ಅಗಸ್ಟ್ 20ಕ್ಕೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈ ಮೋಟಾರ್ಸ್ ಸಂಸ್ಥೆಯು 2020ರ ಏಪ್ರಿಲ್ ವೇಳೆಗೆ ಒಟ್ಟು 8 ಹೊಸ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, 5 ನ್ಯೂ ಜನರೇಷನ್ ಕಾರುಗಳನ್ನು ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉನ್ನತಿಕರಿಸಲಾಗುತ್ತಿದೆ. ಇದರಲ್ಲಿ ಮಾರುತಿ ಸ್ವಿಫ್ಟ್ ಪ್ರತಿಸ್ಪರ್ಧಿಯಾಗಿರುವ ಹೊಸ ತಲೆಮಾರಿನ ಗ್ರಾಂಡ್ ಐ10 ಕಾರು ಮುಂದಿನ ತಿಂಗಳು ಅಗಸ್ಟ್ 20ಕ್ಕೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಅಗಸ್ಟ್ 20ಕ್ಕೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10 ಕಾರು ಈಗಾಗಲೇ ಬಿಡುಗಡೆಯ ಉದ್ದೇಶಕ್ಕಾಗಿ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ನಡೆಸಲಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಗ್ರಾಂಡ್ ಐ10 ಗಿಂತ ನ್ಯೂ ಜನರೇಷನ್ ಕಾರು ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಹಿಂದೆ 2013ರಲ್ಲಿ ಬಿಡುಗಡೆಗೊಂಡಿದ್ದ ಈ ಕಾರು ಎರಡು ವರ್ಷಗಳ ಹಿಂದಷ್ಟೇ ಜಾಗತಿಕ ಮಾರುಕಟ್ಟೆಗಳಿಗಾಗಿ ನವೀಕರಣವನ್ನು ಪಡೆದುಕೊಂಡಿತ್ತು. ಇದೀಗ ಹ್ಯುಂಡೈ ಸಂಸ್ಥೆಯು ಹೊಸ ಪ್ಲ್ಯಾಟ್‌ಫಾರ್ಮ್ ಅಡಿ ಹೊಸ ಗ್ರಾಂಡ್ ಐ10 ಕಾರನ್ನು ಅಭಿವೃದ್ಧಿಗೊಳಿಸಿದೆ.

ಅಗಸ್ಟ್ 20ಕ್ಕೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ಗ್ರಾಂಡ್ ಐ10

ಸ್ಪಾಟ್ ಟೆಸ್ಟಿಂಗ್‍ ವೇಳೆ ಕಾಣಿಸಿಕೊಂಡ ಹ್ಯುಂಡೈ ಗ್ರಾಂಡ್ ಐ10 ಕಾರುಗಳು ಪ್ರೊಟೊ ಟೈಪ್ ಉತ್ಪಾದನಾ ಸಿದ್ಧ ಮಾದರಿಯಂತೆ ಕಾಣಿಸಿಕೊಂಡಿತ್ತು. ಪ್ರಸ್ತುತ ಗ್ರಾಂಡ್ ಐ10 ಗೆ ಹೋಲಿಸಿದರೆ ಹೊಸ ಗ್ರ್ಯಾಂಡ್ ಐ10 ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಹಿಂದಿನ ತಲೆಮಾರಿನ ಗ್ರಾಂಡ್ ಐ10 ಕಾರಿಗಿಂತ ಅಧಿಕ ಸುತ್ತಳತೆಯನ್ನು ಹೊಂದಿರಲಿದೆ.

ಅಗಸ್ಟ್ 20ಕ್ಕೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ಗ್ರಾಂಡ್ ಐ10

ಹಾಗೆಯೇ ಹ್ಯುಂಡೈ ಗ್ರಾಂಡ್ ಐ10 ಕಾರಿನ ಮುಂಭಾಗದಲ್ಲೂ ಹಲವು ಬದಲಾವಣೆಗಳನ್ನು ಕಾಣಬಹುದಾಗಿದ್ದು, ಹೆಕ್ಸಾಗೊನಲ್ ಗ್ರಿಲ್, ಕ್ರೋಮ್ ಅಕ್ಕ್ಸೆಂಟ್ ಮತ್ತು ಸ್ಪೋರ್ಟಿ ಬಂಪರ್‍‍‍ಗಳನ್ನು ನೀಡಲಾಗಿದೆ. ಆದರೆ ಕೊರಿಯಾ ದೇಶದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರಿನ ಹೊರಭಾಗದಲ್ಲಿ ಎಲ್ಇಡಿ ಡಿಆರ್‍ಎಲ್ ಅನ್ನು ಪಡೆದುಕೊಂಡಿರಲಿವೆ.

ಅಗಸ್ಟ್ 20ಕ್ಕೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ಗ್ರಾಂಡ್ ಐ10

ಜೊತೆಗೆ ಹೊಸ ಗ್ರಾಂಡ್ ಐ10 ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಕೆಲವು ಬದಲಾವಣೆಯನ್ನು ಕಾಣಬಹುದಾಗಿದ್ದು, ಗ್ರಾಹಕರನ್ನು ಆಕರ್ಷಿಸಲು ಈ ಬಾರಿ ಅಗಲವಾದ ಟೈಲ್‍‍ಲ್ಯಾಂಪ್ಸ್, ಹೊಸ ಬಾಗಿಲುಗಳು ಮತ್ತು ಕಾರಿನ ಟಾಪ್ ಎಂಡ್ ಮಾಡಲ್‍‍ನಲ್ಲಿ 15 ಇಂಚಿನ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ಮತ್ತು ಎಬಿಎಸ್ ಸೌಲಭ್ಯವು ಸ್ಟ್ಯಾಂಡರ್ಡ್ ಆಗಿ ನೀಡಿರುವುದನ್ನು ಗಮನಿಸಬಹುದಾಗಿದೆ.

ಅಗಸ್ಟ್ 20ಕ್ಕೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ಗ್ರಾಂಡ್ ಐ10

ಇನ್ನು ಕಾರಿನ ಒಳ ಭಾಗದ ವಿನ್ಯಾಸವು ವಿಶಾಲವಾಗಿರಲಿದ್ದು, ಆರಾಮದಾಯಕವಾದ ಲೆಗ್‍ರೂಂ ಮತ್ತು ಹೆಡ್‍‍ರೂಂ ಅನ್ನು ನೀಡಲಾಗಿದೆ. ಇದಲ್ಲದೆ ಲೆದರ್‍‍ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್, ಹೊಸ ಇನ್ಸ್ಟ್ರೂಮೆಂಟ್ ಕ್ಲಸ್ಟರ್‍‍ನೊಂಡಿಗೆ ಮಲ್ಟಿ ಇನ್ಫಾರ್‍‍ಮೇಷನ್ ಡಿಸ್ಪ್ಲೆ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ಸಪೋರ್ಟ್ ಮಾಡಬಲ್ಲ ಟಚ್‍‍‍ಸ್ಕ್ರೀನ್ ಇನ್ಫೋ‍‍ಟೈನ್ಮೆಂಟ್ ಸಿಸ್ಟಂ ನೀಡಲಾಗಿದೆ.

ಅಗಸ್ಟ್ 20ಕ್ಕೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ಗ್ರಾಂಡ್ ಐ10

ಎಂಜಿನ್ ಸಾಮರ್ಥ್ಯ

ಬಿಡುಗಡೆಗೆ ಸಜ್ಜಾಗಿರುವ ಹೊಸ ತಲೆಮಾರಿನ ಹ್ಯುಂಡೈ ಗ್ರಾಂಡ್ ಐ10 ಕಾರಿನ ತಾಂತ್ರಿಕ ಅಂಶಗಳ ಬಗ್ಗೆ ನಿಖರವಾದ ಮಾಹಿತಿ ಇಲ್ಲವಾದರೂ ಈ ಹಿಂದಿನ ತಲೆಮಾರಿನ ಕಾರಿನಲ್ಲಿ ಬಳಸಲಾದ 1.2 ಲೀಟರ್ 4-ಸಿಲಿಂಡರ್ ಕಪ್ಪಾ ಪೆಟ್ರೋಲ್ ಎಂಜಿನ್ ಮಾದರಿಯೇ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಉನ್ನತಿಕರಿಸಲಾಗಿದೆಯೆಂತೆ.

ಅಗಸ್ಟ್ 20ಕ್ಕೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ಗ್ರಾಂಡ್ ಐ10

1.2 ಲೀಟರ್ 4ಸಿಲೆಂಡರ್ ಕಪ್ಪಾ ಪೆಟ್ರೋಲ್ ಎಂಜಿನ್‍ ಮಾದರಿಯು 83-ಬಿಹೆಚ್‍‍ಪಿ ಮತ್ತು 113.6-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಲ್ಲದೇ 1.2 ಲೀಟರ್ ಯು2 ಸಿಆರ್‍‍ಡಿಐ ಡೀಸೆಲ್ ಎಂಜಿನ್‍‍ಗಳು 75ಬಿಹೆಚ್‍ಪಿ ಮತ್ತು 190ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಹೊಂದಿದೆ.

ಅಗಸ್ಟ್ 20ಕ್ಕೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ಗ್ರಾಂಡ್ ಐ10

ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಈ ಬಾರಿ ಗ್ರ್ಯಾಂಡ್ ಐ10 ಕಾರು ಸಾಕಷ್ಟು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ರಸ್ತೆಗಿಳಿಯಲಿದ್ದು, ಸ್ಟ್ಯಾಂಡರ್ಡ್ ಆಗಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಸ್ಪೀಡ್ ವಾರ್ನಿಂಗ್, ಸೀಟ್ ಬೆಲ್ಟ್ ರಿಮೆಂಡರ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಟಾಪ್ ಎಂಡ್ ಮಾದರಿಯಲ್ಲಿ ಇನ್ನು ಹಲವು ಹೆಚ್ಚುವರಿ ಸೌಲಭ್ಯಗಳನ್ನು ಜೋಡಿಸಲಾಗಿದೆ.

ಅಗಸ್ಟ್ 20ಕ್ಕೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಹ್ಯುಂಡೈ ಗ್ರಾಂಡ್ ಐ10

ಹೀಗಾಗಿ ಹೊಸ ಕಾರಿನ ಬೆಲೆಗಳನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ಆರಂಭಿಕವಾಗಿ ರೂ.5.50 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 8 ಲಕ್ಷ ಬೆಲೆ ಪಡೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು, ಹೊಸ ಗ್ರಾಂಡ್ ಐ10 ಕಾರು ಟಾಟಾ ಟಿಯಾಗೊ, ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಮಾರುತಿ ಸುಜುಕಿ ಸೆಲೆರಿಯೊ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

Most Read Articles

Kannada
English summary
Second-gen Grand i10 in the Indian market on August 20, 2019. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X