ಹೊಸ ವಾಹನ ಖರೀದಿ ನೀರಿಕ್ಷೆಯಲ್ಲಿದ್ದ ಗ್ರಾಹಕರಿಗೆ ಕೇಂದ್ರದಿಂದ ಮತ್ತೆ ನಿರಾಸೆ?
ಭಾರತೀಯ ಆಟೋ ಉದ್ಯಮವು ಕಳೆದ 19 ವರ್ಷಗಳ ಅವಧಿಯಲ್ಲೇ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಉದ್ಯಮ ಸುಧಾರಣೆಗಾಗಿ ಜಿಎಸ್‌ಟಿ ಪ್ರಮಾಣದಲ್ಲಿ ಇಳಿಕೆ ಮಾಡಬೇಕೆಂದು ಭಾರೀ ಒತ್ತಡ ಕೇಳಿಬರುತ್ತಿದೆ. ಹೀಗಿರುವಾಗ ಯಾವುದೇ ಒತ್ತಡಕ್ಕೂ ಮಣಿಯದ ಕೇಂದ್ರ ಸರ್ಕಾರವು ಜಿಎಸ್‌ಟಿ ದರ ಕಡಿತಗೊಳಿಸಲು ಮುಂದಾಗದಿರುವುದು ಆಟೋ ಉದ್ಯಮವನ್ನು ಮತ್ತಷ್ಟು ಸಂಕಷ್ಟಕ್ಕೀಡಾಗುವಂತೆ ಮಾಡಿದೆ.

ಆಟೋ ಉದ್ಯಮದಲ್ಲಿ ಸತತ ಹಿನ್ನಡೆಯಾಗುತ್ತಿರುವ ಹಿನ್ನಲೆಯಲ್ಲಿ ಕಳೆದ ತಿಂಗಳ ಹಿಂದಷ್ಟೇ ಕೆಲವು ಮಹತ್ವದ ಕ್ರಮಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಹೇಳಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದುವರೆಗೂ ಜಿಎಸ್‌ಟಿ ಇಳಿಕೆ ಕುರಿತು ಯಾವುದೇ ಪ್ರಕ್ರಿಯೆ ನೀಡುತ್ತಿಲ್ಲ. ಇದರಿಂದ ಹೊಸ ವಾಹನ ಖರೀದಿಯ ನೀರಿಕ್ಷೆಯಲ್ಲಿದ್ದ ಗ್ರಾಹಕರಿಗೆ ಇದು ನಿರಾಸೆ ಉಂಟು ಮಾಡಿದ್ದು, ಉದ್ಯಮದ ಸ್ಥಿತಿಗತಿಯ ಆಧಾರದ ಮೇಲೆ ಜಿಎಸ್‌ಟಿ ದರಗಳನ್ನು ಏರಿಳಿತ ಮಾಡಲು ಸಾಧ್ಯವಿಲ್ಲ ಎಂಬ ಸುಳಿವು ನೀಡಿದೆ.

ಜಿಎಸ್‌ಟಿ ಇಳಿಕೆ ಕುರಿತಂತೆ ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ತಾತ್ಕಾಲಿಕವಾಗಿ ಹಿನ್ನಡೆ ಅನುಭಸಿರುವ ಕಾರಣಕ್ಕೆ ಜಿಎಸ್‌ಟಿ ಇಳಿಕೆಯಂತಹ ಕ್ರಮಕೈಗೊಳ್ಳುವುದು ಆರ್ಥಿಕತೆ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು ಎನ್ನಲಾಗಿದೆ.

ಕೇವಲ ಜಿಎಸ್‌ಟಿ ಹೆಚ್ಚಳದಿಂದಾಗಿ ಆಟೋ ಉದ್ಯಮವು ಹಿನ್ನಡೆ ಅನುಭವಿಸುತ್ತಿದೆ ಎನ್ನುವ ಅಭಿಪ್ರಾಯವನ್ನು ತಳ್ಳಿಹಾಕಿರುವ ಜಿಎಸ್‌ಟಿ ಕೌನ್ಸಿಲ್, ವಾಹನ ಮಾರಾಟ ಇಳಿಕೆಗೆ ವಿವಿಧ ಕಾರಣಗಳನ್ನು ಪಟ್ಟಿ ಮಾಡಿದೆ.

ಹೀಗಾಗಿ ಇಂಧನ ಆಧರಿತ ವಾಹನಗಳ ಮೇಲಿನ ಜಿಎಸ್‌ಟಿ ಇಳಿಕೆಯ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದ್ದು, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಹೊಸ ವಾಹನ ಖರೀದಿಗೆ ಸಾಲಸೌಲಭ್ಯ ಸಿಗದಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ದೇಶಾದ್ಯಂತ ಶೇ.80 ರಷ್ಟು ಹೊಸ ವಾಹನಗಳ ಖರೀದಿ ಪ್ರಕ್ರಿಯೆಯು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಅಲಂಬಿಸಿದ್ದು, ಇದೀಗ ಸಂಕಷ್ಟದಲ್ಲಿರುವುದು ಆಟೋ ಉದ್ಯಮದ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.

ಇದರಿಂದ ಜಿಎಸ್‌ಟಿ ಹೆಚ್ಚಳವೇ ವಾಹನ ಮಾರಾಟ ಕುಸಿತಕ್ಕೆ ಪ್ರಮುಖ ಕಾರಣ ಎನ್ನುವುದನ್ನು ತಳ್ಳಿಹಾಕುತ್ತಿರುವ ಜಿಎಸ್‌ಟಿ ಮಂಡಳಿಯು ಆಟೋ ಉದ್ಯಮವು ಈ ಹಿಂದೆಯೂ 2009 ಮತ್ತು 2014ರಲ್ಲೂ ಇಂತದ್ದೆ ಪರಿಸ್ಥಿತಿ ಎದುರಿಸಿತ್ತು, ಈ ಹಿನ್ನಲೆಯಲ್ಲಿ ಮುಂದಿನ ಕೇವಲ ದಿನಗಳಲ್ಲಿ ಪರಿಸ್ಥಿತಿ ಸುಧಾರಣೆಯಾಗುವ ವಿಶ್ವಾಸ ವ್ಯಕ್ತಪಡಿಸಿದೆ.

ಇದರೊಂದಿಗೆ ವಾಹನ ಮಾರಾಟ ಕುಸಿತಕ್ಕೆ 2020ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್-6 ವಾಹನಗಳ ಕಡ್ಡಾಯ ಮಾರಾಟವು ಸಹ ಪ್ರಸ್ತುತ ಬಿಎಸ್-4 ವಾಹನಗಳಿಗೆ ಹಿನ್ನಡೆಯಾಗುತ್ತಿದ್ದು, ಜಿಎಸ್‌ಟಿ ಇಳಿಕೆಯೊಂದೆ ಇದಕ್ಕೆ ಪರಿಹಾರವಲ್ಲ ಎನ್ನಲಾಗುತ್ತಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಇನ್ನು ಜಿಎಸ್‌ಟಿ ಇಳಿಕೆ ಮಾಡಿ ಸೆಸ್ ಪ್ರಮಾಣದಲ್ಲಿ ಹೆಚ್ಚಳ ಮಾಡಿದರೂ ಸಹ ಮತ್ತಷ್ಟು ಸಮಸ್ಯೆಗಳು ಎದುರಾಗಲಿದ್ದು, ಸೆಸ್ ಏರಿಕೆಯು ಸಣ್ಣ ಕಾರುಗಳು ಮತ್ತು ದ್ವಿಚಕ್ರ ವಾಹನ ಮಾರಾಟದ ಮೇಲೆ ಪರಿಣಾಮ ಬೀರಲಿದೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಈ ಹಿನ್ನಲೆಯಲ್ಲಿ ಜಿಎಸ್‌ಟಿಯಲ್ಲಿ ಯಾವುದೇ ಬದಲಾವಣೆಗೆ ಮುಂದಾಗದ ಜಿಎಸ್‌ಟಿ ಮಂಡಳಿಯು ಸೆಸ್ ದರಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳುವಂತೆ ಸಲಹೆ ನೀಡಿದ್ದು, ಆಟೋ ಉದ್ಯಮದಲ್ಲಿ ಏರಿಳಿತ ಸಾಮಾನ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಸದ್ಯ ಇಂಧನ ಆಧರಿತ ವಾಹನ ಮೇಲೆ ಶೇ. 28ರಷ್ಟು ಜಿಎಸ್‌ಟಿ ವಿಧಿಸುತ್ತಿರುವ ಕೇಂದ್ರ ಸರ್ಕಾರವು ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ತಗ್ಗಿಸಲು ಉದ್ದೇಶದಿಂದ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇ.5 ರಷ್ಟು ಜಿಎಸ್‌ಟಿ ವಿಧಿಸಿರುವುದಲ್ಲದೇ ಎಲೆಕ್ಟ್ರಿಕ್ ವಾಹನ ಖರೀದಿ ಮೇಲೆ ಗರಿಷ್ಠ ಮಟ್ಟದ ಸಬ್ಸಡಿ, ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದೆ.


Click it and Unblock the Notifications