ಬಿಡುಗಡೆಯ ಸನಿಹದಲ್ಲಿ ಬಹುನೀರಿಕ್ಷಿತ 7 ಸೀಟರ್ ಕಿಯಾ ಕಾರ್ನಿವಾಲ್..!
ಕಿಯಾ ಮೋಟಾರ್ಸ್ ಸಂಸ್ಥೆಯು ತನ್ನ ಮೊದಲ ಕಾರು ಮಾದರಿ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ನಂತರ ಕಾರ್ನಿವಾಲ್ ಎಂಪಿವಿ ಕಾರು ಮಾದರಿಯ ಬಿಡುಗಡೆಗಾಗಿ ಸಿದ್ದತೆ ನಡೆಸುತ್ತಿದ್ದು, ಹೊಸ ಕಾರು ದೇಶದ ವಿವಿಧಡೆ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ.

ಕಿಯಾ ಸಂಸ್ಥೆಯು ಭಾರೀ ನೀರಿಕ್ಷೆಯೊಂದಿಗೆ ಭಾರತೀಯ ಆಟೋ ಉದ್ಯಮಕ್ಕೆ ಕಾಲಿಟ್ಟಿದ್ದು, ದೇಶದ ಟಾಪ್ 3 ಕಾರು ಉತ್ಪಾದನಾ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ನಮೂನೆಯ ಕೈಗೆಟುಕುವ ಬೆಲೆಯ ಕಾರುಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದ್ದು, ಸೆಲ್ಟೊಸ್ ಬಿಡುಗಡೆಯ ನಂತರ ಕಾರ್ನಿವಾಲ್ ಸೇರಿದಂತೆ ವಿವಿಧ ನಮೂನೆಯ ಹೊಸ ಕಾರುಗಳನ್ನು ರಸ್ತೆಗಿಳಿಸಲು ಸಿದ್ದತೆ ನಡೆಸುತ್ತಿದೆ.

ಸಹೋದರ ಸಂಸ್ಥೆ ಹ್ಯುಂಡೈಗಿಂತಲೂ ಉತ್ತಮ ಕಾರು ಉತ್ಪನ್ನಗಳನ್ನು ಹೊಂದಿರುವ ಕಿಯಾ ಸಂಸ್ಥೆಯು ಭಾರತದಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಅಗ್ಗದ ಬೆಲೆಯಲ್ಲಿ ಉತ್ತಮ ಮಾದರಿಯ ಹ್ಯಾಚ್‌ಬ್ಯಾಕ್, ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯ ಯೋಜನೆಯಲ್ಲಿದೆ.

ಸೆಲ್ಟೊಸ್ ನಂತರ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಕಾರ್ನಿವಾಲ್ ಕಾರು ಕೂಡಾ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿ ನೀಡುವಂತಹ ಹಲವು ಫೀಚರ್ಸ್‌ಗಳನ್ನು ಹೊಂದಿರುವುದಲ್ಲದೇ ಬೆಲೆ ವಿಚಾರವಾಗಿಯು ಗಮನಸೆಳೆಯಲಿದೆ.

ಕಿಯಾ ಕಾರ್ನಿವಾಲ್ ಕಾರು ಹಲವು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಇನೋವಾ ಕ್ರಿಸ್ಟಾಗೆ ಪ್ರತಿ ಸ್ಪರ್ಧಿಯಾಗಿ ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ. 18 ಲಕ್ಷ ಆರಂಭಿಕವಾಗಿ ಮತ್ತು ರೂ. 25 ಲಕ್ಷ ಟಾಪ್ ಎಂಡ್ ಬೆಲೆಯನ್ನು ಪಡೆದುಕೊಳ್ಳುವ ನೀರಿಕ್ಷೆಯಿದ್ದು, ಹೊಸ ಕಾರು 5, 115-ಎಂಎಂ ಉದ್ದ, 1,985-ಎಂಎಂ ಅಗಲ ಮತ್ತು 1,755 ಎತ್ತರವನ್ನು ಪಡೆದುಕೊಂಡಿರಲಿದೆ. ಅಂದರೇ ಇನೋವಾ ಕ್ರಿಸ್ಟಾ ಕಾರಿಗಿಂತಲೂ 375-ಎಂಎಂ ಹೆಚ್ಚು ಉದ್ದ,155-ಎಂಎಂ ಹೆಚ್ಚು ಅಗಲ ಮತ್ತು 40-ಎಂಎಂ ನಷ್ಟು ಕಡಿಮೆ ಎತ್ತರವನ್ನು ಪಡೆದುಕೊಂಡಿರಲಿದೆ.

ಎಂಜಿನ್ ಸಾಮಾರ್ಥ್ಯ
ಟೂರಿಸ್ಟ್ ಮತ್ತು ವ್ಯಯಕ್ತಿಯ ಬಳಕೆ ಕಾರುಗಳಲ್ಲಿ ಅತಿಹೆಚ್ಚು ಜನಪ್ರಿಯತೆ ಹೊಂದಿರುವ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಗ್ರಾಹಕರ ಬೇಡಿಕೆಯಂತೆ 2.4-ಲೀಟರ್, 2.7-ಲೀಟರ್ ಮತ್ತು 2.8-ಲೀಟರ್ ಡಿಸೇಲ್ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿವೆ. ಇವುಗಳಲ್ಲಿ 2.4-ಲೀಟರ್ ಡಿಸೇಲ್ ಎಂಜಿನ್ ಮಾದರಿಯು ಟೂರಿಸ್ಟ್ ವಿಭಾಗದ ಬಳಕೆಯಲ್ಲಿ ಅತಿಹೆಚ್ಚು ಮಾರಾಟವಾಗುವ ದುಬಾರಿ ಕಾರು ಮಾದರಿಯಾಗಿದೆ.

ಕಿಯಾ ಕಾರ್ನಿವಾಲ್ ಕೂಡಾ ಇನೋವಾ ಕ್ರಿಸ್ಟಾ ಮಾದರಿಯಲ್ಲೇ ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 2.2-ಲೀಟರ್ ಟರ್ಬೋ ಡೀಸೆಲ್ ಜೊತೆ 3.3-ಲೀಟರ್ ವಿ6 ಎಂಪಿಐ ಪೆಟ್ರೋಲ್ ಎಂಜಿನ್ ಮಾದರಿಯೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯು ಬೆಲೆ ತಗ್ಗಿಸುವುದಕ್ಕಾಗಿ 2.5-ಲೀಟರ್ ಡೀಸೆಲ್ ಎಂಜಿನ್ ಮತ್ತು 2.6-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.
MOST READ: ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ತಾಂತ್ರಿಕ ಸೌಲಭ್ಯ ಮತ್ತು ಸುರಕ್ಷಾ ಸೌಲಭ್ಯಗಳು
ತಾಂತ್ರಿಕವಾಗಿ ಇನೋವಾ ಕ್ರಿಸ್ಟಾ ಕೂಡಾ ಉತ್ತಮ ಎಂಪಿವಿ ಮಾದರಿಯನ್ನು ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಆದ್ರೆ ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಒದಗಿಸುವಲ್ಲಿ ಹಿಂದೆ ಬಿದ್ದಿರುವ ಟೊಯೊಟಾ ಸಂಸ್ಥೆಯು ಸದ್ಯ ಬೆಲೆಯಲ್ಲಿ ಇನ್ನಷ್ಟು ಹೊಸ ಫೀಚರ್ಸ್‌ಗಳನ್ನು ನೀಡಬಹುದಾಗಿದೆ.
MOST READ: ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ವಿನೂತನ ಎಂಪಿವಿ ಬಿಡುಗಡೆ ಮಾಡಲಿದೆ ಹ್ಯುಂಡೈ

ಇದೇ ನಿಟ್ಟಿನಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾಗಿಂತಲೂ ಉತ್ತಮ ಪ್ರೀಮಿಯಂ ಸೌಲಭ್ಯ ಹೊಂದಿದ್ದು, 10.1-ಇಂಚಿನ ಇನ್ಪೋಟೈನ್ ಸಿಸ್ಟಂ, ಕಿಯಾ ಯುವಿಒ ಕನೆಕ್ಟ್, ಕಾರ್ ಕನೆಕ್ಟಿವಿಟಿ ಸೂಟ್, ಲಾರ್ಜ್ ಟಚ್‌ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎರಡು ಸನ್‌ರೂಫ್, ಪವರ್ ಅಡ್ಜೆಸ್ಟ್‌ಬಲ್ ಡ್ರೈವರ್ ಸೀಟ್, ತ್ರಿ ಕ್ಲೈಮೆಟ್ ಜೋನ್ ಕಂಟ್ರೋಲ್ ಸೌಲಭ್ಯದೊಂದಿಗೆ ಸುರಕ್ಷತೆಗಾಗಿ 6 ಏರ್‌ಬ್ಯಾಗ್,ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಹೊಂದಿರಲಿದೆ.
MOST READ: ಹೆಚ್ಚಿದ ಟ್ರಾಫಿಕ್ ದಟ್ಟಣೆ- ಬೆಂಗಳೂರಿನಲ್ಲಿ ವಾಹನಗಳ ಸರಾಸರಿ ವೇಗ ಎಷ್ಟು ಗೊತ್ತಾ?

ಹೀಗಾಗಿ ಇನೋವಾ ಕ್ರಿಸ್ಟಾ ಆವೃತ್ತಿಗೆ ಪ್ರತಿಹಂತದಲ್ಲೂ ಪೈಪೋಟಿ ನೀಡಬಹುದಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಕಿಯಾ ಕಾರ್ನಿವಾಲ್ ಕಾರು ಮಾದರಿಯು ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಹೊಸ ಕಾರ್ನಿವಾಲ್ ಮಾದರಿಯು ಬಿಡುಗಡೆಯಾಗಲಿದೆ.
Spy Images Credit: Powerdrift


Click it and Unblock the Notifications