರ್ ಹಾಗೂ ಇತರ ಏರೋಡೈನಾಮಿಕ್ಸ್ ಪರಿಷ್ಕರಣೆಗಳಿಂದ ಇದು ಸಾಧ್ಯವಾಗಿದೆ. ರಸ್ತೆ ಆಧಾರಿತ ಕಾರಿನಲ್ಲಿದ್ದ ಅಡ್ಜಸ್ಟಬಲ್ ಮೋಡ್‌ಗಳು ಹಾಗೂ ಚಾಲನೆಯ ಎತ್ತರವನ್ನು ಐದು ರೀತಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಮಲ್ಟಿಮ್ಯಾಟಿಕ್ ಡಿಎಸ್‌ಎಸ್‌ವಿ ಶಾಕ್ ಅಬ್ಸಾರ್ಬರ್‌ಗಳು ಹಾಗೂ ಸ್ಥಿರವಾದ ರೈಡಿಂಗ್ ಹೈಟ್‍‍ಗಳಿಂದ ಬದಲಾಯಿಸುವ ಮೂಲಕ ತೂಕವನ್ನು ಕಡಿಮೆ ಮಾಡುವತ್ತ ಗಮನ ಹರಿಸಲಾಗಿದೆ.

ಇದರಿಂದಾಗಿ ಸೂಪರ್ ಕಾರಿನ ತೂಕವು 90 ಕಿ.ಜಿಗಳಷ್ಟು ಕಡಿಮೆಯಾಗಿದ್ದು, ಇದರಿಂದಾಗಿ ಹ್ಯಾಡ್ಲಿಂಗ್ ಹಾಗೂ ಏರೋಡೈನಾಮಿಕ್ಸ್ ಸುಧಾರಿಸಲಿದೆ ಎಂದು ಫೋರ್ಡ್ ಹೇಳಿದೆ. ಈ ಕಾರಿನಲ್ಲಿ 19 ಇಂಚಿನ ವ್ಹೀಲ್‍‍ಗಳಿದ್ದು, ರೇಸ್ ಆಧಾರಿತ ಮಿಚಲಿನ್ ಟಯರ್ ಹಾಗೂ ಕಾರ್ಬನ್ ಸೆರಾಮಿಕ್ ಬ್ರೇಕ್‍‍ಗಳಿವೆ. ರೋಡ್ ರಾಕೆಟ್ ಎಂದು ಪರಿಗಣಿಸಲಾಗುವ ಈ ಕಾರಿನಲ್ಲಿ ಪ್ಯಾಸೆಂಜರ್ ಸೀಟ್ ಬೇಕೆ ಬೇಡವೇ ಎಂಬ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ. ಜಿಟಿ ಎಂಕೆ 2 ಕಾರ್ ಅನ್ನು ಮಲ್ಟಿಮ್ಯಾಟಿಕ್ ಕಂಪನಿಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ರೇಸ್‍ಗಾಗಿಯೇ ವಿಶೇಷ ಕಾರು ಬಿಡುಗಡೆಗೊಳಿಸಿದ ಫೋರ್ಡ್

ಈಗ ಚಾಲ್ತಿಯಲ್ಲಿರುವ ಫೋರ್ಡ್ ಜಿಟಿ ರಸ್ತೆ ಆಧಾರಿತ ಹಾಗೂ ರೇಸ್ ಕಾರುಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಲ್ಟಿಮ್ಯಾಟಿಕ್ ಕಂಪನಿಯು ಮಹತ್ವದ ಪಾತ್ರವನ್ನು ವಹಿಸಿದೆ. ಎಂಕೆ2 ಸೂಪರ್ ಕಾರು ಪ್ರಪಂಚದದ್ಯಾಂತವಿರುವ ಟ್ರಾಕ್‍‍ಗಳಲ್ಲಿ ಪಾದಾರ್ಪಣೆ ಮಾಡುವ ಬಗ್ಗೆ, ಗುಡ್‍‍ವುಡ್ ಹಿಲ್ ಕ್ಲೈಂಬ್‍‍ನಲ್ಲಿ ಘೋಷಿಸಲಾಗಿದೆ. ಮೊದಲ ಬಾರಿಗೆ ಟ್ರ್ಯಾಕ್ ಪ್ರವೇಶ ಮಾಡಿದೆ. ಫೋರ್ಡ್ ಕಂಪನಿಯು ಕಳೆದ ತಿಂಗಳು, ಗುಡ್‍‍ವುಡ್ ಕಾರ್ಯಕ್ರಮದಲ್ಲಿ ವಿಶೇಷ ಫೋರ್ಡ್ ಜಿಟಿ ಸೂಪರ್ ಕಾರ್ ಘೋಷಣೆ ಮಾಡುವುದಾಗಿ ತಿಳಿಸಿತ್ತು. ಕಾರಿನ ಟೀಸರ್ ಚಿತ್ರವನ್ನು ಸಿಲೂಯೆಟ್‌ನಲ್ಲಿ ಬಿಡುಗಡೆ ಮಾಡಿತ್ತು.

ರೇಸ್‍ಗಾಗಿಯೇ ವಿಶೇಷ ಕಾರು ಬಿಡುಗಡೆಗೊಳಿಸಿದ ಫೋರ್ಡ್

ಫೋರ್ಡ್ ಕಂಪನಿಯು ಜಿಟಿ ಎಂಕೆ2ರ ಕೇವಲ 45ಕಾರುಗಳನ್ನು ಮಾತ್ರ ಉತ್ಪಾದಿಸುವುದಾಗಿ ಹೇಳಿದೆ. ಆರಂಭಿಕ ಬೆಲೆಯನ್ನು 1.2 ಮಿಲಿಯನ್ ಅಮೇರಿಕನ್ ಡಾಲರ್‍‍ಗಳೆಂದು ನಿಗದಿಪಡಿಸಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ತೆರಿಗೆಯನ್ನು ಹೊರತುಪಡಿಸಿ ರೂ.8.22 ಕೋಟಿಗಳಾಗಲಿದೆ. ಮಲ್ಟಿಮ್ಯಾಟಿಕ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಲ್ಯಾರಿ ಹಾಲ್ಟ್ ರವರು ಮಾತನಾಡಿ ಜಿಟಿಯ ನಿಜವಾದ ಆಫ್ ದಿ ಹುಕ್ ಪರ್ಫಾಮೆನ್ಸ್ ಸಾಮರ್ಥ್ಯವನ್ನು ಇನ್ನೂ ಪೂರ್ಣವಾಗಿ ಪ್ರದರ್ಶಿಸಲಾಗಿಲ್ಲ.

ರೇಸ್‍ಗಾಗಿಯೇ ವಿಶೇಷ ಕಾರು ಬಿಡುಗಡೆಗೊಳಿಸಿದ ಫೋರ್ಡ್

ರಸ್ತೆ ಕಾರು ಅನೇಕ ಜಾಗತಿಕ ನಿಯಮಗಳಿಂದಾಗಿ ಕೆಲವೊಂದು ಅವಶ್ಯಕತೆಗಳಿಗೆ ಸೀಮಿತವಾಗಿರುತ್ತದೆ. ಆದರೆ ರೇಸ್ ಕಾರು ಬ್ಯಾಲೆನ್ಸ್ ಪರ್ಫಾಮೆನ್ಸ್ ನಿರ್ಬಂಧದಿಂದ ಬಳಲುತ್ತದೆ, ಇದರ ಪರಿಣಾಮವಾಗಿ ಅದು ರಸ್ತೆ ಕಾರಿಗೆ ಹೋಲಿಸಿದರೆ 150ಬಿ‍‍ಹೆಚ್‍‍ಪಿಗೆ ಇಳಿಯಲಿದೆ ಎಂದು ಹೇಳಿದರು. ಕಾರು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಸಾಮ್ಯಾನ್ಯವಾಗಿ ಕೇಳಲಾಗುವ ಪ್ರಶ್ನೆಗಳಿಗೆ ಎಂಕೆ2 ಸೂಪರ್ ಕಾರು ತನ್ನ ಪರ್ಫಾಮೆನ್ಸ್ ನಿಂದ ಉತ್ತರ ನೀಡಲಿದೆ ಎಂದು ಹೇಳಿದರು.

Article Published On: Friday, July 5, 2019, 11:19 [IST]
English summary
Ford GT Mk II 700bhp Track Only Supercar Unveiled — How Fast Is Fast? - Read in kannada
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+