Just In
- 9 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 11 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 11 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
- 12 hrs ago
ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ
Don't Miss!
- Movies
ಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟ
- News
ರೈತರ ಪ್ರತಿಭಟನೆ: ಜನವರಿ 19ಕ್ಕೆ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಮತ್ತೊಂದು ಸುತ್ತಿನ ಸಭೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್- ಕರ್ನಾಟಕದಲ್ಲಿ ಕಾರುಗಳ ನೋಂದಣಿ ಕಷ್ಟ ಕಷ್ಟ..!
ಕರ್ನಾಟಕದಲ್ಲಿ ಐಷಾರಾಮಿ ಕಾರುಗಳ ನೋಂದಣಿಗೆ ರಾಜ್ಯ ಸಾರಿಗೆ ಇಲಾಖೆಯು ಹೊಸ ರೂಲ್ಸ್ ಜಾರಿಗೆ ತಂದಿದ್ದು, ಐಷಾರಾಮಿ ಕಾರು ಖರೀದಿಯ ಯೋಜನೆಯಲ್ಲಿದ್ದ ಗ್ರಾಹಕರಿಗೆ ಮತ್ತು ಕಾರು ಡೀಲರ್ಸ್‌ಗಳಿಗೆ ಹೊಸ ರೂಲ್ಸ್ ತಲೆನೋವಾಗಿ ಪರಿಣಮಿಸಿದೆ.

ಹೌದು, ದೇಶಾದ್ಯಂತ ಪ್ರತಿ ವರ್ಷ ಲಕ್ಷಾಂತರ ಐಷಾರಾಮಿ ಕಾರುಗಳು ಮಾರಾಟವಾಗುತ್ತಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯ ಐಷಾರಾಮಿ ಕಾರುಗಳು ಕರ್ನಾಟಕದಲ್ಲೇ ಮಾರಾಟವಾಗುತ್ತಿವೆ. ಹೀಗಿರುವಾಗ ಐಷಾರಾಮಿ ಕಾರುಗಳ ನೋಂದಣಿಯಿಂದ ರಾಜ್ಯಕ್ಕೆ ಭಾರೀ ಪ್ರಮಾಣದ ಆದಾಯ ಹರಿದುಬರಬೇಕಿತ್ತು. ಆದ್ರೆ ಐಷಾರಾಮಿ ಕಾರು ಡೀಲರ್ಸ್‌ಗಳು ಸಾರಿಗೆ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಹೊಸ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಡಿಸ್ಕೌಂಟ್ ಮೇಲೆ ಖರೀದಿ ಮಾಡಲಾದ ಕಾರುಗಳ ನೋಂದಣಿಯನ್ನು ತಡೆಹಿಡಿಯಲಾಗುತ್ತಿದೆ.

ಸಾಮಾನ್ಯವಾಗಿ ಕಾರಿನ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ನಿಗದಿಪಡಿಸುವ ಆಟೋ ಉತ್ಪಾದನಾ ಸಂಸ್ಥೆಗಳು ತದನಂತರ ಮಾರುಕಟ್ಟೆಯ ಸನ್ನಿವೇಶಗಳ ಮೇಲೆ ಕಾರಿನ ದರಗಳನ್ನು ಏರಿಳಿತ ಮಾಡುತ್ತಿರುತ್ತವೆ. ಈ ವೇಳೆ ಡೀಲರ್ಸ್ ಮಟ್ಟದಲ್ಲಿ ಕೆಲವೊಮ್ಮೆ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದಾಗ ಬಹುತೇಕ ಗ್ರಾಹಕರು ಇಂತಹ ಸಮಯದಲ್ಲೇ ಕಾರು ಖರೀದಿಸುತ್ತಿರುತ್ತಾರೆ.

ಆದ್ರೆ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದ ಸಂದರ್ಭದಲ್ಲಿ ಯಾವುದೇ ವಾಹನ ಉತ್ಪಾದಕರು ಕೂಡಾ ಕಾರಿನ ಬೆಲೆಯಲ್ಲಿ ಇಳಿಕೆ ಮಾಡದೆ ಕೇವಲ ಸಂದರ್ಭಕ್ಕೆ ಅನುಗುಣವಾಗಿ ಮಾತ್ರ ಆಫರ್ ನೀಡಿರುತ್ತಾರೆ. ಹೀಗಾಗಿ ಗ್ರಾಹಕರು ಅಂದು ಕಾರು ಖರೀದಿಯ ದಿನ ಪಾವತಿ ಮಾಡಲಾದ ದರದ ಮೇಲೆ ರೋಡ್ ಟ್ಯಾಕ್ಸ್ ಪಾವತಿ ಮಾಡಿ ನೋಂದಣಿ ಮಾಡಿಸುತ್ತಾರೆ.

ಇದೇ ಅಂಶ ಇದೀಗ ರಾಜ್ಯ ಸಾರಿಗೆ ಇಲಾಖೆಯ ಆದಾಯಕ್ಕೆ ಭಾರೀ ಹೊಡೆತ ಬಿಳುತ್ತಿದ್ದು, ಆಫರ್ ಬೆಲೆಗಳಿಗೆ ಬದಲಾಗಿ ಎಕ್ಸ್‌ಶೋರೂಂ ದರಕ್ಕೆ ಅನುಗುಣವಾಗಿ ರಸ್ತೆ ತೆರಿಗೆ ಪಾವತಿಸಿ ನೋಂದಣಿ ಪಡೆದುಕೊಳ್ಳುವಂತೆ ಡೀಲರ್ಸ್‌ಗಳಿಗೆ ಹೊಸ ಸೂಚನೆ ನೀಡಿರುವುದು ಸದ್ಯಕ್ಕೆ ಐಷಾರಾಮಿ ಕಾರುಗಳ ಮಾರಾಟದಲ್ಲಿ ಭಾರೀ ಏರುಪೇರಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ವಾಹನ ಮಾರಾಟಗಾರರು ಮಧ್ಯಮ ಗಾತ್ರದ ಕಾರುಗಳ ಮೇಲೆ ರೂ.20 ಸಾವಿರದಿಂದ ರೂ.70 ಸಾವಿರ ತನಕ ಮತ್ತು ಹೈ ಎಂಡ್ ಕಾರುಗಳ ಮೇಲೆ ರೂ.1 ಲಕ್ಷದಿಂದ ರೂ.5 ಲಕ್ಷದ ತನಕ ಆಫರ್ ಘೋಷಣೆ ಮಾಡುತ್ತಿದ್ದು, ಆಫರ್ ಬೆಲೆಗಳ ಮೇಲೆ ಕಾರು ನೋಂದಣಿ ಮಾಡಿದ್ದಲ್ಲಿ ಸಾರಿಗೆ ಇಲಾಖೆಯ ಆದಾಯಕ್ಕೆ ಹೊಡೆತ ಬಿಳುತ್ತಿದೆಯೆಂತೆ.

ಅಂದರೆ, ಒಂದು ಐಷಾರಾಮಿ ಕಾರು ರೂ.50 ಎಕ್ಸ್‌ಶೋರೂಂ ಬೆಲೆ ಪಡೆದಿದೆ ಎಂದಿಟ್ಟುಕೊಳ್ಳಿ. ಆ ಕಾರನ್ನು ಡೀಲರ್ಸ್ ಹಬ್ಬದ ಪ್ರಯುಕ್ತ ಅಥವಾ ಇನ್ಯಾವುದೋ ಕಾರಣಗಳಿಗಾಗಿ ಆ ಕಾರಿನ ಮೇಲೆ ರೂ.3 ಲಕ್ಷ ಆಫರ್ ನೀಡುತ್ತಾರೆ. ಆಗ ಕಾರಿನ ಬೆಲೆ ಎಕ್ಸ್‌ಶೋರೂಂ ಪ್ರಕಾರ ರೂ.47 ಲಕ್ಷ ಆಗಿರುತ್ತದೆ.

ಈ ಸದರ್ಭದಲ್ಲಿ ಕಾರು ಉತ್ಪಾದನಾ ಸಂಸ್ಥೆ ಮತ್ತು ಡೀಲರ್ಸ್‌ಗಳು ಕಾರಿನ ಬೆಲೆಗಳಲ್ಲಿ ತಾತ್ಕಾಲಿಕ ಆಫರ್ ನೀಡಿರುತ್ತಾರೆಯೇ ಹೊರತು ಮೂಲ ಬೆಲೆಯಲ್ಲಿ ರೂ.3 ಲಕ್ಷ ಬೆಲೆಯನ್ನು ಮಾತ್ರ ಇಳಿಕೆ ಮಾಡಿರುವುದಿಲ್ಲ. ಮೇಲ್ನೋಟಕ್ಕೆ ಬೆಲೆ ಮಾತ್ರ ರೂ.50 ಲಕ್ಷ ಇದ್ದರೂ ಸಹ ರಶೀದಿಯಲ್ಲಿ ರೂ. 47 ಲಕ್ಷ ಬೆಲೆಯನ್ನು ನಮೂದಿಸಿ ಮಾರಾಟ ಮಾಡಲಾಗಿರುತ್ತೆ.

ಇದರಿಂದ ಮೂಲ ಬೆಲೆಯ ಮೇಲೆ ನಿರ್ಧರಿಸಲಾಗುವ ರೋಡ್ ಟ್ಯಾಕ್ಸ್ ಪ್ರಮಾಣವು ತಗ್ಗಲಿದ್ದು, ಇದು ನೇರವಾಗಿ ಸಾರಿಗೆ ಇಲಾಖೆಗೆ ನಷ್ಟವಾಗುತ್ತಿದೆಯೆಂತೆ. ಇದರಿಂದ ಹೊಸ ಸೂಚನೆ ನೀಡಿರುವ ಸಾರಿಗೆ ಇಲಾಖೆಯು ಗ್ರಾಹಕರಿಗೆ ಯಾವುದೇ ಆಫರ್ ನೀಡಿದರೂ ಸಹ ಮೂಲಬೆಲೆಯ ಆಧಾರ ಮೇಲೆಯೇ ರೋಡ್ ಟ್ಯಾಕ್ಸ್ ಪಾವತಿಸಿ ನೋಂದಣಿ ಪಡೆದುಕೊಳ್ಳುವಂತೆ ನಿರ್ದೇಶಿಸಲಾಗಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಇದರಿಂದ ಸದ್ಯಕ್ಕೆ ಐಷಾರಾಮಿ ಕಾರುಗಳ ಮೇಲೆ ಡಿಸ್ಕೌಂಟ್ ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದ ಕಾರು ಮಾರಾಟಗಾರರು ಸಾರಿಗೆ ಇಲಾಖೆಯ ಹೊಸ ನಿಯಮದಿಂದ ಇಕ್ಕಟ್ಟಿಗೆ ಸಿಲುಕಿದ್ದು, ಗ್ರಾಹಕರು ಕೂಡಾ ಡಿಸ್ಕೌಂಟ್ ಇಲ್ಲದೇ ಕಾರು ಖರೀದಿಗೆ ಮನಸ್ಸು ಮಾಡುತ್ತಿಲ್ಲ.

ಈ ಬಗ್ಗೆ ಮಾತನಾಡಿರುವ ರಾಜ್ಯ ಸಾರಿಗೆ ಇಲಾಖೆ ಹಿರಿಯ ಅಧಿಕಾರಿ ವಿ.ಪಿ. ಇಕ್ಕೇರಿಯವರು ಡಿಸ್ಕೌಂಟ್ ದರದ ಆಧಾರದ ಮೇಲೆ ಕಾರು ನೋಂದಣಿಯಿಂದ ಇಲಾಖೆಗೆ ನಷ್ಟ ಉಂಟಾಗುತ್ತಿದ್ದು, ಇತರೆ ರಾಜ್ಯಗಳಲ್ಲಿ ಜಾರಿ ಮಾಡಿರುವ ನಿಯಮವನ್ನೇ ನಾವು ಪಾಲನೆ ಮಾಡುತ್ತಿರುವುದಾಗಿ ಹೊಸ ರೂಲ್ಸ್ ಸಮರ್ಥಿಸಿಕೊಂಡಿದ್ದಾರೆ.
MOST READ: ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಮತ್ತೊಂದು ಸಮಾಧಾನಕರ ಸಂಗತಿ ಅಂದ್ರೆ, ರಾಜ್ಯ ಸಾರಿಗೆ ಇಲಾಖೆಯು ಸದ್ಯಕ್ಕೆ ರೂ.20 ಲಕ್ಷಕ್ಕೂ ಮೇಲ್ಪಟ್ಟ ಕಾರು ಖರೀದಿಯ ಮೇಲಿನ ಡಿಸ್ಕೌಂಟ್ ದರಗಳ ಮೇಲೆ ನೋಂದಣಿಗೆ ಮಾತ್ರವೇ ಹೊಸ ರೂಲ್ಸ್ ಜಾರಿ ಮಾಡಿದ್ದು, ರೂ. 20 ಲಕ್ಷಕ್ಕಿಂತ ಕೆಳಮಟ್ಟದ ಕಾರುಗಳ ಮೇಲೆ ನೀಡಲಾಗುವ ಡಿಸ್ಕೌಂಟ್ ದರಗಳ ಮೇಲೆಯೇ ರೋಡ್ ಟ್ಯಾಕ್ಸ್ ನಿಗದಿಪಡಿಸಿ ನೋಂದಣಿ ಮಾಡಲಾಗುತ್ತಿದೆ.

ಇಷ್ಟವಾದ ವಾಹನ ನೋಂದಣಿ ಸಂಖ್ಯೆಗೆ 'ವಾಹನ್ 4'
ಹೊಸ ವಾಹನ ಮಾಲೀಕರಿಗೆ ಸಾರಿಗೆ ಇಲಾಖೆಯು ಸಂತಸದ ಸಂಗತಿಯೊಂದನ್ನು ಹೊತ್ತು ತಂದಿದೆ. ಇಷ್ಟು ದಿನ ವಾಹನಗಳಿಗೆ ಇಷ್ಟವಾದ ನೋಂದಣಿ ಸಂಖ್ಯೆ ಅಥವಾ ತಮ್ಮ ಜನ್ಮದಿನಾಂಕದ ನಂಬರ್ ಪಡೆಯಲು ಜನರು ತಿಂಗಳಿನಿಂದ ಹಿಡಿದು ವರ್ಷಾನುಗಟ್ಟಲೆ ಕಾಯುತ್ತಿದ್ದರು. ಈಗ ತಕ್ಷಣ ಪಡೆಯವಂತಹ ಹೊಸ ಸಾಫ್ಟ್ ವೇರ್ ವೊಂದನ್ನ ಸಾರಿಗೆ ಇಲಾಖೆ ಲಾಂಚ್ ಮಾಡುತ್ತಿದೆ.

ಇಷ್ಟು ದಿನಗಳ ಕಾಲ ತಮಗೆ ಇಷ್ಟವಾದ ನಂಬರ್ ಪಡೆಯಲು ಜನರು ವರ್ಷಾನುಗಟ್ಟಲೆ ಕಾದು, ಆ ನಂಬರಿನ ಸೀರೀಸ್ ಬರುವ ತನಕ ವಾಹನಗಳನ್ನೇ ಖರೀದಿ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಇಂತಹ ನಂಬರ್ ಪಡೆಯಲು ಹಣವನ್ನು ಸಹ ನೀಡಬೇಕಿತ್ತು.

ಆದರೆ ಇದಕ್ಕೆಲ್ಲ ಕಡಿವಾಣ ಹಾಕೋದಕ್ಕೆ ಅಂತಾನೆ ಸಾರಿಗೆ ಇಲಾಖೆ ಇನ್ನು ಕೆಲವೇ ದಿನಗಳಲ್ಲಿ ‘ವಾಹನ್ 4' ಎಂಬ ವಿನೂತನ ವೆಬ್‍ಸೈಟ್ ಹೊರತರುತ್ತಿದೆ. ಇದರಲ್ಲಿ ಸಾರಿಗೆ ಇಲಾಖೆಯ ಜೊತೆ ವ್ಯವಹಾರ ಮಾಡುವವರು ಸಂಪೂರ್ಣವಾಗಿ ಆನ್‍ಲೈನ್ ಮುಖಾಂತರವೇ ವ್ಯವಹಾರ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ ತಮಗೆ ಇಷ್ಟವಾದ ನಂಬರನ್ನು ಸಹ ವೆಬ್‍ಸೈಟ್ ಮೂಲಕ ಲಾಕ್ ಮಾಡಿಸಿ 24 ಗಂಟೆಗಳ ಒಳಗೆ ಖರೀದಿ ಮಾಡಬಹುದು.