ಹ್ಯುಂಡೈ ಬಿಎಸ್-6 ಡೀಸೆಲ್ ಎಂಜಿನ್ ಕಾರುಗಳ ಬಿಡುಗಡೆಯ ಮಾಹಿತಿ ಬಹಿರಂಗ

ಮಾಲಿನ್ಯವನ್ನು ತಗ್ಗಿಸುವ ಉದ್ದೇಶದಿಂದ ದೇಶಾದ್ಯಂತ 2020ರ ಏಪ್ರಿಲ್ 1 ರಿಂದ ಬಿಎಸ್-6 ವೈಶಿಷ್ಟ್ಯತೆಯ ವಾಹನ ಮಾದರಿಗಳ ಉತ್ಪಾದನೆ ಮತ್ತು ಮಾರಾಟವನ್ನು ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದ್ದು, ಹ್ಯುಂಡೈ ಕೂಡಾ ತನ್ನ ಜನಪ್ರಿಯ ಕಾರು ಆವೃತ್ತಿಗಳನ್ನು ಹೊಸ ನಿಯಮಕ್ಕೆ ಅನುಗುಣವಾಗಿ ಉನ್ನತೀಕರಿಸುತ್ತಿದೆ.

ಹ್ಯುಂಡೈ ಬಿಎಸ್-6 ಡೀಸೆಲ್ ಎಂಜಿನ್ ಕಾರುಗಳ ಬಿಡುಗಡೆಯ ಮಾಹಿತಿ ಬಹಿರಂಗ

ಕೇಂದ್ರ ಸರ್ಕಾರವು ಈ ಹಿಂದೆ 2017 ಏಪ್ರಿಲ್ 1ರಿಂದ ಬಿಎಸ್-4 ವಾಹನ ಮಾದರಿಗಳ ಮಾರಾಟವನ್ನು ಕಡ್ಡಾಯಗೊಳಿಸಿದ ರೀತಿಯಲ್ಲೇ ಇದೀಗ ಬಿಎಸ್-6 ನಿಯಮವನ್ನು ಜಾರಿಗೆ ತರವಾಗುತ್ತಿದ್ದು, ಕೆಲವು ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮಕ್ಕೆ ಅನುಗುಣವಾಗಿ ಈಗಾಗಲೇ ಬಿಎಸ್-6 ಎಂಜಿನ್ ಪ್ರೇರಿತ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಇದರಲ್ಲಿ ಹ್ಯುಂಡೈ ಸಂಸ್ಥೆಯು ಸಹ ಮೊನ್ನೆಯಷ್ಟೇ ಗ್ರಾಂಡ್ ಐ10 ನಿಯೋಸ್ ಕಾರಿನಲ್ಲಿ ಬಿಎಸ್-6 ಪ್ರೇರಿತ ಪೆಟ್ರೋಲ್ ಕಾರು ಮಾರಾಟಕ್ಕೆ ಚಾಲನೆ ನೀಡಿದ್ದು, ಡೀಸೆಲ್ ಎಂಜಿನ್‌ಗಳನ್ನು ಸಹ ಹೊಸ ನಿಯಮಕ್ಕೆ ಅನುಗುಣವಾಗಿ ಅಭಿವೃದ್ಧಿಗೊಳಿಸುತ್ತಿರುವುದಾಗಿ ಹೇಳಿಕೊಂಡಿದೆ.

ಹ್ಯುಂಡೈ ಬಿಎಸ್-6 ಡೀಸೆಲ್ ಎಂಜಿನ್ ಕಾರುಗಳ ಬಿಡುಗಡೆಯ ಮಾಹಿತಿ ಬಹಿರಂಗ

ಪೆಟ್ರೋಲ್ ಎಂಜಿನ್‌ಗಿಂತ ಡೀಸೆಲ್ ಎಂಜಿನ್ ಮಾದರಿಯನ್ನು ಬಿಎಸ್-6 ನಿಯಮಗಳಿಗೆ ಉನ್ನತೀಕರಿಸುವುದು ತುಸು ವೆಚ್ಚದಾಯಕವಾಗಿದ್ದು, ಈ ಹಿನ್ನಲೆಯಲ್ಲಿ ಹೊಸ ಡೀಸೆಲ್ ಎಂಜಿನ್ ಕಾರುಗಳನ್ನು 2020ರ ಏಪ್ರಿಲ್ ನಂತರವೇ ಬಿಡುಗಡೆ ಮಾಡುವುದಾಗಿ ಹ್ಯುಂಡೈ ಮಾಹಿತಿ ನೀಡಿದೆ.

ಹ್ಯುಂಡೈ ಬಿಎಸ್-6 ಡೀಸೆಲ್ ಎಂಜಿನ್ ಕಾರುಗಳ ಬಿಡುಗಡೆಯ ಮಾಹಿತಿ ಬಹಿರಂಗ

ಹೊಸ ನಿಯಮ ಜಾರಿಗೂ ಮುನ್ನವೇ ಡೀಸೆಲ್ ಎಂಜಿನ್ ಕಾರುಗಳನ್ನು ಬಿಎಸ್-6 ನಿಯಮಕ್ಕೆ ಉನ್ನತೀಕರಿಸಿ ಮಾರಾಟ ಮಾಡುವುದರಿಂದ ಬೆಲೆ ಹೆಚ್ಚಳವಾಗಿ ಗ್ರಾಹಕರನ್ನು ಕಳೆದಕೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದ್ದು, ಇದೇ ಕಾರಣಕ್ಕೆ ಪೆಟ್ರೋಲ್ ಮಾದರಿಗಳನ್ನು ಹೊರತುಪಡಿಸಿ ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮ ಜಾರಿಗೆ ನಂತರವೇ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ಹ್ಯುಂಡೈ ಬಿಎಸ್-6 ಡೀಸೆಲ್ ಎಂಜಿನ್ ಕಾರುಗಳ ಬಿಡುಗಡೆಯ ಮಾಹಿತಿ ಬಹಿರಂಗ

ಇದಲ್ಲದೇ ಮೊನ್ನೆಯಷ್ಟೇ ಕೇಂದ್ರ ಸರ್ಕಾರವು ಕುಸಿಯುತ್ತಿರುವ ಆಟೋ ಉದ್ಯಮ ಸುಧಾರಣೆಗಾಗಿ ಕೆಲವು ಮಹತ್ವದ ಬದಲಾಣೆಗಳನ್ನು ತಂದಿದೆ. 2020ರ ಮಾರ್ಚ್ 31ರ ತನಕ ಬಿಎಸ್-4 ವಾಹನ ಮಾರಾಟಕ್ಕೆ ಯಾವುದೇ ತೊಂದರೆಯಿಲ್ಲ ಎಂದಿತ್ತು. ಹೀಗಾಗಿ ಏಪ್ರಿಲ್ 1ರ ನಂತರವಷ್ಟೇ ಬಿಎಸ್-6 ವಾಹನ ಮಾರಾಟವು ಕಡ್ಡಾಯವಾಗಲಿದ್ದು, ಅದರ ಹಿಂದಿನ ದಿನದ ತನಕ ನೋಂದಣಿಯಾದ ಬಿಎಸ್-4 ವಾಹನಗಳ ಓಡಾಟಕ್ಕೆ ಯಾವುದೇ ಅಡೆತಡೆಯಿಲ್ಲ ಇರುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದರು.

ಹ್ಯುಂಡೈ ಬಿಎಸ್-6 ಡೀಸೆಲ್ ಎಂಜಿನ್ ಕಾರುಗಳ ಬಿಡುಗಡೆಯ ಮಾಹಿತಿ ಬಹಿರಂಗ

ಇದರಿಂದ ಉದ್ಯಮ ಚೇತರಿಕೆಗಾಗಿ ನೀಡಲಾಗಿರುವ ಸಡಿಕೆಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಿರುವ ಹ್ಯುಂಡೈ ಸಂಸ್ಥೆಯು ಪ್ರಸ್ತುತ ಬೆಲೆಗಳಲ್ಲಿ ಸಾಧ್ಯವಾದಷ್ಟು ಕಾರುಗಳ ಮಾರಾಟಕ್ಕೆ ಮುಂದಾಗಿದ್ದು, ಬಿಎಸ್-6 ಜಾರಿ ನಂತರವಷ್ಟೇ ಹೊಸ ನಿಯಮ ಪಾಲನೆಗೆ ಮುಂದಾಗಿದೆ.

ಹ್ಯುಂಡೈ ಬಿಎಸ್-6 ಡೀಸೆಲ್ ಎಂಜಿನ್ ಕಾರುಗಳ ಬಿಡುಗಡೆಯ ಮಾಹಿತಿ ಬಹಿರಂಗ

ಇನ್ನು ಬಿಎಸ್-6 ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಲವು ಡೀಸೆಲ್ ಎಂಜಿನ್ ಕಾರುಗಳಿಗೆ ಸಂಕಷ್ಟ ಎದುರಾಗಿದ್ದು, ಹೊಸ ನಿಯಮಗಳಿಗೆ ಅನುಗುಣವಾಗಿ ಎಂಜಿನ್ ಉನ್ನತಿಕರಿಸಬೇಕು ಇಲ್ಲವೇ ಮಾರಾಟವನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.

MOST READ: ಆಕರ್ಷಕ ಬೆಲೆಗಳಲ್ಲಿ ಮಾರುತಿ ಸುಜುಕಿ 6 ಸೀಟರ್ ಎಕ್ಸ್ಎಲ್6 ಬಿಡುಗಡೆ

ಹ್ಯುಂಡೈ ಬಿಎಸ್-6 ಡೀಸೆಲ್ ಎಂಜಿನ್ ಕಾರುಗಳ ಬಿಡುಗಡೆಯ ಮಾಹಿತಿ ಬಹಿರಂಗ

ಇದೇ ಕಾರಣಕ್ಕಾಗಿ ಹ್ಯುಂಡೈ ಸಂಸ್ಥೆಯು ವೆನ್ಯೂ ಕಾರಿನಲ್ಲಿ ನೀಡಲಾಗಿರುವ ಡೀಸೆಲ್ ಎಂಜಿನ್ ಮಾದರಿಯನ್ನು ಸ್ಥಗಿತಗೊಳಿಸಿ ಹೊಸ ಎಂಜಿನ್ ಆಯ್ಕೆ ನೀಡಲು ಮುಂದಾಗಿದ್ದು, ನೆಕ್ಸ್ಟ್ ಜನರೇಷನ್ ಕ್ರೆಟಾದಲ್ಲಿ ಬಳಕೆ ಮಾಡಲು ಉದ್ದೇಶಿಸಿರುವ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ವೆನ್ಯೂನಲ್ಲೂ ಜೋಡಿಸಲು ನಿರ್ಧರಿಸಿದೆ.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಹ್ಯುಂಡೈ ಬಿಎಸ್-6 ಡೀಸೆಲ್ ಎಂಜಿನ್ ಕಾರುಗಳ ಬಿಡುಗಡೆಯ ಮಾಹಿತಿ ಬಹಿರಂಗ

ಹ್ಯುಂಡೈ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್ ಡೀಸೆಲ್, 1.4-ಲೀಟರ್ ಡೀಸೆಲ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್‌ಗಳನ್ನು ಮಾರಾಟ ಮಾಡುತ್ತಿದ್ದು, ಬಿಎಸ್-6 ನಿಯಮಕ್ಕೆ ಉನ್ನತೀಕರಣ ಮಾಡಲು ಸಾಧ್ಯವಿಲ್ಲದ 1.4-ಲೀಟರ್ ಮತ್ತು 1.6-ಲೀಟರ್ ಎಂಜಿನ್ ಕೈಬಿಟ್ಟು ಹೊಸದಾಗಿ 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.

MOST READ: ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಹ್ಯುಂಡೈ ಬಿಎಸ್-6 ಡೀಸೆಲ್ ಎಂಜಿನ್ ಕಾರುಗಳ ಬಿಡುಗಡೆಯ ಮಾಹಿತಿ ಬಹಿರಂಗ

1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಈ ಮೊದಲು ನೆಕ್ಸ್ಟ್ ಜನರೇಷನ್ ಕ್ರೆಟಾ ಮತ್ತು ಐ20 ಕಾರುಗಳಲ್ಲಿ ಅಳವಡಿಸಲು ನಿರ್ಧರಿಸಿದ್ದ ಹ್ಯುಂಡೈ ಸಂಸ್ಥೆಯು ಇದೀಗ ವೆನ್ಯೂ ಕಾರಿನಲ್ಲೂ ಇದೇ ಎಂಜಿನ್ ಮಾದರಿಯನ್ನು ಒದಗಿಸಲು ಮುಂದಾಗಿದ್ದು, ವೆನ್ಯೂ ಕಾರು ಮತ್ತಷ್ಟು ಬಲಿಷ್ಠತೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಹ್ಯುಂಡೈ ಬಿಎಸ್-6 ಡೀಸೆಲ್ ಎಂಜಿನ್ ಕಾರುಗಳ ಬಿಡುಗಡೆಯ ಮಾಹಿತಿ ಬಹಿರಂಗ

ಸದ್ಯ ಬಿಎಸ್-6 ನಿಯಮಗಳಿಗೆ ಅನುಗುಣವಾಗಿ ಉನ್ನತೀಕರಣ ಸಾಧ್ಯವಿಲ್ಲದ ಹಲವಾರು ಜನಪ್ರಿಯ ಕಾರುಗಳು ಮಾರುಕಟ್ಟೆಯಿಂದ ನಿರ್ಗಮಿಸಲು ಸಜ್ಜಾಗುತ್ತಿದ್ದು, ಹ್ಯುಂಡೈ ಮಾತ್ರ ದುಬಾರಿ ವೆಚ್ಚದಲ್ಲೂ ಹೊಸ ಡೀಸೆಲ್ ಎಂಜಿನ್ ಮಾದರಿಯನ್ನು ಅಭಿವೃದ್ದಿಗೊಳಿಸಿ ಮಾರಾಟಕ್ಕೆ ಸಿದ್ದಗೊಳಿಸುತ್ತಿದೆ. ಹೊಸ ಎಂಜಿನ್ ಮಾದರಿಯು ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆಯೊಂದಿಗೆ ಮೈಲೇಜ್ ಹಾಗೂ ಮಾಲಿನ್ಯ ಹೊರಸೂಸುವಿಕೆಯಲ್ಲಿ ಸುಧಾರಣೆ ಕಂಡಿದೆ.

Most Read Articles

Kannada
English summary
Hyundai Plans To Start Launching BS-VI Complaint Models Next Year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X