ವೈರಲ್ ವಿಡಿಯೋ: ಕ್ಯಾಮೆಲ್ ಪವರ್ ಮುಂದೆ ಕಾರಿನ ಹಾರ್ಸ್ ಪವರ್ ಬಚ್ಚಾ..!
ಪ್ರತಿಯೊಬ್ಬರಲ್ಲೂ ನಾನೇ ಶ್ರೇಷ್ಠ ಎನ್ನುವಂತಹ ಮನೋಭಾವ ಇರುವುದು ಸಹಜ. ಆದ್ರೆ ಅದು ಎಲ್ಲ ಸಂದರ್ಭಗಳಲ್ಲೂ ಅನ್ವಯವಾಗುತ್ತೆ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು. ಯಾಕೆಂದ್ರೆ ಸಮಯ, ಸಂದರ್ಭಗಳಿಗೆ ಅನುಗುಣವಾಗಿ ಅದು ನಿರ್ಧಾರವಾಗುತ್ತೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಹೌದು, ರಷ್ಯಾದ ಸರಾಟಾವೊದ ಹಿಮರಾಶಿಯಲ್ಲಿ ಸಿಲುಕಿದ್ದ ಆಧುನಿಕ ತಂತ್ರಜ್ಞಾನ ಮತ್ತು ಹತ್ತು ಹಲವು ಸುಧಾರಿತ ಡ್ರೈವಿಂಗ್ ಟೆಕ್ನಾಲಜಿಗಳನ್ನು ಹೊಂದಿರುವ ಕಾರೊಂದನ್ನು ಒಂಟೆ ಬಚಾವ್ ಮಾಡಿದ್ದು, ಕ್ಯಾಮೆಲ್ ಪವರ್ ಮುಂದೆ ಕಾರಿನ ಹಾರ್ಸ್ ಪವರ್ ಬಚ್ಚಾ ಎನ್ನುವಂತದನ್ನ ನೀವು ಈ ಲೇಖನದಲ್ಲಿ ನೋಡಬಹುದಾಗಿದೆ.

ಅದಕ್ಕಾಗಿಯೇ ಯಾರು ಕೂಡಾ ಶ್ರೇಷ್ಠರಲ್ಲ ಎನ್ನುವಂತಹ ಮಾತು ಈ ಘಟನೆಯಲ್ಲಿ ನೋಡಬಹುದಾಗಿದ್ದು, ಹಿಮದರಾಶಿಯಲ್ಲಿ ಸಿಲುಕಿ ಪರದಾಟುತ್ತಿದ್ದ ರಷ್ಯಾದ ಜನಪ್ರಿಯ ಲಡಾ ನಿವಾ 4x4 ಕಾರುನ್ನು ಒಂಟೆಯೊಂದನ್ನು ಕೆಲವೇ ಸೇಕೆಂಡುಗಳಲ್ಲಿ ಬಚಾವ್ ಮಾಡಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಶೇಷವಾಗಿ ರಷ್ಯಾದ ಬಹುತೇಕ ಭೂ ಪ್ರದೇಶವು ಹಿಮದಿಂದಲೇ ಆವೃತ್ತವಾಗಿದ್ದು, ಅದಕ್ಕಾಗಿಯೇ ಇಲ್ಲಿ ಬಹುತೇಕ ವಾಹನಗಳಲ್ಲಿ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಬಳಕೆ ಮಾಡಲಾಗುತ್ತೆ. ಇದು ಹಿಮದ ರಾಶಿಯಲ್ಲಿ ಸಿಲುಕಿದ್ದಲ್ಲಿ ನೆರವಿಗೆ ಬರಲಿದ್ದು, ಆದರೂ ಕೂಡಾ ಹಿಮದಲ್ಲೇ ಹುಟ್ಟಿಬೆಳೆದ ಕ್ಯಾಮೆಲ್ ಪವರ್ ಮುಂದೆ ಮಾನವ ನಿರ್ಮಿತ ಕಾರಿನ ಎಂಜಿನ್ ಪರ್ಫಾಮೆನ್ಸ್, ಟೆಕ್ನಾಲಜಿ ಸೌಲಭ್ಯಗಳು ಯಾವುದಕ್ಕೂ ಉಪಯೋಗಕ್ಕೆ ಬರಲಿಲ್ಲ ಎನ್ನುವುದನ್ನ ನಾವು ಮರೆಯುವಂತಿಲ್ಲ.
ಹಿಮರಾಶಿಯಲ್ಲಿ ಸಿಲುಕಿದ್ದ ಲಡಾ ನಿವಾ 4x4 ಕಾರನ್ನು ರಕ್ಷಣೆ ಮಾಡುತ್ತಿರುವ ಒಂಟೆ ವಿಡಿಯೋ ಇಲ್ಲಿದೆ ನೋಡಿ.


Click it and Unblock the Notifications








