Just In
Don't Miss!
- News
ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೀಘ್ರದಲ್ಲೇ ಬಿಎಸ್-4 ಕಾರುಗಳ ಉತ್ಪಾದನೆಯನ್ನು ಬಂದ್ ಮಾಡಲಿದೆ ಇಸುಝು
ಡೀಸೆಲ್ ವಾಹನಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ಜಪಾನ್ ಆಟೋ ಉತ್ಪಾದನಾ ಸಂಸ್ಥೆಯಾದ ಇಸುಝು ಶೀಘ್ರದಲ್ಲೇ ಬಿಎಸ್-4 ವಾಹನಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಬಿಎಸ್-6 ವಾಹನಗಳ ಮಾರಾಟಕ್ಕಾಗಿ ಭರ್ಜರಿ ಸಿದ್ದತೆ ನಡೆಸಿದೆ.

2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಈ ಹಿನ್ನಲೆಯಲ್ಲಿ ಇಸುಝು ಸೇರಿದಂತೆ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ವಾಹನಗಳ ಮಾರಾಟಕ್ಕೆ ಸಿದ್ದತೆ ನಡೆಸಿವೆ. ಅದರಲ್ಲೂ ಶೇ.100ರಷ್ಟು ಡೀಸೆಲ್ ವಾಹನಗಳ ಮಾರಾಟವನ್ನೇ ಹೊಂದಿರುವ ಇಸುಝು ಸಂಸ್ಥೆಗೆ ಹೊಸ ನಿಯಮ ಅನುಸಾರ ವಾಹನಗಳ ಉನ್ನತೀಕರಣ ಅತಿದೊಡ್ಡ ಸವಾಲಾಗಿದ್ದು, ಮುಂಬರುವ ಫೆಬ್ರುವರಿ ಹೊತ್ತಿಗೆ ಬಿಎಸ್-6 ವಾಹನಗಳ ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದೆ.

ಬಿಎಸ್-6 ನಿಯಮ ಜಾರಿಯಿಂದಾಗಿ ಹೊಸ ವಾಹನಗಳ ಎಂಜಿನ್ ಕಾರ್ಯಕ್ಷಮತೆ ಮತ್ತು ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆಯಾಗಲಿದ್ದು, ಹೊಸ ತಂತ್ರಜ್ಞಾನ ಬಳಕೆಯಿಂದಾಗಿ ಬೆಲೆ ಕೂಡಾ ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆಗಿಂತ ರೂ.90 ಸಾವಿರದಿಂದ ರೂ.3 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಹೀಗಾಗಿ ಗ್ರಾಹಕರ ಬೇಡಿಕೆ ಮತ್ತು ಹೊಸ ನಿಯಮ ಅನುಸಾರ ಬಿಎಸ್-6 ವಾಹನ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಇಸುಝು ಸಂಸ್ಥೆಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ವ್ಯಯಕ್ತಿಕ ಬಳಕೆಯ ವಾಹನಗಳ ಉತ್ಪಾದನೆಯಲ್ಲಿ ಮಾತ್ರವಲ್ಲದೆ ವಾಣಿಜ್ಯ ವಾಹನ ಉತ್ಪಾದನೆಯಲ್ಲೂ ಗಮನಸೆಳೆಯಲಿದೆ. ಇದಕ್ಕಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಇಸುಝು ಸಂಸ್ಥೆಯು ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.ಇನ್ನು ಬಿಡುಗಡೆಗೆ ಸಿದ್ದವಾಗುತ್ತಿರುವ ಹೊಸ ತಲೆಮಾರಿನ ಡಿ-ಮ್ಯಾಕ್ಸ್ ಪಿಕ್ ಅಪ್ ವಾಹನವು ತಾಂತ್ರಿಕವಾಗಿ ಭಾರೀ ಬದಲಾವಣೆ ಹೊಂದಿದ್ದು, ಮುಂಭಾಗದ ವಿನ್ಯಾಸದಲ್ಲಿ ಹೊಸ ತಂತ್ರಜ್ಞಾನ ಪ್ರೇರಿತ ಗ್ರಿಲ್ ಮತ್ತು ಕ್ರ್ಯಾಶ್ ಬಂಪರ್ ವಿನ್ಯಾಸದಲ್ಲಿ ಬದಲಾವಣೆ ತಂದಿದೆ.

ನ್ಯೂ ಜನರೇಷನ್ ಪಿಕ್ ಅಪ್ ವಾಹನವು ಭಾರತದಲ್ಲಿ ಮಾತ್ರವಲ್ಲದೇ ಥೈಲ್ಯಾಂಡ್ ಸೇರಿದಂತೆ ಆಗ್ನೇಯ ಏಷ್ಯಾದ ಪ್ರಮುಖ ರಾಷ್ಟ್ರಗಳಲ್ಲೂ ಬಿಡುಗಡೆಯಾಗಲಿದ್ದು, ಈ ಹಿನ್ನಲೆ ಭಾರೀ ಬದಲಾವಣೆ ಪಡೆದಿರುವ ಹೊಸ ಪಿಕ್ ಅಪ್ ವಾಹನವು ಪ್ರಯಾಣಿಕ ಸುರಕ್ಷೆಗಾಗಿ ಗರಿಷ್ಠ ಮಟ್ಟದ ಸೆಫ್ಟಿ ಫೀಚರ್ಸ್ ಹೊಂದಿರಲಿದೆ.

ಸದ್ಯ ಡಿ-ಮ್ಯಾಕ್ಸ್ ಪಿಕ್ ಅಪ್ ವಾಹನವು ವಾಣಿಜ್ಯ ಬಳಕೆ ಮತ್ತು ವ್ಯಯಕ್ತಿಕ ಬಳಕೆಗಾಗಿ ಎರಡು ಮಾದರಿಯಲ್ಲಿ ಮಾರಾಟವಾಗುತ್ತಿದ್ದು, ನ್ಯೂ ಜನರೇಷನ್ ಮಾದರಿಯಲ್ಲೂ ಎರಡು ಆವೃತ್ತಿಗಳು ಕೂಡಾ ಮುಂದುವರಿಸಲು ನಿರ್ಧರಿಸಲಾಗಿದೆ.

ವ್ಯಯಕ್ತಿಕ ಬಳಕೆಗಾಗಿ ಮಾರಾಟವಾಗುತ್ತಿರು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ ಅಪ್ ಮಾದರಿಗೆ ಸದ್ಯ ಹೆಚ್ಚು ಬೇಡಿಕೆಯಿದ್ದು, ನ್ಯೂ ಜನರೇಷನ್ ಮಾದರಿಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನಕ್ಕಿಂತಲೂ ಹೆಚ್ಚಿನ ಮಟ್ಟದ ವೀಲ್ಹ್‌ಬೆಸ್ ಸೌಲಭ್ಯವನ್ನು ನೀಡಲಾಗಿದೆ.

ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಥೈಲ್ಯಾಂಡ್‌ನಲ್ಲಿ ಕಡ್ಡಾಯಗೊಳಿಸಲಾಗಿರುವ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಕ್ರಾಸ್ ಟ್ರಾಫಿಕ್ ಅಲರ್ಟ್ ಸಿಸ್ಟಂ ಫಿಚರ್ಸ್‌ಗಳನ್ನು ಸಹ ಹೊಸ ಇಸುಝು ಡಿ-ಮ್ಯಾಕ್ಸ್ ಪಿಕ್ ಅಪ್ ಪಡೆದುಕೊಂಡಿದ್ದು, ಆಫ್ ರೋಡ್ ಕೌಶಲ್ಯಕ್ಕೆ ಮತ್ತಷ್ಟು ರಗಡ್ ಲುಕ್ ನೀಡಲಾಗಿದೆ. ಈ ಬಾರಿ ಹೊಸ ಪಿಕ್ ವಾಹನದಲ್ಲಿ ಬಿ-ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲೈಟ್ಸ್, ಎಲ್ಇಡಿ ಟೈಲ್‌ಲೈಟ್ಸ್, ಇಂಟ್ರಾಗ್ರೆಟೆಡ್ ರಿಯರ್ ಬಂಪರ್, ಟರ್ನ್ ಇಂಡಿಕೇಟರ್ ಮತ್ತು ಹೊಸ ಡಿಸೈನ್ ಪ್ರೇರಿತ ಅಲಾಯ್ ವೀಲ್ಹ್ ನೀಡಲಾಗಿದೆ.

ಹೊಸ ವಾಹನದಲ್ಲಿ ಒಳಭಾಗದ ಫೀಚರ್ಸ್‌ಗಳಲ್ಲೂ ಕೂಡಾ ಸಾಕಷ್ಟು ಬದಲಾವಣೆಗಳಾಗಿದ್ದು, 9.0-ಇಂಚಿನ ಇನ್ಪೋಟೈನ್‌ಮೆಂಟ್, ನ್ಯಾವಿಗೇಷನ್, ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ನ್ಯೂ ಡಿಜಿಟಲ್ ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ ನೀಡಲಾಗಿದೆ.

ಎಂಜಿನ್ ಸಾಮರ್ಥ್ಯ
ಪ್ರಸ್ತುತ ಮಾರುಕಟ್ಟೆಯಲ್ಲಿ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ ಅಪ್ ವಾಹನದಲ್ಲಿ ಗ್ರಾಹಕರ ಬೇಡಿಕೆಯೆಂತೆ 1.9-ಲೀಟರ್ ಡೀಸೆಲ್ ಎಂಜಿನ್ ಮತ್ತು 3.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದರಲ್ಲಿ ಇಸುಝು ಸಂಸ್ಥೆಯು 1.9-ಲೀಟರ್ ಎಂಜಿನ್ ಅನ್ನು ಮಾತ್ರವೇ ಭಾರತದಲ್ಲಿ ಮಾಡುತ್ತಿದ್ದು, 3.0-ಲೀಟರ್ ಎಂಜಿನ್ ಮಾದರಿಯು ಥೈಲ್ಯಾಂಡ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದೆ.