ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ವೆನ್ಯೂ

ಹ್ಯುಂಡೈ ವೆನ್ಯೂ ಎಸ್‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಭಾರಿ ಬೇಡಿಕೆಯ ಹ್ಯುಂಡೈ ವೆನ್ಯೂ ಕಾರಿನ ಸುರಕ್ಷತಾ ಕ್ರ್ಯಾಶ್ ಟೆಸ್ಟ್ ಅನ್ನು ನಡೆಸಿದೆ. ಹ್ಯುಂಡೈ ಕಂಪನಿಯು ಕೆಲವು ತಿಂಗಳ ಹಿಂದೆ ವೆನ್ಯೂ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿತ್ತು.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ವೆನ್ಯೂ

ಭಾರತದಲ್ಲಿ ವೆನ್ಯೂ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿದ ದಿನವೇ ಅಮೆರಿಕಾದ ನ್ಯೂಯಾರ್ಕ್‍‍ನಲ್ಲಿಯೂ ಬಿಡುಗಡೆಗೊಳಿಸಲಾಗಿತ್ತು. ನಂತರ ಅಸ್ಟ್ರೇಲಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಹ್ಯುಂಡೈ ವೆನ್ಯೂ ಇದೀಗ ಗ್ಲೋಬಲ್ ಸುರಕ್ಷಾತ ಕ್ರ್ಯಾಶ್ ಟೆಸ್ಟ್ ಅನ್ನು ನಡೆಸಿರುವುದು ಬಹಿರಂಗವಾಗಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ವೆನ್ಯೂ

ಹ್ಯುಂಡೈ ವೆನ್ಯೂ ಸುರಕ್ಷತಾ ಕ್ರ್ಯಾಶ್ ಟೆಸ್ಟಿಂಗ್‍‍ನಲ್ಲಿ 4 ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ ಎಂದು ಎಎನ್‍‍ಸಿಎ‍ಪಿ ವರದಿಯಲ್ಲಿ ತಿಳಿಸಿದೆ. ಅಡಾಲ್ಟ್ ಅಕ್ಯೂಪೇಂಟ್‍‍ನ‍‍‍ಲ್ಲಿ ಶೇ.81 ರಷ್ಟು ರೇಟಿಂಗ್, ಪಾದಚಾರಿಗಳ ಬಳಕೆದಾರರಿಗೆ ಶೇ.62 ರೇಟಿಂಗ್ ಮತ್ತು ಸುರಕ್ಷಾತ ಪೀಚರ್ಸ್‍‍ಗಳ ಮೇಲೆ ಶೇ.62ರಷ್ಟು ರೇಟಿಂಗ್ ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ವೆನ್ಯೂ

ಗ್ಲೋಬಲ್ ಎನ್‍ಸಿಎ‍ಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಮಾರುತಿ ವಿಟಾರಾ ಬ್ರಿಝಾ 4 ಸ್ಟಾರ್ ಸುರಕ್ಷಾತ ರೇಟಿಂಗ್ ಅನ್ನು ಪಡೆದುಕೊಂಡಿದೆ. ಟಾಟಾ ನೆಕ್ಸಾನ್ ಕ್ರ್ಯಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ವೆನ್ಯೂ

ಕ್ರ್ಯಾಶ್ ಟೆಸ್ಟ್ ನಲ್ಲಿ ಹ್ಯುಂಡೈ ವೆನ್ಯೂ ಕಾರು ಮುಂಭಾಗದ ಪ್ರಯಾಣಿಕರ ಸುರಕ್ಷತೆಗಾಗಿ ಉತ್ತಮವಾಗಿದೆ. ಮುಂಭಾಗದ ಕೆಳಗಿನ ಕಾಲುಗಳಿಗೂ ಕೂಡ ಹೆಚ್ಚಿನ ರಕ್ಷಣೆಯನ್ನು ನೀಡಲಾಗಿದೆ. ಚಾಲಕ ಮತ್ತು ಹಿಂಬದಿ ಪ್ರಯಾಣಿಕರ ಸುರಕ್ಷತೆಯು ಉತ್ತಮವಾಗಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ವೆನ್ಯೂ

ಕಾರಿನ ಮುಂಭಾಗದ ಕ್ರ್ಯಾಶ್ ಟೆಸ್ಟ್ ನಲ್ಲಿ ಡಮ್ಮಿ ಚಾಲಕನನ್ನು ಇರಿಸಿ ಟೆಸ್ಟ್ ಮಾಡಿದಾಗ ಪ್ರಯಾಣಿಕರು ಹೆಚ್ಚಿನ ಸುರಕ್ಷತೆಯನ್ನು ಹೊಂದಿರುವುದು ತಿಳಿದುಬಂದಿದೆ. ಸೈಡ್ ಇಂಪ್ಯಾಕ್ಟ್ ಟೆಸ್ಟ್ ನಲ್ಲಿ ಚಾಲಕನ ಸಂಪೂರ್ಣ ದೇಹ ಸುರಕ್ಷತೆಯನ್ನು ಹೊಂದಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ವೆನ್ಯೂ

ಭಾರತದ ಎಕ್ಸ್ ಶೋರೂಂ ಪ್ರಕಾರ ಹ್ಯುಂಡೈ ವೆನ್ಯೂ ಕಾರಿನ ಆರಂಭಿಕ ಬೆಲೆಯು ರೂ.6.5 ಲಕ್ಷಗಳಾಗಿದೆ. ಹ್ಯುಂಡೈ ವೆನ್ಯೂ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಎಸ್‍‍ಯು‍ವಿಯಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ವೆನ್ಯೂ

ಹ್ಯುಂಡೈ ವೆನ್ಯೂ ಹಲವಾರು ವಿನೂತನ ಫೀಚರ್ಸ್‍ಗಳನ್ನು ಹೊಂದಿರುವ ಎಸ್‍‍ಯುವಿಯಾಗಿದೆ. ಹ್ಯುಂಡೈ ಮೋಟಾರ್ಸ್ ಕಂಪನಿಗೆ ದೇಶಿಯ ಮಾರುಕಟ್ಟೆಯಲ್ಲಿ ವೆನ್ಯೂ ಎಸ್‍‍ಯುವಿಗೆ ಹೆಚ್ಚಿನ ಪ್ರತಿಕ್ರಿಯೆಯನ್ನು ಲಭಿಸಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ವೆನ್ಯೂ

ಇದರಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.4-ಡೀಸೆಲ್ ಎಂಜಿನ್‌ಗಳು ಹೊಂದಿದ್ದರೆ, 1.0-ಲೀಟರ್ ಪೆಟ್ರೋಲ್ ವೆನ್ಯೂ ಟಾಪ್ ಎಂಡ್ ಮಾದರಿಯಾಗಿದೆ. ವೆನ್ಯೂ ಕಾಂಪ್ಯಾಕ್ಟ್ ಎಸ್‍‍ಯುವಿಯಲ್ಲಿರುವ 1.2-ಲೀಟರ್ ಪೆಟ್ರೋಲ್ ಎಂಜಿನ್, 83 ಬಿಎಚ್‌ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಎಂಜಿನ್‍‍ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ. ಇನ್ನೂ 1.4-ಲೀಟರ್ ಡೀಸೆಲ್ ಎಂಜಿನ್, 89 ಬಿಎಚ್‌ಪಿ ಪವರ್ ಮತ್ತು 220 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದ ಹ್ಯುಂಡೈ ವೆನ್ಯೂ

ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆನ್ಯೂ ಹೆಚ್ಚು ಮಾರಾಟವಾಗುತ್ತಿರುವ ಎಸ್‍‍ಯುವಿಗಳಲ್ಲಿ ಒಂದಾಗಿದೆ. ಹ್ಯುಂಡೈ ವೆನ್ಯೂ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರಿಝಾ, ಫೋರ್ಡ್ ಇಕೋಸ್ಪೋರ್ಟ್, ಮಹಿಂದ್ರಾ ಎಕ್ಸ್​ಯುವಿ 300 ಮತ್ತು ಕಿಯಾ ಸೆಲ್ಟೋಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Thursday, December 19, 2019, 11:45 [IST]
English summary
Hyundai Venue Crash Test Video – Scores 4 Star Safety Rating - Reading in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+