ಇಸುಝು ವಿ-ಕ್ರಾಸ್ ಮೇಲಿನ ಡಿಸ್ಕೌಂಟ್ ಬೆಲೆಯಲ್ಲಿ ಒಂದು ಸ್ವಿಫ್ಟ್ ಬರುತ್ತೆ..!
ಇಸುಝು ಸಂಸ್ಥೆಯು ತನ್ನ ಜನಪ್ರಿಯ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಮತ್ತು ಎಂಯು-ಎಕ್ಸ್ ಎಸ್‌ಯುವಿ ಖರೀದಿ ಮೇಲೆ ಘೋಷಣೆ ಮಾಡಿರುವ ಡಿಸ್ಕೌಂಟ್ ಬೆಲೆಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

ಹೌದು, ಇಸುಝು ಇಂಡಿಯಾ ತನ್ನ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಮತ್ತು ಎಂಯು-ಎಕ್ಸ್ ಎಸ್‌ಯುವಿ ಖರೀದಿ ಮೇಲೆ ಇದುವರೆಗೂ ಯಾವುದೇ ಸಂಸ್ಥೆಗಳು ಘೋಷಣೆ ಮಾಡದಷ್ಟು ಡಿಸ್ಕೌಂಟ್ ನೀಡುತ್ತಿದ್ದು, ಕನಿಷ್ಠ ರೂ.3 ಲಕ್ಷದಿಂದ ಗರಿಷ್ಠ ರೂ.5 ಲಕ್ಷದ ತನಕ ಡಿಸ್ಕೌಂಟ್ ಘೋಷಣೆ ಮಾಡಿರುವುದು ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.

ಸದ್ಯ ಮಾರುಕಟ್ಟೆಯಲ್ಲಿ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.32 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.16.76 ಲಕ್ಷ ಬೆಲೆ ಹೊಂದಿದ್ದರೆ, ಎಂಯು-ಎಕ್ಸ್ ಎಸ್‌ಯುವಿ ಮಾದರಿಯು ಆರಂಭಿಕವಾಗಿ 27.30 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ.29.27 ಲಕ್ಷ ಬೆಲೆ ಪಡೆದುಕೊಂಡಿವೆ.

ಹೀಗಾಗಿ ಸೀಮಿತ ಅವಧಿಗೆ ಹೊಸ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿರುವ ಇಸುಝು ಸಂಸ್ಥೆಯು ಕನಿಷ್ಠ ರೂ.3 ಲಕ್ಷದಿಂದ ಗರಿಷ್ಠ ರೂ.5 ಲಕ್ಷದ ತನಕ ಆಫರ್ ಘೋಷಿಸಿದ್ದು, ಆಫರ್ ಬೆಲೆಗಳಲ್ಲೇ ಒಂದು ಮಾರುತಿ ಸ್ವಿಫ್ಟ್ ಎಂಟ್ರಿ ಲೆವಲ್ ಕಾರು ಖರೀದಿ ಮಾಡಬಹುದು.

ಮಾರುತಿ ಸ್ವಿಫ್ಟ್ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.4.99 ಲಕ್ಷ ಬೆಲೆ ಹೊಂದಿದ್ದು, ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಮತ್ತು ಎಂಯು-ಎಕ್ಸ್ ಎಸ್‌ಯುವಿ ಖರೀದಿ ಮಾಡಿದ್ದಲ್ಲಿ ಒಂದು ಉತ್ತಮ ಮಾರದರಿಯ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಮಾದರಿಯನ್ನು ಖರೀದಿ ಮಾಡಬಹುದಾಗಿದೆ. ಹೀಗಾಗಿ ಆಸಕ್ತ ಗ್ರಾಹಕರು ನಿಮ್ಮ ಹತ್ತಿರದ ಇಸುಝು ಅಧಿಕೃತ ಡೀಲರ್ಸ್ ಬಳಿ ಈ ಬಗ್ಗೆ ವಿಚಾರಿಸಿ ಮತ್ತಷ್ಟು ಮಾಹಿತಿ ಪಡೆಯಬಹುದು.

ಇನ್ನು ಇಸುಝು ಸಂಸ್ಥೆಯು ಮುಂಬರುವ ಕೆಲವೇ ದಿನಗಳಲ್ಲಿ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಮತ್ತು ಎಂಯು-ಎಕ್ಸ್ ಎಸ್‌ಯುವಿ ಕಾರುಗಳನ್ನು ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಮರುಬಿಡುಗಡೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಉತ್ಪಾದನೆಗೊಂಡಿರುವ ಸ್ಟಾಕ್ ಪೂರ್ಣಗೊಳಿಸಲು ಹೆಚ್ಚಿನ ಮಟ್ಟದ ಡಿಸ್ಕೌಂಟ್ ನೀಡುತ್ತಿದೆ.

ಇಸುಝು ಸಂಸ್ಥೆಯು ಬಿಎಸ್-6 ನಿಯಮಗಳಿಗೆ ಅನುಗುಣವಾಗಿ ತನ್ನ ಕಾರು ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ಚಾಲನೆ ನೀಡಿದ್ದು, ಮುಂದಿನ ಕೆಲವು ದಿನಗಳ ಅಂತರದಲ್ಲಿ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಲಿದೆ.

ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾರಾಟದಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಹೊಸ ಆವೃತ್ತಿಯ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ. ಮಾಹಿತಿಗಳ ಪ್ರಕಾರ, ಹೊಸ ಪಿಕ್ ಅಪ್ ಟ್ರಕ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಸ್ತತ ಮಾರುಕಟ್ಟೆಯಲ್ಲಿರುವ 2.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ ಹೊಸದಾಗಿ 1.9-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಅಭಿವೃದ್ಧಿಗೊಳಿಸಿದೆ.

ಇಷ್ಟು ದಿನಗಳ ಕಾಲ ಡಿ-ಮ್ಯಾಕ್ಸ್ ವಿ-ಕ್ರಾಸ್ 2.5-ಲೀಟರ್ ಡೀಸೆಲ್ ವರ್ಷನ್‌ನಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಯನ್ನು ಮಾತ್ರವೇ ಮಾರಾಟ ಮಾಡುತ್ತಿದ್ದ ಇಸುಝು ಸಂಸ್ಥೆಯು ಇದೀಗ 1.9-ಲೀಟರ್ ಡೀಸೆಲ್ ಎಂಜಿನ್ ಮೂಲಕ ಮತ್ತಷ್ಟು ಆಫ್-ರೋಡ್ ಪ್ರಿಯರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.
MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಹಾಗೆಯೇ 2.5-ಲೀಟರ್ ಡಿ-ಮ್ಯಾಕ್ಸ್ ವಿ-ಕ್ರಾಸ್ ಹೈ ಎಂಡ್ ಮಾದರಿಯಲ್ಲಿ ಈ ಬಾರಿ 4X4 ಡ್ರೈವ್ ಸೌಲಭ್ಯವನ್ನು ಪರಿಚಯಿಸಲಾಗುತ್ತಿದ್ದು, ನವೀಕರಿಸಲಾದ ಬ್ಲ್ಯಾಕ್ ಡ್ಯುಯಲ್ ಟೋನ್ ಇಂಟಿರಿಯರ್, ಸೆಂಟರ್ ಕನ್ಸೊಲ್, ಡ್ಯಾಶ್‌ಬೋರ್ಡ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಮರುವಿನ್ಯಾಸಗೊಳಿಸಲಾದ ಫ್ರಂಟ್ ಗ್ರಿಲ್, ಸ್ಪೋರ್ಟಿ ಮಾದರಿಯ ರಿಯರ್ ಬಂಪರ್ ಮತ್ತು ಟೈಲ್ ಲೈಟ್ ಪಡೆದುಕೊಳ್ಳಲಿದೆ.

ಇನ್ನು ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, 6 ಏರ್‌ಬ್ಯಾಗ್ ಸೇರಿದಂತೆ ಹಲವು ಹೊಸ ಫೀಚರ್ಸ್‌ಗಳನ್ನು ನೀಡಲಾಗುತ್ತಿದ್ದು, ಬಿಎಸ್-6 ನಿಯಮ ಪಾಲನೆಯಿಂದಾಗಿ ಹೊಸ ಪಿಕ್ ಅಪ್ ಟ್ರಕ್ ಬೆಲೆಯಲ್ಲೂ ಕೂಡಾ ತುಸು ದುಬಾರಿ ಎನ್ನಿಸಲಿವೆ.
MOST READ: ಮುಖೇಶ್ ಅಂಬಾನಿ ಕಾರ್ ಕಲೆಕ್ಷನ್‌ನಲ್ಲಿ ಮತ್ತಷ್ಟು ದುಬಾರಿ ಕಾರುಗಳು ಸೇರ್ಪಡೆ

ಮಾಲಿನ್ಯ ಪ್ರಮಾಣವನ್ನು ತಗ್ಗಿಸುವಲ್ಲಿ ಪರಿಣಾಮಕಾರಿ ಪಾತ್ರವಹಿಸುವ ಹೊಸ ಎಂಜಿನ್‌ಗಳ ಬೆಲೆಯು ಸದ್ಯ ಮಾರುಕಟ್ಟೆಯಲ್ಲಿರುವ ಎಂಜಿನ್‌ಗಳಿಂತ ರೂ.1.50 ಲಕ್ಷದಿಂದ ರೂ.2.50 ಲಕ್ಷದಷ್ಟು ದುಬಾರಿಯಾಗಲಿದ್ದು, ಡಿ-ಮ್ಯಾಕ್ಸ್ ವಿ-ಕ್ರಾಸ್ ಹೊಸ ಪಿಕ್ ಟ್ರಕ್ ಬೆಲೆ ಕೂಡಾ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 14 ಲಕ್ಷದಿಂದ ರೂ. 18 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ. ಹಾಗೆಯೇ ಎಂಯು-ಎಕ್ಸ್ ಕೂಡಾ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.


Click it and Unblock the Notifications








