ಓಲಾ ಜೊತೆ ಸೇರಿದ ಹ್ಯುಂಡೈ ಮತ್ತು ಕಿಯಾ- ಹೊಸ ಯೋಜನೆಗಾಗಿ 2 ಸಾವಿರ ಕೋಟಿ ಹೂಡಿಕೆ..!

ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ ಓಲಾ ಸಂಸ್ಥೆಯು ಸದ್ಯದಲ್ಲೇ ಮತ್ತಷ್ಟು ಮಾರುಕಟ್ಟೆ ವಿಸ್ತರಣೆ ಮಾಡುತ್ತಿದ್ದು, ಹೊಸ ಯೋಜನೆಗಳಿಗಾಗಿ ದಕ್ಷಿಣ ಕೊರಿಯಾ ಮೂಲದ ಆಟೋ ಉತ್ಪಾದನಾ ಸಂಸ್ಥೆಗಳಾಗಿರುವ ಹ್ಯುಂಡೈ ಮತ್ತು ಕಿಯಾ ಮೋಟಾರ್ಸ್ ಭಾರೀ ಪ್ರಮಾಣದ ಹೂಡಿಕೆ ಮಾಡಿವೆ.

ಓಲಾ ಜೊತೆ ಸೇರಿದ ಹ್ಯುಂಡೈ ಮತ್ತು ಕಿಯಾ- ಹೊಸ ಯೋಜನೆಗಾಗಿ 2 ಸಾವಿರ ಕೋಟಿ ಹೂಡಿಕೆ..!

ಓಲಾ ಸಂಸ್ಥೆಯು ಸದ್ಯ ಉಬರ್ ಸಂಸ್ಥೆಗೆ ಭಾರೀ ಪೈಪೋಟಿ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಪರಿಚಯಿಸಲು ಮುಂದಾಗಿದೆ. ಹೀಗಾಗಿ ಹೊಸ ಹೂಡಿಕೆದಾರರನ್ನು ಎದುರು ನೋಡುತ್ತಿದ್ದ ಓಲಾ ಸಂಸ್ಥೆಯಲ್ಲಿ ಹ್ಯುಂಡೈ ಮತ್ತು ಕಿಯಾ ಸಂಸ್ಥೆಗಳು ಜೊತೆಗೂಡಿ ಬರೋಬ್ಬರಿ ರೂ.2,100 ಕೋಟಿ ಬಂಡವಾಳ ಹೂಡಿಕೆ ಮಾಡಿವೆ.

ಓಲಾ ಜೊತೆ ಸೇರಿದ ಹ್ಯುಂಡೈ ಮತ್ತು ಕಿಯಾ- ಹೊಸ ಯೋಜನೆಗಾಗಿ 2 ಸಾವಿರ ಕೋಟಿ ಹೂಡಿಕೆ..!

ಮುಂದಿನ ಆರು ವಾರಗಳ ಅವಧಿಯಲ್ಲಿ ಹ್ಯುಂಡೈ ಮತ್ತು ಕಿಯಾ ಸಂಸ್ಥೆಗಳು ಓಲಾದಲ್ಲಿ ಶೇ.4 ರಷ್ಟು ಸ್ಟಾಕ್ ಪಡೆದುಕೊಳ್ಳಲಿದ್ದು, ಈ ಮೂಲಕ ಓಲಾ ಮಾರುಕಟ್ಟೆಯ ಮೌಲ್ಯವು ರೂ.29 ಸಾವಿರ ಕೋಟಿಗೆ ಏರಿಕೆಯಾಗಲಿದೆ.

ಓಲಾ ಜೊತೆ ಸೇರಿದ ಹ್ಯುಂಡೈ ಮತ್ತು ಕಿಯಾ- ಹೊಸ ಯೋಜನೆಗಾಗಿ 2 ಸಾವಿರ ಕೋಟಿ ಹೂಡಿಕೆ..!

ಓಲಾದಲ್ಲಿ ಸದ್ಯ ಸಾಫ್ಟ್ ಬ್ಯಾಂಕ್ ಸಂಸ್ಥೆಯು ಶೇ. 25ರಷ್ಟು ಸ್ಟಾಕ್ ಹೊಂದಿದ್ದಲ್ಲಿ, ಓಲಾ ಸಂಸ್ಥಾಪಕರಾದ ಭಾವಿಷ್ ಅಗರವಾಲ್ ಮತ್ತು ಅಂಕಿತ್ ಭಾಟಿ (ಶೇ. 15 ರಷ್ಟು), ಟೆನ್ ಸೆಂಟ್ (ಶೇ.10 ರಷ್ಟು), ಮ್ಯಾಟ್ರಿಕ್ ಪಾಟ್ನರ್ಸ್(ಶೇ.8 ರಷ್ಟು), ಡಿಎಸ್‌ಟಿ ಗ್ಲೊಬಲ್(ಶೇ.6 ರಷ್ಟು) ಮತ್ತು ಟೆಮಾಸೆಕ್ (ಶೇ.5 ರಷ್ಟು) ಸ್ಟಾಕ್ ಹೊಂದಿವೆ.

MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಓಲಾ ಜೊತೆ ಸೇರಿದ ಹ್ಯುಂಡೈ ಮತ್ತು ಕಿಯಾ- ಹೊಸ ಯೋಜನೆಗಾಗಿ 2 ಸಾವಿರ ಕೋಟಿ ಹೂಡಿಕೆ..!

ಇದೀಗ ಹ್ಯುಂಡೈ ಮತ್ತು ಕಿಯಾ ಸಂಸ್ಥೆಯು ರೂ. 2100 ಕೋಟಿ ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಿದ್ದು, ಓಲಾ ಸಂಸ್ಥೆಯ ಮಾರುಕಟ್ಟೆಯ ಮೌಲ್ಯದಲ್ಲಿ ಶೇ.4 ಪಾಲು ಹ್ಯುಂಡೈ ಮತ್ತು ಕಿಯಾ ಪಾಲಾಗಲಿದೆ. ಇದರಿಂದ ಓಲಾದಲ್ಲಿ ಇನ್ಮುಂದೆ ಹ್ಯುಂಡೈ ಮತ್ತು ಕಿಯಾ ಕಾರುಗಳಿಗೆ ಹೆಚ್ಚಿನ ಮನ್ನಣೆ ಸಿಗಲಿದೆ ಎನ್ನಲಾಗಿದೆ.

ಓಲಾ ಜೊತೆ ಸೇರಿದ ಹ್ಯುಂಡೈ ಮತ್ತು ಕಿಯಾ- ಹೊಸ ಯೋಜನೆಗಾಗಿ 2 ಸಾವಿರ ಕೋಟಿ ಹೂಡಿಕೆ..!

ಜೊತೆಗೆ ಹ್ಯುಂಡೈ ಮತ್ತು ಕಿಯಾ ನಿರ್ಮಾಣದ ಎಲೆಕ್ಟ್ರಿಕ್ ಕಾರುಗಳನ್ನೇ ಕ್ಯಾಬ್ ಸೇವೆಗಳಿಗೆ ಬಳಕೆ ಮಾಡುವ ಈ ಯೋಜನೆ ಎರಡು ಸಂಸ್ಥೆಗಳಿಗೂ ಸಹಕಾರಿಯಾಗಲಿದ್ದು, ಕ್ಯಾಬ್ ಚಾಲಕರಿಗೆ ಹೆಚ್ಚಿನ ಮಟ್ಟದಲ್ಲಿ ಲಾಭಾಂಶ ನೀಡುವ ಗುರಿಹೊಂದಲಾಗಿದೆ.

MOST READ: ಆಟೋ ರಿಕ್ಷಾಗಳನ್ನು ಹಿಂದಿಕ್ಕುತ್ತಾ ಬಜಾಜ್ ಕ್ಯೂಟ್.?

ಓಲಾ ಜೊತೆ ಸೇರಿದ ಹ್ಯುಂಡೈ ಮತ್ತು ಕಿಯಾ- ಹೊಸ ಯೋಜನೆಗಾಗಿ 2 ಸಾವಿರ ಕೋಟಿ ಹೂಡಿಕೆ..!

ಇದಕ್ಕೂ ಮುನ್ನ ಹ್ಯುಂಡೈ ಸಂಸ್ಥೆಯು ಕಳೆದ ವರ್ಷ ದೆಹಲಿ ಮೂಲದ ಇಕೋ ಸಿಸ್ಟಂ ಎನ್ನುವ ಆ್ಯಪ್ ಆಧಾರಿತ ಸ್ಟಾರ್ಟ್ ಅಪ್ ಟ್ಯಾಕ್ಸಿ ಸಂಸ್ಥೆಯಲ್ಲೂ ರೂ.100 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಓಲಾದೊಂದಿಗಿನ ಹೊಸ ಯೋಜನೆಯಿಂದಾಗಿ ದೇಶದ ಎರಡನೇ ಮತ್ತು ಮೂರನೇ ದರ್ಜೆಯ ನಗರಗಳಲ್ಲೂ ಟ್ಯಾಕ್ಸಿ ಸೇವೆಗಳು ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಇದರಿಂದ ಸಹಜವಾಗಿಯೇ ಉಬರ್ ಸಂಸ್ಥೆಗೆ ಮತ್ತಷ್ಟು ಪೈಪೋಟಿ ಶುರುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

More from DriveSpark

Article Published On: Tuesday, March 19, 2019, 19:48 [IST]
English summary
Hyundai and Kia Invest $300m in India’s Largest Mobility Service Provider Ola. Read
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+