ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್

ಕಿಯಾ ಮೋಟಾರ್ಸ್ ಇಂಡಿಯಾ ಸೆಲ್ಟೋಸ್ ದೇಶಿಯ ಮಾರುಕಟ್ಟೆಯಲ್ಲಿ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿ ಭರ್ಜರಿ ಯಶಸ್ಸನ್ನು ಸಾಧಿಸಿದೆ. ಈಗ ತನ್ನ ಎರಡನೇ ವಾಹನವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್

ಕಿಯಾ ಮೋಟಾರ್ಸ್, 2020ರ ಫೆಬ್ರವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ತನ್ನ ಎರಡನೇ ವಾಹನವಾದ ಕಾರ್ನಿವಾಲ್ ಎಂಪಿವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಾರ್ನಿವಾಲ್ ವಾಹನವನ್ನು ಹೆಚ್ಚಿನ ಸಾಮರ್ಥ್ಯದ ಎಂ‍ಪಿವಿ ಸೆಗ್‍‍ಮೆಂಟಿನಲ್ಲಿ ಬಿಡುಗಡೆಗೊಳಿಸಲಾಗುವುದು.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್

ಕಾರ್ನಿವಾಲ್ ಎಂಪಿವಿಯು, ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಇನೊವಾ ಕ್ರಿಸ್ಟಾಗೆ ಪೈಪೋಟಿ ನೀಡಲಿದೆ. ಕಾರ್ನಿವಾಲ್ ಎಂಪಿವಿಯನ್ನು ಭಾರತದಲ್ಲಿ ಹಲವಾರು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಬಿಡುಗಡೆ ಹತ್ತಿರವಾಗಿರುವ ಹಿನ್ನೆಲೆಯಲ್ಲಿ ಈಗ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್

ಕಾರ್ನಿವಾಲ್ ಎಂಪಿವಿಯನ್ನು ಮೊದಲ ಬಾರಿಗೆ 2018ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು. ಕಾರ್ನಿವಾಲ್ ಎಂಪಿವಿಯನ್ನು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸೆಡೊನಾ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್

ದಕ್ಷಿಣ ಕೊರಿಯಾ ಮೂಲದ ಕಿಯಾ ಕಂಪನಿಯ ಕಾರ್ನಿವಾಲ್ ಎಂಪಿವಿಯನ್ನು ಹಲವು ಸೀಟ್‍ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ದೇಶಿಯ ಮಾರುಕಟ್ಟೆಯಲ್ಲಿಯೂ ಸಹ ಆರು, ಏಳು ಹಾಗೂ ಎಂಟು ಸೀಟು ಆಯ್ಕೆಗಳೊಂದಿಗೆ ಮಾರಾಟ ಮಾಡುವ ಸಾಧ್ಯತೆಗಳಿವೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್

ಕಿಯಾ ಕಾರ್ನಿವಲ್ ಹಿಂಬದಿಯ ಪ್ರಯಾಣಿಕರಿಗಾಗಿ 10.1 ಇಂಚಿನ ಸ್ಕ್ರೀನ್, ಎಕ್ಸ್ ಟೆಂಡೆಡ್ ಲೆಗ್‍‍ರೂಂ, ಕಿಯಾದ ಯುವಿ‍ಒ ಕನೆಕ್ಟಿವಿಟಿ ಹೊಂದಿರುವ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಮಲ್ಟಿ ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೊಲ್ ಸಿಸ್ಟಂ, ಡ್ಯುಯಲ್ ಸನ್‍‍ರೂಫ್, ಪವರ್ ಸ್ಲೈಡಿಂಗ್ ರೇರ್ ಡೋರ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್‍‍ಗಳನ್ನು ಹೊಂದಿದೆ.

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್

ಕಾರ್ನಿವಾಲ್ ಎಂಪಿವಿಯಲ್ಲಿ 2.2 ಲೀಟರಿನ ಟರ್ಬೊ‍‍ಚಾರ್ಜ್ಡ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 202 ಬಿ‍‍ಹೆಚ್‍‍ಪಿ ಪವರ್ ಹಾಗೂ 441 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಅಳವಡಿಸಲಾಗಿರುವ 6 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಫ್ರಂಟ್ ವ್ಹೀಲ್‍‍‍ಗಳನ್ನು ಚಲಾಯಿಸುತ್ತದೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್

ಕಾರ್ನಿವಾಲ್ ಎಂಪಿವಿಯನ್ನು ಆಂಧ್ರ ಪ್ರದೇಶದ ಅನಂತಪುರದಲ್ಲಿರುವ ಕಿಯಾ ಕಂಪನಿಯ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುವುದು. ಕಿಯಾ ಗ್ರಾಹಕರಿಗೆ ಹೆಚ್ಚು ಆರಾಮದಾಯಕವಾದ ಹಾಗೂ ಅನುಕೂಲಕರವಾದ ಫೀಚರ್‍‍ಗಳನ್ನು ಒದಗಿಸಲಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್

ಸೀಟುಗಳು ಮೆಮೊರಿ ಫಂಕ್ಷನ್ ಹೊಂದಿದ್ದು, ಎಲೆಕ್ಟ್ರಿಕ್‍‍ನಿಂದ ಚಾಲಿತವಾಗಿರುತ್ತವೆ. ಸುರಕ್ಷತೆಗಾಗಿ ಹಾಗೂ ಡ್ರೈವರ್ ಸಹಾಯಕ್ಕಾಗಿ ಹಲವಾರು ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಕಿಯಾ ಕಂಪನಿಯು ಕಾರ್ನಿವಾಲ್ ಎಂಪಿವಿಯನ್ನು ಸೆಲ್ಟೋಸ್‌ನಂತೆ ಹೆಚ್ಚು ಮಾರಾಟ ಮಾಡುವ ಗುರಿಯನ್ನು ಹೊಂದಿಲ್ಲ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್

ಆದರೆ ಕಂಪನಿಯ ಇಮೇಜ್ ಅನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಕಾರ್ನಿವಾಲ್ 5,115 ಎಂಎಂ ಉದ್ದ, 1,985 ಎಂಎಂ ಅಗಲ, 1,740 ಎಂಎಂ ಎತ್ತರ ಹಾಗೂ 3,060 ಎಂಎಂ ವ್ಹೀಲ್ ಬೇಸ್ ಹೊಂದಿದೆ. ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಗಾತ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಕಾರ್ನಿವಾಲ್ ಎಂಪಿವಿಯು, ಇನೊವಾ ಕ್ರಿಸ್ಟಾಗಿಂತ 380 ಎಂಎಂ ಹೆಚ್ಚು ಉದ್ದ 155 ಎಂಎಂ ಹೆಚ್ಚು ಅಗಲವನ್ನು ಹೊಂದಿದೆ.

Source: Gaadiwaadi

Article Published On: Monday, December 9, 2019, 10:52 [IST]
English summary
Kia carnival mpv spotted testing - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+