ಜೀಪ್ ಕಾಂಪಾಸ್ ಎಸ್‍ಯುವಿ ಮೇಲೆ ರೂ.2 ಲಕ್ಷದವರೆಗೆ ಭರ್ಜರಿ ಆಫರ್
ಜೀಪ್ ಇಂಡಿಯಾ, ತನ್ನ ಆಯ್ದ ಕಂಪಾಸ್ ಎಸ್‌ಯುವಿ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಜೀಪ್ ಇಂಡಿಯಾ ಕಂಪನಿಯು ಮಾರಾಟವನ್ನು ಹೆಚ್ಚಿಸಲು ಆಯ್ದ ಕೆಲವು ಮಾದರಿಗಳ ಮೇಲೆ ಬರೊಬ್ಬರಿ ರೂ.2 ಲಕ್ಷಗಳವರೆಗೆ ಭರ್ಜರಿ ಆಫರ್ ಘೋಷಿಸಿದೆ.

ದೇಶದ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿದ ಉಂಟಾದಾಗ ಜನಪ್ರಿಯ ಕಾರುಗಳ ಮಾರಾಟವು ಕೂಡ ಇಳಿಕೆಯಾಗಿತ್ತು. ಆದರೆ ಹಬ್ಬಗಳ ಸೀಸನ್‍ನಲ್ಲಿ ಭರ್ಜರಿ ಆಫರ್‍ಗಳು ಘೋಷಿಸಿರುವುದರಿಂದ ಕಾರುಗಳ ಮಾರಾಟದಲ್ಲಿ ಏರಿಕೆಯಾಗಿತ್ತು. ಆದರೆ ಕೆಲವು ಕಂಪನಿಗಳ ಕಾರು ಮಾರಾಟದಲ್ಲಿ ಇನ್ನೂ ಕೂಡ ಚೇತರಿಕೆಯನ್ನು ಕಂಡಿಲ್ಲ.

ಇದರ ನಡುವೆ ಜೀಪ್ ಇಂಡಿಯಾ ತನ್ನ ಬಿಎಸ್-4 ಮಾದರಿಗಳ ಸ್ಟಾಕ್‍ಗಳನ್ನು ಮಾರಾಟ ಮಾಡಲು ಈ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಜೀಪ್ ಇಂಡಿಯಾ ಕಂಪನಿಯು ಟಾಪ್-ಸ್ಪೆಕ್ ಕಂಪಾಸ್ ಪೆಟ್ರೋಲ್ ಆವೃತ್ತಿಗೆ ರೂ.2.10 ಲಕ್ಷದವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಲೋವರ್ ಸ್ಪೆಕ್ ಪೆಟ್ರೋಲ್ ಆವೃತ್ತಿಯ ಮೇಲೆ ರೂ. 1.30 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಸ್ಪೋರ್ಟ್ ಪ್ಲಸ್ ಡೀಸೆಲ್ ಮಾದರಿಗಳ ಮೇಲೆ ರೂ.1.05 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ.

ಕಂಪಾಸ್ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. 2.0 ಲೀಟರ್ ಟರ್ಬೋ ಡೀಸೆಲ್ ಎಂಜಿನ್ 173 ಬಿಹೆಚ್ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಇನ್ನೂ 1.6 ಪೆಟ್ರೋಲ್ ಎಂಜಿನ್ 140 ಬಿಹೆಚ್ಪಿ ಪವರ್ ಹಾಗೂ 250 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಅಥವಾ 7 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಲಿಷ್ಠ ಎಂಜಿನ್ ಮತ್ತು ಆಫ್ ರೋಡ್ ಚಾಲನೆಗೆ ಸಹಕಾರಿಯಾಗುವ 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯವು ಜೀಪ್ ಕಂಪಾಸ್ ಖರೀದಿಗೆ ಪ್ಲಸ್ ಪಾಯಿಂಟ್ ಆಗಿದೆ. 16-ಇಂಚಿನ ಅಲಾಯ್ ವ್ಹೀಲ್, ಪನೋರಾಮಿಕ್ ಸನ್‌ರೂಫ್, ಆಕರ್ಷಕ ಗ್ರಿಲ್ ಸ್ಲಾಟ್, ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಫೀಚರ್ಸ್ ಹೊಂದಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಕಪ್ಪು ಬಣ್ಣದ ಡ್ಯಾಶ್‌ಬೋರ್ಡ್, ಆಫ್ ವೈಟ್ ಬಣ್ಣದೊಂದಿಗೆ ಕೂಡಿದ ಸೀಟುಗಳು, ಹಿಂಭಾಗದ ಸೀಟಿನ ಮಧ್ಯದ ಆರ್ಮ್ ರೆಸ್ಟ್, 5-ಇಂಚಿನ ಟಚ್ ಸ್ಕ್ರಿನ್ ಇನ್ಪೋಟೇನ್‍ಮೆಂಟ್ ಸಿಸ್ಟಂ, ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಯುಎಸ್‌ಬಿ ಸೇರಿದಂತೆ ಹಲವಾರು ಫೀಚರ್ಸ್‍ಗಳನ್ನು ಹೊಂದಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಇದರೊಂದಿಗೆ ಜೀಪ್ ಕಂಪಾಸ್ ಮಾದರಿಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 6 ಏರ್‌ಬ್ಯಾಗ್, ಡ್ಯುಯಲ್ ಸ್ಟೇಜ್ ಆಕ್ಟಿವೇಷನ್, ಟಿಸಿಎಸ್, ಇಬಿಡಿ, ಇಎಸ್‌ಪಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಮತ್ತು ಎಬಿಎಸ್ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ.
MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಇದರೊಂದಿಗೆ ಸ್ಟಾರ್ಟ್/ಸ್ಟಾಪ್ ಬಟನ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲರ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಒದಗಿಸಲಾಗಿದೆ.

ಜೀಪ್ ಇಂಡಿಯಾ ಕಂಪನಿಯು ತನ್ನ ಕಂಪಾಸ್ ಎಸ್‌ಯುವಿಯ 7 ಸೀಟರ್ ಆವೃತ್ತಿಯನ್ನು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಜೀಪ್ ಕಂಪಾಸ್ ದೇಶಿಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications