ಬಿಎಸ್-6 ಪ್ರಮಾಣ ಪತ್ರ ಗಿಟ್ಟಿಸಿಕೊಂಡ ನೆಕ್ಸ್ಟ್ ಜನರೇಷನ್ ಹೋಂಡಾ ಸಿಟಿ

ದೇಶಿಯ ಮಾರುಕಟ್ಟೆ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೋಂಡಾ ಸಿಟಿ ನೆಕ್ಸ್ಟ್ ಜನರೇಷನ್ ಆವೃತ್ತಿಯು ಮುಂದಿನ ತಿಂಗಳು ನವೆಂಬರ್ ಅಂತ್ಯಕ್ಕೆ ಥೈಲ್ಯಾಂಡ್‌ನಲ್ಲಿ ಅನಾವರಣಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಹಲವು ತಾಂತ್ರಿಕ ಬದಲಾವಣೆಯೊಂದಿಗೆ ಅಭಿವೃದ್ದಿಗೊಂಡಿರುವ ನೆಕ್ಸ್ಟ್ ಜನರೇಷನ್ ಆವೃತ್ತಿಯು ಬಿಎಸ್-6 ನಿಯಮದಂತೆ ಅಭಿವೃದ್ದಿಗೊಂಡಿದೆ.

ಬಿಎಸ್-6 ಪ್ರಮಾಣ ಪತ್ರ ಗಿಟ್ಟಿಸಿಕೊಂಡ ನೆಕ್ಸ್ಟ್ ಜನರೇಷನ್ ಹೋಂಡಾ ಸಿಟಿ

ಹೋಂಡಾ ಸಂಸ್ಥೆಯು ಭಾರತ ಸೇರಿದಂತೆ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಜನಪ್ರಿಯ ಸಿಟಿ ಸೆಡಾನ್ ಕಾರಿನ 5ನೇ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಅರಿಯಲು ಈಗಾಗಲೇ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಇದರಿಂದ ಬಿಡುಗಡೆಯ ಸನಿಹದಲ್ಲಿರುವ ಹೊಸ ಸಿಟಿ ಕಾರುನ್ನು ಹೋಂಡಾ ಸಂಸ್ಥೆಯು ಫೆಬ್ರುವರಿಯಲ್ಲಿ ನಡೆಯಲಿರುವ 2020 ದೆಹಲಿ ಆಟೋ ಎಕ್ಸ್‌ಪೋ ಪ್ರದರ್ಶನ ಮಾಡಲಿದ್ದು, ಅದಕ್ಕೂ ಮುನ್ನ ಬಿಎಸ್-6 ನಿಯಮ ಪಾಲನೆಗೆ ನೀಡಲಾಗುವ ಪ್ರಮಾಣಪತ್ರವನ್ನು ಗಿಟ್ಟಿಸಿಕೊಂಡಿದೆ.

ಸಿಟಿ ಕಾರಿನ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯು ಮಾತ್ರವೇ ಸದ್ಯ ಬಿಎಸ್-6 ನಿಯಮ ಅನುಸಾರ ಅಭಿವೃದ್ದಿಗೊಂಡಿದ್ದು, ಮುಂಬರುವ ದಿನಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯು ಸಹ ಹೊಸ ನಿಯಮ ಅನುಸಾರ ಪ್ರಮಾಣ ಪತ್ರ ಪಡೆದುಕೊಳ್ಳುವ ಸಹನಿದಲ್ಲಿವೆ.

ಬಿಎಸ್-6 ಪ್ರಮಾಣ ಪತ್ರ ಗಿಟ್ಟಿಸಿಕೊಂಡ ನೆಕ್ಸ್ಟ್ ಜನರೇಷನ್ ಹೋಂಡಾ ಸಿಟಿ

ಇನ್ನು ಹೋಂಡಾ ಸಂಸ್ಥೆಯು ಇದೇ ಮೊದಲ ಬಾರಿಗೆ ಸಿಟಿ ಸೆಡಾನ್‌ನಲ್ಲಿ ಹೈಬ್ರಿಡ್ ಮಾದರಿಯನ್ನು ಕೂಡಾ ಬಿಡುಗಡೆಗೊಳಿಸುತ್ತಿದ್ದು, ಹೋಂಡಾ ನಿರ್ಮಾಣದ ಕಾರುಗಳಲ್ಲಿ ಅಕಾರ್ಡ್ ಸೆಡಾನ್ ನಂತರ ಹೈಬ್ರಿಡ್ ತಂತ್ರಜ್ಞಾನ ಹೊಂದಿದ 2ನೇ ಕಾರು ಮಾದರಿ ಇದಾಗಿರಲಿದೆ.

ಬಿಎಸ್-6 ಪ್ರಮಾಣ ಪತ್ರ ಗಿಟ್ಟಿಸಿಕೊಂಡ ನೆಕ್ಸ್ಟ್ ಜನರೇಷನ್ ಹೋಂಡಾ ಸಿಟಿ

ಕಳೆದ ಮಾರ್ಚ್‌ನಲ್ಲಿ ಸಿವಿಕ್ ಬಿಡುಗಡೆಯ ನಂತರ ಸಿಟಿ ಸೆಡಾನ್ ಕಾರಿನ ಮೇಲೆ ಹೆಚ್ಚಿನ ಗಮನಹರಿಸಿರುವ ಹೋಂಡಾ ಸಂಸ್ಥೆಯು 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹೊಸ ತಲೆಮಾರಿನ ಸಿಟಿ ಕಾರನ್ನು ಪ್ರದರ್ಶನ ಮಾಡಿದ ನಂತರವಷ್ಟೇ ಬಿಡುಗಡೆ ಮಾಡಲಿದೆ.

ಬಿಎಸ್-6 ಪ್ರಮಾಣ ಪತ್ರ ಗಿಟ್ಟಿಸಿಕೊಂಡ ನೆಕ್ಸ್ಟ್ ಜನರೇಷನ್ ಹೋಂಡಾ ಸಿಟಿ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಿಟಿ ಕಾರಿಗಿಂತ ಹೊಸ ಆವೃತ್ತಿಯು ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಳ್ಳಲಿದ್ದು, 2014ರಲ್ಲಿ 4ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಬಿಡುಗಡೆ ಮಾಡಿದ ಬಳಿಕ ಯಾವುದೇ ಬದಲಾವಣೆ ತರದ ಹೋಂಡಾ ಸಂಸ್ಥೆಯು ಇದೇ ಮೊದಲ ಬಾರಿಗೆ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸುತ್ತಿದೆ. 5ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಪ್ರಸ್ತುತ ಮಾದರಿಗಿಂತಲೂ ತುಸು ದೊಡ್ಡ ಗಾತ್ರವನ್ನು ಹೊಂದಿದ್ದು, ಬೂಟ್ ಸ್ಪೆಸ್ ಜೊತೆಗೆ ಹಿಂಬದಿಯ ಸವಾರರಿಗೆ ವಿಸ್ತರಿತ ಲೆಗ್ ರೂಂ ಮತ್ತು ಹೆಡ್ ರೂಂ ನೀಡಿರುವುದು ಆರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾಗಲಿದೆ.

ಬಿಎಸ್-6 ಪ್ರಮಾಣ ಪತ್ರ ಗಿಟ್ಟಿಸಿಕೊಂಡ ನೆಕ್ಸ್ಟ್ ಜನರೇಷನ್ ಹೋಂಡಾ ಸಿಟಿ

ಸದ್ಯ ಥೈಲ್ಯಾಂಡ್‌ನಲ್ಲಿ ಹೊಸ ತಲೆಮಾರಿನ ಕಾರಿನ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಹೋಂಡಾ ಸಂಸ್ಥೆಯು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಹೊಸ ಕಾರಿನ ಎಂಜಿನ್ ಅನ್ನು ಅಲ್ಲಿಯೇ ಅಭಿವೃದ್ಧಿಪಡಿಸಿದೆ.

ಬಿಎಸ್-6 ಪ್ರಮಾಣ ಪತ್ರ ಗಿಟ್ಟಿಸಿಕೊಂಡ ನೆಕ್ಸ್ಟ್ ಜನರೇಷನ್ ಹೋಂಡಾ ಸಿಟಿ

ಥೈಲ್ಯಾಂಡ್‌ನಲ್ಲಿರುವ ಹೋಂಡಾ ಕಾರು ಉತ್ಪಾದನಾ ಘಟಕವು ಏಷ್ಯಾದ ಅತಿದೊಡ್ಡ ಕಾರು ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆ ಹೊಂದಿದ್ದು, ಇಲ್ಲಿಂದಲೇ ಹೊಸ ಸಿಟಿ ಸೆಡಾನ್ ಕಾರು ಅಂತಿಮ ರೂಪ ಪಡೆದುಕೊಂಡು ಭಾರತಕ್ಕೆ ಪ್ರವೇಶಿಸಲಿದೆ.

MOST READ: ಮುಂದಿನ ಒಂದು ವರ್ಷದೊಳಗೆ ಏಳು ಹೊಸ ಕಾರು ಬಿಡುಗಡೆ ಮಾಡಲಿದೆ ಮಹೀಂದ್ರಾ

ಬಿಎಸ್-6 ಪ್ರಮಾಣ ಪತ್ರ ಗಿಟ್ಟಿಸಿಕೊಂಡ ನೆಕ್ಸ್ಟ್ ಜನರೇಷನ್ ಹೋಂಡಾ ಸಿಟಿ

ಹೊಸ ಸಿಟಿ ಸೆಡಾನ್ ಕಾರಿನಲ್ಲಿ ಈ ಬಾರಿ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಮಾರುತಿ ಸುಜುಕಿ ಸಿಯಾಜ್ ಮತ್ತು ಹ್ಯುಂಡೈ ವೆರ್ನಾ ಕಾರಿಗೆ ಮಾತ್ರವಲ್ಲದೇ ಟೊಯೊಟಾ ಕರೊಲ್ಲಾ ಆಟ್ಲಿಸ್ ಕಾರಿಗೂ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

MOST READ: ಮಾಲಿನ್ಯ ತಡೆಗೆ ಹೊಸ ಉಪಕರಣ ಅಭಿವೃದ್ಧಿಪಡಿಸಿದ ಐಐಟಿ ಎಂಜಿನಿಯರ್

ಬಿಎಸ್-6 ಪ್ರಮಾಣ ಪತ್ರ ಗಿಟ್ಟಿಸಿಕೊಂಡ ನೆಕ್ಸ್ಟ್ ಜನರೇಷನ್ ಹೋಂಡಾ ಸಿಟಿ

ಎಂಜಿನ್ ಸಾಮರ್ಥ್ಯ

ಹೊಸ ತಲೆಮಾರಿನ ಹೋಂಡಾ ಕಾರು ಈ ಬಾರಿ ಸಾಮಾನ್ಯ ಮಾದರಿಯ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಮಾತ್ರವಲ್ಲದೇ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯು ಪರ್ಫಾಮೆನ್ಸ್ ಪ್ರಿಯರನ್ನು ಮತ್ತಷ್ಟು ಸೆಳೆಯಲಿದೆ.

MOST READ: ಟೊಯೊಟಾ ವೆಲ್‌ಫೈರ್ ಖರೀದಿಗೆ ಬುಕ್ಕಿಂಗ್ ಶುರು- ಬೆಲೆ ರೂ. 80 ಲಕ್ಷ ಅಷ್ಟೆ ಅಂತೆ..!

ಬಿಎಸ್-6 ಪ್ರಮಾಣ ಪತ್ರ ಗಿಟ್ಟಿಸಿಕೊಂಡ ನೆಕ್ಸ್ಟ್ ಜನರೇಷನ್ ಹೋಂಡಾ ಸಿಟಿ

ಜೊತೆಗೆ 2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮ ಜಾರಿಗೆ ಹಿನ್ನೆಲೆಯಲ್ಲಿ ಹೊಸ ವಾಹನ ಎಂಜಿನ್‌ನಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತಿದ್ದು, ಶೇ.25 ರಷ್ಟು ಹೊಗೆ ಉಗುಳುವ ಪ್ರಮಾಣ ಕಡಿಮೆಯಾದಲ್ಲಿ, ಶೇ.10ರಿಂದ 15ರಷ್ಟು ಮೈಲೇಜ್ ಪ್ರಮಾಣ ಹೆಚ್ಚಳವಾಗಲಿದೆ.

ಬಿಎಸ್-6 ಪ್ರಮಾಣ ಪತ್ರ ಗಿಟ್ಟಿಸಿಕೊಂಡ ನೆಕ್ಸ್ಟ್ ಜನರೇಷನ್ ಹೋಂಡಾ ಸಿಟಿ

ಹಾಗೆಯೇ ಹೊಸ ಎಂಜಿನ್ ಹೊತ್ತುಬರುತ್ತಿರುವ ಬಿಎಸ್-6 ವಾಹನ ಬೆಲೆಯಲ್ಲೂ ತುಸು ದುಬಾರಿಯಾಗಲಿದ್ದು, ಬೆಲೆಗಳಿಗೆ ಅನುಗುಣವಾಗಿ ರೂ.80 ಸಾವಿರದಿಂದ ರೂ.2 ಲಕ್ಷದ ತನಕ ಈಗಿರುವ ಬೆಲೆಗಳಿಂತಲೂ ಹೆಚ್ಚು ಬೆಲೆ ಪಡೆದುಕೊಳ್ಳಲಿವೆ. ಇವುಗಳಲ್ಲಿ ಭಾರೀ ಬದಲಾವಣೆ ಪಡೆದುಕೊಳ್ಳುತ್ತಿರುವ ಹೋಂಡಾ ಸಿಟಿ ಸಹ ಈಗಿರುವ ವಿನ್ಯಾಸಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯತೆ ಹೊಂದಲಿದ್ದು, ಬೆಲೆಯೂ ಕೂಡಾ ತುಸು ದುಬಾರಿ ಎನ್ನಿಸಲಿದೆ.

Source: Rushlane

More from DriveSpark

Article Published On: Tuesday, October 22, 2019, 11:03 [IST]
English summary
Honda City petrol model with manual gearbox has procured the BS6 certificate from iCAT.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+