ಕಾರು ಮಾರುಕಟ್ಟೆಯಲ್ಲಿ ಕುಸಿದ ಮಾರುತಿ ಸುಜುಕಿ ಕಂಪನಿಯ ಷೇರುಗಳು

ಭಾರತೀಯ ಕಾರು ಮಾರುಕಟ್ಟೆಯ ಮೊದಲ ಆರು ತಿಂಗಳ (ಏಪ್ರಿಲ್ - ಸೆಪ್ಟೆಂಬರ್) ಅವಧಿಯಲ್ಲಿನ ಮಾರಾಟ ಪ್ರಮಾಣದಲ್ಲಿ ಭಾರೀ ಬದಲಾವಣೆಗಳಾಗಿವೆ. ಪ್ರಮುಖವಾಗಿ ಮಾರುತಿ ಸುಜುಕಿ, ಹ್ಯುಂಡೈ, ಟೊಯೊಟಾ ಹಾಗೂ ಕಿಯಾ ಮೋಟಾರ್ಸ್ ಮಾರಾಟದಲ್ಲಿ ಭಾರೀ ಬದಲಾವಣೆಗಳಾಗಿವೆ.

ಕಾರು ಮಾರುಕಟ್ಟೆಯಲ್ಲಿ ಕುಸಿದ ಮಾರುತಿ ಸುಜುಕಿ ಕಂಪನಿಯ ಷೇರುಗಳು

ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಕಂಪನಿಯು ಈ ಅವಧಿಯಲ್ಲಿ ಭಾರೀ ಪ್ರಮಾಣದ ಕುಸಿತವನ್ನು ಅನುಭವಿಸಿದ್ದರೆ, ಉಳಿದ ಕಂಪನಿಗಳ ಮಾರಾಟದಲ್ಲಿ ಏರಿಕೆಯಾಗಿದೆ. ಈ ಅವಧಿಯಲ್ಲಿ ಮಾರುತಿ ಸುಜುಕಿ ಕಂಪನಿಯು 2.6%ನಷ್ಟು ಮಾರುಕಟ್ಟೆ ಷೇರನ್ನು ಕಳೆದು ಕೊಂಡಿದೆ.

ಕಾರು ಮಾರುಕಟ್ಟೆಯಲ್ಲಿ ಕುಸಿದ ಮಾರುತಿ ಸುಜುಕಿ ಕಂಪನಿಯ ಷೇರುಗಳು

ಕಂಪನಿಯ ಮಾರುಕಟ್ಟೆಯಲ್ಲಿನ ಷೇರು ಪ್ರಮಾಣವು 52.8%ನಿಂದ 50.2%ಗಳಿಗೆ ಕುಸಿದಿದೆ. ಆದರೆ ಹ್ಯುಂಡೈ ಕಂಪನಿಯ ಮಾರಾಟ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಹ್ಯುಂಡೈ ಕಂಪನಿಯ ಷೇರುಗಳ ಪ್ರಮಾಣವು ಸಹ ಹೆಚ್ಚಾಗಿದೆ.

ಕಾರು ಮಾರುಕಟ್ಟೆಯಲ್ಲಿ ಕುಸಿದ ಮಾರುತಿ ಸುಜುಕಿ ಕಂಪನಿಯ ಷೇರುಗಳು

15.9%ನಷ್ಟಿದ್ದ ಹ್ಯುಂಡೈ ಕಂಪನಿಯ ಮಾರುಕಟ್ಟೆ ಷೇರು ಈ ಅವಧಿಯಲ್ಲಿ 2.6%ನಷ್ಟು ಹೆಚ್ಚಾಗಿ 18.5% ಆಗಿದೆ. ಹ್ಯುಂಡೈ ಕಂಪನಿಯು ಇತ್ತೀಚಿಗೆ ಬಿಡುಗಡೆಗೊಳಿಸಿದ ವೆನ್ಯೂ ಹಾಗೂ ಗ್ರಾಂಡ್ ಐ10 ನಿಯೋಸ್‍‍ಗಳ ಮಾರಾಟದಿಂದಾಗಿ ಹ್ಯುಂಡೈನ ಮಾರುಕಟ್ಟೆಯಲ್ಲಿನ ಷೇರು ಪ್ರಮಾಣವು ಹೆಚ್ಚಾಗಿದೆ.

ಕಾರು ಮಾರುಕಟ್ಟೆಯಲ್ಲಿ ಕುಸಿದ ಮಾರುತಿ ಸುಜುಕಿ ಕಂಪನಿಯ ಷೇರುಗಳು

ಮಹೀಂದ್ರಾ ಕಂಪನಿಯು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಅವಧಿಯಲ್ಲಿ ಮಹೀಂದ್ರಾ ಕಂಪನಿಯ ಷೇರು 6.5%ನಿಂದ 7.5%ಗಳಿಗೆ ಏರಿಕೆಯಾಗಿದೆ. ಇದೇ ವೇಳೆ ಮಹೀಂದ್ರಾ ಕಂಪನಿಯು ಕಡಿಮೆ ಪ್ರಮಾಣದ ಮಾರಾಟವನ್ನು ಸಹ ಎದುರಿಸಿದೆ.

ಕಾರು ಮಾರುಕಟ್ಟೆಯಲ್ಲಿ ಕುಸಿದ ಮಾರುತಿ ಸುಜುಕಿ ಕಂಪನಿಯ ಷೇರುಗಳು

ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿನ ತನ್ನ ಷೇರು ಪ್ರಮಾಣವನ್ನು ಹೆಚ್ಚಿಸಿಕೊಂಡ ಮತ್ತೊಂದು ಕಂಪನಿಯೆಂದರೆ ಟೊಯೊಟಾ. ಟಾಟಾ ಮೋಟಾರ್ಸ್ ಹಾಗೂ ಹೋಂಡಾ ಕಂಪನಿಗಳನ್ನು ಹಿಂದಿಕ್ಕಿ ಟೊಯೊಟಾ ಕಂಪನಿಯು ನಾಲ್ಕನೇ ಸ್ಥಾನಕ್ಕೆರಿದೆ.

ಸ್ಥಾನ ಕಂಪನಿ 2019ರ ಮೊದಲ ಆರು ತಿಂಗಳ ಮಾರುಕಟ್ಟೆಯಲ್ಲಿನ ಷೇರು 2018ರ ಮೊದಲ ಆರು ತಿಂಗಳ ಮಾರುಕಟ್ಟೆಯಲ್ಲಿನ ಷೇರು
1 ಮಾರುತಿ ಸುಜುಕಿ 50.20 52.82
2 ಹ್ಯುಂಡೈ 18.49 15.94
3 ಮಹೀಂದ್ರಾ 7.52 6.53
4 ಟೊಯೊಟಾ 4.86 4.63
5 ಟಾಟಾ ಮೋಟಾರ್ಸ್ 4.75 6.21
6 ಹೋಂಡಾ 4.60 5.49
7 ಫೋರ್ಡ್ 2.69 2.85
8 ರೆನಾಲ್ಟ್ 2.67 2.33
9 ಫೋಕ್ಸ್‌ವ್ಯಾಗನ್ 1.10 1.06
10 ಕಿಯಾ 1.06 -
11 ನಿಸ್ಸಾನ್ 0.72 1.15
12 ಸ್ಕೋಡಾ 0.51 0.47
13 ಎಂಜಿ ಮೋಟಾರ್ಸ್ 0.46 -
14 ಎಫ್‍‍ಸಿ‍ಎ 0.36 0.52
ಕಾರು ಮಾರುಕಟ್ಟೆಯಲ್ಲಿ ಕುಸಿದ ಮಾರುತಿ ಸುಜುಕಿ ಕಂಪನಿಯ ಷೇರುಗಳು

ಟೊಯೊಟಾ ಕಂಪನಿಯ ಷೇರುಗಳು 4.6%ನಿಂದ 4.9%ಗಳಿಗೆ ಹೆಚ್ಚಾಗಿವೆ. ಟಾಟಾ ಮೋಟಾರ್ಸ್ ಹಾಗೂ ಹೋಂಡಾ ಕಂಪನಿಗಳ ಮಾರಾಟವು ಕುಸಿದಿದೆ. ಈ ಎರಡೂ ಕಂಪನಿಗಳು ಈ ಪಟ್ಟಿಯಲ್ಲಿ ಕ್ರಮವಾಗಿ ಐದು ಹಾಗೂ ಆರನೇ ಸ್ಥಾನವನ್ನು ಪಡೆದಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕಾರು ಮಾರುಕಟ್ಟೆಯಲ್ಲಿ ಕುಸಿದ ಮಾರುತಿ ಸುಜುಕಿ ಕಂಪನಿಯ ಷೇರುಗಳು

ಟಾಟಾ ಮೋಟಾರ್ಸ್ ಮಾರುಕಟ್ಟೆಯಲ್ಲಿ 4.8% ಷೇರನ್ನು ಹೊಂದಿದ್ದರೆ, ಹೋಂಡಾ ಕಂಪನಿಯು 4.6% ಷೇರುಗಳನ್ನು ಹೊಂದಿದೆ. ಇತ್ತೀಚಿಗಷ್ಟೇ ದೇಶಿಯ ಮಾರುಕಟ್ಟೆಗೆ ಕಾಲಿಟ್ಟ ಕಿಯಾ ಮೋಟಾರ್ಸ್ ಮಾರುಕಟ್ಟೆಯಲ್ಲಿ 1.1% ಷೇರನ್ನು ಹೊಂದಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಕಾರು ಮಾರುಕಟ್ಟೆಯಲ್ಲಿ ಕುಸಿದ ಮಾರುತಿ ಸುಜುಕಿ ಕಂಪನಿಯ ಷೇರುಗಳು

ಇದರಿಂದಾಗಿ ಕಿಯಾ ಮೋಟಾರ್ಸ್ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ತನ್ನ ಮೊದಲ ವಾಹನವಾದ ಸೆಲ್ಟೋಸ್ ಎಸ್‍‍ಯುವಿಯ ಬಿಡುಗಡೆಯ ನಂತರ ಕಿಯಾ ಮೋಟಾರ್ಸ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಕಾರು ಮಾರುಕಟ್ಟೆಯಲ್ಲಿ ಕುಸಿದ ಮಾರುತಿ ಸುಜುಕಿ ಕಂಪನಿಯ ಷೇರುಗಳು

ಸೆಲ್ಟೋಸ್ ಎಸ್‍‍ಯುವಿ ಮಧ್ಯಮ ಗಾತ್ರದ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಕಿಯಾ ಮೋಟಾರ್ಸ್ ನಿಸ್ಸಾನ್ ಹಾಗೂ ಸ್ಕೋಡಾ ಕಂಪನಿಗಳನ್ನು ಹಿಂದಿಕ್ಕಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಕಾರು ಮಾರುಕಟ್ಟೆಯಲ್ಲಿ ಕುಸಿದ ಮಾರುತಿ ಸುಜುಕಿ ಕಂಪನಿಯ ಷೇರುಗಳು

ಎಂಜಿ ಮೋಟಾರ್ಸ್ 0.5% ಮಾರುಕಟ್ಟೆ ಷೇರುಗಳನ್ನು ಹೊಂದಿದೆ. ಸ್ವಲ್ಪದರಲ್ಲಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯುವುದರಿಂದ ವಂಚಿತವಾಗಿದೆ. ಎಂಜಿ ಮೋಟಾರ್ಸ್, ಹೆಕ್ಟರ್ ಎಸ್‍‍ಯುವಿಯ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದು, ಮಾರಾಟವು ಹೆಚ್ಚಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಎಂಜಿ ಮೋಟಾರ್ಸ್ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

ಕಾರು ಮಾರುಕಟ್ಟೆಯಲ್ಲಿ ಕುಸಿದ ಮಾರುತಿ ಸುಜುಕಿ ಕಂಪನಿಯ ಷೇರುಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದ ಕಾರು ಮಾರುಕಟ್ಟೆಯು ಈಗ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದ ಕುಸಿತವನ್ನು ಕಾಣುತ್ತಿದೆ. ಮಾರುಕಟ್ಟೆಯ ಅಗ್ರಗಣ್ಯ ಕಂಪನಿಯಾದ ಮಾರುತಿ ಸುಜುಕಿಯು ಹೆಚ್ಚಿನ ಪ್ರಮಾಣದ ಕುಸಿತವನ್ನು ಅನುಭವಿಸಿದೆ. ಜೊತೆಗೆ ಮಾರುಕಟ್ಟೆಯ ಷೇರುಗಳನ್ನು ಸಹ ಕಳೆದುಕೊಂಡಿದೆ.

Most Read Articles

Kannada
English summary
Indian Car Market Share April-September 2019: Hyundai, Kia & Toyota Register Significant Gains - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X