ಕಾರಿನ ಆಯ್ಕೆಯಲ್ಲಿ ಭಾರತೀಯ ಗ್ರಾಹಕರ ಫೆವರಿಟ್ ಕಲರ್ ಯಾವುದು ಗೊತ್ತಾ?

ಕಾರು ಖರೀದಿ ವೇಳೆ ಪ್ರತಿಯೊಬ್ಬ ಗ್ರಾಹಕರು ಕೂಡಾ ಕಾರಿನ ಬೆಲೆ, ಮೈಲೇಜ್ ಕುರಿತು ಹೇಗೆ ಹೆಚ್ಚು ವಿಚಾರಣೆ ಮಾಡುತ್ತಾರೆಯೋ ಹಾಗೆಯೇ ಕಾರಿನ ಬಣ್ಣದ ಆಯ್ಕೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಹೀಗಾಗಿ ಭಾರತೀಯ ಗ್ರಾಹಕರನ್ನು ಹೆಚ್ಚು ಆಕರ್ಷಣೆ ಮಾಡಿರುವ ಬಣ್ಣದ ಕುರಿತು ಇದೀಗ ಸಮೀಕ್ಷೆಯೊಂದು ಅಚ್ಚರಿಯ ಮಾಹಿತಿಯನ್ನು ಹೊರಹಾಕಿದೆ.

ಕಾರಿನ ಆಯ್ಕೆಯಲ್ಲಿ ಭಾರತೀಯ ಗ್ರಾಹಕರ ಫೆವರಿಟ್ ಕಲರ್ ಯಾವುದು ಗೊತ್ತಾ?

ವಾಹನ ಉದ್ಯಮದಲ್ಲಿ ದಿನಕ್ಕೊಂದು ಹೊಸ ಬಗೆಯ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಲೇ ಇರುತ್ತವೆ. ಬಿಡುಗಡೆಯಾಗುವ ಕಾರುಗಳಲ್ಲಿ ಬಹುತೇಕ ಮಾದರಿಗಳು ಎಕ್ಸ್‌ಲೆಂಟ್ ಪೇಂಟಿಂಗ್ ಡಿಸೈನ್ ಹೊಂದಿರುವುದು ಸಾಮಾನ್ಯವಾಗಿರುತ್ತೆ. ಆದ್ರೆ ಬಿಡುಗಡೆಯಾಗುವ ಕೆಲವು ಕಾರಿನ ಬಣ್ಣಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ್ರೆ ಇನ್ನು ಕೆಲವು ಬಣ್ಣಗಳು ಹೆಚ್ಚು ಟ್ರೆಂಡ್ ಸೃಷ್ಠಿಸುತ್ತವೆ.

ಕಾರಿನ ಆಯ್ಕೆಯಲ್ಲಿ ಭಾರತೀಯ ಗ್ರಾಹಕರ ಫೆವರಿಟ್ ಕಲರ್ ಯಾವುದು ಗೊತ್ತಾ?

ಸಾಮಾನ್ಯವಾಗಿ ಬಹುತೇಕ ಕಾರು ಖರೀದಿದಾರರು ತಮ್ಮ ರಾಶಿಗೆ ಅನುಗುಣವಾಗಿ ಕಾರಿನ ಬಣ್ಣಗಳನ್ನು ಆಯ್ದುಕೊಳ್ಳುವುದು ಇದೀಗ ಹೆಚ್ಚು ಪ್ರಚಲಿತವಾಗಿದೆ. ಇದರಲ್ಲಿ ಬಿಳಿ, ಸಿಲ್ವರ್ ಮತ್ತು ಕೆಲವರು ಆಯ್ಕೆಗೆ ಅನುಗುಣವಾಗಿ ಕಪ್ಪು ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇದರ ಹೊರತಾಗಿ ಇನ್ನುಳಿದ ಕಾರಿನ ಬಣ್ಣಗಳು ಗ್ರಾಹಕರನ್ನು ಅಷ್ಟಾಗಿ ಸೆಳೆಯುವುದಿಲ್ಲ.

ಕಾರಿನ ಆಯ್ಕೆಯಲ್ಲಿ ಭಾರತೀಯ ಗ್ರಾಹಕರ ಫೆವರಿಟ್ ಕಲರ್ ಯಾವುದು ಗೊತ್ತಾ?

ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಹೊಸ ಕಾರುಗಳಲ್ಲಿ 9 ರಿಂದ 12 ವಿವಿಧ ಬಣ್ಣಗಳ ಆಯ್ಕೆ ನೀಡಲಾಗುತ್ತಿದ್ದರೂ ಗ್ರಾಹಕರು ಮಾತ್ರ 3 ರಿಂದ 4 ಮಾದರಿಯ ಬಣ್ಣಗಳನ್ನು ಹೊರತುಪಡಿಸಿ ಇತರೆ ಬಣ್ಣಗಳ ಬಗ್ಗೆ ಅಷ್ಟಾಗಿ ಇಷ್ಟಪಡುವುದಿಲ್ಲ. ಹಾಗಾದ್ರೆ ಗ್ರಾಹಕರ ನೆಚ್ಚಿನ ಬಣ್ಣದ ಯಾವುದು?

ಕಾರಿನ ಆಯ್ಕೆಯಲ್ಲಿ ಭಾರತೀಯ ಗ್ರಾಹಕರ ಫೆವರಿಟ್ ಕಲರ್ ಯಾವುದು ಗೊತ್ತಾ?

ಭಾರತೀಯ ಗ್ರಾಹಕರು ರೆಡ್, ಬ್ಲೂ, ಗ್ರೀನ್, ಯೆಲ್ಲೊ, ಆರೇಂಜ್ ಕಾರುಗಳನ್ನು ಖರೀದಿ ಮಾಡುವುದು ತುಂಬಾ ವಿರಳ ಎನ್ನಬಹುದು. ಹಾಗಂತ ಈ ಕಾರುಗಳು ಚೆನ್ನಾಗಿಲ್ಲ ಅಂತಾ ಅಲ್ಲಾ. ಆದರೂ ಭಾರತೀಯ ಗ್ರಾಹಕರ ಆಯ್ಕೆಯಲ್ಲಿ ಬಿಳಿ ಮತ್ತು ಸಿಲ್ವರ್ ಬಣ್ಣಗಳಿಗೆ ಹೆಚ್ಚಿನ ಆದ್ಯತೆ ಇದೆ.

ಕಾರಿನ ಆಯ್ಕೆಯಲ್ಲಿ ಭಾರತೀಯ ಗ್ರಾಹಕರ ಫೆವರಿಟ್ ಕಲರ್ ಯಾವುದು ಗೊತ್ತಾ?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಕೆಲವು ಬ್ರ್ಯಾಂಡ್ ಕಾರು ಪ್ರತ್ಯೇಕ ಬಣ್ಣಗಳಲ್ಲೇ ಉತ್ತಮ ವಿನ್ಯಾಸವನ್ನು ಹೊಂದಿದ್ದು, ಗ್ರಾಹಕರಿಗೂ ಕೂಡಾ ಅದೇ ಮಾದರಿಯ ಬಣ್ಣಗಳೇ ಇಷ್ಟವಾಗುತ್ತವೆ. ಉದಾಹರಣೆಗೆ ಬ್ರೈಟ್ ಯೆಲ್ಲೊ ಬಣ್ಣದಲ್ಲಿ ಲಂಬೋರ್ಗಿನಿ ಮಿಂಚಿದ್ರೆ, ಅದು ಇತರೆ ಹೋಂಡಾ ಸಿಟಿ ಕಾರುಗಳಲ್ಲಿ ಊಹೆ ಮಾಡಲು ಸಾಧ್ಯವಿಲ್ಲ.

ಕಾರಿನ ಆಯ್ಕೆಯಲ್ಲಿ ಭಾರತೀಯ ಗ್ರಾಹಕರ ಫೆವರಿಟ್ ಕಲರ್ ಯಾವುದು ಗೊತ್ತಾ?

ಇನ್ನು ಗೋಲ್ಡ್, ಬ್ರೌನ್, ಪಿಂಕ್ ಮತ್ತು ಬ್ಯೂ ಗ್ರಿನ್ ಕಾರುಗಳು ಕೂಡಾ ಕೆಲವೇ ಗ್ರಾಹಕರ ಆಯ್ಕೆಯಲ್ಲಿ ಸ್ಥಾನ ಪಡೆದಿದ್ದು, ಇತ್ತೀಚೆಗೆ ಮ್ಯಾಟೆ ಪೇಂಟ್ ಫಿನಿಸಿಂಗ್, ಮೆಟಾಲಿಕ್ ಮತ್ತು ಸಾಲಿಡ್ ಮಾದರಿಯಲ್ಲೂ ಹೆಚ್ಚು ಜನಪ್ರಿಯತೆ ಹೊಂದುತ್ತಿವೆ.

ಕಾರಿನ ಆಯ್ಕೆಯಲ್ಲಿ ಭಾರತೀಯ ಗ್ರಾಹಕರ ಫೆವರಿಟ್ ಕಲರ್ ಯಾವುದು ಗೊತ್ತಾ?

ಬಿಳಿ ಬಣ್ಣದ ಕಾರುಗಳಿಗೆ ಏಕೆ ಹೆಚ್ಚು ಬೇಡಿಕೆ?

ಸಹಜವಾಗಿಯೇ ಕಾರು ಖರೀದಿಸುವ ಗ್ರಾಹಕರಿಗೆ ಈ ಪ್ರಶ್ನೆ ಮೂಡದೇ ಇರಲಾರದು. ನಿಜ, ಬಿಳಿ ಬಣ್ಣದ ಕಾರುಗಳನ್ನು ಖರೀದಿ ಮಾಡುವುದಿಂದ ಹತ್ತಾರು ಲಾಭಗಳಿವೆ ಎಂದರೇ ನೀವು ನಂಬಲೇಬೇಕು.

ಕಾರಿನ ಆಯ್ಕೆಯಲ್ಲಿ ಭಾರತೀಯ ಗ್ರಾಹಕರ ಫೆವರಿಟ್ ಕಲರ್ ಯಾವುದು ಗೊತ್ತಾ?

ಮರು ಮಾರಾಟ ಮೌಲ್ಯದಲ್ಲಿ ಬಿಳಿ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಇದರ ಜೊತೆಗೆ ಕಾರಿನ ಹೊಳಪು ಯಾವಾಗಲೂ ಹೊಸತರಂತೆ ಕಾಣಲು ಸಹಕಾರಿಯಾಗುವುದಲ್ಲದೇ ನಿಮ್ಮಕಾರಿನ ಔಟ್ ಲುಕ್ ಕೂಡಾ ಇತರೆ ಕಾರುಗಳಿಂತ ಭಿನ್ನವಾಗಿರುತ್ತದೆ.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಕಾರಿನ ಆಯ್ಕೆಯಲ್ಲಿ ಭಾರತೀಯ ಗ್ರಾಹಕರ ಫೆವರಿಟ್ ಕಲರ್ ಯಾವುದು ಗೊತ್ತಾ?

ಬಿಎಎಸ್ಎಫ್ ಸಂಸ್ಥೆಯು ಕಳೆದ ವರ್ಷ ಭಾರತೀಯ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಬಿಳಿ ಬಣ್ಣದ ಕಾರುಗಳನ್ನೇ ಹೆಚ್ಚು ಇಷ್ಟಪಟ್ಟಿರುವ ಬಗ್ಗೆ ಸಮೀಕ್ಷಾ ವರದಿಯನ್ನು ಪ್ರಕಟಿಸಿದ್ದು, ಮಾರಾಟಗೊಂಡ ಪ್ರತಿ ನೂರು ಕಾರುಗಳಲ್ಲಿ ಬರೋಬ್ಬರಿ 43 ಕಾರುಗಳು ಬಿಳಿಬಣ್ಣವನ್ನು ಹೊಂದಿವೆ.

ಕಾರಿನ ಆಯ್ಕೆಯಲ್ಲಿ ಭಾರತೀಯ ಗ್ರಾಹಕರ ಫೆವರಿಟ್ ಕಲರ್ ಯಾವುದು ಗೊತ್ತಾ?

ನಂತರದ ಸ್ಥಾನದಲ್ಲಿ ಶೇ.15ರಷ್ಟು ಗ್ರಾಹಕರು ಗ್ರೇ ಬಣ್ಣವನ್ನು, ಶೇ. 14ರಷ್ಟು ಸಿಲ್ವರ್ ಬಣ್ಣವನ್ನು ಹಾಗೂ ಶೇಕಡಾ 12 ರಷ್ಟು ಕೆಂಪು ಬಣ್ಣದ ಕಾರು ಖರೀದಿಸಿರುವ ಗ್ರಾಹಕರು ಬಿಳಿ ಬಣ್ಣದ ಮೇಲೆಯೇ ಹೆಚ್ಚಿನ ಒಲವು ಹೊಂದಿರುವುದು ಇಲ್ಲಿ ಬಹಿರಂಗವಾಗಿದೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಕಾರಿನ ಆಯ್ಕೆಯಲ್ಲಿ ಭಾರತೀಯ ಗ್ರಾಹಕರ ಫೆವರಿಟ್ ಕಲರ್ ಯಾವುದು ಗೊತ್ತಾ?

ಒಟ್ಟಿನಲ್ಲಿ ಕಾರುಗಳ ಬಣ್ಣವು ಕಾರಿನ ಖರೀದಿ ಪ್ರಕ್ರಿಯೆ ಮಹತ್ವದ ಸ್ಥಾನ ಪಡೆದಿದ್ದು, ಬಿಳಿ ಬಣ್ಣದ ಕಾರುಗಳು ಅಗ್ರಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಹಾಗಂತ ಇತರೆ ಕಾರುಗಳ ವಿವಿಧ ಬಣ್ಣಗಳು ಮೌಲ್ಯ ಹೊಂದಿಲ್ಲ ಎನ್ನುವುದಕ್ಕಿಂತ ನೋಡಲು ಅಷ್ಟು ಅಂದವಾಗಿಲ್ಲ ಎನ್ನಬಹುದು.

More from DriveSpark

Article Published On: Saturday, January 19, 2019, 11:28 [IST]
English summary
India’s Favourite Car Colour Is White — 4/10 Cars Sold In India Are White In Colour. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+